ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರುವುದು ಹಿರಿಯ ನಾಗರಿಕರಿಗೆ ಅತೀ ಮುಖ್ಯವಾಗಿದೆ. ಉತ್ತಮ ಕ್ರೆಡಿಟ್ ಸ್ಕೋರ್ ಸಾಲ, ಕ್ರೆಡಿಟ್ ಕಾರ್ಡ್ ಪಡೆಯಲು ಜನರಿಗೆ ಸಹಾಯಕವಾಗಿದೆ. ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರುವುದರಿಂದ ಹಿರಿಯ ನಾಗರಿಕರು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಲು ಸಾಧ್ಯವಾಗಲಿದೆ. ಇದು ಹಿರಿಯ ನಾಗರಿಕರಿಗೆ ಅನಿರೀಕ್ಷಿತ ಖರ್ಚುಗಳನ್ನು ನಿರ್ವಹಣೆ ಮಾಡಲು ಸಹಾಯಕವಾಗಲಿದೆ. ಅಗತ್ಯ ಸಂದರ್ಭದಲ್ಲಿ ಸಾಲವನ್ನು ಪಡೆಯಲು ಹಿರಿಯ ನಾಗರಿಕರಿಗೆ ಸಹಾಯಕವಾಗಲಿದೆ.
ಇನ್ನು ಕೆಲವು ಹಿರಿಯ ನಾಗರಿಕರುಗಳು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಉದ್ಯೋಗ, ಮೊದಲಾದವುಗಳಲ್ಲಿ ಸಹಾಯ ಮಾಡುವ ನಿಟ್ಟಿನಲ್ಲಿ ಸಾಲವನ್ನು ಪಡೆಯುವ ಚಿಂತನೆ ಮಾಡುತ್ತಾರೆ. ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿದ್ದರೆ, ನೀವು ಸಾಲದ ಹೊರೆಯನ್ನು ಹೊಂದಲು ರಿಸ್ಕ್ ಇರುವುದಿಲ್ಲ. ಆದರೆ ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಸಮಯ ಬೇಕಾಗುತ್ತದೆ. ಹಾಗೆಯೇ ಶಿಸ್ತು ಹಾಗೂ ತಾಳ್ಮೆಯೂ ಕೂಡಾ ಅತೀ ಮುಖ್ಯವಾಗಿದೆ. ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ನಾವಿಲ್ಲಿ ಟಿಪ್ಸ್ ನೀಡಿದ್ದೇವೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...
ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ
ನೀವು ಕ್ರೆಡಿಟ್ ಕಾರ್ಡ್ ಮೊದಲಾದ ಬಿಲ್‌ಗಳನ್ನು ಪಾವತಿ ಮಾಡುವುದನ್ನು ತಡ ಮಾಡಿದರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪ್ರಭಾವ ಉಂಟು ಮಾಡಲಿದೆ. ಅದಕ್ಕಾಗಿ ನೀವು ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸುವುದು ಮುಖ್ಯವಾಗುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿ ನೀವು ಎಂದಿಗೂ ಕೂಡಾ ಕ್ರೆಡಿಟ್ ಕಾರ್ಡ್ ಬಿಲ್, ಸಾಲದ ಇಎಂಐಗಳನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿ, ಅದರಲ್ಲಿ ಯಾವುದೇ ಬದಲಾವಣೆಯನ್ನು ಮಾಡದಿರಿ. ಯಾಕೆಂದರೆ ಮರುಪಾವತಿ ಹಿಸ್ಟರಿ ಅತೀ ಮುಖ್ಯವಾದ ಅಂಶವಾಗಿದೆ.
ಕ್ರೆಡಿಟ್ ರಿಪೋರ್ಟ್ ಅನ್ನು ಸರಿಯಾಗಿ ನಿರ್ವಹಿಸಿ
ನೀವು ನಿಮ್ಮ ಕ್ರೆಡಿಟ್ ರಿಪೋರ್ಟ್ ಹೇಗಿದೆ ಎಂದು ನೋಡಿಕೊಳ್ಳುವುದು ಕೂಡಾ ಮುಖ್ಯವಾಗುತ್ತದೆ. ಅದರ ಆಧಾರದಲ್ಲಿ ನಾವು ನಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸಲು ಸಹಾಯಕವಾಗಿದೆ. ಮೂರು ಪ್ರಮುಖ ಕ್ರೆಡಿಟ್ ಬ್ಯೂರೋಗಳಾದ ಇಕ್ವಿಫಾಕ್ಸ್, ಎಕ್ಸ್‌ಪೆರಿಯನ್, ಟ್ರಾನ್ಸ್‌ಯೂನಿಯನ್‌ನಿಂದ ಮನವಿ ಸಲ್ಲಿಸಿ ವಾರ್ಷಿಕವಾಗಿ ಒಂದು ಬಾರಿ ಕ್ರೆಡಿಟ್ ಸ್ಕೋರ್ ರಿಪೋರ್ಟ್ ಅಥವಾ ವರದಿಯನ್ನು ಪಡೆದುಕೊಳ್ಳಿ. ಯಾವುದೇ ತಪ್ಪು ಇದ್ದರೂ ನಿಮಗೆ ಲಭ್ಯವಾಗಲಿದೆ. ಆನ್‌ಲೈನ್‌ನಲ್ಲಿ ಉಚಿತವಾಗಿಯೂ ಕ್ರೆಡಿಟ್ ಸ್ಕೋರ್ ಅನ್ನು ಚೆಕ್ ಮಾಡಬಹುದು.
ಕ್ರೆಡಿಟ್ ಬಳಕೆ, ಕ್ರೆಡಿಟ್ ಅಕೌಂಟ್
ಅಧಿಕ ಕ್ರೆಡಿಟ್ ಬಳಕೆ ರೆಷಿಯೋ (ನಿಮ್ಮಲ್ಲಿ ಲಭ್ಯವಿರುವ ಕ್ರೆಡಿಟ್ ಮೊತ್ತದಲ್ಲಿ ನೀವು ಬಳಕೆ ಮಾಡುವ ಮೊತ್ತ) ಮೇಲೆ ಎಂದಿಗೂ ಕೂಡಾ ಗಮನವಿರಲಿ. ಕ್ರೆಡಿಟ್ ಬಳಕೆ ಹೆಚ್ಚಳ ಮಾಡಿದರೆ, ಇದು ನಿಮ್ಮ ಕ್ರೆಡಿಟ್ ಸ್ಕೋರ್‌ಗೆ ಸಂಕಷ್ಟ ಉಂಟಾಗಲಿದೆ. ಕ್ರೆಡಿಟ್ ಬಳಕೆಯನ್ನು ಶೇಕಡ 30ಕ್ಕೆ ಇಳಿಸುವುದು ಮುಖ್ಯವಾಗಿದೆ. ಹಳೆಯ ಕ್ರೆಡಿಟ್ ಅಕೌಂಟ್ ಅನ್ನು ಮುಚ್ಚಿರಿ. ಹಳೆಯ ಕ್ರೆಡಿಟ್ ಖಾತೆ ಬಳಕೆ ನಿಮ್ಮ ಕ್ರೆಡಿಟ್ ಹಿಸ್ಟರಿ ಕಡಿಮೆ ಮಾಡುತ್ತದೆ. ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನೆಗೆಟಿವ್ ಪ್ರಭಾವ ಬೀರದು.
ಸಾಲವನ್ನು ಜಾಗರೂಕರಾಗಿ ಖರ್ಚು ಮಾಡಿ
ಹಲವಾರು ಕ್ರೆಡಿಟ್ ಕಾರ್ಡ್‌ಗಳನ್ನು ಬಳಕೆ ಮಾಡುವುದನ್ನು ತಪ್ಪಿಸಿ ಮತ್ತು ಲೆಕ್ಕಕ್ಕಿಂತ ಹೆಚ್ಚಿನ ಸಾಲವನ್ನು ಪಡೆಯುವುದನ್ನು ತಪ್ಪಿಸಿ. ನೀವು ಎಷ್ಟು ಮೊತ್ತವನ್ನು ಮರುಪಾವತಿ ಮಾಡಲು ಸಾಧ್ಯವೋ ಅಷ್ಟು ಮೊತ್ತವನ್ನು ಮಾತ್ರ ಸಾಲವನ್ನಾಗಿ ಪಡೆಯಿರಿ. ಅನಗತ್ಯ ಕಾರಣಗಳಿಗೆ ಸಾಲವನ್ನು ಪಡೆದು ಖರ್ಚು ಮಾಡುವುದು ನಿಮಗೆ ದೊಡ್ಡ ಹೊರೆಯಾಗಬಹುದು. ಅದಕ್ಕಾಗಿ ತೀರಾ ಅಗತ್ಯವಿದ್ದರೆ ಮಾತ್ರ ಸಾಲವನ್ನು ಪಡೆಯಿರಿ. ಹಾಗೆಯೇ ನೀವು ಸಾಲ ಪಡೆದು ಹಣಕಾಸು ವಿಚಾರದಲ್ಲಿ ತೊಂದರೆಗೆ ಒಳಗಾಗುವುದಕ್ಕಿಂತ ಅನಗತ್ಯ ಸಾಲ ಪಡೆಯದೆ ಇರುವುದು ಉತ್ತಮ.
ತಜ್ಞರ ಸಲಹೆ ಪಡೆಯಿರಿ
ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮಗೊಳಿಸಲು ತಜ್ಞರ ಸಲಹೆಯನ್ನು ಕೂಡಾ ಪಡೆಯುವುದು ಒಳಿತು. ನೀವು ಸಾಲವನ್ನು ಪಡೆಯುವಾಗ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಪಡೆಯುವಾಗ ಬ್ಯಾಂಕ್‌ಗೆ ಹೋಗಿ ಅಲ್ಲಿರುವ ತಜ್ಞರ ಸಲಹೆಯನ್ನು ಪಡೆದರೆ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸಲು ಸಹಾಯವಾಗಲಿದೆ. ಹೆಚ್ಚಾಗಿ ವಯಸ್ಸಾದ ಕಾರಣ ತಮಗೆ ಸಾಲ ಲಭ್ಯವಾಗದು ಎಂಬುವುದು ಹಿರಿಯ ನಾಗರಿಕರ ಭಯವಾಗಿದೆ, ಆದರೆ ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ, ಸಾಲವನ್ನು ಪಡೆಯಲು ಯಾವುದೇ ತೊಂದರೆ ಉಂಟಾಗಲಾರದು.


Click it and Unblock the Notifications