EPFO: ಈ 8 ಸಂದರ್ಭದಲ್ಲಿ ಪಿಎಫ್ ಮೊತ್ತ ವಿತ್‌ಡ್ರಾ ಮಾಡುವ ಅವಕಾಶ

ಭಾರತದಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿಯನ್ನು ನಿರ್ವಹಣೆ ಮಾಡುವ ಸಂಸ್ಥೆಯಾದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) ಭಾರತೀಯ ನಾಗರಿಕರಿಗೆ ಹಣಕಾಸು ಸುರಕ್ಷತೆಯನ್ನು ನೀಡುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ನಮಗಿರುವ ಹಣಕಾಸು ಸುರಕ್ಷತೆ ಮಾತ್ರವಲ್ಲದೆ ನಾವು ಹೂಡಿಕೆ ಮಾಡಿದ ಮೊತ್ತವು ಸುರಕ್ಷಿತವಾಗಿರುತ್ತದೆ. ಉದ್ಯೋಗಿಗಳು ಮತ್ತು ನೀವು ಉದ್ಯೋಗ ಮಾಡುವ ಸಂಸ್ಥೆ ಈ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡುತ್ತದೆ. ಈ ನಿಧಿಯು ನಿಮಗೆ ನಿವೃತ್ತಿಯ ಬಳಿಕ ನೀಡುವ ಸುರಕ್ಷತೆಯಾಗಿದೆ.

ಇಪಿಎಫ್‌ ಒಂದು ಹಣ ಉಳಿತಾಯ ಯೋಜನೆಯಾಗಿದೆ. ಈ ಮೊತ್ತವನ್ನು ನಿವೃತ್ತಿಗೂ ಮುನ್ನ ಕೆಲವೊಂದು ಸಂದರ್ಭಗಳಲ್ಲಿ ವಿತ್‌ಡ್ರಾ ಮಾಡುವ ಅವಕಾಶವಿದೆ. ಅದಕ್ಕಾಗಿ ಕೆಲವು ನಿಯಮಗಳು ಕೂಡಾ ಇದೆ. ಸಾಮನ್ಯವಾಗಿ ಒಬ್ಬ ವ್ಯಕ್ತಿಯ ನಿವೃತ್ತಿಯ ಬಳಿಕ ಪಿಎಫ್ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶ ಇರುತ್ತದೆ. ಆದರೆ ಕೆಲವು ಸಂದರ್ಭದಲ್ಲಿ ಮೆಚ್ಯೂರಿಟಿಗೂ ಮುನ್ನ ನೀವು ಪಿಎಫ್‌ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವಿದೆ. ನೀವು ಒಟ್ಟಾಗಿ 8 ಸಂದರ್ಭದಲ್ಲಿ ಇಪಿಎಫ್‌ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ನಿರುದ್ಯೋಗ, ಉನ್ನತ ಶಿಕ್ಷಣ

ನಿರುದ್ಯೋಗ, ಉನ್ನತ ಶಿಕ್ಷಣ

ಪಿಎಫ್‌ ಖಾತೆಯನ್ನು ಹೊಂದಿರುವ ವ್ಯಕ್ತಿಯು ನಿರುದ್ಯೋಗಿಯಾದರೆ ಪಿಎಫ್ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವಿರುತ್ತದೆ. ಒಂದು ತಿಂಗಳಿಗೂ ಅಧಿಕ ಕಾಲ ನಿರುದ್ಯೋಗಿಯಾಗಿದ್ದರೆ, ಒಟ್ಟು ಮೊತ್ತದ ಸುಮಾರು ಶೇಕಡ 75ರಷ್ಟು ಪಿಎಫ್‌ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವನ್ನು ನೀಡಲಾಗುತ್ತದೆ. 2 ತಿಂಗಳಿಗೂ ಅಧಿಕ ಕಾಲ ನಿರುದ್ಯೋಗಿಗಳಾಗಿದ್ದರೆ, ನೀವು ಉಳಿದ ಶೇಕಡ 25ರಷ್ಟು ಮೊತ್ತವನ್ನು ಕೂಡಾ ವಿತ್‌ಡ್ರಾ ಮಾಡುವ ಅವಕಾಶವನ್ನು ನಿಮಗೆ ನೀಡಲಾಗುತ್ತದೆ.

ಇಪಿಎಫ್‌ ಖಾತೆಗೆ ನೀವು ನೀಡಿದ ಒಟ್ಟು ಮೊತ್ತದಲ್ಲಿ ಒಟ್ಟು ಶೇಕಡ 50ರಷ್ಟು ಮೊತ್ತವನ್ನು ನಿಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಬಳಕೆ ಮಾಡಬಹುದು. ಅಂದರೆ ಹತ್ತನೇ ತರಗತಿಯ ಬಳಿಕದ ಶಿಕ್ಷಣಕ್ಕೆ ಪಿಎಫ್ ಮೊತ್ತವನ್ನು ಬಳಕೆ ಮಾಡಬಹುದು. ಕನಿಷ್ಠ 7 ವರ್ಷಗಳ ಕಾಲ ಇಪಿಎಫ್ ಖಾತೆಗೆ ಹೂಡಿಕೆ ಮಾಡಿದ ಬಳಿಕ ಮಾತ್ರವೇ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಾಗಲಿದೆ.

 ವಿವಾಹದ ಸಂದರ್ಭ, ವಿಕಲಚೇತನರು

ವಿವಾಹದ ಸಂದರ್ಭ, ವಿಕಲಚೇತನರು

ಇತ್ತೀಚೆಗೆ ಮಾಡಿದ ನಿಯಮ ಬದಲಾವಣೆ ಬಳಿಕ ಪಿಎಫ್‌ ಮೊತ್ತದಿಂದ ಶೇಕಡ 50ರಷ್ಟು ವಿವಾಹದ ಖರ್ಚಿಗಾಗಿ ಬಳಕೆ ಮಾಡಬಹುದಾಗಿದೆ. ಆದರೆ ವಧು ಅಥವಾ ವರ ಪಿಎಫ್ ಖಾತೆ ಹೊಂದಿರುವವರ ಪುತ್ರ, ಪುತ್ರಿ, ಸಹೋದರ, ಸಹೋದರಿಯಾಗಿರಬೇಕಾಗುತ್ತದೆ. ಆದರೆ 7 ವರ್ಷಗಳವರೆಗೆ ವಿತ್‌ಡ್ರಾ ಮಾಡಲು ಸಾಧ್ಯವಿಲ್ಲ. ವಿಶೇಷ ಚೇತನ ವ್ಯಕ್ತಿಗಳು ಪಿಎಫ್‌ ನಿಯಮ ಪ್ರಕಾರ 6 ತಿಂಗಳ ಮೌಲ್ಯದ ಮೂಲ ವೇತನ ಮತ್ತು ತುಟ್ಟಿ ಭತ್ಯೆ ಅಥವಾ ಬಡ್ಡಿಯೊಂದಿಗೆ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವಿದೆ. ಯಾವುದೇ ಅಪಘಾತದಿಂದ ಅಂಗವೂನತೆ ಉಂಟಾದಾಗ ಈ ಮೊತ್ತ ವಿತ್‌ಡ್ರಾ ಮಾಡಬಹುದಾಗಿದೆ.

 ಆರೋಗ್ಯ ತುರ್ತು, ಸಾಲ ಮರುಪಾವತಿ

ಆರೋಗ್ಯ ತುರ್ತು, ಸಾಲ ಮರುಪಾವತಿ

ಪಿಎಫ್‌ ಅಥವಾ ಇಪಿಎಫ್ ಖಾತೆ ಹೊಂದಿರುವವರು ತೀರಾ ಅನಿವಾರ್ಯ, ತುರ್ತು ಸಂದರ್ಭದಲ್ಲಿ ಪಿಎಫ್ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವಿದೆ. ತಮ್ಮ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಉಂಟಾದಾಗ ಅಥವಾ ತಮ್ಮ ಕುಟುಂಬಸ್ಥರ ಚಿಕಿತ್ಸೆಗಾಗಿ ಮೊತ್ತವನ್ನು ವಿತ್‌ಡ್ರಾ ಮಾಡಬಹುದು. ಗೃಹ ಸಾಲದ ಇಎಂಐ ಅನ್ನು ಮರುಪಾವತಿ ಮಾಡಲು ಸಂಪೂರ್ಣ ಮೊತ್ತವನ್ನು ಅಥವಾ 36 ತಿಂಗಳ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವಿದೆ. ಆದರೆ ನೀವು ಇಪಿಎಫ್ ಖಾತೆಗೆ ಕನಿಷ್ಠ 10 ವರ್ಷಗಳ ಕಾಲ ಇಪಿಎಫ್‌ ಹೂಡಿಕೆ ಮಾಡಬೇಕಾಗುತ್ತದೆ.

 ಮನೆ, ಆಸ್ತಿ ಖರೀದಿ, ಮನೆ ನವೀಕರಣ

ಮನೆ, ಆಸ್ತಿ ಖರೀದಿ, ಮನೆ ನವೀಕರಣ

ನೀವು ಹೊಸ ಮನೆ, ಆಸ್ತಿಯನ್ನು ಖರೀದಿ ಮಾಡಲು ಪಿಎಫ್ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವಾಗಿದೆ. ಇನ್ನು ನೀವು ನಿಮ್ಮ ಮನೆಯನ್ನು ನವೀಕರಣ ಮಾಡಲು ಕೂಡಾ ಹಣವನ್ನು ವಿತ್‌ಡ್ರಾ ಮಾಡಬಹುದಾಗಿದೆ. ವಸತಿ ಆಸ್ತಿಯು ಪಿಎಫ್ ಖಾತೆಯನ್ನು ಹೊಂದಿರುವವರು, ಅವನ ಅಥವಾ ಅವಳ ಸಂಗಾತಿಯಿಂದ ಅಥವಾ ಅವರಿಬ್ಬರ ಒಡೆತನದಲ್ಲಿರಬೇಕಾಗುತ್ತದೆ. ಒಬ್ಬ ವ್ಯಕ್ತಿಯು ವಸತಿ ಆಸ್ತಿಯನ್ನು ಪೂರ್ಣಗೊಳಿಸಿದ 5 ವರ್ಷಗಳ ನಂತರ 2ನೇ ಬಾರಿ ಮೊತ್ತ ವಿತ್‌ಡ್ರಾ ಮಾಡಬಹುದು. ಹಾಗೆಯೇ ಹೂಡಿಕೆ ಆರಂಭಿಸಿದ ಬಳಿಕ 10 ವರ್ಷದಲ್ಲಿ ಮೊತ್ತ ಹಿಂಪಡೆಯಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+