ನಮ್ಮ ಜೀವನದುದ್ದಕ್ಕೂ ಹಣ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹಾಸಿಗೆಯಿದ್ದಷ್ಟೇ ಕಾಲು ಚಾಚು ಎನ್ನುವಾಗ ನಾವು ಹಾಸಿಗೆಯನ್ನು ಇನ್ನಷ್ಟು ವಿಸ್ತಾರಗೊಳಿಸುವುದು ಹೇಗೆ ಎಂಬ ಚಿಂತೆಯನ್ನು ಮಾಡುತ್ತೇವೆ. ಹಾಗೆಯೇ ಹಲವಾರು ಮಂದಿ ತಮ್ಮ 20ನೇ ವಯಸ್ಸಿನಲ್ಲಿರುವಾಗ 30 ವರ್ಷಕ್ಕೂ ಮುನ್ನ ನಾವು ಸಂಪೂರ್ಣವಾಗಿ ಹಣಕಾಸು ಸುರಕ್ಷತೆಯನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ ಅಂದುಕೊಳ್ಳುತ್ತಾರೆ, ಹೇಗೆ ಫಿನಾನ್ಶಿಯಲ್ ಸೆಕ್ಯೂರ್ ಆಗುವುದು ಎಂದು ಆಲೋಚಿಸುತ್ತಾರೆ.
ಆದರೂ ಕೆಲವೊಂದು ಕಾರ್ಯತಂತ್ರಗಳನ್ನು ನಾವು ಅಳವಡಿಸಿಕೊಂಡರೆ, ಹಣಕಾಸು ಶಿಸ್ತನ್ನು ರೂಢಿಸಿಕೊಂಡರೆ, ನಮಗೆ 30 ವರ್ಷ ತುಂಬುವುದಕ್ಕೂ ಮುನ್ನ ನಾವು ಫಿನಾನ್ಶಿಯಲ್ ಸೆಕ್ಯೂರ್ ಆಗಲು ಸಾಧ್ಯವಾಗುತ್ತದೆ. ನಮ್ಮ ಮುಂದಿನ ಜೀವನಕ್ಕಾಗಿ ನಾವು ಹಣವನ್ನು ಉಳಿತಾಯ ಮಾಡಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.
ಮುಂದಿನ ಜೀವನಕ್ಕಾಗಿ ಹಣಕಾಸು ಸುರಕ್ಷತೆಯನ್ನು ಈಗಲೇ ಮಾಡಿಕೊಳ್ಳಬೇಕಾದರೆ ನಾವು ಜೀವನದಲ್ಲಿ ಎಲ್ಲ ಆಸೆಗಳನ್ನು ತೊರೆಯಬೇಕು ಅಂದುಕೊಳ್ಳುವವರು ಇದ್ದಾರೆ. ಆದರೆ ಅದು ಸತ್ಯವಲ್ಲ. ನೀವು 20ನೇ ವಯಸ್ಸಿನಲ್ಲಿ ಕೈಗೊಳ್ಳುವ ಕೆಲವು ನಿರ್ಧಾರ ಕ್ರಮಗಳಿಂದಾಗಿ 30 ವರ್ಷ ತುಂಬುವುದರೊಳಗೆ ಫಿನಾನ್ಶಿಯಲ್ ಸೆಕ್ಯೂರ್ ಆಗಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ಅಲ್ಪಾವಧಿ ಗುರಿಯ ಬಗ್ಗೆ ತಿಳಿದಿರಿ
ಆರ್ಥಿಕ ಬಿಕ್ಕಟ್ಟು, ಉದ್ಯೋಗ ನಷ್ಟ ಸೇರಿದಂತೆ ನೀವು 20 ವರ್ಷದವರಾಗಿರುವಾಗ ಮತ್ತು 30 ವರ್ಷಕ್ಕೆ ತಲುಪುವಾಗ ಹಲವಾರು ಅಂಶಗಳು ಬದಲಾವಣೆಯಾಗುತ್ತದೆ. ಆದ್ದರಿಂದಾಗಿ ನೀವು ಎಂದಿಗೂ ದೀರ್ಘಾವಧಿ ಗುರಿಯನ್ನು ಹೊಂದುವುದು ಸುರಕ್ಷಿತವಲ್ಲ. ಯುವಕರು ಅಲ್ಪಾವಧಿ ಗುರಿಯನ್ನು ಹೊಂದಿದ್ದರೆ ಉತ್ತಮ. ಅಲ್ಪಾವಧಿ ಹೂಡಿಕೆಯಿಂದಾಗಿ ನಿಮಗೆ ಹೆಚ್ಚಿನ ರಿಸ್ಕ್ ಇರುವುದಿಲ್ಲ. ಸಾಲವನ್ನು ಪಡೆಯುವುದಾದರೂ ಅಲ್ಪಾವಧಿಯಲ್ಲಿಯೇ ಮರುಪಾವತಿ ಮಾಡುವ ನಿರ್ಧಾರ, ಆಯ್ಕೆ ಮಾಡಿಕೊಳ್ಳಿ. ಹೊರೆಯಾದರೂ, ಸಾಲ ಬೇಗ ಸಂದಾಯವಾಗುತ್ತದೆ. ಸಾಲವನ್ನು ಎಂದಿಗೂ 6ರಿಂದ ಒಂದು ವರ್ಷದ ಒಳಗೆ ಪಾವತಿಸಿ, ಅದಕ್ಕೂ ಅಧಿಕ ಸಮಯ ತೆಗೆದುಕೊಳ್ಳಿದಿರಿ.
ಹೂಡಿಕೆಯನ್ನು ಹೆಚ್ಚಳ ಮಾಡಿ
ಎಂದಿಗೂ ನಾವು 20ನೇ ವಯಸ್ಸು ಕಳೆಯುತ್ತಿದ್ದಂತೆ ಹೂಡಿಕೆಯನ್ನು ಮಾಡಿ ಹಣ ಉಳಿತಾಯ ಮಾಡುವುದು ಮುಖ್ಯವಾಗುತ್ತದೆ. ಹೂಡಿಕೆಯ ಸುರಕ್ಷತೆಯನ್ನು ಕೂಡಾ ನೋಡಿಕೊಳ್ಳಿ. ನೀವು ಒಂದೇ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸದಿದ್ದರೆ, ಬೇರೆ ಯೋಜನೆಯಲ್ಲೂ ಹೂಡಿಕೆ ಮಾಡಿ. ಅದಕ್ಕಾಗಿ ಫಂಡ್‌ಗಳು ಉತ್ತಮ ಆಯ್ಕೆ. ಫಂಡ್‌ಗಳಿಂದಾಗಿ ನಾವು ಉತ್ತಮ ರಿಟರ್ನ್ ಪಡೆಯಲು ಸಾಧ್ಯವಾಗುತ್ತದೆ. ಪ್ರತಿ ತಿಂಗಳು ನೀವು ಮಾಡಿದ ಹೂಡಿಕೆಯು ಕೊನೆಗೆ ನಿಮ್ಮ ಕಷ್ಟಕಾಲಕ್ಕೆ ಸಹಾಯವಾಗಲಿದೆ.
ಎಲ್ಲ ವೆಚ್ಚಗಳನ್ನು ಲೆಕ್ಕಹಾಕಿ, ಯೋಚಿಸಿ
ನಾವು ಸಾಮಾನ್ಯವಾಗಿ ಎಷ್ಟು ವೆಚ್ಚವನ್ನು ಮಾಡಿದ್ದೇವೆ ಎಂಬ ಬಗ್ಗೆ ಲೆಕ್ಕಾಚಾರವನ್ನೇ ಮಾಡುವುದಿಲ್ಲ. ಇದು ನಾವು ಒಂದು ಚೌಕಟ್ಟು ಮೀರಿ ಖರ್ಚು ಮಾಡಿ ಸಾಲದ ಸುಳಿಗೆ ಸಿಲುಕುವಂತೆ ಮಾಡುತ್ತದೆ. ಇನ್ನು ನಾವು ನಿವೃತ್ತಿ ಸಂದರ್ಭದಲ್ಲಿನ ವೆಚ್ಚದ ವಿಚಾರಕ್ಕೆ ಬಂದಾಗ ಸಾಮಾನ್ಯವಾಗಿ ನಾವು ದೀರ್ಘಾವಧಿಯ ಖರ್ಚನ್ನು ಕೂಡಾ ವೆಚ್ಚದಲ್ಲಿ ಸೇರ್ಪಡೆ ಮಾಡುವುದಿಲ್ಲ. ಆದಾಯ ತೆರಿಗೆ, ಆರೋಗ್ಯ ಚಿಕಿತ್ಸೆ ಕೂಡಾ ವೆಚ್ಚ ಹೌದು. ಆದ್ದರಿಂದಾಗಿ ನಿವೃತ್ತಿ ಸಂದರ್ಭದ ಲೆಕ್ಕಾಚಾರವನ್ನು ಈಗಲೇ ಮಾಡಿಕೊಂಡರೆ ನೀವು ಎಷ್ಟು ಹಣ ಉಳಿತಾಯ ಮಾಡಬೇಕು ಎಂಬುವುದು ತಿಳಿಯುತ್ತದೆ. ಇದು ನಿಮ್ಮ ಬಜೆಟ್ ಲೆಕ್ಕಾಚಾರಕ್ಕೆ ಸಹಾಯವಾಗಲಿದೆ.
ನಿಮ್ಮ ಲೆಕ್ಕಾಚಾರವನ್ನು ಮೌಲ್ಯೀಕರಿಸುವುದು
ನೀವು ಒಂದು ಹಣಕಾಸು ಲೆಕ್ಕಾಚಾರವನ್ನು ಮಾಡುವಾಗ ಅದಕ್ಕಾಗಿ ಒಂದು ಮಾನದಂಡವನ್ನು ಇಟ್ಟುಕೊಳ್ಳಬೇಕಾಗುತ್ತದೆ. ಲೆಕ್ಕಾಚಾರ ಮಾಡುವಾಗ ಎಂದಿಗೂ ಕೂಡಾ ನಿಮ್ಮ ಪ್ರಸ್ತುತ ಖರ್ಚು, ಭವಿಷ್ಯದ ಖರ್ಚು, ಉಳಿತಾಯ ಎಲ್ಲವನ್ನು ಪರಿಗಣನೆ ಮಾಡಬೇಕಾಗುತ್ತದೆ. ಹಾಗೆಯೇ ಮಾಸಿಕ ಬಜೆಟ್ ಅನ್ನು ಮಾಡಬೇಕಾಗುತ್ತದೆ. ಇದರಿಂದಾಗಿ ಹಣಕಾಸು ಬೇಡಿಕೆ, ವೆಚ್ಚ ಮತ್ತು ಅಪಾಯಗಳ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ.


Click it and Unblock the Notifications