ಭಾರತದಲ್ಲಿ ಅತೀ ಪ್ರಮುಖವಾದ ದಾಖಲೆಗಳ ಪೈಕಿ ಹೆಚ್ಚಾಗಿ ಬಳಕೆ ಮಾಡಲಾಗುವ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆಯು ಹಲವಾರು ಬಾರಿ ಅವಕಾಶವನ್ನು ನೀಡಿದೆ. ಗಡುವನ್ನು ಕೂಡಾ ಹಲವು ಬಾರಿ ವಿಸ್ತರಣೆ ಮಾಡಿದೆ. ಈಗ ಗಡುವು ಕೊನೆಯಾಗಿದೆ.
ಪ್ರಸ್ತುತ ಗಡುವು ಕೊನೆಯಾಗಿದೆ. ನೀವು ಇನ್ನು ಕೂಡಾ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿಲ್ಲದಿದ್ದರೆ, ನೀವು ಒಟ್ಟಾಗಿ ಆರು ಸಾವಿರ ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಹೌದು, ಆರು ಸಾವಿರ. ಈ ಹಿಂದೆ ಒಂದು ಸಾವಿರ ದಂಡ ಇದ್ದದ್ದು ಈಗ ಆರು ಸಾವಿರ ಹೇಗೆ ಎಂಬುವುದರ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಆರು ಸಾವಿರ ರೂಪಾಯಿ ದಂಡ ಹೇಗೆ ಪಾವತಿಸುವುದು?
ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲಿಂಗ್ ಸೀಸನ್ ತೆರಿಗೆದಾರರಿಗೆ ತಮ್ಮ ಜವಾಬ್ದಾರಿಗಳನ್ನು ಪೂರೈಸಲು ಮತ್ತು ತೆರಿಗೆ ಅಧಿಕಾರಿಗಳಿಗೆ ತಮ್ಮ ಆದಾಯವನ್ನು ವರದಿ ಮಾಡಲು ಅತೀ ಮಹತ್ವವಾದ ಸಮಯವಾಗಿದೆ. ಅಂದರೆ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಅತೀ ಪ್ರಮುಖವಾದ ಸಮಯವಾಗಿದೆ. ನಿಮ್ಮ ರಿಟರ್ನ್ ಫೈಲ್ ಮಾಡಲು ಪ್ಯಾನ್ ಕಾರ್ಡ್ ಅತೀ ಮುಖ್ಯವಾಗಿದೆ.
ನೀವು ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿಲ್ಲದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಜುಲೈ 1ರಿಂದ ನಿಷ್ಕ್ರೀಯವಾಗಲಿದೆ. ಈ ಎರಡು ಪ್ರಮುಖ ದಾಖಲೆಗಳನ್ನು ಲಿಂಕ್ ಮಾಡಲು ಜೂನ್ 30, 2023 ಕೊನೆಯ ದಿನಾಂಕವಾಗಿದೆ. ಇದಾದ ಬಳಿಕ ನೀವು ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿದ ಒಂದು ತಿಂಗಳಲ್ಲಿ ಪ್ಯಾನ್ ಸಕ್ರಿಯವಾಗಲಿದೆ.
ಐಟಿಆರ್ ಫೈಲ್ ಮಾಡಲು ಪ್ಯಾನ್ ಕಾರ್ಡ್ ಅಗತ್ಯವಾಗಿದೆ. ಆದ್ದರಿಂದಾಗಿ ಜುಲೈ 31, 2023ಕ್ಕೂ ಮುನ್ನ ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಲು ಸಾಧ್ಯವಾಗದು. ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡುವ ಕೊನೆಯ ದಿನಾಂಕವೂ ಕೂಡಾ ಸಮೀಪಿಸುತ್ತಿದೆ. ನೀವು ದಂಡವನ್ನು ಪಾವತಿ ಮಾಡಿ ಪ್ಯಾನ್ ಆಧಾರ್ ಲಿಂಕ್ ಮಾಡಿದರೂ ಸುಮಾರು 30 ದಿನಗಳ ಬಳಿಕವೇ ಪ್ಯಾನ್ ಸಕ್ರಿಯವಾಗಲಿದೆ.
ನಿಮ್ಮ ಪ್ಯಾನ್ ಕಾರ್ಡ್ ಸಕ್ರಿಯವಾದ ಬಳಿಕ ನೀವು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ನಿರ್ಧಾರ ಮಾಡಿದರೆ, ನಿಮಗೆ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ದಿನಾಂಕವು ಕೊನೆಯಾಗಬಹುದು. 5 ಲಕ್ಷ ರೂಪಾಯಿಗಿಂತ ಅಧಿಕ ವೇತನ ಇರುವ ವ್ಯಕ್ತಿಯು ಆದಾಯ ತೆರಿಗೆ ರಿಟರ್ನ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿಲ್ಲದಿದ್ದರೆ, 5 ಸಾವಿರ ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ.
ಇದರ ಜೊತೆಗೆ ನೀವು ಪ್ಯಾನ್ ಹಾಗೂ ಆಧಾರ್ ಲಿಂಕ್ ಮಾಡದ ಕಾರಣದಿಂದಾಗಿ ಒಂದು ಸಾವಿರ ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಅಂದರೆ ಒಟ್ಟಾಗಿ ನೀವು ಆರು ಸಾವಿರ ರೂಪಾಯಿಯನ್ನು ದಂಡ ಪಾವತಿ ಮಾಡಲೆಂದೇ ಇರಿಸಿಕೊಳ್ಳಬೇಕಾಗುತ್ತದೆ.
ನಿಮ್ಮ ಆದಾಯವು ವಾರ್ಷಿಕವಾಗಿ 5 ಲಕ್ಷ ರೂಪಾಯಿಗೂ ಕಡಿಮೆಯಾಗಿದ್ದರೆ, ನೀವು ಒಂದು ಸಾವಿರ ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ, ಅಂದರೆ ಒಟ್ಟಾಗಿ (ಆಧಾರ್ ಪ್ಯಾನ್ ಲಿಂಕ್ 1 ಸಾವಿರ ರೂಪಾಯಿ) 2 ಸಾವಿರ ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಜುಲೈ 31ಕ್ಕೂ ಮುನ್ನ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡುವುದು ಕಡ್ಡಾಯವಾಗಿದೆ. ಡಿಸೆಂಬರ್ 31, 2023ರವರೆಗೆ ಬಿಲೇಟೆಡ್ ರಿಟರ್ನ್ ಫೈಲ್ ಮಾಡುವ ಅವಕಾಶವಿದೆ.
ಆಧಾರ್‌ಗೆ ಲಿಂಕ್‌ಗೆ ನೀವು ದಂಡ ಪಾವತಿಸಿದ್ದರೆ?
ನೀವು ಜೂನ್ 30, 2023ಕ್ಕೂ ಮುನ್ನ ಆಧಾರ್ ಪ್ಯಾನ್ ಲಿಂಕ್ ಮಾಡಲು ದಂಡವನ್ನು ಪಾವತಿ ಮಾಡಿದ್ದೀರಾ? ಹಾಗಿರುವಾಗ ಪ್ಯಾನ್ ಕಾರ್ಡ್ ಏನಾಗುತ್ತದೆ ಎಂಬ ಬಗ್ಗೆ ಟ್ವಿಟ್ಟರ್ ಸ್ಪಷ್ಟಣೆಯನ್ನು ನೀಡಿದೆ. "ಶುಲ್ಕ ಪಾವತಿ ಮತ್ತು ಲಿಂಕ್ ಮಾಡಲು ಒಪ್ಪಿಗೆಯನ್ನು ಸ್ವೀಕರಿಸಿದ್ದರೆ, ಅಂದರೆ 30.06.2023 ರವರೆಗೆ ಲಿಂಕ್ ಮಾಡಿಲ್ಲದಿದ್ದರೆ, ಇಂತಹ ಪ್ರಕರಣವನ್ನು ಇಲಾಖೆಯು ಪರಿಗಣಿಸುತ್ತದೆ," ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ. ನೀವು ಮೊದಲೇ ದಂಡವನ್ನು ಪಾವತಿಸಿದ್ದರೆ ಈಗ ಪ್ಯಾನ್ ಆಧಾರ್ ಅನ್ನು ಲಿಂಕ್ ಮಾಡಬಹುದಾಗಿದೆ.


Click it and Unblock the Notifications