Home Loan Eligibility: ಹೋಮ್ ಲೋನ್ ಪಡೆಯಲು ನಿಮ್ಮ ಅರ್ಹತೆ ಹೆಚ್ಚಿಸಲು ಪ್ರಮುಖ 5 ಸಲಹೆಗಳು

ನೀವು ಮನೆಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಿಮ್ಮ ಸ್ವಂತ ಜೇಬಿನಿಂದ ನೀವು ಎಷ್ಟು ಹಣವನ್ನು ಹಾಕುತ್ತೀರಿ ಮತ್ತು ನೀವು ಬ್ಯಾಂಕ್‌ನಿಂದ ಎಷ್ಟು ಸಾಲವನ್ನು ತೆಗೆದುಕೊಳ್ಳುತ್ತೀರಿ ಎಂಬುದನ್ನು ವಿಶ್ಲೇಷಿಸುವುದು ಅತೀ ಮುಖ್ಯವಾಗಿದೆ.

ಆಸ್ತಿಯನ್ನು ಖರೀದಿಸಲು ಬ್ಯಾಂಕ್ ನಿಮಗೆ ಎಷ್ಟು ಸಾಲ ನೀಡಬಹುದು ಎಂಬುದರ ಮೇಲೆ ಗರಿಷ್ಠ ಮಿತಿ ಇದೆ ಮತ್ತು ಇದು ಪ್ರತಿಯೊಬ್ಬರಿಗೂ ನಿಮ್ಮ ಅರ್ಹತೆಯ ಮೇಲೆ ಬದಲಾಗುತ್ತದೆ. ನಿಮ್ಮ ಹೋಮ್ ಲೋನ್ ಅರ್ಹತೆಯು ಕೆಲವು ಪ್ರಮುಖ ಅಂಶಗಳ ಮೇಲೆ ಅವಲಂಬಿತವಾಗಿದೆ ಮತ್ತು ಈ ಲೇಖನವು ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಿಸಲು 5 ಪ್ರಮುಖ ಸಲಹೆಗಳ ಕುರಿತು ತಿಳಿಸಿಕೊಡುತ್ತದೆ.

 ಹೋಮ್ ಲೋನ್ ಪಡೆಯಲು ನಿಮ್ಮ ಅರ್ಹತೆ ಹೆಚ್ಚಿಸಲು ಪ್ರಮುಖ 5 ಸಲಹೆಗಳು

1.ನಿಮ್ಮ ಸಿಬಿಲ್ ಸ್ಕೋರ್ ಅನ್ನು ಸುಧಾರಿಸಿ

ಸಿಬಿಲ್ (CIBIL) ಸ್ಕೋರ್ ಎನ್ನುವುದು ಮೂಲಭೂತವಾಗಿ ನಿಮ್ಮ ಕ್ರೆಡಿಟ್ ಇತಿಹಾಸವನ್ನು ಸೂಚಿಸುವ ಸ್ಕೋರ್ ಆಗಿದ್ದು, ನೀವು ಸಮಯಕ್ಕೆ ಸರಿಯಾಗಿ ನಿಮ್ಮ ಸಾಲಗಳನ್ನು ಮರುಪಾವತಿ ಮಾಡುವ ಸಾಧ್ಯತೆಯಿದೆ ಎಂಬುವುದರ ಸೂಚಕವಾಗಿದೆ. ಈ ಸ್ಕೋರ್ ಅಧಿಕವಾಗಿದ್ದರೆ ಅಂದರೆ, 750 ಕ್ಕಿಂತ ಹೆಚ್ಚು ಇದ್ದರೆ - ನೀವು ಉತ್ತಮ ಕ್ರೆಡಿಟ್ ಇತಿಹಾಸವನ್ನು ಹೊಂದಿರುವಿರಿ ಮತ್ತು ನಿಮ್ಮ ಸಾಲಗಳನ್ನು ಸಮಯಕ್ಕೆ ಪಾವತಿಸುವ ಸಾಧ್ಯತೆಯಿದೆ ಎಂದು ಇದು ಸೂಚಿಸುತ್ತದೆ.

ಆದಾಗ್ಯೂ, ಈ ಸ್ಕೋರ್ ಕಡಿಮೆಯಿದ್ದರೆ - ನಿಮ್ಮ ಸಾಲಗಳನ್ನು ಮರುಪಾವತಿಸಲು ನಿಮಗೆ ಸಾಧ್ಯವಾಗದಿರುವ ಹೆಚ್ಚಿನ ಸಂಭವನೀಯತೆ ಇದೆ ಎಂದರ್ಥ. ಬ್ಯಾಂಕುಗಳಿಂದ, ಹಣದ ಸುರಕ್ಷತೆಯು ಬಡ್ಡಿದರಗಳಷ್ಟೇ ಮುಖ್ಯವಾಗಿದೆ ಮತ್ತು ಆದ್ದರಿಂದ ಕಡಿಮೆ ಸಿವಿಲ್ ಸ್ಕೋರ್ ಹೊಂದಿರುವ ಜನರಿಗೆ ಹೆಚ್ಚಿನ ಸಾಲವನ್ನು ನೀಡಲು ಬ್ಯಾಂಕ್‌ಗಳು ಮುಂದೆ ಬರುವುದಿಲ್ಲ.

ಆದ್ದರಿಂದ, ಪ್ರತಿಯೊಬ್ಬ ವ್ಯಕ್ತಿಯು ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ನಿರ್ವಹಣೆ ಮಾಡುವುದು ಸೂಕ್ತವಾಗಿದೆ. ಯಾವಾಗಲೂ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಇಎಂಐಗಳನ್ನು ನಿಗದಿತ ದಿನಾಂಕದಂದು ಅಥವಾ ಮೊದಲು ಮತ್ತು ಪೂರ್ಣವಾಗಿ ಪಾವತಿಸಿ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಬಹುದು.

ಪ್ರತಿ ಅಪ್ಲಿಕೇಶನ್ ನಿಮ್ಮ ಸ್ಕೋರ್ ಅನ್ನು ಕಡಿಮೆ ಮಾಡುವ ಹೊಸ ಕ್ರೆಡಿಟ್ ಸ್ಕೋರ್ ಪರಿಶೀಲನೆಗೆ ಕಾರಣವಾಗುವುದರಿಂದ ಒಂದೇ ಬಾರಿಗೆ ಹಲವಾರು ಕ್ರೆಡಿಟ್ ಉತ್ಪನ್ನಗಳಿಗೆ ಅರ್ಜಿ ಸಲ್ಲಿಸಬೇಡಿ.
ನಿಮ್ಮ ಕ್ರೆಡಿಟ್ ಕಾರ್ಡ್ ಖರ್ಚು ಮಿತಿಯ ಸುಮಾರು 20-30% ನಷ್ಟು ಕಡಿಮೆ ಕ್ರೆಡಿಟ್ ಬಳಕೆಯ ಅನುಪಾತವನ್ನು ಇರಿಸಿಕೊಳ್ಳಲು ಪ್ರಯತ್ನಿಸಿ.

2. ದೀರ್ಘಾವಧಿಯ ಗೃಹ ಸಾಲಗಳನ್ನು ಆಯ್ಕೆಮಾಡಿ

ನೀವು ಪಾವತಿಸಬೇಕಾದ ಇಎಂಐ ಅನ್ನು ನಿರ್ಧರಿಸುವ ಪ್ರಮುಖ ಅಂಶವೆಂದರೆ ನಿಮ್ಮ ಹೋಮ್ ಲೋನ್‌ನ ಅವಧಿ. ದೀರ್ಘಾವಧಿಯು, ಕಡಿಮೆ ಇಎಂಯ ಪಾವತಿಸಬೇಕಾಗುತ್ತದೆ ಮತ್ತು ಪಾವತಿಸಬೇಕಾದ ಇಎಂಐ ಕಡಿಮೆ ಆಗಿರುವುದರಿಂದಾಗಿ, ಸಾಲವನ್ನು ಮರುಪಾವತಿ ಮಾಡುವುದು ನಿಮಗೆ ಸುಲಭವಾಗುತ್ತದೆ.

ನೀವು ಸಾಲವನ್ನು ಮರುಪಾವತಿ ಮಾಡುವುದು ಎಷ್ಟು ಸುಲಭವೋ, ಸಾಲದಾತನು ಬಾಕಿ ಇರುವ ಇಎಂಐ ಅನ್ನು ಮರುಪಡೆಯುವ ಸಂಭವನೀಯತೆ ಹೆಚ್ಚಾಗಿರುತ್ತದೆ. ಆದ್ದರಿಂದ, ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಿಸಲು ನೀವು ಬಯಸಿದರೆ ದೀರ್ಘಾವಧಿಯ ಹೋಮ್ ಲೋನ್‌ಗಳನ್ನು ಆಯ್ಕೆ ಮಾಡಲು ಪ್ರಯತ್ನಿಸಿ.

3. ಜಂಟಿ ಗೃಹ ಸಾಲಗಳನ್ನು ತೆಗೆದುಕೊಳ್ಳಿ

ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ಉತ್ತಮ ಮಾರ್ಗವೆಂದರೆ ಸಂಗಾತಿ, ಮಗ ಅಥವಾ ಪೋಷಕರಂತಹ ಕುಟುಂಬದ ಸದಸ್ಯರೊಂದಿಗೆ ಜಂಟಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದು. ಜಂಟಿ ಗೃಹ ಸಾಲದ ಸಂದರ್ಭದಲ್ಲಿ, ಸಾಲದಾತರು ಇತರ ಸಹ-ಅರ್ಜಿದಾರರ ಆದಾಯವನ್ನು ಪರಿಗಣಿಸುತ್ತಾರೆ ಮತ್ತು ಇದು ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ.

4. ಕಡಿಮೆ ಅವಧಿಯಲ್ಲಿ ಕೊನೆಗೊಳ್ಳಲಿರುವ ಇಎಂಐಗಳನ್ನು ಮರುಪಾವತಿಸಿ

ಹೋಮ್ ಲೋನ್‌ಗಳು 10/20 ವರ್ಷಗಳ ದೊಡ್ಡ ಅವಧಿಯನ್ನು ಹೊಂದಿರುವ ಸಾಲಗಳಾಗಿವೆ. ಆದಾಗ್ಯೂ, ವಾಹನ ಸಾಲ, ವೈಯಕ್ತಿಕ ಸಾಲ ಇತ್ಯಾದಿ 2/3 ವರ್ಷಗಳ ಸಾಲಗಳಿವೆ. ಹೋಮ್ ಲೋನ್‌ಗೆ ಅರ್ಜಿ ಸಲ್ಲಿಸುವ ಮೊದಲು ಅಂತಹ ಚಿಕ್ಕ ಅವಧಿಯ ಲೋನ್‌ಗಳನ್ನು ಪಾವತಿಸಲು ಪ್ರಯತ್ನಿಸಿ. ಏಕೆಂದರೆ ಇದನ್ನು ಮರುಪಾವತಿ ಮಾಡುವುದರಿಂದ ನಿಮ್ಮ ಮಾಸಿಕ ನಿವ್ವಳ ಉಳಿತಾಯ ಹೆಚ್ಚಾಗುತ್ತದೆ ಮತ್ತು ಆ ಮೂಲಕ ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ.

5. ಹೆಚ್ಚುವರಿ ಆದಾಯ ಮೂಲಗಳನ್ನು ಹುಡುಕಿ

ನೀವು ಬಾಡಿಗೆ ಅಥವಾ ವ್ಯಾಪಾರದಂತಹ ಹೆಚ್ಚುವರಿ ಆದಾಯದ ಮೂಲಗಳನ್ನು ಹೊಂದಿದ್ದರೆ - ಅದು ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಿಸಲು ಸಹ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಗೃಹ ಸಾಲವನ್ನು ಮಂಜೂರು ಮಾಡುವ ಮೊದಲು ಸಾಲದಾತರು ನಿಮ್ಮ ಮಾಸಿಕ ನಗದು ಹರಿವುಗಳನ್ನು ಪರಿಶೀಲಿಸುತ್ತಾರೆ ಮತ್ತು ಆದ್ದರಿಂದ ಹೆಚ್ಚಿನ ಮಾಸಿಕ ನಗದು ಹರಿವು ಆಗುವಂತೆ ನೋಡಿಕೊಳ್ಳಿ ಇದರಿಂದ ಹೆಚ್ಚಿನ ಸಾಲ ದೊರೆಯುತ್ತದೆ.

ಕೊನೆಗೊಂದು ಸಲಹೆ: ನಿಮ್ಮ ಗೃಹ ಖರೀದಿ ಬೆಲೆಗಿಂತ ಹೆಚ್ಚಿನ ಮೊತ್ತದ ಗೃಹ ಸಾಲವನ್ನು ಬ್ಯಾಂಕ್‌ಗಳು ಮಂಜೂರು ಮಾಡುವಂತಿಲ್ಲ. ಮತ್ತು ಅವರು ನಿಮ್ಮ ಖರೀದಿ ದಾಖಲೆಗಳ ಮೂಲಕ ಖರೀದಿ ಬೆಲೆಯನ್ನು ಪರಿಶೀಲಿಸುತ್ತಾರೆ. ಆದ್ದರಿಂದ, ನಿಮ್ಮ ಖರೀದಿ ಬೆಲೆಯನ್ನು ಒಪ್ಪಂದದಲ್ಲಿ ನಮೂದಿಸಲಾಗಿದೆಯೇ ಮತ್ತು ಆಸ್ತಿ ನೋಂದಣಿ ಸಮಯದಲ್ಲಿ ಸ್ಟಾಂಪ್ ಸುಂಕವನ್ನು ಸಹ ಪಾವತಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಹಲವಾರು ಪ್ರಕರಣಗಳಲ್ಲಿ ಗೃಹ ಖರೀದಿ ಬೆಲೆಯನ್ನು ಒಪ್ಪಂದದಲ್ಲಿ ನಮೂದಿಸದಿರುವುದು ಮತ್ತು ಸ್ಟ್ಯಾಂಪ್ ಡ್ಯೂಟಿಯನ್ನು ಪಾವತಿಸದಿರುವುದರಿಂದಾಗಿ ಕಡಿಮೆ ಗೃಹ ಸಾಲ ಮಂಜೂರು ಮಾಡಬೇಕಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+