ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗೆ ಪ್ರತಿ ವರ್ಷವೂ ಬಡ್ಡಿದರವನ್ನು ಇಪಿಎಫ್ ಬೋರ್ಡ್ ನಿಗದಿಪಡಿಸುತ್ತದೆ. ಈ ಹಿಂದೆ ಇಪಿಎಫ್ ಬಡ್ಡಿದರವನ್ನು ಇಳಿಕೆ ಮಾಡಲಾಗಿದ್ದು, ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈಗ ಇಪಿಎಫ್‌ಒ ಬೋರ್ಡ್ ಸಭೆ ಮಾರ್ಚ್ 27 ಮತ್ತು 28ರಂದು ನಡೆಯುತ್ತಿದ್ದು, ಈ ಸಭೆಯಲ್ಲಿ ಬಡ್ಡಿದರವನ್ನು ಪರಿಷ್ಕರಣೆ ಮಾಡುವ ಸಾಧ್ಯತೆಯಿದೆ. ಇನ್ನು ಬಡ್ಡಿದರವನ್ನು ಇಳಿಕೆ ಮಾಡುವ ಬಗ್ಗೆ ಚರ್ಚೆ ನಡೆಸುವುದು ಮಾತ್ರವಲ್ಲದೆ ಬೋರ್ಡ್ ಅಧಿಕ ಪಿಂಚಣಿ ಬಗ್ಗೆಯೂ ಚರ್ಚೆ ನಡೆಸಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಮಾಧ್ಯಮಗಳ ವರದಿ ಪ್ರಕಾರ ಹಣಕಾಸು ವರ್ಷ 2022-23 ಇಪಿಎಫ್ ಬಡ್ಡಿದರವನ್ನು ಸರ್ಕಾರವು ಶೇಕಡ 8ಕ್ಕೆ ಇಳಿಕೆ ಮಾಡುವ ಸಾಧ್ಯತೆಯಿದೆ. ಪ್ರಸ್ತುತ ಇಪಿಎಫ್ ಬಡ್ಡಿದರವು ಶೇಕಡ 8.1 ಆಗಿದೆ. ಇಪಿಎಫ್‌ಒ ಹಣಕಾಸು ಹೂಡಿಕೆ ಮತ್ತು ಆಡಿಟ್ ಸಮಿತಿಯು 2022-23 ಆದಾಯದ ಲೆಕ್ಕಾಚಾರದ ಮೇಲೆ ನೀಡುವ ಸಲಹೆಯ ಮೇಲೆ 2022-23 ಹಣಕಾಸು ವರ್ಷದ ನೌಕರರ ಭವಿಷ್ಯ ನಿಧಿ ಖಾತೆಯ ಬಡ್ಡಿದರು ಅವಲಂಬಿತವಾಗಿದೆ.

ಇಪಿಎಫ್‌ಒದ ಕೇಂದ್ರೀಯ ಮಂಡಳಿ, ಇಪಿಎಫ್‌ಒದ ತ್ರಿಪಕ್ಷೀಯ ಸಂಸ್ಥೆಯಾದ ಸರ್ಕಾರ, ಕಾರ್ಮಿಕರು ಮತ್ತು ಉದ್ಯೋಗದಾತರ ಪ್ರತಿನಿಧಿಗಳನ್ನು ಒಳಗೊಂಡ ಟ್ರಸ್ಟಿಗಳ ಕೇಂದ್ರ ಮಂಡಳಿಯು ಮತ್ತು ಸಿಬಿಟಿಯ ನಿರ್ಧಾರಕ್ಕೆ ಇಪಿಎಫ್‌ಒ ಬದ್ಧವಾಗಿರಲಿದೆ. ಕಾರ್ಮಿಕ ಸಚಿವರು ಇದರ ನೇತೃತ್ವ ವಹಿಸುತ್ತಾರೆ. ಈ ಹಿಂದೆಯೂ ಕೇಂದ್ರ ಸರ್ಕಾರವು ಇಪಿಎಫ್‌ಒ ಬಡ್ಡಿದರವನ್ನು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಿತ್ತು. ಅದು ಕೂಡಾ ನಾಲ್ಕು ದಶಕದಲ್ಲೇ ಅತೀ ಕಡಿಮೆಗೆ ಇಳಿಸಲಾಗಿತ್ತು.
ಈ ಹಿಂದೆ ಇಪಿಎಫ್ ಬಡ್ಡಿದರ ಇಳಿಕೆ
ಹಣಕಾಸು ವರ್ಷ 2021-22ರಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಠೇವಣಿ ಮೇಲಿನ ಬಡ್ಡಿದರವನ್ನು ಶೇಕಡ 8.1ಕ್ಕೆ ಇಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವು ಅನುಮೋದಿಸಿದೆ. ಸುಮಾರು ನಾಲ್ಕು ದಶಕಗಳ ಬಳಿಕ ಇಪಿಎಫ್‌ಒ ಬಡ್ಡಿದರವನ್ನು ಅಷ್ಟು ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ. 1977-78ರಲ್ಲಿ ಇಪಿಎಫ್‌ಒ ಬಡ್ಡಿದರ ಶೇಕಡ 8 ಆಗಿತ್ತು. ಅದಾದ ಬಳಿಕ ಪಿಎಫ್ ಬಡ್ಡಿದರ ಏರಿಕೆ ಕಂಡಿತ್ತು. 1977-78ರ ಬಳಿಕದ ಅತೀ ಕಡಿಮೆ ಬಡ್ಡಿದರ 2021-22 ಹಣಕಾಸು ವರ್ಷದ್ದಾಗಿದೆ. ಮಾರ್ಚ್ 2021ರಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (ಸಿಬಿಟಿ) 2020-21ರ ಸಾಲಿನ ಬಡ್ಡಿದರವನ್ನು ಶೇಕಡ 8.5 ಎಣದು ನಿರ್ಧಾರ ಮಾಡಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯ್ದೆ 1952ರ ಅಡಿಯಲ್ಲಿ ಇಪಿಎಫ್ ಉದ್ಯೋಗಿಗಳಿಗೆ ಇರುವ ಕಡ್ಡಾಯವಾದ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಈ ಪಿಎಫ್ ಖಾತೆಗಳ ನಿರ್ವಹಣೆಯನ್ನು ಮಾಡುತ್ತದೆ. 20 ಅಥವಾ ಅದಕ್ಕಿಂತ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಎಲ್ಲ ಸಂಸ್ಥೆಗಳು ಇಪಿಎಫ್ ಅಡಿಯಲ್ಲಿ ಬರುತ್ತದೆ. ಉದ್ಯೋಗಿಯು ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಪಿಎಫ್ ಖಾತೆಗೆ ಹೂಡಿಕೆ ಮಾಡಿದರೆ, ಉದ್ಯೋಗ ನೀಡಿದ ಸಂಸ್ಥೆ ಕೂಡಾ ಅಷ್ಟೇ ಮೊತ್ತವನ್ನು ಹೂಡಿಕೆ ಮಾಡುತ್ತದೆ.
ನಿವೃ ತ್ತಿ ಬಳಿಕ ಅಥವಾ ಸೇವೆಯಲ್ಲಿ ಇರುವಾಗಲೇ ಉದ್ಯೋಗಿಯು ಈ ಮೊತ್ತವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು. ಈ ಮೊತ್ತಕ್ಕೆ ಬಡ್ಡಿದರ ಸೇರಿ ನಿಮಗೆ ಲಭ್ಯವಾಗುತ್ತದೆ. ಇನ್ನು ಸರ್ಕಾರ ಡೇಟ್ ಪ್ರಕಾರ ಸೆಪ್ಟೆಂಬರ್ 2017ರಿಂದ ನವೆಂಬರ್ 2021ರವರೆಗೆ ಸುಮಾರು ಉದ್ಯೋಗಿಗಳ ಭವಿಷ್ಯ ನಿಧಿಗೆ 4.9 ಕೋಟಿ ಹೊಸ ಚಂದಾದಾರರು ಸೇರ್ಪಡೆಯಾಗಿದ್ದಾರೆ.
ನಿವೃತ್ತಿ ಫಂಡ್ ನಿಧಿ ಸಂಸ್ಥೆಯಾದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಗೆ (ಇಪಿಎಫ್‌ಒ) ಕಳೆದ ಕೆಲವು ತಿಂಗಳುಗಳಿಂದ ಹೊಸ ಸೇರ್ಪಡೆ ಹೆಚ್ಚಳವಾಗುತ್ತಿದೆ. ಜನವರಿ 2023ರಲ್ಲಿ ಇಪಿಎಫ್‌ಒಗೆ 14.86 ಲಕ್ಷ ಚಂದಾದಾರರು ಸೇರ್ಪಡೆಯಾಗಿದ್ದಾರೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮಾಹಿತಿ ನೀಡಿದೆ. 14.86 ಲಕ್ಷ ಚಂದಾದಾರರ ಪೈಕಿ 7.77 ಲಕ್ಷ ಹೊಸ ಚಂದಾದಾರರು ಆಗಿದ್ದಾರೆ. ಅಂದರೆ ಮೊದಲ ಬಾರಿಗೆ ಇಪಿಎಫ್‌ಒ ಖಾತೆಯನ್ನು ತೆರೆದಿದ್ದಾರೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications