Federal Bank: ವಿಶೇಷ ಎಫ್‌ಡಿ ಆರಂಭಿಸಿದ ಫೆಡರಲ್ ಬ್ಯಾಂಕ್, ಹಿರಿಯ ನಾಗರಿಕರಿಗೆ ಬಂಪರ್ ಆಫರ್

ಸಂಸ್ಥಾಪಕರ ದಿನ ಮತ್ತು ಹಬ್ಬದ ಸೀಸನ್ ನಡುವೆ ಫೆಡರಲ್ ಬ್ಯಾಂಕ್ 2 ಕೋಟಿ ರೂಪಾಯಿಗಿಂತ ಕಡಿಮೆ ಮೌಲ್ಯದ ವಿಶೇಷ ಫಿಕ್ಸಿಡ್ ಡೆಪಾಸಿಟ್‌ಗಳನ್ನು ಪ್ರಕಟಿಸಿದೆ. ಇದು ಸುಮಾರು 400 ದಿನಗಳ ಅವಧಿಯ ಎಫ್‌ಡಿಯಾಗಿದ್ದು, ವಿಶೇಷ ಬಡ್ಡಿದರ ಅಂದರೆ ಶೇಕಡ 8.15 ರಷ್ಟು ದರವನ್ನು ಈ ಎಫ್‌ಡಿಗೆ ನಿಗದಿಮಾಡಲಾಗಿದೆ.

400-ದಿನಗಳ ಅವಧಿಯ ಎಫ್‌ಡಿಯಲ್ಲಿ ಹಿರಿಯ ನಾಗರಿಕರಿಗೆ ಫೆಡರಲ್ ಬ್ಯಾಂಕ್ ಸುಮಾರು ಶೇಕಡ 8.15 ರಷ್ಟು ಬಡ್ಡಿದರವನ್ನು ನೀಡುತ್ತದೆ. ಅದೇ ಸಾಮಾನ್ಯ ನಾಗರಿಕರಿಗಾದರೆ ಶೇಕಡ 7.65 ರಷ್ಟು ಬಡ್ಡಿದರವನ್ನು ಬ್ಯಾಂಕ್ ನೀಡುತ್ತದೆ.

 ವಿಶೇಷ ಎಫ್‌ಡಿ ಆರಂಭಿಸಿದ ಫೆಡರಲ್ ಬ್ಯಾಂಕ್, ಬಡ್ಡಿದರ ಪರಿಶೀಲಿಸಿ

ಇನ್ನು 13 ತಿಂಗಳ ಮತ್ತು 21 ತಿಂಗಳ ನಡುವಿನ ಅವಧಿಯ (400 ದಿನಗಳನ್ನು ಹೊರತುಪಡಿಸಿ) ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಫೆಡರಲ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಮತ್ತು ಸಾಮಾನ್ಯ ನಾಗರಿಕರಿಗೆ ಕ್ರಮವಾಗಿ ಶೇಕಡ 8.05 ಮತ್ತು ಶೇಕಡ 7.55 ರಷ್ಟು ಬಡ್ಡಿದರವನ್ನು ನೀಡುತ್ತದೆ.

60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಮೆಚ್ಯೂರಿಟಿಗೂ ಮೊದಲು ವಿತ್‌ಡ್ರಾ ಮಾಡಬಹುದಾದ ಡೆಪಾಸಿಟ್‌ಗಳ ಮೇಲೆ ಹೆಚ್ಚಿನ ಬಡ್ಡಿದರವನ್ನು ಪಡೆಯಲು ಅರ್ಹರಾಗಿರುತ್ತಾರೆ. ಮೆಚ್ಯೂರಿಟಿಗೂ ಮುನ್ನ 400 ದಿನಗಳ ಎಫ್‌ಡಿಯನ್ನು ವಿತ್‌ಡ್ರಾ ಮಾಡಿದರೆ ಶೇಕಡ 7.90 ಬಡ್ಡಿದರ ನೀಡಲಾಗುತ್ತದೆ.

ಇನ್ನು ಹಿರಿಯ ನಾಗರಿಕರು ಮೆಚ್ಯೂರಿಟಿಗೂ ಮುನ್ನವೇ 13 ತಿಂಗಳ ಮತ್ತು 21 ತಿಂಗಳ ನಡುವಿನ ಅವಧಿ ಫಿಕ್ಸಿಡ್ ಡೆಪಾಸಿಟ್ ಅನ್ನು ವಿತ್‌ಡ್ರಾ ಮಾಡಲು ಬಯಸಿದರೆ ಅಥವಾ ವಿತ್‌ಡ್ರಾ ಮಾಡಿದರೆ ಶೇಕಡ 7.80 ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ಈ ಬಡ್ಡಿ ದರಗಳು ಅಕ್ಟೋಬರ್ 19, 2023 ರಿಂದ ಜಾರಿಗೆ ಬರುತ್ತದೆ.

"ಈ ವಿಶೇಷ ದರಗಳನ್ನು ಹಬ್ಬದ ಸೀಸನ್‌ನಲ್ಲಿ ಡೆಪಾಸಿಟ್‌ದಾರರಿಗೆ ಹೆಚ್ಚುವರಿ ಪ್ರಯೋಜನವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಫೆಡರಲ್ ಬ್ಯಾಂಕ್ ಗ್ರಾಹಕ-ಕೇಂದ್ರಿತ ಕೊಡುಗೆಗಳಿಗೆ ತನ್ನ ಬದ್ಧತೆಯನ್ನು ಸಂಸ್ಥಾಪಕರ ದಿನಾಚರಣೆಯ ಸಂದರ್ಭದಲ್ಲಿ ತೋರಿಸುತ್ತದೆ. ಇದರ ಸಂಕೇತವಾಗಿ ವಿಶೇಷ ಬಡ್ಡಿದರವನ್ನು ಆರಂಭಿಸಲಾಗಿದೆ," ಎಂದು ಫೆಡರಲ್ ಬ್ಯಾಂಕ್ ಹೇಳಿದೆ

ಫೆಡರಲ್ ಬ್ಯಾಂಕ್ ಎಫ್‌ಡಿ ದರಗಳು

ಮುಂದಿನ 7 ರಿಂದ 29 ದಿನಗಳಲ್ಲಿ ಮೆಚ್ಯೂರಿಟಿ ಆಗುವ ಡೆಪಾಸಿಟ್‌ಗಳ ಮೇಲೆ ಶೇಕಡ 3.00 ರಷ್ಟು ಬಡ್ಡಿದರವನ್ನು ನೀಡುತ್ತದೆ. ಫೆಡರಲ್ ಬ್ಯಾಂಕ್ ಮುಂದಿನ 30 ರಿಂದ 45 ದಿನಗಳಲ್ಲಿ ಮೆಚ್ಯೂರಿಟಿ ಆಗುವ ಡೆಪಾಸಿಟ್‌ಗಳ ಮೇಲೆ ಶೇಕಡ 3.25 ರಷ್ಟು ಬಡ್ಡಿದರವನ್ನು ನೀಡುತ್ತಿದೆ.

46 ದಿನಗಳಿಂದ 60 ದಿನಗಳ ಎಫ್‌ಡಿ ಮೇಲೆ ಫೆಡರಲ್ ಬ್ಯಾಂಕ್ ಶೇಕಡ 4.00 ಬಡ್ಡಿದರವನ್ನು ನೀಡುತ್ತದೆ. 61 ದಿನಗಳಿಂದ 119 ದಿನಗಳವರೆಗೆ ಹೊಂದಿರುವ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಶೇಕಡ 4.75 ಬಡ್ಡಿದರ ನೀಡಲಾಗುತ್ತದೆ.

120 ದಿನಗಳಿಂದ 180 ದಿನದಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲಿನ ಬಡ್ಡಿ ದರವು ಈಗ ಶೇಕಡ 5.00 ಆಗಿದೆ. ಆದರೆ 181 ದಿನಗಳಿಂದ 270 ದಿನಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಶೇಕಡ 5.75 ಬಡ್ಡಿ ದರವನ್ನು ನೀಡಲಾಗುತ್ತದೆ.

271 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಶೇಕಡ 6.00 ಬಡ್ಡಿದರವನ್ನು ಬ್ಯಾಂಕ್ ಭರವಸೆ ನೀಡುತ್ತಿದೆ. ಫೆಡರಲ್ ಬ್ಯಾಂಕ್ ಒಂದು ವರ್ಷದಲ್ಲಿ 13 ತಿಂಗಳಿಗಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಶೇಕಡ 6.80 ರಷ್ಟು ಬಡ್ಡಿದರವನ್ನು ನೀಡುತ್ತಿದೆ.

13 ತಿಂಗಳಿಂದ 399 ದಿನಗಳ ಅವಧಿಯ ಡೆಪಾಸಿಟ್‌ಗಳ ಮೇಲೆ ಫೆಡರಲ್ ಬ್ಯಾಂಕ್ ಶೇಕಡ 7.30 ಬಡ್ಡಿದರವನ್ನು ನೀಡಲಾಗುತ್ತದೆ. 400 ದಿನಗಳವರೆಗೆ ಹೊಂದಿರುವ ಡೆಪಾಸಿಟ್‌ಗಳ ಮೇಲೆ ಶೇಕಡ 7.40 ಬಡ್ಡಿದರವನ್ನು ನೀಡಲಾಗುತ್ತದೆ.

401 ದಿನಗಳಿಂದ 21 ತಿಂಗಳವರೆಗೆ ಅವಧಿಯ ಡೆಪಾಸಿಟ್‌ಗಳ ಮೇಲೆ ಶೇಕಡ 7.30 ಬಡ್ಡಿದರವನ್ನು ನೀಡಲಾಗುತ್ತದೆ. ಆದರೆ 21 ತಿಂಗಳಿಗಿಂತ ಹೆಚ್ಚು 2 ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಶೇಕಡ 6.75 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.

2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಡೆಪಾಸಿಟ್‌ಗಳ ಮೇಲೆ ಶೇಕಡ 7.05 ರಷ್ಟು ಬಡ್ಡಿದರವನ್ನು ಬ್ಯಾಂಕ್ ನೀಡುತ್ತದೆ. ಫೆಡರಲ್ ಬ್ಯಾಂಕ್ 3 ವರ್ಷದಿಂದ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಡೆಪಾಸಿಟ್‌ಗಳ ಮೇಲೆ ಶೇಕಡ 6.60 ರಷ್ಟು ಬಡ್ಡಿದರವನ್ನು ನೀಡುತ್ತಿದೆ.

ಫೆಡರಲ್ ಬ್ಯಾಂಕ್ ತ್ರೈಮಾಸಿಕ ವರದಿ

ಖಾಸಗಿ ವಲಯದ ಬ್ಯಾಂಕ್ ಆದ ಫೆಡರಲ್ ಬ್ಯಾಂಕ್ ತನ್ನ ಹಣಕಾಸು ವರ್ಷದ 2024ರ ಎರಡನೇ ತ್ರೈಮಾಸಿಕದ ನಿವ್ವಳ ಲಾಭವನ್ನು ಅಕ್ಟೋಬರ್ 16 ರಂದು ಘೋಷಣೆ ಮಾಡಿದೆ. ನಿವ್ವಳ ಲಾಭವು ಶೇಕಡ 35.54 ರಷ್ಟು ಹೆಚ್ಚಳವಾಗಿ 953.82 ಕೋಟಿ ರೂಪಾಯಿಗೆ ತಲುಪಿದೆ.

ಸೆಪ್ಟೆಂಬರ್ 30, 2023 ರಂತೆ, ನಿವ್ವಳ ಬಡ್ಡಿ ಆದಾಯವು ಶೇಕಡ 16.72 ರಷ್ಟು ಏರಿಕೆಯಾಗಿ 2,056.42 ಕೋಟಿ ರೂಪಾಯಿಗೆ ತಲುಪಿದೆ. ಹಣಕಾಸು ವರ್ಷ 2023ರ ಎರಡನೇ ತ್ರೈಮಾಸಿಕದಲ್ಲಿ 1761.83 ಕೋಟಿ ರೂಪಾಯಿ ನಿವ್ವಳ ಬಡ್ಡಿ ಆದಾಯವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+