ಅಧಿಕ ಅಪಾಯವಿಲ್ಲದ ಹೂಡಿಕೆಯನ್ನು ಮಾಡಲು ಯಾವುದೇ ವ್ಯಕ್ತಿ ನಿರ್ಧಾರ ಮಾಡಿದರೆ, ಅವರ ಮುಂದೆ ಬರುವ ಆಯ್ಕೆಗಳಲ್ಲಿ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಹೂಡಿಕೆ ಒಂದಾಗಿದೆ. ಆದರೆ ಇತ್ತೀಚೆಗೆ ಆರ್‌ಬಿಐ 2000 ರೂಪಾಯಿ ನೋಟನ್ನು ಚಲಾವಣೆಯಿಂದ ಹಿಂಪಡೆದ ಬಳಿಕ ಅದರ ಪ್ರಭಾವ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರದ ಮೇಲೆ ಉಂಟಾಗಲಿದೆಯೇ ಎಂಬ ಚರ್ಚೆಗಳು ಕೂಡಾ ನಡೆಯುತ್ತಿದೆ.
ಹಣಕಾಸು ವಲಯದಲ್ಲಿ ಲಿಕ್ವಿಡಿಟಿಯು ಹೆಚ್ಚುವರಿಯಾಗಿರುವ ಬಡ್ಡಿದರವು ಇಳಿಕೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳಿದ್ದಾರೆ. 2000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಡೆಪಾಸಿಟ್ ಮಾಡುವುದರಿಂದ ಅಧಿಕ ಲಿಕ್ವಿಡಿಟಿ ಉಂಟಾಗಿದೆ. 2000 ರೂಪಾಯಿಯ ನೋಟನ್ನು ಬ್ಯಾಂಕ್‌ನಲ್ಲಿ ಜನರು ಬದಲಾವಣೆ ಮಾಡುವುದಕ್ಕೂ ಅಧಿಕವಾಗಿ, ಶೇಕಡ 85ರಷ್ಟು ನೋಟುಗಳನ್ನು ಡೆಪಾಸಿಟ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಕೆಲವು ನೋಟುಗಳು ಈಗಾಗಲೇ ಬ್ಯಾಂಕ್‌ನಲ್ಲಿದೆ. ಇನ್ನು ಕನಿಷ್ಠ 2 ಲಕ್ಷ ಕೋಟಿ ರೂಪಾಯಿಗಳಷ್ಟು ಬ್ಯಾಂಕ್ ಡೆಪಾಸಿಟ್ ಅಧಿಕವಾಗಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವರದಿ ಮಾಡಿದೆ. ಇದು ಬ್ಯಾಂಕ್‌ನಲ್ಲಿ ಲಿಕ್ವಿಡಿಟಿ ಹೆಚ್ಚಿಸುತ್ತದೆ. ಇದು ಎಫ್‌ಡಿ ಬಡ್ಡಿದರದ ಮೇಲೆ ಪ್ರಭಾವ ಉಂಟು ಮಾಡಲಿದೆ ಎಂದು ವರದಿಯು ಹೇಳುತ್ತದೆ. ತಜ್ಞರುಗಳು ಏನು ಹೇಳುತ್ತಾರೆ ತಿಳಿಯಿರಿ...

ಮೈಫಂಡ್‌ಬಜಾರ್ ಸಂಸ್ಥಾಪಕ ಮತ್ತು ಸಿಇಒ ವಿನಿತ್ ಖಂಡಾರೆ ಪ್ರಕಾರ, "ಮುಂಬರುವ ತಿಂಗಳುಗಳಲ್ಲಿ ಹಣಕಾಸಿನ ವಲಯದಲ್ಲಿ ಅಧಿಕ ಲಿಕ್ವಿಡಿಟಿಯಾಗುವುದು ಮುಂದುವರಿದರೆ, ಬಡ್ಡಿದರವು ಕಡಿಮೆಯಾಗಬಹುದು. ವಿಶೇಷವಾಗಿ ಬಡ್ಡಿದರ ರೇಖೆಗೂ ಕಡಿಮೆಯಾಗಬಹುದು," ಎಂದು ತಿಳಿಸಿದ್ದಾರೆ.
"2000 ರೂಪಾಯಿ ನೋಟುಗಳ ಹಿಂಪಡೆಯುವಿಕೆ ಮತ್ತು ಹಣದುಬ್ಬರದ ಪರಿಸ್ಥಿತಿಗಳನ್ನು ಸುಧಾರಿಸುವುದು ಪ್ರಸ್ತುತ ಸ್ಥಿರವಾಗಿರಿಸಿದ ಪ್ರಮುಖ ಎಫ್‌ಡಿ ಬಡ್ಡಿದರದ ಹಿಂದಿನ ಪ್ರಮುಖ ಕಾರಣಗಳಾಗಿದೆ ಎಂದು ಪೋರ್ಟಲ್‌ನಲ್ಲಿ ಸೇರಿಸಲಾಗಿದೆ," ಎಂಬುವುದನ್ನು ಟಿ ಎ ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಪ್ರೊಫೆಸರ್ ವಿಜಯ್ ವಿಕ್ಟರ್ ಹೇಳುತ್ತಾರೆ.
ಬ್ಯಾಂಕುಗಳಲ್ಲಿ ಸಾಲಗಳಿಗೆ ಹೆಚ್ಚಿನ ಬೇಡಿಕೆ ಇರುವಾಗ ಆದರೆ ಬೇಡಿಕೆಯನ್ನು ಪೂರೈಸಲು ಹಣವನ್ನು ಪಡೆಯಲು ಸಾಧ್ಯವಾಗದ ಸಂದರ್ಭದಲ್ಲಿ, ಹೂಡಿಕೆದಾರರನ್ನು ಆಕರ್ಷಣೆ ಮಾಡುವ ನಿಟ್ಟಿನಲ್ಲಿ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಲಾಗುತ್ತದೆ. ಆದರೆ 2000 ರೂಪಾಯಿ ನೋಟುಗಳನ್ನು ವಾಪಾಸ್ ಪಡೆಯಲು ಪ್ರಾರಂಭಿಸಿದಾಗ, ಡೆಪಾಸಿಟ್ ಮೂಲವು ಗಮನಾರ್ಹವಾಗಿ ಉತ್ತೇಜನವನ್ನು ಪಡೆಯುವ ನಿರೀಕ್ಷೆಯಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾದ್ ಪ್ರಕಾರ ಈವರೆಗೆ ಒಟ್ಟು 1.8 ಲಕ್ಷ ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳನ್ನು ಬ್ಯಾಂಕ್‌ನಲ್ಲಿ ಡೆಪಾಸಿಟ್ ಅಥವಾ ಬದಲಾವಣೆ ಮಾಡಲಾಗಿದೆ. ಇನ್ನು ಈ ಹಣದ ಗಣನೀಯ ಭಾಗವು ಒಂದು ವರ್ಷಕ್ಕೂ ಅಧಿಕ ಕಾಲ ಬ್ಯಾಂಕ್‌ಗಳಲ್ಲಿ ಉಳಿಯುವ ಸಾಧ್ಯತೆ ಅಧಿಕವಾಗಿದೆ.
ಈ ಮೊತ್ತದ ಅರ್ಧದಷ್ಟು ಮೊತ್ತವು ದೀರ್ಘಾವಧಿಯವರೆಗೆ ಬ್ಯಾಂಕ್‌ಗಳಲ್ಲಿ ಉಳಿದಿದ್ದರೆ, ಎಫ್‌ಡಿ ಬಡ್ಡಿದರವು ಹೆಚ್ಚಳವಾಗಬಹುದು ಎಂದು ತಜ್ಞರ ತಿಳಿಸಿದ್ದಾರೆ. ಹೆಚ್ಚಿನ ಬಡ್ಡಿ ದರಗಳನ್ನು ನೀಡುವ ಅಸ್ತಿತ್ವದಲ್ಲಿರುವ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು ಅಥವಾ ಯಾವುದೇ ಸಂಭಾವ್ಯ ದರ ಕಡಿತ ಸಂಭವಿಸುವ ಮೊದಲು ಎಫ್‌ಡಿ ಯೋಜನೆಗಳಲ್ಲಿ ಹೊಸ ಹೂಡಿಕೆ ಮಾಡುವುದು ಒಳ್ಳೆಯದು.
ರೆಪೋ ದರ ಏರಿಸುತ್ತಾ ಸಾಗಿದ್ದ ಆರ್‌ಬಿಐ
ಆರ್‌ಬಿಐ ಈ ಹಿಂದೆ ಒಟ್ಟು ಆರು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. ಸುಮಾರು ಹತ್ತು ತಿಂಗಳುಗಳ ಕಾಲ ಸ್ಥಿರವಾಗಿರಿಸಿದ್ದ ರೆಪೋ ದರವನ್ನು ಆರ್‌ಬಿಐ ಮೇ ತಿಂಗಳಿನಲ್ಲಿ 40 ಮೂಲಾಂಕ ಏರಿಕೆ ಮಾಡಿದೆ. ಅದಾದ ಬಳಿಕ ಜೂನ್‌ನಲ್ಲಿ ಮತ್ತೆ 50 ಮೂಲಾಂಕ, ಆಗಸ್ಟ್‌ನಲ್ಲಿ 50 ಮೂಲಾಂಕ, ಸೆಪ್ಟೆಂಬರ್‌ನಲ್ಲಿ ಮತ್ತೆ 50 ಬಿಪಿಎಸ್ ದರ ಏರಿಕೆ ಮಾಡಿದೆ.
ಅದಾದ ಬಳಿಕ ಡಿಸೆಂಬರ್‌ನಲ್ಲಿ ಆರ್‌ಬಿಐ ರೆಪೋ ದರವನ್ನು 35 ಬಿಪಿಎಸ್ ಹೆಚ್ಚಳ ಮಾಡಿದೆ. ಫೆಬ್ರವರಿಯಲ್ಲಿ ಮತ್ತೆ 25 ಬಿಪಿಎಸ್ ಏರಿಸಿದೆ. ಒಟ್ಟಾಗಿ 250 ಮೂಲಾಂಕದವರೆಗೂ ದರ ಏರಿಕೆ ಮಾಡಲಾಗಿದೆ. ಏಪ್ರಿಲ್‌ನಲ್ಲಿ ರೆಪೋ ದರ ಸ್ಥಿರವಾಗಿರಿಸಲಾಗಿದೆ. ಜೂನ್‌ನಲ್ಲಿಯೂ ದರ ಸ್ಥಿರವಾಗಿರಿಸಲಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications