ಒಟ್ಟಾರೆಯಾಗಿ, ನವೆಂಬರ್ 2023 ರಲ್ಲಿ 15 ದಿನಗಳವರೆಗೆ ಬ್ಯಾಂಕುಗಳು ಬಂದ್ ಆಗಿರುತ್ತದೆ. ಈ ವಾರದಲ್ಲಿ, ವಿವಿಧ ನಗರಗಳಲ್ಲಿನ ಬ್ಯಾಂಕುಗಳಿಗೆ ದೀಪಾವಳಿ, ಧನತ್ರಯೋದಶಿ ಮತ್ತು ಭಾಯಿ ದೂಜ್ ಹಬ್ಬದ ಕಾರಣದಿಂದಾಗಿ ಸತತವಾಗಿ ಆರು ದಿನಗಳವರೆಗೆ ರಜೆ ಇರುತ್ತದೆ.
ನವೆಂಬರ್‌ನಲ್ಲಿ ದೀಪಾವಳಿ, ಭೈದೂಜ್, ವಂಗಲಾ ಹಬ್ಬ, ಲಕ್ಷ್ಮಿ ಪೂಜೆ, ಛತ್, ಕರ್ವಾ ಚೌತ್ ಮತ್ತು ಇನ್ನೂ ಹೆಚ್ಚಿನ ಹಲವಾರು ಹಬ್ಬಗಳು, ಆಚರಣೆಗಳು ಇದೆ. ಐದು ದಿನಗಳ ಹಬ್ಬವು ಧನತ್ರಯೋದಶಿಯಿಂದ ಆರಂಭವಾಗುತ್ತದೆ, ನವೆಂಬರ್ 15 ರಂದು ಭಾಯ್ ದೂಜ್‌ನಲ್ಲಿ ಕೊನೆಗೊಳ್ಳುತ್ತದೆ.

ಆದರೆ ಈ ಹಬ್ಬಗಳು ಎಲ್ಲ ರಾಜ್ಯಗಳಲ್ಲಿ ಇರಲಾರದು. ಆದ್ದರಿಂದಾಗಿ ಎಲ್ಲ ನಗರಗಳಲ್ಲಿ ಸತತ ಆರು ದಿನವೂ ರಜೆ ಇರಲಾರದು. ಕೆಲವು ನಗರಗಳಲ್ಲಿ ಮಾತ್ರ ಆರು ದಿನವೂ ರಜೆ ಇರುತ್ತದೆ. ಧನತ್ರಯೋದಶಿ ಮತ್ತು ದೀಪಾವಳಿಯ ಕಾರಣ ನವೆಂಬರ್ 10 ರಂದು ಬ್ಯಾಂಕುಗಳು ಮುಚ್ಚಲಿದೆ. ಈ ವರ್ಷ, ದೀಪಾವಳಿಯನ್ನು ನವೆಂಬರ್ 12 ರಂದು ಭಾನುವಾರ ಆಚರಿಸಲಾಗುತ್ತದೆ.
ನವೆಂಬರ್‌ನಲ್ಲಿ 15 ದಿನ ಬ್ಯಾಂಕ್ ಬಂದ್
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನವೆಂಬರ್ 2023 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆರ್‌ಬಿಐ ಪಟ್ಟಿಯ ಪ್ರಕಾರ, ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ನವೆಂಬರ್ 2023 ರಲ್ಲಿ ಒಟ್ಟು 15 ದಿನಗಳವರೆಗೆ ಮುಚ್ಚಲಿದೆ. ಈ ಬ್ಯಾಂಕ್ ರಜಾದಿನಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರಗಳು ಸೇರಿವೆ.
ಈ ರಜಾದಿನಗಳು ಕೆಲವು ರಾಜ್ಯಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂಬುವುದು ಗಮನಾರ್ಹ. ಆದರೆ ರಾಷ್ಟ್ರೀಯ ರಜಾದಿನಗಳಲ್ಲಿ, ಇಡೀ ದೇಶದಾದ್ಯಂತ ಬ್ಯಾಂಕುಗಳು ಬಂದ್ ಆಗಿರುತ್ತದೆ. ಇನ್ನು ಬ್ಯಾಂಕ್‌ಗಳು ಮುಚ್ಚಿದ್ದರೂ ಈ ದಿನಗಳಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಇರಲಿದೆ. ನಗದು ಹಿಂಪಡೆಯಲು ಎಟಿಎಂ ಸೇವೆಯೂ ಲಭ್ಯವಾಗಲಿದೆ.
ನವೆಂಬರ್ 2023 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ
* ನವೆಂಬರ್ 10, 2023 (ಶುಕ್ರವಾರ): ವಂಗಲಾ ಉತ್ಸವ - ಮೇಘಾಲಯ.
* ನವೆಂಬರ್ 11, 2023 (ಎರಡನೇ ಶನಿವಾರ)
* ನವೆಂಬರ್ 12, 2023 (ಭಾನುವಾರ, ವಾರದ ರಜೆ)
* ನವೆಂಬರ್ 13, 2023 (ಸೋಮವಾರ): ಗೋವರ್ಧನ ಅಥವಾ ಗೋ ಪೂಜೆ - ತ್ರಿಪುರ, ಉತ್ತರಾಖಂಡ, ಸಿಕ್ಕಿಂ, ಮಣಿಪುರ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ.
* ನವೆಂಬರ್ 14, 2023 (ಮಂಗಳವಾರ): ದೀಪಾವಳಿ - ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಸಿಕ್ಕಿಂ.
* ನವೆಂಬರ್ 15, 2023 (ಬುಧವಾರ): ಭೈದೂಜ್ - ಸಿಕ್ಕಿಂ, ಮಣಿಪುರ, ಉತ್ತರ ಪ್ರದೇಶ, ಬಂಗಾಳ ಮತ್ತು ಹಿಮಾಚಲ ಪ್ರದೇಶ.
ಕರ್ನಾಟಕದಲ್ಲಿ ನವೆಂಬರ್ ಬ್ಯಾಂಕ್ ರಜೆ
* ನವೆಂಬರ್ 1, 2023 - ಕನ್ನಡ ರಾಜ್ಯೋತ್ಸವ
* ನವೆಂಬರ್ 5, 2023 - ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 11, 2023 - ಎರಡನೇ ಶನಿವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 12, 2023 - ಭಾನುವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 13, 2023 - ಗೋವರ್ಧನ ಪೂಜೆ/ ಲಕ್ಷ್ಮಿ ಪೂಜೆ/ ದೀಪಾವಳಿ
* ನವೆಂಬರ್ 19, 2023 - ಭಾನುವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 25, 2023 - ನಾಲ್ಕನೇ ಶನಿವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 26, 2023 - ಭಾನುವಾರ (ವಾರದ ರಜೆ), ದೇಶದಾದ್ಯಂತ ಬ್ಯಾಂಕ್ ರಜೆ
* ನವೆಂಬರ್ 30, 2023 - ಕನಕದಾಸರ ಜಯಂತಿ
More From GoodReturns

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?



Click it and Unblock the Notifications