ದೀಪಾವಳಿಯ ಸಿದ್ಧತೆಗಳು ಪ್ರಾರಂಭವಾಗಿದೆ. ಈ ವರ್ಷ ನವೆಂಬರ್ 12 ರಂದು ದೇಶದಾದ್ಯಂತ ಬೆಳಕಿನ ಹಬ್ಬವಾದ ದೀಪಾವಳಿಯನ್ನು ಆಚರಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ, ದೀಪಾವಳಿ ಹಬ್ಬಗಳನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಹಬ್ಬದ ಆರಂಭದ ದಿನವೇ ಧನತ್ರಯೋದಶಿ ದಿನವಾಗಿದೆ.
ಧನತ್ರಯೋದಶಿ ಅಥವಾ ಧನ್ವಂತರಿ ತ್ರಯೋದಶಿ ಎಂದು ಕರೆಯಲ್ಪಡುವ ಧನ್ವಂತರಿ ಜಯಂತಿ ಅನ್ನು ದೀಪಾವಳಿಯ ಎರಡು ದಿನಗಳ ಮೊದಲು ಆಚರಿಸಲಾಗುತ್ತದೆ. ಈ ವರ್ಷ ನವೆಂಬರ್ 10 ರಂದು ಅಂದರೆ ಇಂದು ಆಚರಿಸಲಾಗುತ್ತಿದೆ.

ಜನರು ಈ ದಿನ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಮಂಗಳಕರ ಸಂದರ್ಭವೆಂದು ಪರಿಗಣಿಸುತ್ತಾರೆ. ಹಾಗೆಯೇ ಈ ದಿನ ಚಿನ್ನ ಬೆಳ್ಳಿ ಖರೀದಿಸಿದರೆ, ಸಂಪತ್ತು ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ನೀವು ಚಿನ್ನ ಖರೀದಿಸುವ ಯೋಚನೆ ಮಾಡಿದ್ದರೆ, ಇಲ್ಲಿದೆ ಶುಭ ಮುಹೂರ್ತ ಮುಂದೆ ಓದಿ....
ಧನತ್ರಯೋದಶಿ ದಿನ ಜನರು ಚಿನ್ನ ಮತ್ತು ಬೆಳ್ಳಿಯ ಹೊರತಾಗಿ ಹೊಸ ಪಾತ್ರೆಗಳು ಮತ್ತು ಇತರ ಲೋಹದ ವಸ್ತುಗಳನ್ನು ಖರೀದಿಸುತ್ತಾರೆ. ಹೊಸ ವಸ್ತುಗಳನ್ನು, ವಿಶೇಷವಾಗಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ಅದೃಷ್ಟ ಮತ್ತು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ.
ಚಿನ್ನವನ್ನು ಖರೀದಿ ಮಾಡುವುದೇಕೆ?
ಸಾಮಾನ್ಯವಾಗಿ, ಹಿಂದೂ ಸಂಸ್ಕೃತಿಯಲ್ಲಿ ಚಿನ್ನವನ್ನು ಖರೀದಿಸುವುದನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ನಂಬಿರುವ ಜನರು ಧನತ್ರಯೋದಶಿ ದಿನ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುತ್ತಾರೆ. ಈ ದಿನ ಚಿನ್ನವನ್ನು ಖರೀದಿಸುವುದು ಸಂಪತ್ತು ಮತ್ತು ಅದೃಷ್ಟದ ದೇವತೆಯಾದ ಲಕ್ಷ್ಮಿಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ. ಆಚರಣೆಯ ಭಾಗವಾಗಿ, ಜನರು ಈ ದಿನದಂದು ಆಯುರ್ವೇದದ ದೇವರಾದ ಧನ್ವಂತರಿಗೆ ದೀಪ ಬೆಳಗಿಸಿ, ಪ್ರಾರ್ಥನೆ ಮಾಡುತ್ತಾರೆ.
ಧನತ್ರಯೋದಶಿ 2023: ಚಿನ್ನ ಖರೀದಿಗೆ ಶುಭ ಮುಹೂರ್ತ
ಚಿನ್ನ ಮತ್ತು ಬೆಳ್ಳಿಯ ಹೊರತಾಗಿ, ಜನರು ಈ ದಿನ ಭೂಮಿ, ಮನೆ ಮತ್ತು ವಾಹನವನ್ನು ಖರೀದಿಸುತ್ತಾರೆ. ದೃಕ್ ಪಂಚಾಂಗದ ಪ್ರಕಾರ, ಸೂರ್ಯಾಸ್ತದ ನಂತರ ಸುಮಾರು 2 ಗಂಟೆ 24 ನಿಮಿಷಗಳ ಕಾಲ ಇರುವ ಪ್ರದೋಷ ಕಾಲದ ಸಮಯದಲ್ಲಿ ಲಕ್ಷ್ಮಿ ಪೂಜೆಯನ್ನು ನಡೆಸಬೇಕು. ಧನತ್ರಯೋದಶಿ 2023 ಕ್ಕೆ ಸರಿಯಾದ ಪೂಜೆ ಸಮಯವು ಸಂಜೆ 05:47 ರಿಂದ 07:43 ರವರೆಗೆ ಆಗಿದೆ.
ಧನತ್ರಯೋದಶಿ ಪೂಜೆ: ನವೆಂಬರ್ 10 (ಶುಕ್ರವಾರ)
ಧನತ್ರಯೋದಶಿ ಪೂಜೆ ಮುಹೂರ್ತ - ಸಂಜೆ 05:47 ರಿಂದ 07:43 ಗಂಟೆ
ಪ್ರದೋಷ ಕಾಲ: ಸಂಜೆ 05:30 ರಿಂದ 08:08 ಗಂಟೆ
ವೃಷಭ ಕಾಲ - ಸಂಜೆ 05:47 ರಿಂದ ಸಂಜೆ 07:43 ಗಂಟೆ
ಧನತ್ರಯೋದಶಿ ದಿನ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಅತ್ಯಂತ ಅನುಕೂಲಕರ ಸಮಯವೆಂದರೆ ಮಧ್ಯಾಹ್ನ 12:35 ರಿಂದ ಮಧ್ಯಾಹ್ನ 02:46 ರವರೆಗೆ ಆಗಿದೆ. ಇನ್ನು ಉಳಿದ ಖರೀದಿ ವ್ಯವಹಾರಕ್ಕೆ ಮಧ್ಯಾಹ್ನ 12:35 ರಿಂದ ಮರುದಿನ ನವೆಂಬರ್ 11 ರಂದು 1:57ರವರೆಗೆ ಶುಭ ಮುಹೂರ್ತವಿದೆ ಎಂದು ನಂಬಲಾಗಿದೆ. ಆದರೆ ರಾಹುಕಾಲವಾದ ಬೆಳಿಗ್ಗೆ 10:41 ರಿಂದ ಮಧ್ಯಾಹ್ನ 12:03 ರವರೆಗೆ ಖರೀದಿ ಮಾಡಬಾರದು ಎಂದು ದೃಕ್ ಪಂಚಾಂಗ ಹೇಳುತ್ತದೆ.


Click it and Unblock the Notifications