For Quick Alerts
ALLOW NOTIFICATIONS  
For Daily Alerts

ಸದ್ಯ ಯಾವ ಬ್ಯಾಂಕ್‌ನಲ್ಲಿ ಎಫ್‌ಡಿ ಬಡ್ಡಿದರ ಹೆಚ್ಚಿದೆ? ಲೇಟೆಸ್ಟ್‌ ಮಾಹಿತಿ ಇಲ್ಲಿದೆ

|

ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ(ಎಫ್‌ಡಿ) ಬಡ್ಡಿದರಗಳು ಪರಿಷ್ಕೃತಗೊಂಡಿವೆ. ಹೀಗಿರುವಾರ ಯಾವ ಬ್ಯಾಂಕ್‌ನಲ್ಲಿ ಎಫ್‌ಡಿ ಇಟ್ಟರೆ ಹೆಚ್ಚು ಬಡ್ಡಿ ಸಿಗುತ್ತೆ ಎಂದು ಹುಡುಕುತ್ತಿದ್ದವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಮಾನ್ಯವಾಗಿ ಹೂಡಿಕೆದಾರರಿಗೆ ತಮ್ಮ ಹಣವನ್ನು ಎಫ್‌ಡಿಯಿಡದಲು ಏಳು ದಿನಗಳಿಂದ ಹತ್ತು ವರ್ಷಗಳವರೆಗಿನ ಆಯ್ಕೆಯನ್ನು ನೀಡುತ್ತವೆ. ಈ ಅವಧಿ ಮುಕ್ತಾಯದ ಬಳಿಕ ಅಸಲು ಮತ್ತು ಬಡ್ಡಿ ಮೊತ್ತದೊಂದಿಗೆ ಬ್ಯಾಂಕ್‌ ನಿಮಗೆ ಹಣವನ್ನು ಹಿಂದಿರುಗಿಸುತ್ತದೆ. ಬೇಕಾದರೆ ಮತ್ತೆ ಎಫ್‌ಡಿಯನ್ನು ನವೀಕರಿಸುವ ಮೂಲಕ ಮುಂದುವರಿಸಬಹುದು.

ಬ್ಯಾಂಕುಗಳಲ್ಲದೆ, ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ), ಕಾರ್ಪೊರೇಟ್ ಕಂಪನಿಗಳು ಮತ್ತು ಸಣ್ಣ ಹಣಕಾಸು ಬ್ಯಾಂಕುಗಳು ಸಹ ಎಫ್‌ಡಿ ಆಯ್ಕೆಗಳನ್ನು ನೀಡುತ್ತವೆ. ನಿಮ್ಮ ಅನುಕೂಲತೆ ಮತ್ತು ಬಡ್ಡಿ ದರದ ಆಧಾರದ ಮೇಲೆ ನೀವು ಎಫ್‌ಡಿಯಲ್ಲಿ ಹಣವನ್ನು ಠೇವಣಿ ಮಾಡಬಹುದು. ಉಳಿತಾಯ ಖಾತೆಗೆ ಹೋಲಿಸಿದರೆ ನಿಮ್ಮ ಠೇವಣಿಯ ಮೇಲೆ ಹೆಚ್ಚಿನ ಬಡ್ಡಿದರವನ್ನು ಪಡೆಯಬಹುದು. ಈ ಸಮಯದಲ್ಲಿ, ಎಸ್‌ಬಿಐ ಮತ್ತು ಐಸಿಐಸಿಐ ಸೇರಿದಂತೆ ಎಲ್ಲಾ ದೊಡ್ಡ ಬ್ಯಾಂಕ್‌ಗಳಲ್ಲಿ ಎಫ್‌ಡಿಗಳಲ್ಲಿ ಎಷ್ಟು ಬಡ್ಡಿದರವನ್ನು ನೀಡಲಾಗುತ್ತದೆ ಎಂಬ ಮಾಹಿತಿ ಈ ಕೆಳಗಿದೆ.

ಎಕ್ಸಿಸ್ ಬ್ಯಾಂಕ್ ಎಫ್‌ಡಿ ಬಡ್ಡಿದರ

ಎಕ್ಸಿಸ್ ಬ್ಯಾಂಕ್ ಎಫ್‌ಡಿ ಬಡ್ಡಿದರ

ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್‌ ನಿಶ್ಚಿತ ಠೇವಣಿ(ಎಫ್‌ಡಿ) ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಈ ಹೊಸ ಬಡ್ಡಿದರಗಳು ಮೇ. 06ರಿಂದ ಜಾರಿಗೆ ಬರಲಿದ್ದು, 7ರಿಂದ 10 ವರ್ಷಗಳ ಬಡ್ಡಿದರಗಳು ಬದಲಾವಣೆ ಆಗಿದೆ.

ಇತ್ತೀಚಿನ ಪರಿಷ್ಕರಣೆಯ ನಂತರ, ಆಕ್ಸಿಸ್ ಬ್ಯಾಂಕ್ 7 ದಿನಗಳು ಮತ್ತು 29 ದಿನಗಳ ನಡುವಿನ ಎಫ್‌ಡಿ ದರವನ್ನು 2.50%, 30 ದಿನಗಳು ಮತ್ತು 3 ತಿಂಗಳಿಗಿಂತ ಕಡಿಮೆ ಅವಧಿಯ ಎಫ್‌ಡಿಗಳಿಗೆ 3%, 3 ತಿಂಗಳ ನಡುವೆ ಎಫ್‌ಡಿಗಳಿಗೆ 3.5% ಬಡ್ಡಿದರವನ್ನು ನೀಡುತ್ತಿದೆ. ಆರು ತಿಂಗಳು ಮತ್ತು 11 ತಿಂಗಳಿಗಿಂತ ಕಡಿಮೆ 25 ದಿನಗಳವರೆಗೆ ಪ್ರಬುದ್ಧವಾಗಿರುವ ಎಫ್‌ಡಿಗಳಿಗೆ, ಆಕ್ಸಿಸ್ ಬ್ಯಾಂಕ್ 4.40% ಬಡ್ಡಿದರವನ್ನು ನೀಡುತ್ತದೆ.

 1 ವರ್ಷಕ್ಕಿಂತ ಹೆಚ್ಚಿನ ಅವಧಿಯ ಎಫ್‌ಡಿ ಬಡ್ಡಿದರ:
1 ವರ್ಷ - 1 ವರ್ಷ 5 ದಿನಗಳು 5.10%
1 ವರ್ಷ 5 ದಿನಗಳು - 1 ವರ್ಷ 11 ದಿನಗಳು 5.15%
1 ವರ್ಷ 11 ದಿನಗಳು - 1 ವರ್ಷ 25 ದಿನಗಳು 5.10%
1 ವರ್ಷ 25 ದಿನಗಳು - 13 ತಿಂಗಳು 5.10%
13 ತಿಂಗಳು - 14 ತಿಂಗಳು 5.10%
14 ತಿಂಗಳು - 15 ತಿಂಗಳು 5.10%
15 ತಿಂಗಳು - 16 ತಿಂಗಳು 5.20%
16 ತಿಂಗಳು - 17 ತಿಂಗಳು 5.20%
17 ತಿಂಗಳು - 18 ತಿಂಗಳು 5.20%
18 ತಿಂಗಳು - 2 ವರ್ಷ 5.25%
2 ವರ್ಷ - 30 ತಿಂಗಳು 5.40%
30 ತಿಂಗಳು -3 ವರ್ಷ 5.40%
3 ವರ್ಷ - 5 ವರ್ಷ 5.40%
5 ವರ್ಷ to 10 ವರ್ಷ 5.75%

ಹಿರಿಯ ನಾಗರಿಕರಿಗೆ ಎಕ್ಸಿಸ್‌ ಬ್ಯಾಂಕ್ ಎಫ್‌ಡಿ ಬಡ್ಡಿದರ

ಹಿರಿಯ ನಾಗರಿಕರಿಗೆ ಎಕ್ಸಿಸ್‌ ಬ್ಯಾಂಕ್ ಎಫ್‌ಡಿ ಬಡ್ಡಿದರ

ಹಿರಿಯ ನಾಗರಿಕರಿಗೆ ಎಲ್ಲಾ ಬ್ಯಾಂಕ್‌ಗಳಂತೆ ಎಕ್ಸಿಸ್‌ ಬ್ಯಾಂಕ್ ಹೆಚ್ಚುವರಿ ಬಡ್ಡಿದರವನ್ನು ನೀಡುತ್ತದೆ.

7-14 ದಿನಗಳಲ್ಲಿ 2.5%, 15-29 ದಿನಗಳಲ್ಲಿ 2.5%, 3 ತಿಂಗಳಿಗಿಂತ ಕಡಿಮೆ ಅವಧಿಗೆ 3% ಬಡ್ಡಿ, 3 ರಿಂದ 4, 4 ರಿಂದ 5 ಮತ್ತು 5 ರಿಂದ 6 ತಿಂಗಳುಗಳಲ್ಲಿ 3.5%, 6 ತಿಂಗಳಿಂದ 1 ವರ್ಷ ಕಡಿಮೆ 4.65%, 1 ವರ್ಷದಿಂದ 1 ವರ್ಷ 5 ದಿನಗಳವರೆಗೆ 5.75% ಮತ್ತು 1 ವರ್ಷ 5 ದಿನಗಳಿಂದ 1 ರವರೆಗೆ 5.8% ಬಡ್ಡಿ ನೀಡುತ್ತದೆ.

1 ವರ್ಷಕ್ಕಿಂತ ಹೆಚ್ಚಿನ ಅವಧಿಯ ಎಫ್‌ಡಿ ಬಡ್ಡಿದರ:
1 ವರ್ಷ 11 ದಿನಗಳಿಂದ 15 ತಿಂಗಳಿಗಿಂತ ಕಡಿಮೆ 5.75%, 15 ತಿಂಗಳಿಂದ 18 ತಿಂಗಳಿಗಿಂತ ಕಡಿಮೆ 5.85%, 18 ತಿಂಗಳಿಂದ 2 ವರ್ಷಕ್ಕಿಂತ ಕಡಿಮೆ 5.9 %, 2 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ 5.9% ಮತ್ತು 5 ರಿಂದ 10 ವರ್ಷಕ್ಕೆ 6.5 % ಬಡ್ಡಿ ನೀಡಲಾಗುತ್ತದೆ.

 

ಎಸ್‌ಬಿಐ ಎಫ್‌ಡಿ ಬಡ್ಡಿ ದರಗಳು

ಎಸ್‌ಬಿಐ ಎಫ್‌ಡಿ ಬಡ್ಡಿ ದರಗಳು

ದೇಶದ ಬಹುದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಸ್‌ಬಿಐ ಸಾಮಾನ್ಯ ನಾಗರಿಕರಿಗೆ 7 ದಿನದಿಂದ 45 ದಿನಗಳ ಠೇವಣಿಗೆ ಶೇ 2.9 ರಷ್ಟು ಬಡ್ಡಿ ನೀಡುತ್ತಿದೆ. ಅದೇ ಸಮಯದಲ್ಲಿ, 46 ದಿನಗಳಿಂದ 179 ದಿನಗಳವರೆಗೆ 3.9% ಬಡ್ಡಿಯನ್ನು ನೀಡುತ್ತದೆ. ಇದಲ್ಲದೆ 180 ದಿನಗಳಿಂದ 210 ದಿನಗಳ ಎಫ್‌ಡಿಗಳಿಗೆ 4.4% ಬಡ್ಡಿ ನೀಡಲಾಗುತ್ತಿದೆ. 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಎಫ್‌ಡಿಗೆ 4.40% ಬಡ್ಡಿ ನೀಡಲಾಗುತ್ತಿದೆ. 1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ ಇರುವ ಎಫ್‌ಡಿಗಳಿಗೆ 5% ಬಡ್ಡಿ ನೀಡಲಾಗುತ್ತಿದೆ.

ಇನ್ನು 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಗೆ 5.1% ಬಡ್ಡಿ ನೀಡಲಾಗುತ್ತಿದೆ. 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಯವರೆಗೆ 5.30% ಬಡ್ಡಿಯನ್ನು ನೀಡಲಾಗುತ್ತಿದೆ ಹಾಗೂ 5 ವರ್ಷದಿಂದ 10 ವರ್ಷಗಳವರೆಗಿನ ಎಫ್‌ಡಿಗಳಿಗೆ 5.40 ಬಡ್ಡಿ ನೀಡಲಾಗುತ್ತಿದೆ.

 

ಹಿರಿಯ ನಾಗರಿಕರಿಗೆ ಎಸ್‌ಬಿಐ ಬಡ್ಡಿದರ ಎಷ್ಟು?

ಹಿರಿಯ ನಾಗರಿಕರಿಗೆ ಎಸ್‌ಬಿಐ ಬಡ್ಡಿದರ ಎಷ್ಟು?

ಎಸ್‌ಬಿಐ ಹಿರಿಯ ನಾಗರಿಕರಿಗೆ 7 ದಿನಗಳಿಂದ 45 ದಿನಗಳವರೆಗೆ ಠೇವಣಿಗಳ ಮೇಲೆ 3.4% ಬಡ್ಡಿಯನ್ನು ಪಾವತಿಸುತ್ತಿದೆ. ಅದೇ ಸಮಯದಲ್ಲಿ, 46 ದಿನಗಳವರೆಗೆ 179 ದಿನಗಳವರೆಗೆ 4.4 ಪ್ರತಿಶತದಷ್ಟು ಬಡ್ಡಿಯನ್ನು ನೀಡುತ್ತದೆ. ಇದಲ್ಲದೆ, 180 ದಿನಗಳಿಂದ 210 ದಿನಗಳ ಎಫ್‌ಡಿಯಲ್ಲಿ 4.9% ಬಡ್ಡಿ ನೀಡಲಾಗುತ್ತಿದೆ. 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಎಫ್‌ಡಿಗಳಿಗೆ 4.9% ಬಡ್ಡಿ ನೀಡಲಾಗುತ್ತಿದೆ. 1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ ಇರುವ ಎಫ್‌ಡಿಗಳಿಗೆ 5.5% ಬಡ್ಡಿ ನೀಡಲಾಗುತ್ತಿದೆ.

2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಗೆ 5.6% , 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಗೆ 5.8% , 5 ವರ್ಷದಿಂದ 10 ವರ್ಷಗಳವರೆಗಿನ ಅವಧಿಗೆ 6.2% ಬಡ್ಡಿ ನೀಡಲಾಗುತ್ತಿದೆ.

 

ಎಚ್‌ಡಿಎಫ್‌ಸಿ ಬ್ಯಾಂಕ್

ಎಚ್‌ಡಿಎಫ್‌ಸಿ ಬ್ಯಾಂಕ್

ಎಚ್‌ಡಿಎಫ್‌ಸಿ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 7 ದಿನದಿಂದ 14 ದಿನಗಳ ಠೇವಣಿಗೆ 2.5% ಬಡ್ಡಿ ನೀಡುತ್ತಿದೆ. ಅದೇ ಸಮಯದಲ್ಲಿ, 15 ದಿನಗಳಿಂದ 29 ದಿನಗಳವರೆಗೆ 2.5% ಬಡ್ಡಿಯನ್ನು ನೀಡುತ್ತದೆ. ಇದಲ್ಲದೆ, 30-45 ದಿನಗಳಲ್ಲಿ 3%, 46-60 ದಿನಗಳಲ್ಲಿ 3%, 61-90 ದಿನಗಳಲ್ಲಿ 3% ಮತ್ತು 91 ರಿಂದ 6 ತಿಂಗಳುಗಳಲ್ಲಿ 3.5% ಬಡ್ಡಿಯನ್ನು ನೀಡಲಾಗುತ್ತಿದೆ.

ಇನ್ನು 6 ತಿಂಗಳಿಂದ 9 ತಿಂಗಳಿಗೆ 4.4% , 9 ತಿಂಗಳಿಂದ ಒಂದು ವರ್ಷಕ್ಕಿಂತ ಕಡಿಮೆ 4.4 %, 1 ವರ್ಷದಿಂದ 2 ವರ್ಷಕ್ಕೆ 4.90%, 2 ವರ್ಷದಿಂದ 3 ವರ್ಷ 5.15%, 3 ವರ್ಷದಿಂದ 5 ವರ್ಷಗಳು 5.30% ಮತ್ತು 5ರಿಂದ 10 ವರ್ಷಗಳವರೆಗೆ 5.50% ಬಡ್ಡಿ ನೀಡಲಾಗುತ್ತದೆ.

 ಹಿರಿಯ ನಾಗರಿಕರಿಗೆ ಬಡ್ಡಿ ದರ
ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ 7 ದಿನದಿಂದ 14 ದಿನಗಳ ಠೇವಣಿಗೆ 3% ಬಡ್ಡಿ ನೀಡುತ್ತಿದೆ. ಅದೇ ಸಮಯದಲ್ಲಿ, ಇದಲ್ಲದೆ, 30-45 ದಿನಗಳಲ್ಲಿ 3.5%, 46-60 ದಿನಗಳಲ್ಲಿ 3.5%, 61-90 ದಿನಗಳಲ್ಲಿ 3.5% ಮತ್ತು 91 ರಿಂದ 6 ತಿಂಗಳುಗಳಲ್ಲಿ 4% ಬಡ್ಡಿ ನೀಡಲಾಗುತ್ತಿದೆ. 6 ತಿಂಗಳಿಂದ 9 ತಿಂಗಳವರೆಗೆ 4.9%, 9 ತಿಂಗಳಿಂದ ಒಂದು ವರ್ಷಕ್ಕಿಂತ ಕಡಿಮೆ 4.9%, 1 ವರ್ಷದಿಂದ 2 ವರ್ಷಕ್ಕೆ 5.4%, 2 ವರ್ಷದಿಂದ 3 ವರ್ಷಗಳವರೆಗೆ 5.65%, 3 ವರ್ಷದಿಂದ 5 ವರ್ಷಗಳು 5.80%, 5 ರಿಂದ 10 ವರ್ಷಗಳು 6.25% ಬಡ್ಡಿದರ ನಿಗದಿಯಾಗಿದೆ.

ಐಡಿಎಫ್‌ಸಿ ಬ್ಯಾಂಕ್ ಎಫ್‌ಡಿ ದರಗಳು

ಐಡಿಎಫ್‌ಸಿ ಬ್ಯಾಂಕ್ ಎಫ್‌ಡಿ ದರಗಳು

ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 7 ದಿನದಿಂದ 14 ದಿನಗಳ ಠೇವಣಿಗೆ 2.75% ಬಡ್ಡಿ ನೀಡುತ್ತಿದೆ. ಅದೇ ಸಮಯದಲ್ಲಿ, 15 ದಿನಗಳಿಂದ 29 ದಿನಗಳವರೆಗೆ 3% ಬಡ್ಡಿಯನ್ನು ಪಾವತಿಸುತ್ತದೆ. ಇದಲ್ಲದೆ, 30 ರಿಂದ 45 ದಿನಗಳಲ್ಲಿ 3.50%, 46-90 ದಿನಗಳಲ್ಲಿ 4% ಮತ್ತು 91 ರಿಂದ 180 ದಿನಗಳಿಗೆ 4.5% ಬಡ್ಡಿ ನೀಡಲಾಗುತ್ತಿದೆ. 181 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಇರುವ ಎಫ್‌ಡಿಗಳಿಗೆ 5.25% ಬಡ್ಡಿ ನೀಡಲಾಗುತ್ತಿದೆ.

ಇನ್ನು 1 ರಿಂದ 2 ವರ್ಷದ ಎಫ್‌ಡಿಗಳ ಮೇಲೆ 5.5%, 1 ದಿನದಿಂದ 3 ವರ್ಷದವರೆಗಿನ ಎಫ್‌ಡಿಗಳ ಮೇಲೆ ಶೇ 5.75, 5 ರಿಂದ 10 ವರ್ಷಗಳ ಎಫ್‌ಡಿಗಳಿಗೆ 6% ಬಡ್ಡಿದರವಿದೆ.


ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಹಿರಿಯ ನಾಗರಿಕರಿಗೆ 7 ದಿನದಿಂದ 14 ದಿನಗಳ ಠೇವಣಿಗಳ ಮೇಲೆ 3.25% ಬಡ್ಡಿಯನ್ನು ಪಾವತಿಸುತ್ತಿದೆ. ಅದೇ ಸಮಯದಲ್ಲಿ, ಇದು 15 ದಿನಗಳಿಂದ 29 ದಿನಗಳವರೆಗೆ 3.5% ಬಡ್ಡಿಯನ್ನು ಪಾವತಿಸುತ್ತಿದೆ. ಇದರ ಹೊರತಾಗಿ, 181 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಎಫ್‌ಡಿ ಮೇಲೆ 5.75% ಬಡ್ಡಿ ನೀಡಲಾಗುತ್ತಿದೆ. 1 ರಿಂದ 2 ವರ್ಷದ ಎಫ್‌ಡಿಗಳ ಮೇಲೆ 6%, 2 ವರ್ಷ 1 ದಿನದಿಂದ 3 ವರ್ಷದವರೆಗಿನ ಎಫ್‌ಡಿಗಳ ಮೇಲೆ ಶೇ 6.25%, 3 ವರ್ಷದಿಂದ 1 ವರ್ಷದವರೆಗಿನ ಎಫ್‌ಡಿಗಳಲ್ಲಿ 6.50% ಮತ್ತು 5 ವರ್ಷದಿಂದ 1 ವರ್ಷದವರೆಗಿನ ಎಫ್‌ಡಿಗಳಿಗೆ 6.25% ಬಡ್ಡಿಯನ್ನು ಪಾವತಿಸಲಾಗುತ್ತಿದೆ.

 

ಕೋಟಕ್ ಮಹೀಂದ್ರಾ ಬ್ಯಾಂಕ್

ಕೋಟಕ್ ಮಹೀಂದ್ರಾ ಬ್ಯಾಂಕ್

ಕೋಟಕ್ ಮಹೀಂದ್ರಾ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 7 ದಿನದಿಂದ 14 ದಿನಗಳ ಠೇವಣಿಗೆ 2.50% ಬಡ್ಡಿ ನೀಡುತ್ತಿದೆ. ಅದೇ ಸಮಯದಲ್ಲಿ, 15 ದಿನಗಳಿಂದ 30 ದಿನಗಳವರೆಗೆ 2.50% ರಷ್ಟು ಬಡ್ಡಿಯನ್ನು ನೀಡುತ್ತದೆ. ಇದಲ್ಲದೆ, 31-45 ದಿನಗಳಲ್ಲಿ 2.75%, 46-90 ದಿನಗಳಲ್ಲಿ 2.75% ಮತ್ತು 91 ರಿಂದ 120 ದಿನಗಳಲ್ಲಿ 3 % ಬಡ್ಡಿ ನೀಡಲಾಗುತ್ತಿದೆ.


364 ದಿನಗಳಿಂದ 4.40%, 365 ದಿನಗಳಿಂದ 389 ದಿನಗಳಗೆ 4.5%, 390 ದಿನಗಳು ಮತ್ತು 391 ದಿನಗಳಲ್ಲಿ 3.25 % 2 ವರ್ಷಕ್ಕಿಂತ ಕಡಿಮೆ ಮತ್ತು 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಗೆ 5%, 3 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚು 4 ವರ್ಷಗಳಿಗಿಂತ ಕಡಿಮೆ 5.10%, 4 ವರ್ಷಗಳು ಅಥವಾ 5 ವರ್ಷಕ್ಕಿಂತ ಕಡಿಮೆ ಅವಧಿಗೆ 5.25% ಮತ್ತು 5 ರಿಂದ 10 ವರ್ಷಗಳಿಗೆ 5.30% ಬಡ್ಡಿದರವಿದೆ.

ಹಿರಿಯ ನಾಗರಿಕರಿಗೆ ಬಡ್ಡಿದರ:
ಕೋಟಕ್ ಮಹೀಂದ್ರಾ ಬ್ಯಾಂಕ್ ಹಿರಿಯ ನಾಗರಿಕರಿಗೆ 7 ದಿನದಿಂದ 14 ದಿನಗಳವರೆಗೆ ಠೇವಣಿ ಇಡಲು 2.50% 15 ದಿನಗಳಿಂದ 30 ದಿನಗಳವರೆಗೆ ಶೇಕಡಾ 2.50 ರಷ್ಟು ಬಡ್ಡಿಯನ್ನು ನೀಡುತ್ತದೆ. ಇದಲ್ಲದೆ, 121 ದಿನಗಳಿಂದ 179 ದಿನಗಳವರೆಗೆ 3.25% ಮತ್ತು 180 ದಿನಗಳಲ್ಲಿ 4.40% ಆಗಿದೆ.

2 ವರ್ಷಕ್ಕಿಂತ ಕಡಿಮೆ ಮತ್ತು 3 ವರ್ಷಗಳವರೆಗೆ 5.09%, 3 ವರ್ಷಗಳಲ್ಲಿ ಅಥವಾ 4 ವರ್ಷಕ್ಕಿಂತ ಕಡಿಮೆ 5.20%, 4 ವರ್ಷ ಅಥವಾ ಅದಕ್ಕಿಂತ ಹೆಚ್ಚು 5.35% ಮತ್ತು 5 ರಿಂದ 10 ರವರೆಗೆ 5.41 % ಬಡ್ಡಿದರ ನಿಗದಿಯಾಗಿದೆ.

 

ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 7 ದಿನದಿಂದ 14 ದಿನಗಳ ಠೇವಣಿಗಳ ಮೇಲೆ 2.50% ಬಡ್ಡಿಯನ್ನು ಪಾವತಿಸುತ್ತಿದೆ. ಅದೇ ಸಮಯದಲ್ಲಿ, 15 ದಿನಗಳಿಂದ 29 ದಿನಗಳವರೆಗೆ ಶೇಕಡಾ 2.50 ರಷ್ಟು ಬಡ್ಡಿಯನ್ನು ನೀಡುತ್ತದೆ. ಇದಲ್ಲದೆ, 30-45 ದಿನಗಳಲ್ಲಿ 3%, 46-60 ದಿನಗಳಲ್ಲಿ 3%, 61-90 ದಿನಗಳಲ್ಲಿ 3% ಮತ್ತು 91 ರಿಂದ 120 ದಿನಗಳಲ್ಲಿ 3.5% ಬಡ್ಡಿಯನ್ನು ನೀಡಲಾಗುತ್ತಿದೆ.

121 ದಿನಗಳಿಂದ 184 ದಿನಗಳವರೆಗೆ 3.50%, 1 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 4.4 % ಬಡ್ಡಿ 1 ವರ್ಷದಿಂದ 18 ತಿಂಗಳಿಗಿಂತ ಕಡಿಮೆ 4.90%, 18 ತಿಂಗಳಿಂದ 2 ವರ್ಷಕ್ಕಿಂತ ಕಡಿಮೆ 5%, 3 ವರ್ಷದಿಂದ 5 ವರ್ಷಗಳವರೆಗೆ 5%, 5 ವರ್ಷದಿಂದ ಒಂದು ದಿನದಿಂದ 10 ವರ್ಷಗಳ ಅವಧಿಗೆ 5.50% ಬಡ್ಡಿದರವಿದೆ.

ಹಿರಿಯ ನಾಗರಿಕರಿಗೆ ಬಡ್ಡಿದರ:
ಐಸಿಐಸಿಐ ಬ್ಯಾಂಕ್ ಹಿರಿಯ ನಾಗರಿಕರಿಗೆ 7 ದಿನದಿಂದ 14 ದಿನಗಳ ಠೇವಣಿಗೆ 3% ಬಡ್ಡಿ ನೀಡುತ್ತಿದೆ. ಇದಲ್ಲದೆ, 30-45 ದಿನಗಳಲ್ಲಿ 3.5%, 46-60 ದಿನಗಳಲ್ಲಿ 3.5%, 61-90 ದಿನಗಳಲ್ಲಿ 3.5% ಮತ್ತು 91 ರಿಂದ 120 ದಿನಗಳಲ್ಲಿ 4% ಬಡ್ಡಿ ನೀಡಲಾಗುತ್ತಿದೆ. 290 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಗೆ 4.9 ಶೇಕಡಾ ಬಡ್ಡಿದರವಿದ್ದು, 1 ವರ್ಷದಿಂದ 18 ತಿಂಗಳಿಗಿಂತ ಕಡಿಮೆ ಅವಧಿಗೆ 5.40%, 18 ತಿಂಗಳಿಂದ 2 ವರ್ಷಕ್ಕಿಂತ ಕಡಿಮೆ ಅವಧಿಗೆ 5.5%, 2 ವರ್ಷದಿಂದ 3 ವರ್ಷಗಳವರೆಗೆ 5.65%, 3 ವರ್ಷದಿಂದ 5 ವರ್ಷಕ್ಕೆ 5.85% 5 ವರ್ಷದಿಂದ 10 ವರ್ಷಗಳಲ್ಲಿ 6.30% ಬಡ್ಡಿ ನೀಡಲಾಗುವುದು.

 

English summary

Fixed Deposit Interest Rates: Check Latest Rates Here

Fixed deposit (FD) interest rates at major banks in the country have been revised. Here's the full information for those looking for which bank will get the most interest on FD
Story first published: Thursday, May 13, 2021, 16:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X