Election Results 2023: ಮತಗಟ್ಟೆಯಿಂದ ಎಣಿಕೆ ಕೇಂದ್ರವರೆಗೆ, ಇವಿಎಂ ಪ್ರಯಾಣ ಹೀಗಿದೆ

ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗಳ ಎಣಿಕೆ ಪ್ರಕ್ರಿಯೆ ಡಿಸೆಂಬರ್ 3 ರ ಭಾನುವಾರದಂದು ನಡೆಯಲಿದ್ದು, ಅದೇ ದಿನವೇ ಫಲಿತಾಂಶವು ಪ್ರಕಟವಾಗಲಿದೆ. ಇದಕ್ಕೂ ಮುನ್ನ ಈಗಾಗಲೇ ಎಕ್ಸಿಟ್ ಪೋಲ್ ಪ್ರಕಟವಾಗಿದೆ.

ಈಗ ಎಲ್ಲರ ಚಿತ್ತ ಈ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಮೇಲೆ ಇದೆ. ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ಸ್ ಅಥವಾ ಇವಿಎಂಗಳು ಪ್ರತಿ ಚುನಾವಣೆಯ ಸುತ್ತ ಚರ್ಚೆಯ ವಿಷಯವಾಗಿದೆ. ಮತಗಟ್ಟೆಯಿಂದ ಎಣಿಕೆ ಕೇಂದ್ರವರೆಗೆ, ಇವಿಎಂ ಪ್ರಯಾಣ ಹೇಗಿದೆ, ಎಂಬ ವಿವರ ಇಲ್ಲಿದೆ ಮುಂದೆ ಓದಿ...

 ಮತಗಟ್ಟೆಯಿಂದ ಎಣಿಕೆ ಕೇಂದ್ರವರೆಗೆ, ಇವಿಎಂ ಪ್ರಯಾಣ ಹೀಗಿದೆ

ಮತದಾನ ಆರಂಭಕ್ಕೂ ಮುನ್ನ

ಮತದಾನವಲ್ಲದ ಅವಧಿಯಲ್ಲಿ, ಜಿಲ್ಲೆಯಲ್ಲಿ ಲಭ್ಯವಿರುವ ಎಲ್ಲಾ ಇವಿಎಂಗಳನ್ನು ಗೋದಾಮಿನಲ್ಲಿ ಸಂಗ್ರಹಿಸಿಡಲಾಗುತ್ತದೆ. ಅವುಗಳನ್ನು ಜಿಲ್ಲಾ ಚುನಾವಣಾಧಿಕಾರಿ (ಡಿಇಒ) ಅವರ ನೇರ ನಿಯಂತ್ರಣದಲ್ಲಿ ಇರಿಸಲಾಗುತ್ತದೆ. ಶೇಖರಣೆಗೆ ಸರಿಯಾದ ಸ್ಥಳ ಇಲ್ಲದಿದ್ದಾಗ ಕೆಲವೊಂದು ವಿನಾಯಿತಿಯಿದೆ.

ಆದಾಗ್ಯೂ, ಗೊತ್ತುಪಡಿಸಿದ ಗೋದಾಮು ತಹಸಿಲ್ ಮಟ್ಟಕ್ಕಿಂತ ಕೆಳಗಿರಬಾರದು. ಸ್ಥಳವನ್ನು ಡಬಲ್ ಲಾಕ್‌ ಮಾಡಿರಲಾಗುತ್ತದೆ. ಪೊಲೀಸರು ಅಥವಾ ಭದ್ರತಾ ಸಿಬ್ಬಂದಿಗಳು ಕೂಡಾ 24 ಗಂಟೆ ಇಲ್ಲಿರುತ್ತಾರೆ. ಗೋದಾಮು ಕೂಡ ಸಿಸಿಟಿವಿ ಕಣ್ಗಾವಲಿನಲ್ಲಿದೆ.

ಮತದಾನವಲ್ಲದ ಅವಧಿಯಲ್ಲಿ, ಇಸಿಐನಿಂದ ನಿರ್ದಿಷ್ಟ ಸೂಚನೆಗಳಿಲ್ಲದೆ, ಇವಿಎಂಗಳನ್ನು ಗೋದಾಮಿನಿಂದ ಹೊರಗೆ ತರುವ ಅವಕಾಶವಿಲ್ಲ. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ, ಇಂಜಿನಿಯರ್‌ಗಳಿಂದ ಇವಿಎಂಗಳ ಮೊದಲ ಹಂತದ ಪರಿಶೀಲನೆಯನ್ನು ಕೂಡಾ ಇಲ್ಲಿ ಮಾಡಲಾಗುತ್ತದೆ.

ಮತದಾನದ ಅವಧಿಯಲ್ಲಿ ಇವಿಎಂ

ಚುನಾವಣಾ ದಿನಾಂಕ ಸಮೀಪಿಸುವಾಗ, ಇವಿಎಂಗಳನ್ನು ವಿವಿಧ ಅಸೆಂಬ್ಲಿ ವಿಭಾಗಗಳಿಗೆ ಹಂಚಲಾಗುತ್ತದೆ. ಪಕ್ಷದ ಪ್ರತಿನಿಧಿಗಳ ಸಮ್ಮುಖದಲ್ಲಿ ಸಾಫ್ಟ್‌ವೇರ್ ಸಹಾಯದಿಂದ ಇದನ್ನು ಮಾಡಲಾಗುತ್ತದೆ. ಪ್ರತಿನಿಧಿಗಳು ಗೈರುಹಾಜರಾದರೆ, ಪ್ರತಿ ವಿಧಾನಸಭೆ ವಿಭಾಗಕ್ಕೆ ಹಂಚಿಕೆ ಮಾಡಲಾದ ಇವಿಎಂಗಳು ಮತ್ತು ವಿವಿಪ್ಯಾಟ್ ಯಂತ್ರಗಳ ಪಟ್ಟಿಯನ್ನು ರಾಜಕೀಯ ಪಕ್ಷಗಳ ಕಚೇರಿ ಹಂಚಿಕೊಳ್ಳಲಾಗುತ್ತದೆ.

ಇದಾದ ಬಳಿಕ ಅಸೆಂಬ್ಲಿ ವಿಭಾಗದ ಚುನಾವಣಾಧಿಕಾರಿ (ಆರ್‌ಒ) ಹಂಚಿಕೆಯಾದ ಇವಿಎಂಗಳ ಉಸ್ತುವಾರಿ ವಹಿಸುತ್ತಾರೆ. ಅವುಗಳನ್ನು ನಿಗದಿಪಡಿಸಿದ ಸ್ಟ್ರಾಂಗ್ ರೂಂಗಳಲ್ಲಿ ಸಂಗ್ರಹಿಸುತ್ತಾರೆ. ಎರಡನೇ ಸುತ್ತಿನ ಹಂಚಿಕೆ ಇಲ್ಲಿ ನಡೆಯುತ್ತದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಇವಿಎಂಗಳನ್ನು ನಿರ್ದಿಷ್ಟ ಮತಗಟ್ಟೆಗಳಿಗೆ ನಿಯೋಜಿಸಲಾಗುತ್ತದೆ.

ಚುನಾವಣಾ ಆಯೋಗವು ಅಭ್ಯರ್ಥಿಗಳು ತಮ್ಮ ಆಯಾ ಪೋಲಿಂಗ್ ಏಜೆಂಟರೊಂದಿಗೆ ಯಂತ್ರ ಸಂಖ್ಯೆಗಳನ್ನು ಹಂಚಿಕೊಳ್ಳಲು ಸಲಹೆ ನೀಡುತ್ತಾರೆ. ಇದರಿಂದಾಗಿ ಮತದಾನ ಪ್ರಾರಂಭವಾಗುವ ಮೊದಲು ಅವುಗಳನ್ನು ಪರಿಶೀಲಿಸಬಹುದು.

ಎಲ್ಲಾ ಯಂತ್ರಗಳನ್ನು ಸಿದ್ಧಪಡಿಸಿದ ನಂತರ, ಪಕ್ಷದ ಪ್ರತಿನಿಧಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಅನ್ನು ಸೀಲ್ ಮಾಡಲಾಗುತ್ತದೆ. ಅವರು ಬೀಗಗಳ ಮೇಲೆ ತಮ್ಮ ಮುದ್ರೆಯನ್ನು ಸಹ ಹಾಕಬಹುದು. ಸ್ಟ್ರಾಂಗ್ ರೂಂಗೆ 24*7 ಕಾವಲು ಹೊಂದಿರುತ್ತದೆ. ಈ ಸ್ಥಳವು ಹಿರಿಯ ಪೊಲೀಸ್ ಅಧಿಕಾರಿಯ ಉಸ್ತುವಾರಿಯಲ್ಲಿರುತ್ತದೆ.

ಸೀಲ್ ಮಾಡಿದ ನಂತರ, ಸ್ಟ್ರಾಂಗ್ ರೂಮ್ ಅನ್ನು ನಿಗದಿತ ದಿನಾಂಕ ಮತ್ತು ಸಮಯದಲ್ಲಿ ಮಾತ್ರ ತೆರೆಯಬಹುದು. ಯಂತ್ರಗಳನ್ನು ಮತಗಟ್ಟೆಗಳಿಗೆ ಹಸ್ತಾಂತರಿಸಬೇಕಾದಾಗ ಮಾತ್ರ ಈ ಸ್ಟ್ರಾಂಗ್ ರೂಮ್ ತೆರೆಯುವ ಅವಕಾಶವಿದೆ. ಅಲ್ಲಿಂದ ಬಳಿಕ ಗೊತ್ತುಪಡಿಸಿದ ಮತಗಟ್ಟೆಗಳಿಗೆ ಇವಿಎಂ ಕೊಂಡೊಯ್ಯಲಾಗುತ್ತದೆ. ಮುಂಚಿತವಾಗಿ, ಎಲ್ಲಾ ಅಭ್ಯರ್ಥಿಗಳು ಮತ್ತು ಅವರ ಚುನಾವಣಾ ಏಜೆಂಟರಿಗೆ ಸ್ಟ್ರಾಂಗ್ ರೂಮ್ ತೆರೆಯುವ ದಿನಾಂಕ ಮತ್ತು ಸಮಯದ ಬಗ್ಗೆ ತಿಳಿಸಲಾಗುತ್ತದೆ.

ನಿರ್ದಿಷ್ಟ ಮತಗಟ್ಟೆಗಳಿಗೆ ನಿಯೋಜಿಸಲಾದ ಯಂತ್ರಗಳ ಜೊತೆಗೆ, ಕೆಲವು ಇವಿಎಂಗಳನ್ನು ಸಹ ಸ್ಟ್ರಾಂಗ್ ರೂಂಗಳಿಂದ ತೆಗೆದುಕೊಂಡು ವಿಧಾನಸಭೆಯ ಕೇಂದ್ರ ಸ್ಥಳದಲ್ಲಿ ಇರಿಸಲಾಗುತ್ತದೆ. ದೋಷಯುಕ್ತ ಯಂತ್ರಗಳನ್ನು ಸಾಧ್ಯವಾದಷ್ಟು ಕಡಿಮೆ ವಿಳಂಬದೊಂದಿಗೆ ಬದಲಾಯಿಸಲು ಇದನ್ನು ಮಾಡಲಾಗುತ್ತದೆ.

ಬೂತ್‌ನಿಂದ ಸ್ಟ್ರಾಂಗ್ ರೂಮ್‌ಗೆ ಮತ್ತೆ ಪ್ರಯಾಣ

ಮತದಾನ ಮುಗಿದ ನಂತರ, ಇವಿಎಂಗಳನ್ನು ತಕ್ಷಣವೇ ಸ್ಟ್ರಾಂಗ್ ರೂಮ್‌ಗಳಿಗೆ ಕೊಂಡೊಯ್ಯಲಾಗುತ್ತದೆ. ಅಧ್ಯಕ್ಷರು ಯಂತ್ರಗಳಲ್ಲಿ ದಾಖಲಾದ ಮತಗಳ ಖಾತೆಯನ್ನು ಸಿದ್ಧಪಡಿಸಬೇಕು. ಇದರ ದೃಢೀಕೃತ ಪ್ರತಿಯನ್ನು ಪ್ರತಿ ಅಭ್ಯರ್ಥಿಯ ಮತಗಟ್ಟೆ ಏಜೆಂಟರಿಗೆ ನೀಡಲಾಗುತ್ತದೆ. ಇದಾದ ಬಳಿಕ ಇವಿಎಂ ಸೀಲ್ ಮಾಡಲಾಗುತ್ತದೆ.

ಸೀಲುಗಳ ಮೇಲೆ, ಅಭ್ಯರ್ಥಿಗಳು ಮತ್ತು ಅವರ ಏಜೆಂಟರು ತಮ್ಮ ಸಹಿಯನ್ನು ಹಾಕಲು ಅನುಮತಿಯಿದೆ. ಮತಗಟ್ಟೆ ಕೇಂದ್ರದಿಂದ ಸ್ಟ್ರಾಂಗ್ ರೂಮ್‌ವರೆಗೆ ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳು ಇವಿಎಂಗಳನ್ನು ಹೊತ್ತ ವಾಹನಗಳ ಹಿಂದೆ ಸಂಚರಿಸಬೇಕು. ಅದೇ ಸಮಯದಲ್ಲಿ, ಮೀಸಲು ಇವಿಎಂಗಳನ್ನು ಸಹ ಹಿಂತಿರುಗಿಸಬೇಕು.

ಎಲ್ಲಾ ಬಳಸಿದ ಇವಿಎಂಗಳು ಬಂದ ನಂತರ, ಸ್ಟ್ರಾಂಗ್ ರೂಮ್ ಅನ್ನು ಸೀಲ್ ಮಾಡಲಾಗುತ್ತದೆ. ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳು ತಮ್ಮ ಸೀಲುಗಳು ಅಥವಾ ಬೀಗಗಳನ್ನು ಹಾಕಲು ಅವಕಾಶವಿದೆ. 24 ಗಂಟೆಗಳ ಕಾಲವೂ ಸ್ಟ್ರಾಂಗ್ ರೂಮ್‌ಗಳ ಮೇಲೆ ನಿಗಾ ಇಡಲು ಕೂಡಾ ಅವಕಾಶವಿದೆ.

ಸೀಲ್ ಮಾಡಿದ ನಂತರ ಮತ್ತೆ ಸ್ಟ್ರಾಂಗ್ ರೂಂ ತೆರೆಯುವಂತಿಲ್ಲ. ಎಣಿಕೆಯ ದಿನದ ಬೆಳಿಗ್ಗೆ, ಸ್ಟ್ರಾಂಗ್ ರೂಮ್ ತೆರೆಯಲಾಗುತ್ತದೆ. ಕೆಲವು ಅನಿವಾರ್ಯ ಕಾರಣಗಳಿಂದ ಮತ ಎಣಿಕೆ ದಿನಕ್ಕೂ ಮುನ್ನವೇ ಸ್ಟ್ರಾಂಗ್ ರೂಂ ತೆರೆಯಬೇಕಾದರೆ ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿಯೇ ಸ್ಟ್ರಾಂಗ್ ರೂಂ ತೆರೆಯಬೇಕು.

ಕೊಠಡಿಯನ್ನು ಮುಚ್ಚಿದ ನಂತರ ಮತ್ತೆ ತಮ್ಮ ಮುದ್ರೆಗಳು ಅಥವಾ ಬೀಗಗಳನ್ನು ಹಾಕಲು ಅವರಿಗೆ ಅವಕಾಶವಿದೆ. ಫಲಿತಾಂಶದ ದಿನದಂದು, ಅಭ್ಯರ್ಥಿ ಅಥವಾ ಅವನ/ಅವಳ ಪೋಲಿಂಗ್ ಏಜೆಂಟ್ ಯಂತ್ರದ ಸಂಖ್ಯೆಯನ್ನು ಪರಿಶೀಲಿಸಿದ ನಂತರ ಮತ್ತು ಸೀಲ್ ಒಡೆದಿಲ್ಲವೇ ಎಂಬುದನ್ನು ಪರಿಶೀಲಿಸಿದ ನಂತರವೇ ಎಣಿಕೆ ಪ್ರಾರಂಭವಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+