ಅಧಿಕ ಪಿಂಚಣಿ ಕ್ಲೈಮಿಂಗ್ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು, ಸರಳಗೊಳಿಸಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಕ್ರಮವನ್ನು ಕೈಗೊಂಡಿದೆ. ಅಧಿಕ ಪಿಂಚಣಿಯನ್ನು ಹೇಗೆ ಕ್ಲೈಮ್ ಮಾಡುವುದು ಎಂಬ ಬಗ್ಗೆ ಸ್ಪಷ್ಟತೆಯನ್ನು ಒದಗಿಸುವ ನಿಟ್ಟಿನಲ್ಲಿ ಇಪಿಎಫ್‌ಒ ಹೊಸ ಮಾರ್ಗಸೂಚಿಯೊಂದನ್ನು ಜಾರಿ ಮಾಡಿದೆ.
26(6) ಅಡಿಯಲ್ಲಿ ಜಂಟಿ ವಿನಂತಿಯನ್ನು ನೀಡಲು ಸಾಧ್ಯವಾಗದಿದ್ದರೆ ಯಾವ ದಾಖಲೆ ಸಲ್ಲಿಸಬಹುದು ಎಂಬ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದೆ. ಅಧಿಕ ಪಿಂಚಣಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನವೆಂಬರ್ 2022ರಲ್ಲಿ ಮಹತ್ವದ ತೀರ್ಪನ್ನು ನೀಡಿದೆ. ಸೆಪ್ಟೆಂಬರ್ 1, 2014 ರಂದು ಅಥವಾ ಅದಕ್ಕೂ ಮೊದಲು ಇಪಿಎಫ್ ಸದಸ್ಯರಾದವರು ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದರೆ, ಅವರು ನಾಲ್ಕು ತಿಂಗಳ ಒಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ದೇಶದ ಉನ್ನತ ಕೋರ್ಟ್ ತಿಳಿಸಿತ್ತು. ಯೋಜನೆ, 1952 ರ ಪ್ಯಾರಾಗ್ರಾಫ್ 26 (6) ರ ಅಡಿಯಲ್ಲಿ ಈ ಮಾಹಿತಿ ಒದಗಿಸುವುದು ಕಡ್ಡಾಯ ಎಂಬಂತಿದೆ. ಆದರೆ ಇದನ್ನು ಈಗ ಸರಳಗೊಳಿಸಲಾಗಿದೆ.

ಅಧಿಕ ಪಿಂಚಣಿಗೆ ಬೇಕಾದ ದಾಖಲೆಗಳು?
ಅಧಿಕ ಪಿಂಚಣಿಯನ್ನು ಪಡೆಯುವ ನಿಟ್ಟಿನಲ್ಲಿ ಅರ್ಹ ಉದ್ಯೋಗಿಗಳು ಜಂಟಿ ಪಿಂಚಣಿ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳ ಪಟ್ಟಿಯನ್ನು ಇಪಿಎಫ್‌ಒ ಒದಗಿಸಿದೆ. ಸುತ್ತೋಲೆಯ ಪ್ರಕಾರ, ಜಂಟಿ ವಿನಂತಿ/ ಒಪ್ಪಂದ/ ಅನುಮತಿ ದಾಖಲಾತಿಗಳನ್ನು ಹೊಂದಿರದ ಅರ್ಹ ಉದ್ಯೋಗಿಗಳಿಗೆ ಇದು ಅನ್ವಯಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಕೆಳಗೆ ವಿವರಿಸಿದ ವಿಧಾನವನ್ನು ಬಳಸಿಕೊಂಡು ಅಧಿಕ ಪಿಂಚಣಿಗೆ ಅರ್ಜಿಗಳನ್ನು ಇಪಿಎಫ್‌ಒ ಸ್ವೀಕರಿಸಬಹುದು.ಕ್
ಷೇತ್ರ ಕಛೇರಿಗಳು ಇದನ್ನು ಪರಿಶೀಲಿಸುತ್ತವೆ:
ಎ) ಮಾಸಿಕ ವೇತನವು ಪ್ರಸ್ತುತ ಶಾಸನಬದ್ಧ ವೇತನದ ಮೊತ್ತ 5,000/6,500/15,000 ರೂಪಾಯಿಗಿಂತ ಅಧಿಕವಾಗಿದ್ದರೆ ಉದ್ಯೋಗಿಗಳಿಗೆ ಪಿಎಫ್ ಕೊಡುಗೆಯ ಉದ್ಯೋಗದಾತರ ಭಾಗವನ್ನು ಪಾವತಿಸಲಾಗಿದೆ ಎಂದರ್ಥವಾಗಿರುತ್ತದೆ. 16.11.95ರಿಂದ ಅಥವಾ ನಂತರದ ದಿನದಿಂದ ಈ ಕೊಡುಗೆ ಪ್ರಾರಂಭ ಮಾಡಲಾಗುತ್ತದೆ. ಉದ್ಯೋಗಿಯ ನಿವೃತ್ತಿ ಅಥವಾ ನಿವೃತ್ತಿಯಾಗುವವರೆಗೆ ಇದು ಮುಂದುವರಿಯುತ್ತದೆ.
ಬಿ. ಅಂತಹ ಹೆಚ್ಚಿನ ವೇತನದ ಮೇಲೆ ಉದ್ಯೋಗದಾತರಿಂದ ಆಡಳಿತಾತ್ಮಕ ಶುಲ್ಕಗಳನ್ನು ಪಾವತಿಮಾಡಬೇಕಾಗುತ್ತದೆ.
ಸಿ. ನೌಕರನ ಭವಿಷ್ಯ ನಿಧಿ ಖಾತೆಯನ್ನು EPFS,1952 ರ ಪ್ಯಾರಾ 60 ರ ಪ್ರಕಾರ ಸ್ವೀಕರಿಸಿದ ಕೊಡುಗೆಯ ಆಧಾರದ ಮೇಲೆ ಬಡ್ಡಿದರದೊಂದಿಗೆ ನವೀಕರಿಸಲಾಗುತ್ತದೆ.
ಡಿ. ಆಯ್ಕೆ/ಜಂಟಿ ಆಯ್ಕೆಗಳ ವ್ಯಾಲಿಡೇಷನ್‌ಗಾಗಿ ಅರ್ಜಿಗಳ ಜೊತೆಗೆ ಕೆಳಗಿನ ಯಾವುದೇ ದಾಖಲೆಗಳನ್ನು ಪ್ಯಾರಾಗ್ರಾಫ್ 26(6) ಅಡಿಯಲ್ಲಿ ಜಂಟಿ ಆಯ್ಕೆ ಮತ್ತು ಅಧಿಕಾರದ ಪುರಾವೆಯಾಗಿ ಸಲ್ಲಿಸಲಾಗಿದೆ.
* ಅರ್ಜಿಯೊಂದಿಗೆ ಉದ್ಯೋಗದಾತರು ಒದಗಿಸಿದ ವೇತನ ಮಾಹಿತಿ
* ಉದ್ಯೋಗದಾತರಿಂದ ದೃಢೀಕರಿಸಲ್ಪಟ್ಟ ಯಾವುದೇ ಸ್ಯಾಲರಿ ಸ್ಲಿಪ್ ಅಥವಾ ಜಂಟಿ ವಿನಂತಿಗಾಗಿ ಉದ್ಯೋಗ ನೀಡಿದ ಸಂಸ್ಥೆಯ ಪತ್ರ
* 04.11.2022 ರ ಮೊದಲು ನೀಡಿದ ಹೆಚ್ಚಿನ ವೇತನದ ಮೇಲೆ ಪಿಎಫ್ ಕೊಡುಗೆಗಳನ್ನು ಖಾತರಿಪಡಿಸುವ ಪಿಎಫ್ ಕಚೇರಿಯ ಪತ್


Click it and Unblock the Notifications