ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಅಧಿಕ ಪಿಂಚಣಿ ಪಡೆಯುವ ಯೋಜನೆಗೆ ಅರ್ಜಿ ಸಲ್ಲಿಕೆ ಗಡುವನ್ನು ಮತ್ತೆ ವಿಸ್ತರಣೆ ಮಾಡಿದೆ. ಈ ಹಿಂದೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 3 ಆಗಿತ್ತು. ಆದರೆ ಈ ಗಡುವನ್ನು ಮತ್ತೆ ಎರಡು ತಿಂಗಳುಗಳ ಕಾಲ ವಿಸ್ತರಣೆ ಮಾಡಲಾಗಿದೆ.
ಯಾರಿಗೆ ಅಧಿಕ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಇಚ್ಛೆ ಇದೆಯೋ, ಆದರೆ ಹಲವಾರು ಕಾರಣಗಳಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲವೋ ಅವರಿಗೆ ಈ ಗಡುವು ವಿಸ್ತರಣೆ ನಿರ್ಧಾರವು ಸಹಾಯಕವಾಗಲಿದೆ. ಈ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ ಮಾಡಿದ್ದರಿಂದ ಚಂದಾದಾರರು ತಮ್ಮ ಅಧಿಕ ಪಿಂಚಣಿಯನ್ನು ಆಯ್ಕೆ ಮಾಡಲು ಸಾಕಷ್ಟ ಸಮಯವನ್ನು ಹೊಂದಿದ್ದಾರೆ.

ಎರಡನೇ ಬಾರಿಗೆ ಗಡುವು ವಿಸ್ತರಣೆ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇದು ಎರಡನೇ ಬಾರಿಗೆ ಅಧಿಕ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಣೆ ಮಾಡಿದೆ. 2022ರ ನವೆಂಬರ್‌ರ 4ರಂದು ಸುಪ್ರೀಂ ಕೋರ್ಟ್ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸುವ ಗಡುವನ್ನು ಮಾರ್ಚ್ 3ರವರೆಗೆ ನಿಗದಿ ಪಡಿಸಿದೆ. ಅದಾ ಬಳಿಕ ಇಪಿಎಫ್‌ಒ ಈ ಗಡುವನ್ನು ಮೇ 3ರವರೆಗೆ ವಿಸ್ತರಣೆ ಮಾಡಿದೆ.
ಅದಾದ ಬಳಿಕ ಈಗ ಮತ್ತೆ ಇಪಿಎಫ್‌ಒ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಣೆ ಮಾಡಿದೆ. ಹೆಚ್ಚುವರಿ ಎರಡು ತಿಂಗಳವರೆಗೆ ಚಂದಾದಾರರು ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಬದಲಾವಣೆಯ ಬಳಿಕ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 2023ರ ಜೂನ್ 26 ಆಗಿದೆ.
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಗಡುವನ್ನು ನಿಗದಿಪಡಿಸಿದ ನಂತರ ಅರ್ಹ ಉದ್ಯೋಗಿಗಳಿಗೆ ಆನ್‌ಲೈನ್ ಅರ್ಜಿ ಸೌಲಭ್ಯವನ್ನು ಮತ್ತೆ ಆರಂಭ ಮಾಡಲು ಇಪಿಎಫ್‌ಒ ಬಹಳ ಸಮಯ ತೆಗೆದುಕೊಂಡ ಕಾರಣ ಮೊದಲ ಬಾರಿಗೆ ಗಡುವು ವಿಸ್ತರಣೆ ಮಾಡಲಾಗಿದೆ. ಈ ಸೌಲಭ್ಯವನ್ನು ಫೆಬ್ರವರಿಯಲ್ಲಿ ಮತ್ತೆ ಆರಂಭ ಮಾಡಲಾಗಿದೆ. ಆ ಹೊತ್ತಿಗಾಗಲೇ ಗಡುವು ನಿರ್ಧರಿಸಿ ಮೂರು ತಿಂಗಳುಗಳು ಆಗಿದ್ದವು.
ಇನ್ನು ಹಲವಾರು ಉದ್ಯೋಗಿಗಳಿಗೆ ಅಧಿಕ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವುದೇ ಬೇಡವೇ ಎಂಬ ಗೊಂದಲಗಳು ಇದೆ. ಇದೇ ಕಾರಣದಿಂದಾಗಿ ಮತ್ತೆ ಈಗ ಗಡುವು ವಿಸ್ತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಚಂದಾದಾರರು ಆಯ್ಕೆಯನ್ನು ಮಾಡಲು ಸಮಯವಕಾಶ ನೀಡಲಾಗಿದೆ.
ನೌಕರರ ಪಿಂಚಣಿ ಯೋಜನೆಯು ಕೆಲವು ವರ್ಷಗಳ ಹಿಂದೆ ಬೆರಳೆಣಿಕೆಯಷ್ಟು ಜನರು ಮಾತ್ರ ಪಡೆಯುತ್ತಿದ್ದರು. ಆರಂಭದಲ್ಲಿ ಸರ್ಕಾರಿ ನೌಕರರು ಮಾತ್ರ ಈ ಯೋಜನೆಗೆ ಅರ್ಹರಾಗಿದ್ದರು. ಆದರೆ ಸರ್ಕಾರವು ನಂತರ ಈ ಯೋಜನೆಯನ್ನು ವಿಸ್ತರಣೆ ಮಾಡಿದೆ. ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವವರಿಗೂ ಕೂಡಾ ಈ ಯೋಜನೆಗೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಈ ಬದಲಾವಣೆಯನ್ನು 1995 ರಲ್ಲಿ ಮಾಡಲಾಗಿದೆ.
ಈ ಯೋಜನೆಯನ್ನು EPS-95 (ಅಂದರೆ, ನೌಕರರ ಪಿಂಚಣಿ ಯೋಜನೆ-1995) ಎಂದೂ ಉಲ್ಲೇಖಿಸಲಾಗಿದೆ. ನೌಕರರ ಭವಿಷ್ಯ ನಿಧಿ ಕಾಯಿದೆಯಡಿಯಲ್ಲಿ ಇಪಿಎಸ್ ಅನ್ನು ಪರಿಚಯಿಸಲಾಗಿದೆ. ಅದಾದ ಬಳಿಕ ಪ್ರಯೋಜನಗಳು ಇಪಿಎಫ್ ಅಡಿಯಲ್ಲಿ ಒಳಗೊಂಡಿರುವ ಪ್ರತಿಯೊಬ್ಬ ಉದ್ಯೋಗಿಗೆ ತಲುಪಲು ಪ್ರಾರಂಭವಾಗಿದೆ. ಆದರೆ, ಮೂಲ ವೇತನ ಮತ್ತು ತಿಂಗಳಿಗೆ 15,000 ರೂ. ಡಿಎ ಹೊಂದಿರುವ ನೌಕರರು ಮಾತ್ರ ಇಪಿಎಸ್ ಪ್ರಯೋಜನಕ್ಕೆ ಅರ್ಹರಾಗುತ್ತಾರೆ.
ಇಪಿಎಸ್ ಅಧಿಕ ಪಿಂಚಣಿ ಯೋಜನೆಯ ಅರ್ಹತೆ
ಸುಪ್ರೀಂ ಕೋರ್ಟ್ ತೀರ್ಪು ಮತ್ತು ಇಪಿಎಫ್‌ಒ ಸುತ್ತೋಲೆಯ ಪ್ರಕಾರ, ಕೆಳಗಿನ ಉದ್ಯೋಗಿಗಳು ಹೆಚ್ಚಿನ ವೇತನದ ಮೇಲೆ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
* ಏಪ್ರಿಲ್ 2014ರಿಂದ 5000 ರೂಪಾಯಿ ಅಥವಾ 6500 ರೂಪಾಯಿ ಮಿತಿಯನ್ನು ಮೀರಿದ ಮೂಲ ವೇತನದ ಮೇಲೆ ಕೊಡುಗೆ ನೀಡಿದ ಉದ್ಯೋಗಿಗಳು ಮತ್ತು ಉದ್ಯೋಗದಾತರು
* ಏಪ್ರಿಲ್ 1, 2014 ರ ಮೊದಲು ಹೆಚ್ಚಿನ ವೇತನದ ಮೇಲೆ ಪಿಂಚಣಿಗಾಗಿ ಯಾರು ಜಂಟಿ ಆಯ್ಕೆ ಮಾಡಿಲ್ಲ ಅವರು ಅರ್ಹರು
* ಏಪ್ರಿಲ್ 1, 2014 ಕ್ಕಿಂತ ಮೊದಲು ಇಪಿಎಫ್/ ಇಪಿಎಸ್ ಸದಸ್ಯರಾಗಿದ್ದ ಉದ್ಯೋಗಿ ಮತ್ತು ಏಪ್ರಿಲ್ 1, 2014 ರಂದು ಅಥವಾ ನಂತರ ಸದಸ್ಯರಾಗಿ ಮುಂದುವರೆದವರು
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications