ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ ಪೂರೈಕೆದಾರ ಸಂಸ್ಥೆ ಇಮುದ್ರಾ ಲಿಮಿಟೆಡ್ ಶುಕ್ರವಾರ ಚಂದಾದಾರಿಕೆಗೆ ತೆರೆಯುವ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆಗೆ ಮುಂಚಿತವಾಗಿ ಆಂಕರ್ ಹೂಡಿಕೆದಾರರಿಂದ 124 ಕೋಟಿ ರೂಪಾಯಿ ಸಂಗ್ರಹ ಮಾಡಿದೆ ಎಂದು ಗುರುವಾರ ಹೇಳಿದೆ.
ಕಂಪನಿಯು 48,37,336 ಈಕ್ವಿಟಿ ಷೇರುಗಳನ್ನು ಆಂಕರ್ ಹೂಡಿಕೆದಾರರಿಗೆ ಪ್ರತಿ ಷೇರಿಗೆ 256 ರೂಪಾಯಿಯಂತೆ ಹಂಚಿಕೆ ಮಾಡಿದೆ ಎಂದು ಬಿಎಸ್‌ಇ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುಯಲ್ ಫಂಡ್ (ಎಂಎಫ್), ಮೋತಿಲಾಲ್ ಓಸ್ವಾಲ್ ಎಂಎಫ್, ನಿಪ್ಪಾನ್ ಇಂಡಿಯಾ ಎಂಎಫ್, ಎಸ್‌ಬಿಐ ಎಂಎಫ್, ಬೇರಿಂಗ್ ಪ್ರೈವೇಟ್ ಇಕ್ವಿಟಿ ಇಂಡಿಯಾ, ಹಾರ್ನ್‌ಬಿಲ್ ಆರ್ಕಿಡ್ ಇಂಡಿಯಾ ಫಂಡ್, ಪೈನ್‌ಬ್ರಿಡ್ಜ್ ಇಂಡಿಯಾ ಇಕ್ವಿಟಿ ಫಂಡ್ ಮತ್ತು ಅಬಾಕಸ್ ಗ್ರೋತ್ ಫಂಡ್ ಆಂಕರ್ ಬುಕ್‌ನಲ್ಲಿ ಭಾಗಿಯಾಗಿದೆ.

ಕಂಪನಿಯು ವಿತರಣೆಯ ಗಾತ್ರವನ್ನು 200 ಕೋಟಿ ರೂಪಾಯಿಯಿಂದ 161 ಕೋಟಿ ರೂಪಾಯಿಗೆ ಕಡಿತ ಮಾಡಿದೆ. ಅಲ್ಲದೆ, ಪ್ರೋಮೊಟರ್ಸ್ ಮತ್ತು ಅಸ್ತಿತ್ವದಲ್ಲಿರುವ ಷೇರುದಾರರಿಂದ 98.35 ಲಕ್ಷ ಷೇರುಗಳ ಆಫರ್-ಫಾರ್-ಸೇಲ್ (OFS) ಇರುತ್ತದೆ. ವೆಂಕಟರಾಮನ್ ಶ್ರೀನಿವಾಸನ್ ಮತ್ತು ತಾರವ್ ಪ್ರೈವೇಟ್ ಲಿಮಿಟೆಡ್ ಕ್ರಮವಾಗಿ 32.89 ಲಕ್ಷ ಇಕ್ವಿಟಿ ಮತ್ತು 45.16 ಲಕ್ಷ ಇಕ್ವಿಟಿ ಷೇರುಗಳನ್ನು ಪಡೆದಿದ್ದಾರೆ.
ಜೊತೆಗೆ ಕೌಶಿಕ್ ಶ್ರೀನಿವಾಸನ್ 5.1 ಲಕ್ಷ ಈಕ್ವಿಟಿ ಷೇರುಗಳನ್ನು, ಲಕ್ಷ್ಮಿ ಕೌಶಿಕ್ 5.04 ಲಕ್ಷ, ಅರವಿಂದ್ ಶ್ರೀನಿವಾಸನ್ 8.81 ಲಕ್ಷ ಮತ್ತು ಐಶ್ವರ್ಯ ಅರವಿಂದ್ 1.33 ಲಕ್ಷ ಈಕ್ವಿಟಿ ಷೇರುಗಳನ್ನು ಹಿಂತೆಗೆದುಕೊಳ್ಳಲಿದ್ದಾರೆ.
ಇಮುದ್ರಾ ಐಪಿಒ ಬಗ್ಗೆ ತಿಳಿಯಿರಿ
ಒಂದು ಷೇರಿನ ಬೆಲೆ 243-256 ರೂಪಾಯಿ ಗೊತ್ತುಪಡಿಸಿ ಆರಂಭಿಕ ಸಾರ್ವಜನಿಕ ಕೊಡುಗೆ ಆರಂಭ ಮಾಡಿದೆ. ಈ ಐಪಿಒ ಮೇ 20 ರಂದು ಸಾರ್ವಜನಿಕರಿಗೆ ತೆರೆದು ಮೇ 24 ರಂದು ಮುಕ್ತಾಯಗೊಳ್ಳುತ್ತದೆ. ಈ ಐಪಿಒ 412.79 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆ ಇದೆ. ಬೆಂಗಳೂರು ಮೂಲದ ಕಂಪನಿಯು ಐಪಿಒ ಪೂರ್ವ ನಿಯೋಜನೆ ಅಡಿಯಲ್ಲಿ 16,03,617 ಷೇರುಗಳನ್ನು ರೂ 39 ಕೋಟಿಗೆ ಹಂಚಿಕೆ ಮಾಡಿದೆ.
ಬರುವ ಆದಾಯವನ್ನು ಸಾಲವನ್ನು ಮರುಪಾವತಿಸಲು, ಕಾರ್ಯನಿರತ ಬಂಡವಾಳದ ಅವಶ್ಯಕತೆಗಳನ್ನು ಬೆಂಬಲಿಸಲು, ಉಪಕರಣಗಳನ್ನು ಖರೀದಿಸಲು, ಭಾರತ ಮತ್ತು ಸಾಗರೋತ್ತರ ಸ್ಥಳಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಡೇಟಾ ಕೇಂದ್ರಗಳಿಗೆ ಇತರ ಸಂಬಂಧಿತ ವೆಚ್ಚಗಳನ್ನು ಪಾವತಿಸಲು ಬಳಸಿಕೊಳ್ಳಲಾಗುತ್ತದೆ. ಹಾಗೆಯೇ ಮೊತ್ತವನ್ನು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು, eMudhra INC ನಲ್ಲಿ ಹೂಡಿಕೆ ಮಾಡಲು ಮತ್ತು ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.


Click it and Unblock the Notifications