FD schemes: ಈ ಮೂರು ಲಾಭದಾಯಕ ಎಫ್‌ಡಿ ಯೋಜನೆ ಶೀಘ್ರ ಅಂತ್ಯ, ಅವಕಾಶ ಕಳೆದುಕೊಳ್ಳಬೇಡಿ

ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದ್ದ ಹಣದುಬ್ಬರವನ್ನು ನಿಯಂತ್ರಣ ಮಾಡುವ ಭಾಗವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ರೆಪೋ ದರ ಏರಿಕೆ ಕೂಡಾ ಆರ್‌ಬಿಐ ಹಣದುಬ್ಬರದ ಹೋರಾಟದ ಕ್ರಮಗಳಲ್ಲಿ ಒಂದಾಗಿದೆ. ಆರ್‌ಬಿಐ ಹಣದುಬ್ಬರ ಏರಿಕೆ ಮಾಡುತ್ತಾ ಸಾಗಿದ್ದಂತೆ ಇತ್ತ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಕೂಡಾ ಬ್ಯಾಂಕ್, ಹಣಕಾಸು ಸಂಸ್ಥೆಗಳು ಹೆಚ್ಚಳ ಮಾಡುತ್ತಾ ಸಾಗಿದೆ.

ಕಳೆದ ಒಂದು ವರ್ಷದ ಅವಧಿಯನ್ನು ನಾವು ನೋಡಿದಾಗ ಭಾರತದಲ್ಲಿ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವು ಅಧಿಕ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿರುವುದನ್ನು ನಾವು ಗಮನಿಸಬಹುದಾಗಿದೆ. ಪ್ರಸ್ತುತ ಹಣದುಬ್ಬರ ದರವು ನಿಯಂತ್ರಣಕ್ಕೆ ಬರುತ್ತಿದೆ. ಇದಾದ ಬೆನ್ನಲ್ಲೇ ಭಾರತದ ಕೇಂದ್ರ ಬ್ಯಾಂಕ್ ರೆಪೋ ದರ ಏರಿಕೆಯನ್ನು ನಿಲ್ಲಿಸಿದೆ. ಆದ್ದರಿಂದಾಗಿ ಇನ್ನು ಶೀಘ್ರದಲ್ಲೇ ಎಫ್‌ಡಿ ಬಡ್ಡಿದರಗಳು ಏರಿಕೆಯಾಗುವ ಸಾಧ್ಯತೆ ಕಡಿಮೆ ಎಂದೇ ಹೇಳಬಹುದು.

 ಲಾಭದಾಯಕ ಎಫ್‌ಡಿ ಯೋಜನೆಗಳು ಶೀಘ್ರ ಅಂತ್ಯ, ಅವಕಾಶ ಕಳೆದುಕೊಳ್ಳಬೇಡಿ

ಹಲವಾರು ಎಫ್‌ಡಿ ಯೋಜನೆಗಳು ಈಗಾಗಲೇ ಜಾರಿಯಲ್ಲಿದ್ದು ಆ ಯೋಜನೆಗಳು ಹೂಡಿಕೆದಾರರಿಗೆ ಅಭೂತಪೂರ್ವ ಲಾಭವನ್ನು ನೀಡುತ್ತಾ ಬಂದಿದೆ. ಆದರೆ ಸಾಮಾನ್ಯ ಎಫ್‌ಡಿ ಬಡ್ಡಿದರಕ್ಕಿಂತ ಅಧಿಕ ಬಡ್ಡಿದರವನ್ನು ನಮಗೆ ನೀಡುವ ಇಂತಹ ಯೋಜನೆಗಳ ಕೊನೆಯ ದಿನಾಂಕ ಸಮೀಪಿಸುತ್ತಿದೆ ಎಂಬುವುದು ನಾವು ಗಮನಿಸಬೇಕಾದ ವಿಚಾರವಾಗಿದೆ.

ಅಧಿಕ ರಿಟರ್ನ್ ಅನ್ನು ನೀಡುವ ಹಲವು ಎಫ್‌ಡಿ ಯೋಜನೆಗಳ ಕೊನೆಯ ದಿನಾಂಕವು ಜೂನ್ 30, 2023 ಆಗಿದೆ. ಯಾರು ತನ್ನ ಹೂಡಿಕೆಯಿಂದ ಸಾಮಾನ್ಯ ಎಫ್‌ಡಿಯಲ್ಲಿ ಹೂಡಿಕೆ ಮಾಡಿ ಪಡೆಯಬಹುದಾದ ರಿಟರ್ನ್‌ಗಿಂತ ಅಧಿಕ ರಿಟರ್ನ್ ಅನ್ನು ಪಡೆಯಲು ಬಯಸುತ್ತಾರೋ ಅವರಿಗೆ ಈಗ ಎಫ್‌ಡಿ ಯೋಜನೆಗಳು ಅತೀ ಲಾಭದಾಯಕವಾಗಿದೆ.

ಆದರೆ ಕೆಲವು ಬ್ಯಾಂಕ್‌ಗಳು ಎಫ್‌ಡಿ ಬಡ್ಡಿದರವನ್ನು ಇಳಿಕೆ ಮಾಡುತ್ತಿದೆ. ಎಫ್‌ಡಿ ದರಗಳು ಇನ್ನಷ್ಟು ಇಳಿಕೆಯಾಗುವುದಕ್ಕೂ ಮುನ್ನ ನಾವು ಅಧಿಕ ಎಫ್‌ಡಿ ಬಡ್ಡಿದರದ ಲಾಭವನ್ನು ಪಡೆಯುವುದು ಮುಖ್ಯವಾಗುತ್ತದೆ. ಪ್ರಮುಖವಾಗಿ ಮೂರು ಎಫ್‌ಡಿ ಯೋಜನೆಗಳು ಶೀಘ್ರವೇ ಕೊನೆಯಾಗಲಿದೆ, ಇಲ್ಲಿದೆ ವಿವರ ಮುಂದೆ ಓದಿ.....

ಇಂಡಿಯನ್ ಬ್ಯಾಂಕ್ ವಿಶೇಷ ಎಫ್‌ಡಿ

ಇಂಡಿಯನ್ ಬ್ಯಾಂಕ್ "ಇಂಡ್ ಸೂಪರ್ 400 ಡೇಸ್" ಎಂಬ ವಿಶೇಷ ಫಿಕ್ಸಿಡ್ ಡೆಪಾಸಿಟ್ ಯೋಜನೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ಸಾಮಾನ್ಯ ನಾಗರಿಕರು ತಮ್ಮ ಹೂಡಿಕೆಯ ಮೇಲೆ ಶೇಕಡ 7.25ರಷ್ಟು ಮತ್ತು ಹಿರಿಯ ನಾಗರಿಕರು ಶೇಕಡ 7.75ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಹಿಂದೆ ಇಂಡಿಯನ್ ಬ್ಯಾಂಕ್ ಈ ವಿಶೇಷ ಯೋಜನೆಯನ್ನು ಜೂನ್ 30, 2023ರವರೆಗೆ ವಿಸ್ತರಣೆ ಮಾಡಿದೆ. ಪ್ರಸ್ತುತ ಜೂನ್‌ನಲ್ಲಿ ಈಗಾಗಲೇ 14 ದಿನಗಳಾಗಿದ್ದು ಇನ್ನು ಉಳಿದ 15 ದಿನಗಳ ಅವಧಿಯಲ್ಲಿ ಹೂಡಿಕೆ ಮಾಡಲು ಅವಕಾಶ ನಿಮಗಿದೆ.

ಎಸ್‌ಬಿಐ ಅಮೃತ ಕಲಶ

ಭಾರತದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕೂಡಾ ವಿಶೇಷ ಎಫ್‌ಡಿ ಯೋಜನೆಯನ್ನು ಹೊಂದಿದೆ. ಅಮೃತ ಕಲಶ ಎಫ್‌ಡಿ ರಿಟೇಲ್ ಟರ್ಮ್ ಡೆಪಾಸಿಟ್ ಯೋಜನೆ ಎಂಬುವುದು ಎಸ್‌ಬಿಐ ವಿಶೇಷ ಎಫ್‌ಡಿ ಯೋಜನೆಗಳಲ್ಲಿ ಒಂದಾಗಿದೆ. ಈ ತಿಂಗಳ ಅಂತ್ಯದಲ್ಲಿಯೇ ಅಂದರೆ ಜೂನ್ ತಿಂಗಳ ಕೊನೆಯಲ್ಲೇ ಇದರ ಅವಧಿ ಅಂತ್ಯವಾಗಲಿದೆ.

ಈ ಹಿಂದೆ ಅಂತ್ಯವಾಗಿದ್ದ ಎಫ್‌ಡಿ ಯೋಜನೆ ಇದಾಗಿದ್ದು ಎಸ್‌ಬಿಐ ಮತ್ತೆ ಆರಂಭ ಮಾಡಿದೆ. ಆದರೆ ಜೂನ್ 30ರಂದು ಇದು ಕೊನೆಯಾಗಲಿದೆ. ಇದು 400 ದಿನಗಳ ವಿಶೇಷ ಎಫ್‌ಡಿ ಯೋಜನೆಯಾಗಿದ್ದು, ಇದರಲ್ಲಿ ಸಾಮಾನ್ಯ ನಾಗರಿಕರಿಗೆ ಶೇಕಡ 7.10ರಷ್ಟು ಮತ್ತು ಹಿರಿಯ ನಾಗರಿಕರು ಶೇಕಡ 7.60ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ.

ಎಸ್‌ಬಿಐ ವಿ ಕೇರ್ ಎಫ್‌ಡಿ

ಎಸ್‌ಬಿಐನಲ್ಲಿ ಇನ್ನೊಂದು ವಿಶೇಷ ಎಫ್‌ಡಿ ಯೋಜನೆ ಕೂಡಾ ಇದೆ. ಆದರೆ ಈ ಯೋಜನೆಯು ಬರೀ ಹಿರಿಯ ನಾಗರಿಕರಿಗಾಗಿ ಇರುವ ಯೋಜನೆಯಾಗಿದೆ. ಎಸ್‌ಬಿಐ ವಿ ಕೇರ್‌ ಎಫ್‌ಡಿ ಯೋಜನೆಯಲ್ಲಿ 5 ವರ್ಷದಿಂದ 10 ವರ್ಷದ ಅವಧಿಯ ಹೂಡಿಕೆಗೆ ಅವಕಾಶವಿದೆ. ಇನ್ನು ಈ ಯೋಜನೆಯು ಜೂನ್ 30, 2023ಕ್ಕೆ ಕೊನೆಯಾಗಲಿದೆ. ಈ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರು ಶೇಕಡ 7.50ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+