ಭಾರತೀಯ ರಿಸರ್ವ ಬ್ಯಾಂಕ್ ಇತ್ತೀಚೆಗೆ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ (ಬಿಪಿಎಸ್) ಏರಿಸಿದ್ದು ರೆಪೋ ದರ ಶೇಕಡ 6.50ಕ್ಕೆ ತಲುಪಿದೆ. 2022ರ ಮೇ ತಿಂಗಳಿಂದೀಚೆಗೆ ಸೆಂಟ್ರಲ್ ಬ್ಯಾಂಕ್ ಆರು ಬಾರಿ ರೆಪೋ ದರವನ್ನು ಹೆಚ್ಚಿಸಿದೆ. ಆ ಪ್ರಕಾರ ಹಲವು ಬ್ಯಾಂಕ್‌ಗಳು ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ತಮ್ಮ ರಿಟರ್ನ್ ನೀಡುತ್ತಿದೆ. ನಿಶ್ಚಿತ ಠೇವಣಿ (ಎಫ್.ಡಿ) ಮೇಲೆ ಬಡ್ಡಿದರ ಪರಿಷ್ಕರಿಸಿದ ಪ್ರಮುಖ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ.
ಎಸ್ ಬಿ ಐ ಫಿಕ್ಸೆಡ್ ಡೆಪಾಸಿಟ್ ದರ: ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಎಸ್‌ಬಿಐ ದೀರ್ಘ ಅವಧಿಯ ಠೇವಣಿ ದರವನ್ನು 25-75 ಬೇಸಿಕ್ ಪಾಯಿಂಟ್‌ನಷ್ಟು ಹೆಚ್ಚಿಸಿದೆ. ಅಂದರೆ ಠೇವಣಿದಾರರು ತಮ್ಮ ಎಫ್.ಡಿ ಮೇಲೆ ಹೆಚ್ಚಿನ ರಿಟರ್ನ್ಸ್ ಪಡೆಯುತ್ತಾರೆ. 2023ರ ಫೆಬ್ರವರಿ 15ರಿಂದ ರಿಟೇಲ್ ಡೊಮೆಸ್ಟಿಕ್ ಟರ್ಮ್ ಡೆಪಾಸಿಟ್ (2 ಕೋಟಿಯೊಳಗೆ) ಪರಿಷ್ಕರಣೆಗೆ ಒಳಪಟ್ಟಿದೆ. 5ವರ್ಷ ಮತ್ತು 10 ವರ್ಷಗಳವರೆಗೆ ಬ್ಯಾಂಕ್ ಶೇಕಡ 3ರಿಂದ ಶೇಕಡ 7ರಷ್ಟು ಬಡ್ಡಿದರ ನೀಡುತ್ತದೆ.

ಆಕ್ಸಿಸ್ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ದರಗಳು:
ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಆಕ್ಸಿಸ್ ಬ್ಯಾಂಕ್ 2023ರ ಫೆಬ್ರವರಿ 1ರಿಂದ ಜಾರಿಗೆ ಬರುವಂತೆ 2 ಕೋಟಿ ರೂಪಾಯಿಗಳ ಒಳಗಿನ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಈ ಬ್ಯಾಂಕ್ ಶೇಕಡ 3.5 ಹಾಗೂ ಶೇಕಡ 7.5 ನಡುವೆ ಬಡ್ಡಿ ದರ ನೀಡುತ್ತದೆ. ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ 2 ರಿಂದ 5 ಕೋಟಿ ರೂ. ಒಳಗಿನ ಬೃಹತ್ ಎಫ್‌ಡಿಗಳ ಬಡ್ಡಿ ದರವನ್ನು ಹೆಚ್ಚಿಸಿದೆ. ಬ್ಯಾಂಕ್ ಶೇಕಡ 3 ದಿಂದ ಶೇಕಡ 7 ವರೆಗೆ ಬಡ್ಡಿದರವನ್ನು ಏರಿಸಿದೆ. ಇತ್ತೀಚಿನ ದರ ಹೆಚ್ಚಳವು 2023ರ ಪೆಬ್ರವರಿ 17ರಿಂದ ಅನ್ವಯವಾಗುತ್ತದೆ.
ಇಂಡಸ್‌ಲ್ಯಾಂಡ್ ಫಿಕ್ಸಿಡ್ ಡೆಪಾಸಿಟ್ ದರಗಳು:
ಈ ಖಾಸಗಿ ಬ್ಯಾಂಕ್ 2 ಕೋಟಿ ರೂ. ಒಳಗಿನ ಫಿಕ್ಸಿಡ್ ಡೆಪಾಸಿಟ್ ಬಡ್ಡಿಗಳನ್ನು ಹೆಚ್ಚಿಸಿದೆ. ಪ್ರಸ್ತುತ ಈ ಬ್ಯಾಂಕ್ 7 ದಿನಗಳಿಂದ 61ತಿಂಗಳವರೆಗೆ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಠೇವಣಿಗೆ ಶೇಕಡ 3.5 ದಿಂದ ಶೇಕಡ 7 ಬಡ್ಡಿ ದರ ನೀಡುತ್ತದೆ. 2ರಿಂದ 3 ವರ್ಷಗಳಿಗೆ ಹಾಗೂ ಮೂರು ತಿಂಗಳು ಬ್ಯಾಂಕ್ ಹಿರಿಯ ನಾಗರಿಕರನ್ನು ಹೊರತುಪಡಿಸಿದಂತೆ ಗರಿಷ್ಟ ಶೇಕಡ 7.50 ಹಾಗೂ ಹಿರಿಯ ನಾಗರಿಕರಿಗೆ ಶೇಕಡ 8.5 ಬಡ್ಡಿದರ ನೀಡುತ್ತದೆ. ಇದು 2023 ಫೆಬ್ರವರಿ 16ರಿಂದ ಅನ್ವಯವಾಗುವಂತೆ ಜಾರಿಯಾಗಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ ಫಿಕ್ಸಿಡ್ ಡೆಪಾಸಿಟ್ ದರಗಳು: ಬ್ಯಾಂಕ್ ಆಫ್ ಮಹಾರಾಷ್ಟ್ರದ ಗ್ರಾಹಕರು ಈಗ 2023 ಫೆಬ್ರವರಿ 14ರಂತೆ 2 ಕೋಟಿ ರೂಪಾಯಿ ಒಳಗಿನ ಫಿಕ್ಸಿಡ್ ಡೆಪಾಸಿಟ್‌ಗೆ ಶೇಕಡ 5.75 ಬಡ್ಡಿದರ ಒದಗಿಸುತ್ತದೆ. ಜತೆಗೆ ಬ್ಯಾಂಕ್ ಹೆಚ್ಚುವರಿಯಾಗಿ 200 ದಿನ ಮತ್ತು 400ದಿನಗಳ ಮೆಚ್ಯೂರಿಟಿಯ ಎರಡು ವಿಶಿಷ್ಟ ಫಿಕ್ಸಿಡ್ ಡೆಪಾಸಿಟ್‌ಗಳನ್ನು ಪರಿಚಯಿಸಿದ್ದು ಇದರಡಿ ಕ್ರಮವಾಗಿ ಶೇಕಡ 7 ಹಾಗೂ ಶೇಕಡ 6.5 ಬಡ್ಡಿದರ ಪಡೆಯಬಹುದು.


Click it and Unblock the Notifications