ಭಾರತದ 14 ನಗರಗಳಲ್ಲಿ ಡೊಮಿನೋಸ್‌ನಿಂದ 20 ನಿಮಿಷಗಳ ಡೆಲಿವರಿ ಸೇವೆ
ಭಾರತದಲ್ಲಿ ಡೊಮಿನೋಸ್ ಫಿಜ್ಜಾವನ್ನು ನಿರ್ವಹಣೆ ಮಾಡುವ ಜ್ಯುಬಿಲ್ಯಾಂಟ್ ಫುಡ್‌ವರ್ಕ್, ಡಿಸೆಂಬರ್ 20, 2022ರಂದು ಭಾರತದ 14 ಪ್ರಮುಖ ನಗರಗಳಲ್ಲಿ 20 ನಿಮಿಷಗಳ ಡೆಲಿವರಿ ಸೇವೆಯನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ.
ಡೊಮಿನೋಸ್ ಇದಕ್ಕೂ ಮೊದಲು ಭಾರತದಲ್ಲಿ 30 ನಿಮಿಷಗಳ ಫಿಜ್ಜಾ ಡೆಲಿವರಿ ಸೇವೆಯನ್ನು ಆರಂಭ ಮಾಡಿದೆ. ಆದರೆ ಈಗ 20 ನಿಮಿಷಗಳ ಫಿಜ್ಜಾ ಡೆಲಿವರಿ ಸೇವೆಯನ್ನು ಆರಂಭ ಮಾಡಲು ಡೊಮಿನೋಸ್ ಫಿಜ್ಜಾ ಸಿದ್ದವಾಗಿದೆ. ಆದರೆ ಯಾವೆಲ್ಲ ನಗರ ಎಂಬುವುದನ್ನು ಇನ್ನೂ ಅಧಿಕೃತವಾಗಿ ಘೋಷಣೆ ಮಾಡಲಾಗಿಲ್ಲ.
ಆದರೆ ನಾವು 20 ಝೋನ್‌ಗಳನ್ನು ಮಾಡುತ್ತೇವೆ ಎಂದು ಮಾತ್ರ ಸಂಸ್ಥೆಯು ಹೇಳಿಕೊಂಡಿದೆ. ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರು ಹಾಗೂ ಚೆನ್ನೈನಲ್ಲಿ ಡೊಮಿನೋಸ್‌ನ 20 ನಿಮಿಷಗಳ ಸ್ಪೀಡ್ ಡೆಲವರಿ ಸೇವೆಯನ್ನು ಆರಂಭ ಮಾಡಲಾಗುತ್ತದೆ. ಈ ನಗರಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಡೊಮಿನೋಸ್ ಔಟ್‌ಲೇಟ್‌ಗಳು ಇರುವ ಕಾರಣದಿಂದಾಗಿ ಇಲ್ಲೇ ಈ ಸೇವೆಯನ್ನು ಆರಂಭಿಸುವ ಸಾಧ್ಯತೆಯಿದೆ.

"ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಹಾಗೆಯೇ ಡೆಲಿವರಿ ಸಿಬ್ಬಂದಿಗಳ ಸುರಕ್ಷತೆಯನ್ನು ಕೂಡಾ ನೋಡಿಕೊಳ್ಳುತ್ತೇವೆ," ಎಂದು ತಿಳಿಸಿದ್ದಾರೆ.
ಆಹಾರ ಉತ್ಪನ್ನ ಡೆಲಿವರಿ ಮಾಡುವ ಸಂಸ್ಥೆಯಾದ ಜೊಮ್ಯಾಟೋ ಮೇಲೆ ಮಾರ್ಚ್‌ನಲ್ಲಿ ವಿರೋಧ ವ್ಯಕ್ತವಾಗಿದೆ. ಜೊಮ್ಯಾಟೋದಲ್ಲಿ 10 ನಿಮಿಷಗಳ ಡೆಲಿವರಿ ಸೇವೆ ಇರಲಿದೆ ಎಂಬ ಘೋಷಣೆಯನ್ನು ಮಾಡಿದ ಬಳಿಕ ಟೀಕೆಯನ್ನು ಆರಂಭಿಸಲಾಗಿತ್ತು. ಸಂಸ್ಥೆಯು ಡೆಲಿವರಿ ಸಿಬ್ಬಂದಿಗಳನ್ನು ಅಪಾಯಕ್ಕೆ ದೂಡುತ್ತಿದೆ ಎಂದು ಆರೋಪಿಸಲಾಗಿತ್ತು.
ಭಾರತದಲ್ಲಿ ಅಧಿಕ ಡೆಲಿವರಿ ಸೇವೆ ಹೊಂದಿರುವ ಡೊಮಿನೋಸ್
ತನ್ನ ಸ್ಟೋರ್ ಪ್ರಕ್ರಿಯೆಯನ್ನು ಹೆಚ್ಚಳ ಮಾಡಲು, ಡೈನಾಮಿಕ್ ರಿಸೋರ್ಸ್ ಪ್ಲ್ಯಾನಿಂಗ್, ತಾಂತ್ರಿಕ ಅಪ್‌ಡೇಟ್‌ಗಳು ಮಾಡಲು ಈ 20 ನಿಮಿಷದ ಫಿಜ್ಜಾ ಡೆಲಿವರಿ ಸೇವೆಯನ್ನು ಮಾಡಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್ ಅನ್ನು ಹೊರತುಪಡಿಸಿ ಭಾರತದಲ್ಲಿ ಡೊಮಿನೋಸ್ ಅತೀ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ.