ನಾವು ಹೂಡಿಕೆ ವಿಚಾರಕ್ಕೆ ಬಂದಾಗ ಎಂದಿಗೂ ಕೂಡಾ ಎಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಎಂದು ನೋಡುತ್ತೇವೆ. ಹಾಗೆಯೇ ನಾವು ಎಲ್ಲಿ ಹೂಡಿಕೆ ಮಾಡಿದರೆ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯ ಎಂದು ನೋಡುತ್ತೇವೆ. ಹಾಗಿರುವಾಗ ನಮ್ಮ ಮುಂದೆ ಬರುವ ಆಯ್ಕೆ ಅಂಚೆ ಕಚೇರಿ ಉಳಿತಾಯ ಯೋಜನೆಯಾಗಿದೆ.
ಭಾರತೀಯ ಅಂಚೆ ಇಲಾಖೆಯು ನಿರ್ದಿಷ್ಟವಾಗಿ ಗ್ರಾಮೀಣ ಪ್ರದೇಶಗಳ ಡೆಪಾಸಿಟ್‌ದಾರರಿಗೆ ಅನುಕೂಲವಾಗುವಂತೆ ಸುರಕ್ಷಿತ ಮತ್ತು ಲಾಭದಾಯಕ ಉಳಿತಾಯ ಯೋಜನೆಗಳನ್ನು ನೀಡುತ್ತದೆ. ಅಂಚೆ ಕಚೇರಿ ಉಳಿತಾಯ ಖಾತೆ ಸೇರಿದಂತೆ ಈ ಯೋಜನೆಗಳು ಸ್ಥಿರವಾದ ಬಡ್ಡಿದರವನ್ನು ನೀಡುತ್ತದೆ. ಹಾಗೆಯೇ ವಿಶ್ವಾಸಾರ್ಹ ಹೂಡಿಕೆ ಆಯ್ಕೆಯನ್ನು ಒದಗಿಸುತ್ತವೆ. ಇದರ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಅತೀ ಕಡಿಮೆ ಹೂಡಿಕೆ ಆಯ್ಕೆಗಳು
• ವಿವಿಧ ಆದಾಯಗಳು: ಬಡ್ಡಿದರಗಳನ್ನು ಸರಿಯಾದ ಸಮಯಕ್ಕೆ ಪಡೆಯುವ ಜೊತೆಗೆ, ಡೆಪಾಸಿಟ್‌ದಾರರು ತಮ್ಮ ಹೂಡಿಕೆಯ ಮೇಲೆ ಆಕರ್ಷಕವಾದ ಆದಾಯವನ್ನು ಪಡೆಯಲು ಸಾಧ್ಯವಾಗುತ್ತದೆ.
• ವಿವಿಧ ಆಯ್ಕೆಗಳು: ಅಂಚೆ ಕಚೇರಿ ಉಳಿತಾಯ ಖಾತೆಯು ನಿಮ್ಮ ಹೂಡಿಕೆಯ ಅವಧಿಯ ಆಧಾರದ ಮೇಲೆ ಬಡ್ಡಿದರವನ್ನು ನೀಡುತ್ತದೆ. ಒಂದು ವರ್ಷದ ಹೂಡಿಕೆಗೆ ನೀವು ಶೇಕಡ 6.9 ರಷ್ಟು ಬಡ್ಡಿದರವನ್ನು ಪಡೆಯಬಹುದು. ಆದರೆ ಎರಡು ಮತ್ತು ಮೂರು ವರ್ಷಗಳ ಹೂಡಿಕೆಗೆ ನೀವು ಶೇಕಡ 7 ರಷ್ಟು ಬಡ್ಡಿದರವನ್ನು ಪಡೆಯಬಹುದು. ಐದು ವರ್ಷಗಳ ಹೂಡಿಕೆಯಲ್ಲಿ ನೀವು ಸುಮಾರು ಶೇಕಡ 7.5 ರಷ್ಟು ಬಡ್ಡಿದರವನ್ನು ಪಡೆಯಬಹುದು.
• ಕೈಗೆಟುಕುವ ಆರಂಭ ಹೂಡಿಕೆ: ಕನಿಷ್ಠ 500 ರೂಪಾಯಿಗಳ ಡೆಪಾಸಿಟ್‌ನೊಂದಿಗೆ ನಿಮ್ಮ ಉಳಿತಾಯದ ಪ್ರಯಾಣವನ್ನು ನೀವು ಆರಂಭ ಮಾಡಬಹುದು. ನೀವು 50 ರೂಪಾಯಿಗಳಷ್ಟು ಕಡಿಮೆ ಹಣವನ್ನು ವಿತ್‌ಡ್ರಾ ಮಾಡಬಹುದು.
• ಏನೆಲ್ಲ ಸೇರುತ್ತದೆ: ಈ ಯೋಜನೆಯು ವಯಸ್ಕರು ಮತ್ತು ಕಿರಿಯರಿಬ್ಬರಿಗೂ ಮುಕ್ತವಾಗಿದೆ. ಯಾವುದೇ ಗರಿಷ್ಠ ಹೂಡಿಕೆ ಮಿತಿ ಇಲ್ಲ. 10,000 ರೂಪಾಯಿವರೆಗಿನ ತೆರಿಗೆ ವಿನಾಯಿತಿ ನಿಮಗೆ ಲಭ್ಯವಾಗುತ್ತದೆ.
• ಹೆಚ್ಚುವರಿ ಆಯ್ಕೆಗಳು: ಶೇಕಡ 8.2 ರಷ್ಟು ಬಡ್ಡಿ ದರದೊಂದಿಗೆ ಹಿರಿಯ ನಾಗರಿಕ ಉಳಿತಾಯ ಯೋಜನೆ ಮತ್ತು ಮಾಸಿಕ ಆದಾಯ ಖಾತೆ ಯೋಜನೆಗೆ ಶೇಕಡ 7.4 ರಷ್ಟು ಬಡ್ಡಿದರವನ್ನು ನೀವು ಪಡೆಯಬಹುದಾಗಿದೆ.
• ಸುಲಭ ದಾಖಲಾತಿ: ನೀವು ಈ ಅಂಚೆ ಕಚೇರಿ ಯೋಜನೆಯಲ್ಲಿ ಹೂಡಿಕೆ ಮಾಡಲು ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮೂರು ಪಾಸ್‌ಪೋರ್ಟ್ ಗಾತ್ರದ ಫೋಟೋ ಮತ್ತು ಸಂಪರ್ಕ ವಿವರಗಳ ಅಗತ್ಯವಿದೆ. ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ, ಅಗತ್ಯವಿರುವ ಫಾರ್ಮ್‌ಗಳನ್ನು ಭರ್ತಿ ಮಾಡಿ ಮತ್ತು ಖಾತೆ ತೆರೆಯುವ ಪ್ರಕ್ರಿಯೆ ಪೂರ್ಣಗೊಳಿಸಿ.
• ಅನುಕೂಲ ಭರವಸೆ: ಅಂಚೆ ಕಚೇರಿ ಉಳಿತಾಯ ಖಾತೆಯು ಎಟಿಎಂ ಕಾರ್ಡ್ ಕಾರ್ಡ್ ಮತ್ತು ಚೆಕ್‌ಬುಕ್ ಅನ್ನು ಒದಗಿಸುತ್ತದೆ. ನಿಮ್ಮ ಹಣವನ್ನು ಸುಲಭವಾಗಿ ಪಡೆಯಲು ಇದು ಸಹಾಯಕವಾಗಿದೆ.


Click it and Unblock the Notifications