ಸಾಮಾನ್ಯವಾಗಿ ಭಾರತದಲ್ಲಿ ನೋಟಿನ ಮೇಲೆ ಬರೆಯುವುದು ಜನರಿಗೆ ಅಭ್ಯಾಸವಾಗಿ ಬಿಟ್ಟಿದೆ. ಯಾರೋ ಫೋನ್ ನಂಬರ್ ಹೇಳಿದರೂ ಅದನ್ನು ಪೇಪರ್ ಬದಲು ನೋಟಲ್ಲೇ ಬರೆಯುವವರು ಅದೆಷ್ಟೋ ಮಂದಿ ಇದ್ದಾರೆ. ಇನ್ನು ಈ ಹಿಂದೆ ಪ್ರೇಮಿಗಳಿಗೆ ತಮ್ಮ ಫೋನ್ ನಂಬರ್ ಬದಲಾಯಿಸುವ ಸಾಧನೆವೇ ನೋಟಾಗಿತ್ತು. ಆದರೆ ಈಗ ನೋಟಿನಲ್ಲಿ ಬರೆದರೆ ಆ ನೋಟು ಅಮಾನ್ಯವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹೌದು, 2000 ರೂಪಾಯಿ, 500 ರೂಪಾಯಿ, 200 ರೂಪಾಯಿ, 100 ರೂಪಾಯಿ, 50 ರೂಪಾಯಿ ಆಗಲಿ ಅಥವಾ 20 ರೂಪಾಯಿ ನೋಟಾಗಲಿ, ಅದರಲ್ಲಿ ಬರೆದಿದ್ದರೆ ಆ ನೋಟುಗಳನ್ನು ಅಮಾನ್ಯ ಮಾಡಲಾಗುತ್ತದೆ ಎಂದು ಇತ್ತೀಚೆಗೆ ಆರ್‌ಬಿಐ ನಿಯಮ ಹೇಳಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ, ಹೆಚ್ಚಾಗಿ ಬರೆದಿರುವ ನೋಟುಗಳನ್ನು ಹೊಂದಿರುವವರು ಆತಂಕಕ್ಕೆ ಒಳಗಾಗಿರುವುದು ಕೂಡಾ ಇದೆ.
ಆದರೆ ಈ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯು ಸುಳ್ಳಾಗಿದೆ. ಯಾವುದೇ ನೋಟಿನಲ್ಲಿ ಬರೆದಿದ್ದರು ಅದನ್ನು ಅಮಾನ್ಯಗೊಳಿಸಲಾಗುವುದಿಲ್ಲ. ಅದು ಚಾಲ್ತಿಯಲ್ಲಿರುವ ನೋಟಾಗಿಯೇ ಉಳಿಯುತ್ತದೆ. ಆದರೆ ಆರ್‌ಬಿಐ ಮಾತ್ರ ನೋಟಿನಲ್ಲಿ ಬರೆಯಬೇಡಿ ಎಂದು ಜನರಿಗೆ ತಿಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಏನು ಹರಿದಾಡುತ್ತಿದೆ, ಆರ್‌ಬಿಐ ಹೇಳುವುದು ಏನು?, ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.....
ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದು ಹೀಗೆ...
"ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಹೊಸ ಮಾರ್ಗಸೂಚಿ ಪ್ರಕಾರ ಹೊಸ ನೋಟಿನಲ್ಲಿ ಏನೇ ಬರೆದರೂ ಅದನ್ನು ಅಮಾನ್ಯಗೊಳಿಸಲಾಗುತ್ತದೆ. ಅದು ಚಾಲ್ತಿಯಲ್ಲಿರದ ನೋಟು ಎಂದು ಪರಿಗಣಿಸಲಾಗುತ್ತದೆ," ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಈ ಸುದ್ದಿಯನ್ನು ಫಾಕ್ಟ್‌ಚೆಕ್ ಮಾಡಿದಾಗ ಆರ್‌ಬಿಐನ ಈ ರೀತಿಯ ಯಾವುದೇ ನಿಯಮಗಳು ಇಲ್ಲ ಎಂಬುವುದು ತಿಳಿದುಬಂದಿದೆ.
ಹಾಗಾದರೆ ಆರ್‌ಬಿಐ ಹೇಳುವುದೇನು?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪಾಲಿಸಿಯು, ಜನರು ಕರೆನ್ಸಿ ನೋಟಿನಲ್ಲಿ ಬರೆಯದಂತೆ ಹೇಳುತ್ತದೆ. ಇದರಿಂದಾಗಿ ನೋಟಿನ ಮೌಲ್ಯ ಕಡಿಮೆಯಾಗುತ್ತದೆ ಎಂದು ತಿಳಿಸುತ್ತದೆ. ಜನರು ನೋಟಿನ ಮೇಲೆ ಬರೆಯದಂತೆ ಆರ್‌ಬಿಐ ಮನೆ ಮಾಡಿದೆ. ಅದನ್ನು ಹೊರತುಪಡಿಸಿ ನೋಟನ್ನೇ ಅಮಾನ್ಯಗೊಳಿಸುವಂತಹ ಯಾವುದೇ ನಿಯಮವನ್ನು ಆರ್‌ಬಿಐ ಹೊಂದಿಲ್ಲ. ಜನರು ಈ ಕೆಳಗಿನ ಕಾರ್ಯವನ್ನು ಮಾಡದಂತೆ ಆರ್‌ಬಿಐ ಮನವಿ ಮಾಡಿದೆ.
* ನೋಟಿನ ಮೇಲೆ ತೂತನ್ನು ಮಾಡಬೇಡಿ ಎಂದು ಆರ್‌ಬಿಐ ಹೇಳುತ್ತದೆ.
* ನೋಟನ್ನು ಆಟಿಕೆಗಾಗಿ, ಅಲಂಕಾರಕ್ಕಾಗಿ, ಮಾಲೆ ಮಾಡಿ ಹಾಕಲೆಂದು, ನೃತ್ಯ ಮಾಡುವವರಿಗೆ ಎಸೆಯಲೆಂದು ಬಳಕೆ ಮಾಡಬೇಡಿ ಎಂದು ಆರ್‌ಬಿಐ ತಿಳಿಸುತ್ತದೆ.
* ನೋಟಿನ ಮೇಲೆ ಬರೆಯಬೇಡಿ ಹಾಗೂ ಅದರ ಮೇಲೆ ಚಿತ್ರವನ್ನು ಮಾಡಬೇಡಿ ಎಂದು ಆರ್‌ಬಿಐ ಹೇಳುತ್ತದೆ.
ನೋಟನ್ನು ಬದಲಾವಣೆ ಮಾಡಿಕೊಳ್ಳಿ
ಆರ್‌ಬಿಐ ನಿಯಮದ ಪ್ರಕಾರ, ಮಣ್ಣಾದ, ಕೊಂಚ ಹರಿದ ನೋಟುಗಳನ್ನು ಅಥವಾ ವಿರೂಪಗೊಂಡ ನಾಣ್ಯಗಳನ್ನು ಎಲ್ಲ ನೋಟುಗಳನ್ನು ಬ್ಯಾಂಕಿನ ಬ್ರಾಂಚ್‌ಗಳಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆದರೆ ಇದಕ್ಕೆ ಕೆಲವೊಂದು ನಿಯಮಗಳು ಇದೆ. ನೋಟು ಎಷ್ಟು ಹರಿದಿದೆ ಎಂಬುವುದರ ಮೇಲೆ ನೋಟಿನ ಮೌಲ್ಯವನ್ನು ಲೆಕ್ಕ ಹಾಕಲಾಗುತ್ತದೆ.
* ಬ್ಯಾಂಕುಗಳು ಉತ್ತಮ ಗುಣಮಟ್ಟದ ನೋಟುಗಳನ್ನು ನಾಣ್ಯಗಳನ್ನು ವಿರೂಪಗೊಂಡ ನೋಟು, ನಾಣ್ಯಗಳ ಬದಲಾಗಿ ನೀಡಬೇಕಾಗುತ್ತದೆ.
* ಆದರೆ ಇಂತಹ ನೋಟುಗಳನ್ನು ಸಣ್ಣ ಹಣಕಾಸು ಬ್ಯಾಂಕುಗಳು ಅಥವಾ ಸಂಸ್ಥೆಗಳಲ್ಲಿ ಬದಲಾವಣೆ ಮಾಡುವುದು ಒಂದು ಆಯ್ಕೆಯಷ್ಟೇ ಆಗಿದೆ, ಆದರೆ ಅದು ಕಾನೂನು ಪ್ರಕಾರ ಅಥವಾ ಕಡ್ಡಾಯವೇನಲ್ಲ.
* ವಿರೂಪಗೊಂಡ ನೋಟುಗಳು ಅಥವಾ ನಾಣ್ಯಗಳನ್ನು ಬದಲಾವಣೆ ಮಾಡಬಹುದು ಅಥವಾ ಆ ಬ್ಯಾಂಕ್‌ನಲ್ಲಿರುವ ಖಾತೆಗೆ ಡೆಪಾಸಿಟ್ ಕೂಡಾ ಮಾಡಬಹುದು.


Click it and Unblock the Notifications