ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಬ್ಯಾಂಕುಗಳಲ್ಲಿ ಬಡ್ಡಿದರಗಳು ತೀವ್ರ ಕುಸಿತ ದಾಖಲಿಸಿವೆ. ಪ್ರಮುಖವಾಗಿ ಸರ್ಕಾರಿ ಮತ್ತು ಖಾಸಗಿಯ ಬಹುತೇಕ ಬ್ಯಾಂಕುಗಳು ವಾರ್ಷಿಕ ಬಡ್ಡಿದರವನ್ನು ಇಳಿಕೆ ಮಾಡಿವೆ. ಇಂತಹ ಸಂದರ್ಭದಲ್ಲಿ ಎಲ್ಲಿ ಹೆಚ್ಚು ಬಡ್ಡಿ ಸಿಗಬಹುದು ಎಂದು ಹುಡುಕುತ್ತಿದ್ದವರಿಗೆ ನಾವು ಮಾಹಿತಿ ನೀಡಲಿದ್ದೇವೆ.
ನಿಮ್ಮ ಅನುಕೂಲತೆ ಮತ್ತು ಬಡ್ಡಿ ದರದ ಆಧಾರದ ಮೇಲೆ ನೀವು ಎಫ್‌ಡಿಯಲ್ಲಿ ಹಣವನ್ನು ಠೇವಣಿ ಮಾಡಬಹುದು. ಉಳಿತಾಯ ಖಾತೆಗೆ ಹೋಲಿಸಿದರೆ ನಿಮ್ಮ ಠೇವಣಿಯ ಮೇಲೆ ಹೆಚ್ಚಿನ ಬಡ್ಡಿದರವನ್ನು ಪಡೆಯಬಹುದು. ಬ್ಯಾಂಕುಗಳಲ್ಲದೆ, ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ), ಕಾರ್ಪೊರೇಟ್ ಕಂಪನಿಗಳು ಮತ್ತು ಸಣ್ಣ ಹಣಕಾಸು ಬ್ಯಾಂಕುಗಳು ಸಹ ಎಫ್‌ಡಿ ಆಯ್ಕೆಗಳನ್ನು ನೀಡುತ್ತವೆ.
ಮೂರು ವರ್ಷಗಳ ಅವಧಿಗೆ ಸಾಮಾನ್ಯ ನಾಗರಿಕರಿಗೆ ಮತ್ತು ಹಿರಿಯ ನಾಗರಿಕರಿಗೆ ಸಿಗಲಿರುವ ಐದು ಅತ್ಯುತ್ತಮ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳು ಯಾವುವು ಎಂಬುದನ್ನ ಈ ಕೆಳಗೆ ತಿಳಿಯಿರಿ
ಸಣ್ಣ ಹಣಕಾಸು ಬ್ಯಾಂಕುಗಳು
ಠೇವಣಿದಾರರು ಸಾಮಾನ್ಯವಾಗಿ ಸಾಮಾನ್ಯ ನಾಗರಿಕರು ಮತ್ತು ಹಿರಿಯ ನಾಗರಿಕರು ಸೇರಿದಂತೆ ಎರಡು ವಿಧಗಳನ್ನು ಹೊಂದಿರುತ್ತಾರೆ. ಈ ಸಮಯದಲ್ಲಿ, ದೊಡ್ಡ ಬ್ಯಾಂಕುಗಳಲ್ಲಿನ ಎಫ್‌ಡಿಗಳ ಮೇಲಿನ ಬಡ್ಡಿದರಗಳು ಉತ್ತಮವಾಗಿಲ್ಲ. ಆದರೆ ಕೆಲವು ಸಣ್ಣ ಬ್ಯಾಂಕುಗಳು ಇನ್ನೂ ಉತ್ತಮ ಬಡ್ಡಿದರಗಳನ್ನು ನೀಡುತ್ತಿವೆ.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪ್ರಸ್ತುತ 3 ವರ್ಷದ ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ಭರವಸೆ ನೀಡುತ್ತಿವೆ. 3 ವರ್ಷದ ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿರುವ ಟಾಪ್ 5 ಸಣ್ಣ ಹಣಕಾಸು ಬ್ಯಾಂಕುಗಳು ಯಾವುವು ಎಂಬುದನ್ನ ಮುಂದೆ ತಿಳಿಯಿರಿ
ಸಾಮಾನ್ಯ ಹಾಗೂ ಹಿರಿಯ ನಾಗರಿಕರಿಗೆ ನೀಡುವ ಬಡ್ಡಿದರಗಳು:
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ : 6.75 %, 7.25%
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: 6.50%, 7.00%
ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: 6.35%, 6.85%
ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್: 6.25%, 6.75%
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್: 6.25%, 6.50%
3 ವರ್ಷಗಳ ಅವಧಿಗೆ ಉತ್ತಮ ಬಡ್ಡಿ ನೀಡುವ ಖಾಸಗಿ ವಲಯದ ಬ್ಯಾಂಕುಗಳು
ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳಲ್ಲಿ, ಇಂಡಸ್ಇಂಡ್ ಮತ್ತು ಡಿಸಿಬಿ ಬ್ಯಾಂಕ್ ಮತ್ತು ಆರ್‌ಬಿಎಲ್‌ಲ್ ಬ್ಯಾಂಕ್ ಪ್ರಸ್ತುತ 3 ವರ್ಷಗಳ ನಿಶ್ಚಿತ ಠೇವಣಿಗಳ ಮೇಲೆ ಉತ್ತಮ ಬಡ್ಡಿದರಗಳನ್ನು ನೀಡುತ್ತಿವೆ. 3 ವರ್ಷದ ನಿಶ್ಚಿತ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರ ನೀಡುವ ಭರವಸೆ ನೀಡುವ ಟಾಪ್ 5 ಖಾಸಗಿ ವಲಯದ ಬ್ಯಾಂಕುಗಳು ಇಲ್ಲಿವೆ.
ಸಾಮಾನ್ಯ ಹಾಗೂ ಹಿರಿಯ ನಾಗರಿಕರಿಗೆ ನೀಡುವ ಬಡ್ಡಿದರಗಳು:
ಇಂಡಸ್‌ಇಂಡ್ ಬ್ಯಾಂಕ್: 6.50%, 7.00%
ಡಿಸಿಬಿ ಬ್ಯಾಂಕ್: 6.50%, 7.00%
ಆರ್‌ಬಿಎಲ್ ಬ್ಯಾಂಕ್: 6.10%, 6.60%
ಯೆಸ್ ಬ್ಯಾಂಕ್: 6.00%, 6.50%
ಕರೂರ್ ವೈಶ್ಯ ಬ್ಯಾಂಕ್: 5.50%, 6.00%
3 ವರ್ಷಗಳ ಅವಧಿಗೆ ಉತ್ತಮ ಬಡ್ಡಿ ನೀಡುವ ಸಾರ್ವಜನಿಕ ವಲಯದ ಬ್ಯಾಂಕುಗಳು:
3 ವರ್ಷಗಳ ನಿಶ್ಚಿತ ಠೇವಣಿಗಳ ಮೇಲೆ ಬಡ್ಡಿದರಗಳನ್ನು ನೀಡುವ ವಿಷಯದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕ್ ಸಾರ್ವಜನಿಕ ವಲಯದ ಉನ್ನತ ಬ್ಯಾಂಕುಗಳಲ್ಲಿ ಸೇರಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂಗಸಂಸ್ಥೆಯಾದ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಸಿ) 5 ಲಕ್ಷ ರೂ.ವರೆಗೆ ನಿಶ್ಚಿತ ಠೇವಣಿ ಹೂಡಿಕೆಗೆ ಖಾತರಿ ನೀಡುತ್ತದೆ. ಪ್ರಸ್ತುತ 3 ವರ್ಷದ ನಿಶ್ಚಿತ ಠೇವಣಿಗಳ ಮೇಲೆ ಹೆಚ್ಚಿನ ಲಾಭವನ್ನು ನೀಡುವ ಅಗ್ರ 5 ವಾಣಿಜ್ಯ ಬ್ಯಾಂಕುಗಳನ್ನು ಕೆಳಗೆ ತಿಳಿಸಲಾಗಿದೆ.
ಸಾಮಾನ್ಯ ಹಾಗೂ ಹಿರಿಯ ನಾಗರಿಕರಿಗೆ ನೀಡುವ ಬಡ್ಡಿದರಗಳು:
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: 5.50%, 6.00%
ಕೆನರಾ ಬ್ಯಾಂಕ್: 5.40%, 5.90%
ಆ್ಯಕ್ಸಿಸ್ ಬ್ಯಾಂಕ್: 5.40%, 5.90%
ಬ್ಯಾಂಕ್ ಆಫ್ ಇಂಡಿಯಾ: 5.15%, 5.65 %
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: 5.10%, 5.60%


Click it and Unblock the Notifications