ಸಾಮಾನ್ಯವಾಗಿಯೇ ನಮ್ಮಲ್ಲಿರುವ ಹಣವನ್ನು ನಾವು ಬ್ಯಾಂಕ್ ಖಾತೆಯಲ್ಲಿ ಜೋಪಾನವಾಗಿರಿಸಿಕೊಳ್ಳುವುದು ರೂಢಿ. ಪ್ರಸ್ತುತ ದೇಶದಲ್ಲಿ ಬಹುತೇಕ ಜನರಲ್ಲಿ ಬ್ಯಾಂಕ್ ಖಾತೆಗಳಿದ್ದು, ಹಣವನ್ನು ಈ ಖಾತೆಯಲ್ಲಿ ಉಳಿತಾಯ ಮಾಡುತ್ತಾರೆ. ಆದರೆ ನಿಮ್ಮ ಸಾವಿನ ನಂತರ ನಿಮ್ಮ ಹಣ ಏನಾಗುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ?
ನೀವು ಮರಣ ಹೊಂದಿದ ಬಳಿಕ ನಿಮ್ಮ ಖಾತೆಯಲ್ಲಿದ್ದ ಹಣ, ಉಳಿತಾಯ ಮೊತ್ತದ ಬಗ್ಗೆ ನಿಮ್ಮಲ್ಲಿ ಹಲವು ಪ್ರಶ್ನೆಗಳು ಇರಲೇಬೇಕು. ಅದರಲ್ಲಿ ಮೊದಲನೆಯದಾಗಿ, ನಿಮ್ಮ ಬ್ಯಾಂಕ್ ಖಾತೆಗೆ ನಾಮಿನಿಯನ್ನು ಹಾಕಿದ್ದೀರಾ? ಎಂಬುವುದು. ಇನ್ನೊಂದು ನೀವು ಮರಣ ಹೊಂದಿದ ಬಳಿಕ ನಿಮ್ಮ ಹಣ ನಿಮ್ಮ ಪ್ರೀತಿಪಾತ್ರರಿಗೆ ಸುಲಭವಾಗಿ ಲಭ್ಯವಾಗಬಹುದೇ ಎಂಬುವುದುನ್ನು ನೀವು ಖಚಿತಪಡಿಸಿಕೊಂಡಿದ್ದೀರಾ ಎಂಬುವುದು?. ಈ ಬಗ್ಗೆ ನಾವು ತಿಳಿಯೋಣ ಮುಂದೆ ಓದಿ...

1. ನಿಮ್ಮ ಸಾವಿನ ನಂತರ ನಿಮ್ಮ ಹಣ ಏನಾಗುತ್ತದೆ?
ಖಾತೆದಾರನು ಮರಣಹೊಂದಿದಾಗ, ಸರಿಯಾದ ಪರಿಶೀಲನೆಯ ನಂತರ ಬ್ಯಾಂಕ್ ಖಾತೆಯ ಹಣವನ್ನು ನಾಮಿನಿಗೆ ವರ್ಗಾಯಿಸಲಾಗುತ್ತದೆ.
Saving Accounts: ಒಂದಕ್ಕಿಂತ ಅಧಿಕ ಉಳಿತಾಯ ಖಾತೆ ಹೊಂದುವುದು ಹೇಗೆ ಪ್ರಯೋಜನ?
2. ನಾಮಿನಿಗಳ ಪರಿಶೀಲನೆ
ಖಾತೆದಾರನ ಮರಣದ ಸಂದರ್ಭದಲ್ಲಿ ಖಾತೆ ಅಥವಾ ಫಿಕ್ಸಿಡ್ ಡೆಪಾಸಿಟ್ ಮೊತ್ತವನ್ನು ಕ್ಲೈಮ್ ಮಾಡಲು ಅವಕಾಶ ನೀಡಲು ಮರಣದ ಮೊದಲೇ ಖಾತೆದಾರರು ಗೊತ್ತುಪಡಿಸಿದ ವ್ಯಕ್ತಿಗಳೇ ನಾಮಿನಿದಾರರು ಆಗಿರುತ್ತಾರೆ. ಬ್ಯಾಂಕ್ ಖಾತೆ ಅಥವಾ ಎಫ್‌ಡಿ ತೆರೆಯುವಾಗ, ನಾಮಿನಿಯ ಹೆಸರು ವಿವರ ಉಲ್ಲೇಖಿಸಲು ನಿಮಗೆ ತಿಳಿಸಲಾಗುತ್ತದೆ.
3. ನಾಮಿನಿ ಆಯ್ಕೆ
ಖಾತೆ ತೆರೆಯುವ ಫಾರ್ಮ್ ಅನ್ನು ಭರ್ತಿ ಮಾಡುವಾಗ, ನಾಮಿನಿ ವಿವರಗಳಿಗಾಗಿ ಪ್ರತ್ಯೇಕ ವಿಭಾಗ ಇರುತ್ತದೆ. ಕುಟುಂಬದ ಸದಸ್ಯ, ಸಂಗಾತಿ, ಮಗು, ಒಡಹುಟ್ಟಿದವರು, ಸ್ನೇಹಿತ ಅಥವಾ ಸಂಬಂಧಿಯಾಗಿದ್ದರೂ ನೀವು ವಿಶ್ವಾಸಾರ್ಹ ವ್ಯಕ್ತಿಯನ್ನು ನಾಮಿನಿಯಾಗಿ ಆಯ್ಕೆ ಮಾಡಿಕೊಳ್ಳಬಹುದು. ಅಪ್ರಾಪ್ತ ನಾಮಿನಿಯ ಪರವಾಗಿ ಹಣವನ್ನು ಪಡೆಯಲು ಅವರ ಪೋಷಕರನ್ನು ಕೂಡಾ ಹೆಸರಿಸಬೇಕಾಗುತ್ತದೆ.
4. ಜಂಟಿ ಖಾತೆಗಳು ಮತ್ತು ನಾಮಿನಿಗಳು
ಜಂಟಿ ಖಾತೆಗಳು ಆಗಿದ್ದರೆ, ನಾಮಿನಿ ಆಯ್ಕೆಗೆ ಎಲ್ಲಾ ಖಾತೆದಾರರಿಂದ ಒಪ್ಪಿಗೆಯ ಅಗತ್ಯವಿದೆ. ಜಂಟಿ ಖಾತೆಯಲ್ಲಿ ನಾಮಿನಿಯನ್ನು ಸೇರಿಸುವುದು ಅಥವಾ ತೆಗೆದುಹಾಕಲು ಎಲ್ಲಾ ಡೆಪಾಸಿಟ್‌ದಾರರ ಒಪ್ಪಂದದ ಅಗತ್ಯವಿದೆ.
5. ನಾಮಿನಿ ಬದಲಾವಣೆಗಳು
ನಾಮಿನಿ ಬದಲಾವಣೆಗೆ ಯಾವುದೇ ಮಿತಿಗಳಿಲ್ಲ. ನೀವು ಎಷ್ಟು ಬಾರಿ ಬೇಕಾದರೂ ನಾಮಿನಿಯನ್ನು ಬದಲಾವಣೆ ಮಾಡಬಹುದು ಅಥವಾ ನಾಮಿನಿ ಸೇರ್ಪಡೆ ಮಾಡಬಹುದಾಗಿದೆ.
6. ನಾಮಿನಿಯ ಅವಶ್ಯಕತೆ
ಉಳಿತಾಯ ಖಾತೆಯನ್ನು ತೆರೆಯುವಾಗ ನಾಮಿನಿ ಹೆಸರು, ವಿವರ ನೀಡುವುದು ಕಡ್ಡಾಯವಾಗಿದೆ. ಇದು ನಿಮ್ಮ ಕುಟುಂಬದ ಆರ್ಥಿಕ ಭವಿಷ್ಯವನ್ನು ಕಾಪಾಡುತ್ತದೆ. ನಾಮಿನಿಯನ್ನು ನೀವು ಗೊತ್ತುಪಡಿಸದಿದ್ದರೆ, ನಿಮ್ಮ ಮರಣದ ನಂತರ ನಿಮ್ಮ ಕುಟುಂಬಕ್ಕೆ ಹಣ ವರ್ಗಾವಣೆ ಕಷ್ಟವಾಗುತ್ತದೆ.
7. ನಾಮಿನಿ ವಿವರ ಪರಿಶೀಲನೆ
ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿಕೊಂಡು ನಿಮ್ಮ ನಾಮಿನಿಯ ಹೆಸರನ್ನು ನೀವು ಪರಿಶೀಲಿಸಬಹುದು.
8. ಹೊಸದಾಗಿ ನಾಮಿನಿ ಸೇರ್ಪಡೆ
ಆನ್‌ಲೈನ್ ಬ್ಯಾಂಕಿಂಗ್ ಮೂಲಕ ನಿಮ್ಮ ಉಳಿತಾಯ ಖಾತೆಗೆ ನಾಮಿನಿಗಳನ್ನು ಸೇರಿಸಲು ಅಥವಾ ಬದಲಾವಣೆ ಮಾಡಲು ನಿಮಗೆ ಅವಕಾಶ ಇರುತ್ತದೆ. ಲಾಗ್ ಇನ್ ಮಾಡಿದ ನಂತರ, ಉಳಿತಾಯ ಖಾತೆಯ ಬ್ಯಾಲೆನ್ಸ್ ವಿಭಾಗಕ್ಕೆ ಹೋಗಿ, ಅಕೌಂಟ್ ಸಮ್ಮರಿ ಪೇಜ್ (Account Summary page) ಗೆ ಹೋಗಿ ನಾಮಿನಿ ಆಯ್ಕೆಯನ್ನು ಕ್ಲಿಕ್ ಮಾಡಿ, ನಾಮಿನಿ ಸೇರ್ಪಡೆ ಅಥವಾ ಬದಲಾವಣೆ ಮಾಡಿಕೊಳ್ಳಬಹುದು.
ನೀವು ಬ್ಯಾಂಕ್ ಖಾತೆಗೆ ನಾಮಿನಿಯನ್ನು ನಿಗದಿಪಡಿಸುವುದು ಎಂದಿಗೂ ಕೂಡಾ ಅತೀ ಮುಖ್ಯವಾಗಿದೆ. ಇದು ನಿಮ್ಮ ಪ್ರೀತಿಪಾತ್ರರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ನಿಮ್ಮ ಮರಣದ ನಂತರ ನೀವು ಉಳಿತಾಯ ಮಾಡಿದ ಹಣವು ನಿಮ್ಮ ಕುಟುಂಬಸ್ಥರಿಗೆ ಆರ್ಥಿಕವಾಗಿ ಸಹಾಯಕವಾಗಲಿದೆ. ಆದ್ದರಿಂದ ತಪ್ಪದೇ ಬ್ಯಾಂಕ್ ಖಾತೆಗೆ ನಾಮಿನಿ ಗುರುತಿಸಿ. ನಾಮಿನಿ ವಿಶ್ವಾಸಾರ್ಹರಾಗಿರಲಿ.


Click it and Unblock the Notifications