ಎಲ್‌ಐಸಿ ಬೆಂಬಲಿತ ಐಡಿಬಿಐ ಬ್ಯಾಂಕ್ ತನ್ನ ವಿಶೇಷ ಫಿಕ್ಸಿಡ್ ಡೆಪಾಸಿಟ್‌ಗಳ (ಎಫ್‌ಡಿ) ಯೋಜನೆಯ ಗಡುವನ್ನು ವಿಸ್ತರಣೆ ಮಾಡಿದೆ. ಅಮೃತ್ ಮಹೋತ್ಸವ ಎಫ್‌ಡಿ ಎಂದು ಕರೆಯಲಾಗುವ ಈ ವಿಶೇಷ ಎಫ್‌ಡಿಯನ್ನು ದೀಪಾವಳಿ ಹಬ್ಬದ ಮೊದಲು ನವೆಂಬರ್ 30, 2023 ರವರೆಗೆ ವಿಸ್ತರಿಸಿದೆ.
ಈ ವಿಶೇಷ ಎಫ್‌ಡಿ ಅಡಿಯಲ್ಲಿ, ಬಡ್ಡಿದರಗಳು ಶೇಕಡ 7.10 ರಿಂದ ಶೇಕಡ 7.65 ವರೆಗೆ ಇರುತ್ತದೆ. ಹಿರಿಯ ನಾಗರಿಕರು ಸಾಮಾನ್ಯ ನಾಗರಿಕರಿಗಿಂತ ಹೆಚ್ಚಿನ ಬಡ್ಡಿದರವನ್ನು ಪಡೆಯಲು ಸಾಧ್ಯವಿದೆ. ಬಡ್ಡಿದರದ ವಿಚಾರದಲ್ಲಿ ನೋಡಿದಾಗ ಹಿರಿಯ ನಾಗರಿಕರಿಗೆ ಇಲ್ಲಿ ಅಧಿಕ ಲಾಭವಿದೆ.

ಈ ಮೊದಲು, ಐಡಿಬಿಐ ಬ್ಯಾಂಕ್‌ನ ವಿಶೇಷ ಎಫ್‌ಡಿ ಯೋಜನೆಯು ಅಕ್ಟೋಬರ್ 31 ರಂದು ಕೊನೆಗೊಳ್ಳಬೇಕಿತ್ತು. ಆದರೆ ಅದನ್ನು ಈಗ ನವೆಂಬರ್ 30 ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ವಿಶೇಷ ಯೋಜನೆಯ ಬಡ್ಡಿದರ, ಷರತ್ತು, ನಿಯಮಗಳ ವಿವರ ಈ ಕೆಳಗಿದೆ ಮುಂದೆ ಓದಿ...
ಐಡಿಬಿಐ ಬ್ಯಾಂಕ್ ಎಫ್‌ಡಿ ಬಡ್ಡಿದರ
ಐಡಿಬಿಐ ಬ್ಯಾಂಕ್‌ನ ಅಮೃತ್ ಮಹೋತ್ಸವ್ ಎಂಬ ಕಾಲೇಬಲ್ (ಯಾವುದೇ ಸಮಯದಲ್ಲಿ ವಿತ್‌ಡ್ರಾ ಮಾಡಬಹುದಾದ) ಎಫ್‌ಡಿ ಯೋಜನೆಯು 375 ದಿನಗಳು ಮತ್ತು 444 ದಿನಗಳ ಅವಧಿಯದ್ದಾಗಿದೆ. ಈ ಯೋಜನೆಯಡಿಯಲ್ಲಿ, ಸಾಮಾನ್ಯ, ಎನ್‌ಆರ್‌ಇ, ಎನ್‌ಆರ್‌ಒ 375 ದಿನಗಳ ಅವಧಿಗೆ ಶೇಕಡ 7.10 ಬಡ್ಡಿದರ ಪಡೆಯಬಹುದು.
ಅದುವೇ 444 ದಿನಗಳ ಎಫ್‌ಡಿಗೆ ಸಾಮಾನ್ಯ ನಾಗರಿಕರು ಶೇಕಡ 7.15 ದರವನ್ನು ಪಡೆಯಬಹುದಾಗಿದೆ. ಇನ್ನು ಹಿರಿಯ ನಾಗರಿಕರು 375 ದಿನಗಳ ಎಫ್‌ಡಿ ಮೇಲೆ ಸುಮಾರು ಶೇಕಡ 7.60 ಬಡ್ಡಿದರವನ್ನು ಪಡೆಯಬಹುದು. 444 ದಿನಗಳ ಎಫ್‌ಡಿ ಮೇಲೆ ಶೇಕಡ 7.65 ಬಡ್ಡಿದರವನ್ನು ಪಡೆಯಲು ಅವಕಾಶವಿದೆ.
ಯೋಜನೆಯ ನಿಯಮಗಳು, ಷರತ್ತುಗಳು ತಿಳಿಯಿರಿ
- ಸಿಬ್ಬಂದಿ ಮತ್ತು ಹಿರಿಯ ನಾಗರಿಕರ ಬಡ್ಡಿದರಗಳು ಎನ್‌ಆರ್‌ಒ ಮತ್ತು ಎನ್‌ಆರ್‌ಇ ಫಿಕ್ಸಿಡ್ ಡೆಪಾಸಿಟ್‌ಗಳಿಗೆ ಅನ್ವಯವಾಗದು. ಅಂದರೆ ಎನ್‌ಆರ್‌ಒ, ಎನ್‌ಆರ್‌ಇ ಹಿರಿಯ ನಾಗರಿಕರಾಗಿದ್ದರೂ ಸಾಮಾನ್ಯ ನಾಗರಿಕರಿಗೆ ಇರುವ ಬಡ್ಡಿದರ ಇರಲಿದೆ.
- ಅಕಾಲಿಕವಾಗಿ ಫಿಕ್ಸಿಡ್ ಡೆಪಾಸಿಟ್ ಅನ್ನು ವಿತ್‌ಡ್ರಾ ಮಾಡಲು, ಅಥವಾ ಮುಚ್ಚಲ ಅನುಮತಿ ಇದೆ. ಅದಕ್ಕಾಗಿಯೇ ಈ ಯೋಜನೆಯನ್ನು ಕಾಲೇಬಲ್ ಎಂದು ಕರೆಯಲಾಗುತ್ತದೆ.
- ಈ ಫಿಕ್ಸಿಡ್ ಡೆಪಾಸಿಟ್‌ಗಳ ಎಲ್ಲಾ ಇತರ ಫೀಚರ್‌ಗಳು, ನಿಯಮ ಮತ್ತು ಷರತ್ತುಗಳು ಬದಲಾಗದೆ ಉಳಿಯುತ್ತವೆ. ಮೇಲಿನ ಯೋಜನೆಗೆ ಸಹ ಅನ್ವಯಿಸುತ್ತವೆ.
ಸಾಮಾನ್ಯವಾಗಿ, 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿಗಳಲ್ಲಿ, ಐಡಿಬಿಐ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 7 ದಿನಗಳಿಂದ 20 ವರ್ಷಗಳವರೆಗೆ ಶೇಕಡ 3 ರಿಂದ ಶೇಕಡ 6.80 ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 3.50 ರಿಂದ ಶೇಕಡ 7.30 ವರೆಗೆ ಬಡ್ಡಿದರವನ್ನು ಪಡೆಯಬಹುದಾಗಿದೆ.
ಇನ್ನು ನಾವು ಎಫ್‌ಡಿ ಬಡ್ಡಿದರದಿಂದ ತೆರಿಗೆ ಉಳಿತಾಯ ಮಾಡಲು ಕೂಡಾ ಸಾಧ್ಯವಾಗುತ್ತದೆ. ಈ ತೆರಿಗೆ ಉಳಿತಾಯ ಮಾಡುವ ಎಫ್‌ಡಿಯಲ್ಲಿ 5 ವರ್ಷಗಳ ಅವಧಿಗೆ ಸಾಮಾನ್ಯ ನಾಗರಿಕರಿಗೆ ಶೇಕಡ 6.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 7 ದರವನ್ನು ನೀಡಲಾಗುತ್ತದೆ.
ಭಾರತದ ಅತಿ ದೊಡ್ಡ ಜೀವ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಐಡಿಬಿಐ ಬ್ಯಾಂಕ್‌ನ ಅತೀ ದೊಡ್ಡ ಷೇರುದಾರ ಸಂಸ್ಥೆಯಾಗಿದೆ. ಸೆಪ್ಟೆಂಬರ್ 30, 2023 ರಂತೆ, ಐಡಿಬಿಐ ಬ್ಯಾಂಕ್‌ನಲ್ಲಿ ಎಲ್‌ಐಸಿಯ ಷೇರುಗಳು 5,29,41,02,939 ಈಕ್ವಿಟಿ ಷೇರುಗಳು ಅಥವಾ ಶೇಕಡ 49.24 ಆಗಿದೆ.


Click it and Unblock the Notifications