ಬೆಂಗಳೂರು, ಜೂ. 13: ಈ ಮಹಿಳೆ ಹೆಸರು ವೇದಿಕಾ ಮಾನ್ಯ ಶಿವಂ, ಗಂಡ ಹೇಳಿದ ಒಂದೇ ಒಂದು ಬುದ್ಧಿಮಾತಿನಿಂದ "ವಿನ್ಯಾ" ಗುಣಮಟ್ಟದ ಮಸಾಲೆ ಉತ್ಪನ್ನ ಸ್ವಂತ ಉದ್ಯಮ ತಯಾರಿಸಿದ್ದಾರೆ. ರುಚಿಯಾದ ಹಾಗೂ ಗುಣಮಟ್ಟದ ಮಸಾಲೆ ಉದ್ಯಮದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಸ್ವಂತ ಉದ್ಯಮ ಕನಸು ಕಂಡು ಒಂದು ವರ್ಷ ಅಧ್ಯಯನ ಮಾಡಿ ವಿನ್ಯಾ ಮಸಾಲೆ ಪದಾರ್ಥಗಳನ್ನು ಹುಟ್ಟು ಹಾಕಿದ ಈ ಮಹಿಳೆಯ ಯಶೋಗಾಥೆಯ ವಿವರ ಇಲ್ಲಿದೆ ನೋಡಿ.
ಆ ಮಹಿಳೆ ಹೆಸರು ವೇದಿಕಾ ಮಾನ್ಯ ಶಿವಂ, ಓದಿದ್ದು ಬಿಕಾಂ. ಇರೋದು ಆರ್.ಆರ್. ನಗರ. ಗಂಡ ಚಾರ್ಟೆಟ್ ಅಕೌಂಟೆಂಟ್. ಕೊರೊನಾ ಕಾಲದಲ್ಲಿ ಮನೆಯಲ್ಲಿ ಟಿವಿ ನೋಡುವಾಗ ಪದೇ ಪದೇ ಮಸಾಲೆ ಪದಾರ್ಥದ ಜಾಹೀರಾತು ಬರುತ್ತಿತ್ತು. ಕೊರೊನಾ ಸಮಯದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಕನಸು ಕಂಡ ವೇದಿಕಾ ಅವರಿಗೆ ಬಿಸಿನೆಸ್ ಗುರು ಅವರ ರವಿಕುಮಾರ್.
ಯಾವುದೋ ಕೆಂಪನಿಗಳನ್ನು ಉದ್ದಾರ ಮಾಡೋಕೆ ಯಾಗೆ ಅಲೆದಾಡುತ್ತೀಯಾ? ಏನಾದರೂ ಮಾಡುವಂತಿದ್ದರೆ ಸ್ವಂತ ಮಾಡು. ಅದಕ್ಕಾಗಿ ಎಷ್ಟು ಬೇಕಾದರೂ ಪರಿಶ್ರಮ ಹಾಕು. ಕೊನೆಗೆ ನಿನ್ನ ಸ್ವಂತದ್ದು ಎಂಬ ನೆಮ್ಮದಿ ಇರುತ್ತೆ. ಯಾರದ್ದೋ ಕಂಪನಿ ಉದ್ಧಾರಕ್ಕೆ ನೀನು ಯಾಕೆ ಇಷ್ಟು ಶ್ರಮ ಹಾಕುತ್ತೀಯ ಎಂದು ಬುದ್ಧಿವಾದ ಹೇಳಿದ್ದರಂತೆ. ಈ ಮಾತು ವೇದಿಕಾ ಅವರ ಮನಸಿನ ಮೇಲೆ ಗಾಢ ಪರಿಣಾಮ ಬೀರಿದೆ. ಹೀಗೆ ಆರಂಭವಾಗಿದ್ದೇ ವಿನ್ಯಾ ಮಸಾಲೆ ಉತ್ಪನ್ನಗಳ ಪುಟ್ಟ ಉದ್ಯಮ.
ಆಗ ಹುಟ್ಟಿದ್ದೇ ವಿನ್ಯಾ ಮಸಾಲೆ ಉತ್ಪನ್ನ
ಕೊರೊನಾ ಮುನ್ನ ನಾನು ಕೆಲವು ಖಾಸಗಿ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೆ. ಕಮೀಷನ್ ಬರುತ್ತಿತ್ತು. ಆದ್ರೆ ನಾನು ಕಷ್ಟ ಪಡೋ ರೀತಿ ನೋಡಿ ನನ್ನ ಪತಿ ರವಿಕುಮಾರ್ ಯಾಕೆ ನೀನು ಇಷ್ಟ ಕಷ್ಟ ಪಡ್ತೀಯ? ಇನ್ನೊಬ್ಬರ ಕಂಪನಿ ಉದ್ಧಾರಕ್ಕೆ ಎಂದೆಲ್ಲ ಕೇಳುತ್ತಿದ್ದರು. ಆಗಲೇ ನಾನು ಮಾಡಬಹುದಾದ ಉದ್ಯಮದ ಬಗ್ಗೆ ಆಲೋಚಿಸಿದೆ. ಮಸಾಲೆ ಪದಾರ್ಥ ತಯಾರಿಸಿ ಮಾರಾಟ ಮಾಡುವ ಆಲೋಚನೆ ಮಾಡಿದೆ. ಮೊದಲು ಮನೆಯಲ್ಲಿ ಆರಂಭಿಸುವ ಪ್ಲಾನ್ ಮಾಡಿದ್ದೆ. ಆದ್ರೆ, ಒಂದಲ್ಲಾ ಒಂದು ದಿನ ಹೊರಗೆ ಶುರುಮಾಡಬೇಕೆಂಬ ಆಸೆ ಹೊತ್ತು ಹೆಮ್ಮಿಗೆ ಪುರದ ಬಳಿ ಐದು ಸಾವಿರ ರು.ಗೆ ಮನೆ ಬಾಡಿಗೆ ಪಡೆದು ವಿನ್ಯಾ ಮಸಾಲೆ ಪದಾರ್ಥಗಳನ್ನು ತಯಾರಿಸಿದೆ. ಬೇಕಾದ ಯಂತ್ರಗಳನ್ನು ತಯರಿಸಿ ಆರ್ಡರ್ ಬಂದ ಬಳಿಕ ತಯಾರು ಮಾಡುವ ಘಟಕ ಶುರು ಮಾಡಿದೆ.
ಕ್ವಾಲಿಟಿಯಲ್ಲಿ ಯಾರಿಗೂ ಬೇಕಾದ್ರೂ ಚಾಲೆಂಜ್
ಇವತ್ತಿನ ಮಾರುಕಟ್ಟೆಯಲ್ಲಿ ಸಾಕಷ್ಟು ಕಂಪನಿಗಳ ಮಸಾಲೆ ಪದಾರ್ಥಗಳಿವೆ. ಆದ್ರೆ, ನಾನು ಪ್ರೀಮಿಯಂ ಕ್ವಾಲಿಟಿ ರಾ ಮೆಟೀರಿಯಲ್ ಖರೀದಿ ಮಾಡಿ ಮಸಾಲೆ ಪದಾರ್ಥ ತಯಾರಿಸುತ್ತೇನೆ. ನನ್ನ ಆಪ್ತ ವರ್ಗದವರು ಯಾರೂ ನನ್ನ ಮಸಾಲೆ ಬಿಟ್ಟು ಬೇರೆಲ್ಲೂ ಖರೀದಿ ಮಾಡಲ್ಲ. ಅಷ್ಟು ಪ್ರಾಮಾಣಿಕವಾಗಿ ರುಚಿ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡಿದ್ದೇನೆ. ಇನ್ನು ವಿನ್ಯಾ ಮಸಾಲೆ ಪದಾರ್ಥಗಳು ಫ್ಲಿಪ್ ಕಾರ್ಟ್, ಅಮೆಜಾನ್‌ನಲ್ಲೂ ಸಿಗುವಂತೆ ಮಾಡಿದ್ದೇನೆ. ನಾನು ಹೊಸದಾಗಿ ಆರಂಭಿಸಿರುವ ಕಾರಣ ಆನ್‌ಲೈನ್‌ನಲ್ಲಿ ಬೇಡಿಕೆ ಸ್ವಲ್ಪ ಕಡಿಮೆ. ಆದ್ರೆ ನನ್ನ ಆಪ್ತ ಬಳಗದವರು ನನ್ನಿಂದಲೇ ಮಸಾಲೆ ಪದಾರ್ಥ ಖರೀದಿ ಮಾಡುತ್ತಾರೆ.
ಮೊದಲು ನಾನು ದನಿಯಾ, ಅರಿಶಿನ ಪುಡಿ ಮತ್ತು ಮೆಣಸಿನ ಪುಡಿ ಮೂರು ಉತ್ಪನ್ನ ತಯಾರಿಸಿದೆ. ಇದೀಗ ಒಟ್ಟು ಹನ್ನೆರಡು ಮಸಾಲೆ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತೇನೆ. ಬೇರೆ ಮಾರುಕಟ್ಟೆಯಲ್ಲಿ ಸಿಗುವ ಮಸಾಲೆ ಪದಾರ್ಥಗಳಿಗೆ ನನ್ನ ಉತ್ಪನ್ನ ಹೋಲಿಕೆ ಮಾಡಲು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳಿಗೆ ಹೋಲಿಸದ್ರೆ ನನ್ನ ಉತ್ಪನ್ನ ಬೆಲೆ ಜಾಸ್ತಿ. ಆದ್ರೆ ನಾನು ಪಾಲಿಸುವ ಗುಣಮಟ್ಟ, ನಾನು ಬಳಿಸುವ ರಾ ಮೆಟೀರಿಯಲ್ ಪ್ರೀಮಿಯಂ ಕ್ವಾಲಿಟಿ ಬಳಸುತ್ತೇನೆ. ಈ ವಿಚಾದಲ್ಲಿ ವಿನ್ಯಾ ಗುಣಮಟ್ಟಕ್ಕೆ ಹೋಲುವ ಉತ್ಪನ್ನಗಳು ಸಿಗಲ್ಲ. ಆರೋಗ್ಯಕ್ಕೆ ಆದ್ಯತೆ ಕೊಡುವರು ನನ್ನ ಉತ್ಪನ್ನಗಳನ್ನು ಖರೀದಿ ಮಾಡುತ್ತಾರೆ. ನನ್ನ ಸ್ನೇಹಿತ ಬಳಗದಿಂದ ಉತ್ತಮ ಆರ್ಡರ್ ಬರುತ್ತಿದೆ ಎಂದು ವೇದಿಕಾ ಸ್ಮರಿಸುತ್ತಾರೆ.
ಆರ್ಡರ್ ಸಿಕ್ಕ ಕೂಡಲೇ ತಯಾರಿಸೋದು
ವಿನ್ಯಾ ಮಸಾಲೆ ಉತ್ಪನ್ನಗಳ ರುಚಿಯನ್ನು ಆಸ್ವಾದಿಸುವರು ಮತ್ತೆ ಮತ್ತೆ ಬಂದು ಕೇಳಿ ಪಡೆಯುತ್ತಿದ್ದಾರೆ. ಆದರೆ ಬೆಲೆ ಕಾರಣಕ್ಕೆ ಕೆಲವರು ಖರೀದಿಗೆ ಹಿಂದೇಟು ಹಾಕುತ್ತಾರೆ. ವಾಸ್ತವದಲ್ಲಿ ನಾನು ಬಳಸುವ ಗುಣಮಟ್ಟದ ರಾ ಮೆಟೀರಿಯಲ್. ಜತೆಗೆ ಅಲ್ಪ ಪ್ರಮಾಣದಲ್ಲಿ ನಾನು ಉದ್ಯಮ ಅರಂಭಿಸಿದ್ದೇನೆ. ಯಾರಾದರೂ ಆರ್ಡರ್ ಕೊಟ್ಟ ಬಳಿಕ ನಾನು ಮಸಾಲೆ ಪದಾರ್ಥ ತಯಾರಿಸಿ ಮಾರಾಟ ಮಾಡುತ್ತೇನೆ ವಿನಃ ರೆಡಿಮೇಡ್ ಪ್ಯಾಕ್ ಮಾಡಿ ಮಾರಾಟ ಮಾಡುವುದಿಲ್ಲ. ಒಮ್ಮೆ ತೆಗೆದುಕೊಂಡು ಹೋದ್ರೆ ಮತ್ತೆ ಇದೇ ಮಸಾಲೆ ಪದಾರ್ಥ ಬಳಸಲು ಜನ ಇಷ್ಟಪಡಬೇಕು ಎಂಬುದು ನನ್ನ ಆಸೆ. ಈ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ವಿನ್ಯಾ ಮಸಾಲೆ ಉತ್ಪನ್ನ ತಯಾರಿಸಿ ಮಾರಾಟ ಮಾಡುತ್ತಿದ್ದೇನೆ. ನನ್ನ ಉದ್ಯಮ ದೊಡ್ಡ ಹಂತಕ್ಕೆ ಬೆಳೆಯುವ ಭರವಸೆ ನನಗಿದೆ. ನನಗೆ ನನ್ನ ಉತ್ಪನ್ನಗಳನ್ನು ತೆಗೆದುಕೊಂಡು ಮಾರಾಟ ಮಾಡಲು ಕಮೀಷನ್ ಆಧಾರದ ಮೇಲೆ ಅವಕಾಶ ಕೊಟ್ಟಿದ್ದೇನೆ. ಎಂದು ಧೃತಿ ಮಹಿಳಾ ಮಾರುಕಟ್ಟೆ ಸದಸ್ಯೆ ವೇದಿಕಾ ಅವರು ತಿಳಿಸಿದ್ದಾರೆ.
ಹೆಣ್ಣು ಮಕ್ಕಳು ಸ್ವಂತ ಉದ್ಯಮಕ್ಕೆ ಆಲೋಚನೆ ಮಾಡಬೇಕು
ಹೆಣ್ಣು ಮಕ್ಕಳು ಎಲ್ಲೋ ಹೋಗಿ ಇನ್ಯಾರೋ ಒಳಿತಿಗೆ ದುಡಿಯುವ ಬದಲಿಗೆ ತನಗೆ ಗೊತ್ತಿರುವ ಕೆಲಸ ಶುರು ಮಾಡಿದ್ರೆ ಒಂದಲ್ಲಾ ಒಂದು ದಿನ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ನನಗಿದೆ. ಅದೇ ರೀತಿ ಹೆಣ್ಣು ಮಕ್ಕಳು ತಮಗೆ ಗೊತ್ತಿರುವ ಕೆಲಸದಿಂದಲೇ ಸ್ವಂತ ಉದ್ಯಮ ಆರಂಭಿಸಿದ್ರೆ ಹೊಸ ಬದುಕು ಕಟ್ಟಿಕೊಳ್ಳಬಹುದು. ನನಗೆ ನಿರೀಕ್ಷಿತ ಮಟ್ಟದಲ್ಲಿ ವಿನ್ಯಾ ವ್ಯಾಪಾರ ಆಗುತ್ತಿಲ್ಲ, ಆದ್ರೂ ಗುಣಮಟ್ಟ, ರುಚಿ ಬಗ್ಗೆ ಗ್ರಾಹಕರು ತುಂಬಾ ಖುಷಿ ಪಡುತ್ತಾರೆ. ಅರೋಗ್ಯ ಕಾಪಾಡಿಕೊಳ್ಳಲು ಗುಣಮಟ್ಟದ ಮಸಾಲೆ ಪದಾರ್ಥಗಳು ಮುಖ್ಯವಾಗುತ್ತದೆ. ಹೀಗಾಗಿ ಗುಣಮಟ್ಟಕ್ಕೆ ಆದ್ಯತೆ ನೀಡಿ ಏನೇ ಪ್ರಾರಂಭಿಸಿದ್ರೂ ಹೆಣ್ಣು ಮಕ್ಕಳು ಯಶಸ್ಸು ಗಳಿಸುತ್ತಾರೆ. ಸದ್ಯಕ್ಕೆ ಲಾಭ ನಷ್ಟ ಲೆಕ್ಕಾಚಾರ ಹಾಕಿಲ್ಲ. ಪ್ರಮಾಣಿಕವಾಗಿ ಸ್ವಂತ ಉದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ ಎಂದು ಸ್ವಂತ ಉದ್ಯಮ ಕಟ್ಟಿದ ಯಶೋಗಾಥೆಯನ್ನು ವೇದಿಕಾ ಅವರು ಹಂಚಿಕೊಂಡಿದ್ದಾರೆ.


Click it and Unblock the Notifications