ಕಷ್ಟಪಟ್ಟು ದುಡಿದ ಹಣವನ್ನು ಸುರಕ್ಷಿತವಾಗಿಡುವುದರ ಜೊತೆಗೆ ಉತ್ತಮ ರಿಟರ್ನ್ಸ್ ಪಡೆಯುವ ಉತ್ತಮ ಆಯ್ಕೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಪ್ರಮುಖವಾಗಿದೆ. ಹೀಗಾಗಿಯೇ ಯಾವ ಬ್ಯಾಂಕ್‌ನಲ್ಲಿ ಎಫ್‌ಡಿ ಇಟ್ಟರೆ ಹೆಚ್ಚು ಬಡ್ಡಿ ಸಿಗುತ್ತೆ ಎಂದು ಜನರು ಹುಡುಕುವುದು ಸಾಮಾನ್ಯವಾಗಿದೆ. ಏಕೆಂದರೆ ಉಳಿತಾಯ ಖಾತೆಗೆ ಹೋಲಿಸಿದರೆ ನಿಶ್ಚಿತ ಠೇವಣಿ (ಎಫ್‌ಡಿ) ಉತ್ತಮ ಹೂಡಿಕೆ ಆಯ್ಕೆಗಳನ್ನು ಹೊಂದಿದೆ.
ನಿಶ್ಚಿತ ಠೇವಣಿಯಲ್ಲಿ ಗ್ರಾಹಕರು ಎಷ್ಟು ಅವಧಿಗೆ ಠೇವಣಿ ಇಡುತ್ತಾರೆ ಎಂಬುದರ ಮೇಲೆ ಬಡ್ಡಿದರ ನಿರ್ಧಾರವಾಗುತ್ತದೆ. ನಿಗದಿತ ಅವಧಿಗೆ ಠೇವಣಿ ಇರಿಸಿದ ಹಣದ ಮೇಲೆ ಬಡ್ಡಿ ಪಡೆಯುತ್ತಾರೆ. ನೀವು ಆಯ್ಕೆ ಮಾಡಿದ ಅವಧಿಗೆ ಅನುಗುಣವಾಗಿ ಈ ಬಡ್ಡಿದರ ಹೆಚ್ಚು ಅಥವಾ ಕಡಿಮೆ ಆಗಿರಬಹುದು. ಉಳಿದ ಬಡ್ಡಿದರಗಳನ್ನು ಬ್ಯಾಂಕ್ ಮತ್ತು ಠೇವಣಿದಾರರ ಆಧಾರದ ಮೇಲೆ ಸಹ ನಿರ್ಧರಿಸಬಹುದು.
ಪಿಕ್ಸೆಡ್ ಡೆಪಾಸಿಟ್ ಉತ್ತಮ ಹೂಡಿಕೆಯಾಗಿದೆ!
ಕಡಿಮೆ ಆದಾಯದಲ್ಲಿ ಬದುಕಬಲ್ಲ ಮತ್ತು ತಮ್ಮ ಹಣವನ್ನು ಸುರಕ್ಷಿತವಾಗಿಡಲು ಬಯಸುವವರಿಗೆ ಫಿಕ್ಸೆಡ್ ಡೆಪಾಸಿಟ್‌ಗಳು (ಎಫ್‌ಡಿ) ಉತ್ತಮ ಹೂಡಿಕೆಯ ಆಯ್ಕೆಯಾಗಿದೆ. ಅದಕ್ಕಾಗಿಯೇ ಎಫ್‌ಡಿ ಭಾರತದಲ್ಲಿ ಅತ್ಯಂತ ಸಾಮಾನ್ಯ ಹೂಡಿಕೆಯ ಆಯ್ಕೆಯಾಗಿದೆ. ಕೆಲವು ಎಫ್‌ಡಿಗಳ ಮೇಲೆ ತೆರಿಗೆ ಪ್ರಯೋಜನಗಳ ಜೊತೆಗೆ ನಿಶ್ಚಿತ ಅವಧಿಗೆ ನೀವು ಖಚಿತವಾದ ಆದಾಯವನ್ನು ಪಡೆಯಬಹುದು. ಹೀಗಾಗಿ 2ರಿಂದ 3 ವರ್ಷದ ಫಿಕ್ಸೆಡ್ ಡೆಪಾಸಿಟ್‌ಗೆ ಯಾವ ಬ್ಯಾಂಕ್‌ನಲ್ಲಿ ಉತ್ತಮ ಬಡ್ಡಿ ಸಿಗಲಿದೆ ಎಂಬುದನ್ನ ಮುಂದೆ ತಿಳಿಯಿರಿ
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2 ರಿಂದ 3 ವರ್ಷಗಳಲ್ಲಿ ಮೆಚ್ಯೂರ್ ಆಗುವ 2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲೆ ಸಾಮಾನ್ಯ ಜನರಿಗೆ 7.00 ಪ್ರತಿಶತ ಮತ್ತು ಹಿರಿಯ ವ್ಯಕ್ತಿಗಳಿಗೆ 7.30 ಪ್ರತಿಶತದಷ್ಟು ಹೆಚ್ಚಿನ ಬಡ್ಡಿ ದರವನ್ನು ನೀಡುತ್ತಿದೆ. ಬ್ಯಾಂಕ್‌ನ ಪ್ರಸ್ತುತ ಸ್ಥಿರ ಠೇವಣಿ ದರಗಳು ಇಲ್ಲಿವೆ, ಇದು ಸೆಪ್ಟೆಂಬರ್ 9, 2021 ರಿಂದ ಜಾರಿಗೆ ಬರುತ್ತದೆ.
ಸಾಮಾನ್ಯ ನಾಗರಿಕರಿಗೆ ಮತ್ತು ಹಿರಿಯ ನಾಗರಿಕರಿಗೆ ಎಫ್‌ಡಿ ಬಡ್ಡಿದರ
7 ದಿನಗಳಿಂದ 14 ದಿನಗಳು: 3.25% To 3.25%
15 ದಿನಗಳಿಂದ 45 ದಿನಗಳು: 3.25% To 3.25%
46 ದಿನಗಳಿಂದ 90 ದಿನಗಳು: 4.25% To 4.25%
91 ದಿನಗಳಿಂದ 6 ತಿಂಗಳು: 4.75% To 4.75%
6 ರಿಂದ 9 ತಿಂಗಳು: 5.25% To 5.25%
9 ತಿಂಗಳಿಂದ 1 ವರ್ಷ: 5.75% To 5,75%
1 ವರ್ಷದಿಂದ 1.6 ವರ್ಷ: 6.5% To 6.75%
1.6 ವರ್ಷದಿಂದ 2 ವರ್ಷ: 6.5% To 6.75%
2 ರಿಂದ 3 ವರ್ಷ: 6.25% To 6.5%
3 ವರ್ಷಗಳು: 7.00% To 7.30%
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಜನ ಸಣ್ಣ ಹಣಕಾಸು ಬ್ಯಾಂಕ್, ಸಾಮಾನ್ಯ ಜನರಿಗೆ ಶೇಕಡಾ 6.50 ಮತ್ತು ಹಿರಿಯ ನಾಗರಿಕರಿಗೆ 7.00 ಪ್ರತಿಶತದಷ್ಟು ಬಡ್ಡಿದರವನ್ನು 2 ರಿಂದ 3 ವರ್ಷಗಳಲ್ಲಿ ಪಕ್ವವಾಗುವ ಠೇವಣಿಗಳಿಗೆ ನೀಡುತ್ತಿದೆ. ಇವುಗಳು 07.05.2021 ರಿಂದ ಅನ್ವಯವಾಗುತ್ತವೆ.
ಸಾಮಾನ್ಯ ನಾಗರಿಕರಿಗೆ ಮತ್ತು ಹಿರಿಯ ನಾಗರಿಕರಿಗೆ ಎಫ್‌ಡಿ ಬಡ್ಡಿದರ
7 ದಿನಗಳಿಂದ 14 ದಿನಗಳು: 2.5% To 2.5%
15 ದಿನಗಳಿಂದ 45 ದಿನಗಳು: 3.00% To 3.5%
61 ದಿನಗಳಿಂದ 90 ದಿನಗಳು: 3.75% To 4.25%
91 ದಿನಗಳಿಂದ 180 ದಿನಗಳು: 4.5% To 5.00%
6 ರಿಂದ 9 ತಿಂಗಳು: 5.25% To 5.25%
181 ರಿಂದ 364 ದಿನಗಳು: 5.5% To 6.00%
9 ತಿಂಗಳಿಂದ 1 ವರ್ಷ: 5.75% To 5,75%
1 ವರ್ಷ : 6.25% To 6.75%
1 ರಿಂದ 2 ವರ್ಷ: 6.25% To 6.75%
2 ರಿಂದ 3 ವರ್ಷ: 6.5% To 7.00%
ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪ್ರಸ್ತುತ 730 ದಿನಗಳಿಂದ 1095 ದಿನಗಳಿಗಿಂತ ಕಡಿಮೆ ಅವಧಿಯ ಠೇವಣಿಯ ಮೇಲೆ ಸಾಮಾನ್ಯ ಗ್ರಾಹಕರಿಗೆ 6.75 ಪ್ರತಿಶತ ಮತ್ತು ಹಿರಿಯ ಜನರಿಗೆ 7.25 ಪ್ರತಿಶತ ಬಡ್ಡಿದರವನ್ನು ನೀಡುತ್ತಿದೆ. ಇದು ಏಪ್ರಿಲ್ 19, 2021 ರಿಂದ ಅನ್ವಯವಾಗುತ್ತದೆ.
ಸಾಮಾನ್ಯ ನಾಗರಿಕರಿಗೆ ಮತ್ತು ಹಿರಿಯ ನಾಗರಿಕರಿಗೆ ಎಫ್‌ಡಿ ಬಡ್ಡಿದರ
7 ದಿನಗಳಿಂದ 14 ದಿನಗಳು: 3% To 3.5%
15 ದಿನಗಳಿಂದ 29 ದಿನಗಳು: 3% To 3.5%
30 ದಿನಗಳಿಂದ 45 ದಿನಗಳು: 3% To 3.5%
46 ದಿನಗಳಿಂದ 90 ದಿನಗಳು: 3.5% To 4.00%
6 ರಿಂದ 9 ತಿಂಗಳು: 5.25% To 5.25%
91 ರಿಂದ 180 ದಿನಗಳು: 3.5% To 4.00%
181 ದಿನಗಳಿಂದ 365 ದಿನಗಳು: 5% To 5.5%
366 ದಿನಗಳಿಂದ 729 ದಿನಗಳು 6.75% To 7.25%
730 ದಿನಗಳಿಂದ 1095 ದಿನಗಳು 6.75% To 7.25%
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
7 ದಿನಗಳಿಂದ 29 ದಿನಗಳು: 2.90% To 3.40%
30 ದಿನಗಳಿಂದ 89 ದಿನಗಳು: 3.50% To 4.00%
90 ದಿನಗಳಿಂದ 179 ದಿನಗಳು: 4.25% To 4.75%
180 ದಿನಗಳಿಂದ 364 ತಿಂಗಳು: 4.75% To 5.75%
1 ವರ್ಷದಿಂದ 2 ವರ್ಷಗಳು: 6.00% To 6.50%
2 ವರ್ಷದಿಂದ 3 ವರ್ಷಗಳು: 6.50% To 7.00%
ಆರ್‌ಬಿಎಲ್ ಬ್ಯಾಂಕ್
7 ದಿನಗಳಿಂದ 14 ದಿನಗಳು: 3.25% To 3.75%
15 ದಿನಗಳಿಂದ 45 ದಿನಗಳು: 3.75% To 4.20%
46 ದಿನಗಳಿಂದ 90 ದಿನಗಳು: 4.00% To 4.50%
91 ದಿನಗಳಿಂದ 180 ತಿಂಗಳು: 4.50% To 5.00%
181 ದಿನಗಳಿಂದ 240 ದಿನಗಳು: 5.00% To 5.5%
241 ದಿನಗಳಿಂದ 364 ದಿನಗಳು: 5.25% To 5.75%
12 ತಿಂಗಳಿಂದ 24 ತಿಂಗಳು: 6.00% To 6.50%
24 ತಿಂಗಳಿಂದ 36 ತಿಂಗಳು: 6.00% To 6.50%
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications