Electricity Bill Hike: ವಿದ್ಯುತ್ ಬಿಲ್ ಏರಿಕೆ, ಕೇಂದ್ರದ ಹೊಸ ನಿಯಮ ತಿಳಿಯಿರಿ

ಪ್ರಸ್ತುತ ದೇಶದ ವಿವಿಧ ರಾಜ್ಯಗಳಲ್ಲಿ ಹವಮಾನವು ಬೇರೆ ಬೇರೆ ರೀತಿಯಾಗಿದೆ. ಕೆಲವು ರಾಜ್ಯದ ನಿಗದಿತ ಪ್ರದೇಶಗಳಲ್ಲಿ ಸಾಧಾರಣ ಮಳೆ ಇದ್ದರೆ, ಕೆಲವು ರಾಜ್ಯಗಳಲ್ಲಿ ಭಾರೀ ಮಳೆಯಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಇದಕ್ಕೆ ತದ್ವಿರುದ್ಧವಾಗಿ ಬಿಸಿ ಗಾಳಿ ಇದೆ. ಇವೆಲ್ಲದರ ನಡುವೆ ಕೆಲವು ರಾಜ್ಯಗಳಲ್ಲಿ ವಿದ್ಯುತ್ ಬಿಲ್ ಏರಿಕೆಯಾಗಿದೆ. ಕರ್ನಾಟಕದಲ್ಲಿ ಚುನಾವಣೆಗೂ ಮುನ್ನ ಮಾಡಲಾಗಿದ್ದ ವಿದ್ಯುತ್ ಬಿಲ್ ಹೆಚ್ಚಳವು ಈಗ ಜಾರಿಗೆ ಬಂದಿದೆ.

ಇನ್ನು ದೆಹಲಿಯಲ್ಲಿ ವಿದ್ಯುತ್ ಬಿಲ್ ಸಬ್ಸಿಡಿ ಕೊನೆಯಾಗುತ್ತಿರುವುದು ಹಲವಾರು ಮಂದಿ ನಿರಾಶೆಯನ್ನು ಹುಟ್ಟಿಸಿದೆ. ಆದರೆ ಬರೀ ಕೆಲವು ರಾಜ್ಯಗಳಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿಯೇ ವಿದ್ಯುತ್ ಬಿಲ್ ಇನ್ನು ಮುಂದೆ ಹೆಚ್ಚಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರವು ಶಕ್ತಿ ತೆರಿಗೆಯಲ್ಲಿ ಮಾಡಿದ ಕೆಲವೊಂದು ಪರಿಷ್ಕರಣೆಗಳು ಅದಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಬೇಸಿಗೆ ಕಾಲದಲ್ಲಿ ನೀವು ಈ ಹಿಂದೆ ಪಡೆಯುತ್ತಿದ್ದ ವಿದ್ಯುತ್ ಬಿಲ್‌ಗಿಂತ ಅಧಿಕ ವಿದ್ಯುತ್ ಬಿಲ್ ಪಡೆಯಲಿದ್ದೀರಿ!

 ವಿದ್ಯುತ್ ಬಿಲ್ ಏರಿಕೆ, ಕೇಂದ್ರ ಸರ್ಕಾರದ ಹೊಸ ನಿಯಮ ತಿಳಿಯಿರಿ

ಕೇಂದ್ರ ಸರ್ಕಾರದ ನೂತನ ನಿಯಮ ಏನು ಹೇಳುತ್ತದೆ?

ಶಕ್ತಿ ತೆರಿಗೆ ನಿಯಮದಲ್ಲಿ ಕೇಂದ್ರ ಸರ್ಕಾರವು ಇತ್ತೀಚೆಗೆ ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ಈ ಪರಿಷ್ಕರಣೆಯ ಬಳಿಕ ಬೇಸಿಗೆ ಕಾಲದಲ್ಲಿ ರಾತ್ರಿ ಹೊತ್ತಿನಲ್ಲಿ ಹವಾ ನಿಯಂತ್ರಕ (ಎಸಿ) ಮತ್ತು ಕೂಲರ್‌ಗಳನ್ನು ಬಳಸುವುದು ನಮಗೆ ದುಬಾರಿಯಾಗಲಿದೆ. ಬೇಸಿಗೆಯಲ್ಲಿ ನಾವು ಹಗಲಿನಲ್ಲಿ ಎಸಿ ಹಾಗೂ ಕೂಲರ್‌ಗಳನ್ನು ಬಳಕೆ ಮಾಡುವುದಕ್ಕಿಂತ ಅಧಿಕ ವಿದ್ಯುತ್ ದರ ರಾತ್ರಿಯಲ್ಲಿ ಬಳಕೆ ಮಾಡುವ ಎಸಿ, ಕೂಲರ್‌ಗಳಿಗೆ ಇರಲಿದೆ. ಇದು ಮುಖ್ಯವಾಗಿ ಬಿಸಿ ಪ್ರದೇಶದಲ್ಲಿ ವಾಸವಾಗಿರುವವರಿಗೆ ಅಧಿಕ ಪ್ರಭಾವ ಬೀರಲಿದೆ.

ಕೇಂದ್ರ ಸರ್ಕಾರವು ವಿದ್ಯುತ್ (ಗ್ರಾಹಕರ ಹಕ್ಕು) ಕಾಯ್ದೆ, 2020ರ ಅಡಿಯಲ್ಲಿ ತಿದ್ದುಪಡಿಯನ್ನು ಮಾಡಿದೆ. ಇದರಿಂದಾಗಿ ವಿದ್ಯುತ್ ಬಿಲ್ ವಿಚಾರದಲ್ಲಿ ಪ್ರಮುಖವಾಗಿ ಎರಡು ಬದಲಾವಣೆಗಳು ಆಗಲಿದೆ. ವಿದ್ಯುತ್ ಬಿಲ್ ತೆರಿಗೆ ವ್ಯವಸ್ಥೆಯಲ್ಲಿಯೆ ಈ ಬದಲಾವಣೆಯು ಉಂಟಾಗಿದೆ. ಈ ನಿಯಮದ ಪ್ರಕಾರ ರಾತ್ರಿಯಲ್ಲಿ ಎಸಿ ಹಾಗೂ ಕೂಲರ್‌ಗಳನ್ನು ಬಳಕೆ ಮಾಡುವುದಕ್ಕೆ ಅಧಿಕ ದರವನ್ನು ಪಾವತಿ ಮಾಡಬೇಕಾಗುತ್ತದೆ.

ವಿದ್ಯುತ್ ಬಿಲ್ ದರದಲ್ಲಿ ಬದಲಾವಣೆ

ಕೇಂದ್ರ ಸರ್ಕಾರವು ಶಕ್ತಿ ತೆರಿಗೆ ವ್ಯವಸ್ಥೆಯಲ್ಲಿ ಎರಡು ಪ್ರಮುಖವಾದ ಬದಲಾವಣೆಯನ್ನು ಮಾಡಿದೆ. ಇದರಿಂದಾಗಿ ಗ್ರಾಹಕರು ಹೊಸದಾದ ಟೈಮ್ ಆಫ್‌ ದಿ ಡೇ (ಟಿಒಡಿ) ತೆರಿಗೆ ಪದ್ಧತಿಯನ್ನು ಅನುಸರಿಸಿ ಶೇಕಡ 20ರಷ್ಟು ವಿದ್ಯುತ್ ಶುಲ್ಕದ ಮೊತ್ತವನ್ನು ಉಳಿತಾಯ ಮಾಡಿಕೊಳ್ಳಬಹುದು. ಇದರ ಪ್ರಕಾರವಾಗಿ ದಿನದ ಅವಧಿಯಲ್ಲಿ ಸೋಲರ್ ಎನರ್ಜಿಯಲ್ಲಿ ಬಳಕೆ ಮಾಡಬೇಕಾಗುತ್ತದೆ ಎಂದು ವಿದ್ಯುತ್ ಸಚಿವಾಲಯವು ತಿಳಿಸುತ್ತದೆ.

ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ಆದೇಶವು, "ಟಿಒಡಿ ತೆರಿಗೆ ಪದ್ಧತಿಯಡಿಯಲ್ಲಿ ಒಂದು ದಿನದಲ್ಲಿ ಸೋಲರ್ ಬಳಕೆ ಮಾಡುವ ಸಂದರ್ಭದಲ್ಲಿ (ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗವು ನಿರ್ದಿಷ್ಟಪಡಿಸಿದಂತೆ ಒಂದು ದಿನದಲ್ಲಿ ಎಂಟು ಗಂಟೆಗಳ ಅವಧಿ) ಸಾಮಾನ್ಯ ವಿದ್ಯುತ್ ಶುಕ್ಕಕ್ಕಿಂತ ಶೇಕಡ 10ರಿಂದ ಶೇಕಡ 20ರಷ್ಟು ಕಡಿಮೆ ಶುಲ್ಕವನ್ನು ಪಡೆಯಬಹುದಾಗಿದೆ. ಆದರೆ ಅತೀ ಹೆಚ್ಚಾಗಿ ವಿದ್ಯುತ್ ಬಳಸಲಾಗುವ ಸಮಯದಲ್ಲಿ (ಸಾಮಾನ್ಯವಾಗಿ ರಾತ್ರಿ) ಶೇಕಡ 10ರಿಂದ ಶೇಕಡ 20ರಷ್ಟು ಅಧಿಕ ವಿದ್ಯುತ್ ಬಿಲ್ ಇರಲಿದೆ," ಎಂದು ಉಲ್ಲೇಖ ಮಾಡಲಾಗಿದೆ.

ಅಂದರೆ ಹಗಲಿನಲ್ಲಿ ನಾವು ಬಳಸುವ ವಿದ್ಯುತ್‌ಗಿಂತ ಅಧಿಕ ಬಿಲ್ ಅನ್ನು ರಾತ್ರಿಯಲ್ಲಿ ಬಳಸುವ ವಿದ್ಯುತ್‌ಗೆ ಪಾವತಿ ಮಾಡಬೇಕಾಗುತ್ತದೆ. ಬೇಸಿಗೆ ಸಂದರ್ಭದಲ್ಲಿ ರಾತ್ರಿಯಲ್ಲಿ ಹೆಚ್ಚಾಗಿ ವಿದ್ಯುತ್ ಬಳಕೆ ಮಾಡಲಾಗುವ ಕಾರಣದಿಂದಾಗಿ ದರವು ಸಾಮಾನ್ಯವಾಗಿ ಉಳಿದ ಸೀಸನ್‌ಗಿಂತ ಅಧಿಕವಾಗಿರುತ್ತದೆ. ಆದರೆ ಈಗ ದರ ಏರಿಕೆಯಿಂದಾಗಿ ವಿದ್ಯುತ್ ಬಿಲ್ ಇನ್ನಷ್ಟು ಹೆಚ್ಚಳವಾಗಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+