ಭಾರತದ ತೆರಿಗೆ ವ್ಯವಸ್ಥೆಯು ಅತೀ ಕಷ್ಟಕರವಾಗಿದೆ. ಭಾರತದಂತಹ ದೇಶದಲ್ಲಿ ಸರ್ಕಾರವು ಯೋಜನೆಗಳನ್ನು ಜಾರಿ ಮಾಡಲು ತೆರಿಗೆ ಅತೀ ಮುಖ್ಯವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಭಾರತ ಅತೀ ಅಧಿಕ ಜನರು ಇರುವ ದೇಶವಾಗಿರುವಾಗ ಜನರು ಪಾವತಿಸುವ ತೆರಿಗೆ ಅತೀ ಮುಖ್ಯವಾಗಿದೆ. ಸರ್ಕಾರದ ಬೊಕ್ಕಸೆಗೆ ಬರುವ ಮೊತ್ತದಲ್ಲಿ ಹೆಚ್ಚಿನ ಪಾಲನ್ನು ತೆರಿಗೆ ನೀಡುತ್ತದೆ. ಸರ್ಕಾರವು ಆದಾಯ ತೆರಿಗೆ, ಸೇಲ್ಸ್ ತೆರಿಗೆ, ಆಸ್ತಿ ತೆರಿಗೆ ಮೊದಲಾದವುಗಳಿಂದ ತೆರಿಗೆಯನ್ನು ಸಂಗ್ರಹ ಮಾಡುತ್ತದೆ.
ಭಾರತದಲ್ಲಿ ಎಫ್‌ಡಿ ಮೇಲೆ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಹಲವಾರು ಮಂದಿ ಅಂದುಕೊಂಡಿದ್ದಾರೆ. ಆದರೆ ಎಫ್‌ಡಿಯಿಂದ 40,000ಕ್ಕಿಂತ ಅಧಿಕ ಬಡ್ಡಿದರ ಪಡೆಯುತ್ತಿದ್ದರೆ, ಹಿರಿಯ ನಾಗರಿಕರನ್ನು ಹೊರತುಪಡಿಸಿ ಉಳಿದವರಿಗೆ ತೆರಿಗೆಯನ್ನು ವಿಧಿಸಲಾಗುತ್ತದೆ. 1961 ರ ಆದಾಯ ತೆರಿಗೆ ಕಾಯಿದೆಯು ನಿರ್ದಿಷ್ಟ ಸೇವೆಗಳಿಗೆ ಮಾಡಿದ ಯಾವುದೇ ಪಾವತಿಗಳಿಂದ ಮೂಲದಲ್ಲಿ (ಟಿಡಿಎಸ್) ಕಡಿತಗೊಳಿಸಲಾದ ತೆರಿಗೆಯನ್ನು ಕೆಲವು ಜನರು ಅಥವಾ ಸಂಸ್ಥೆಗಳು ತಡೆಹಿಡಿಯಬೇಕು ಎಂದು ಹೇಳುತ್ತದೆ. ಬಾಡಿಗೆ, ವೃತ್ತಿಪರ ವೆಚ್ಚಗಳು, ಕಾಂಟ್ರಾಕ್ಟ್, ಕಮಿಷನ್ ಸೇವೆಗಳು ಅವುಗಳಲ್ಲಿ ಸೇರಿವೆ.

ಎಷ್ಟು ಮೊತ್ತದ ಮೇಲೆ ಟಿಡಿಎಸ್ ಲಭ್ಯ
ಬ್ಯಾಂಕ್, ಅಂಚೆ ಕಚೇರಿಯಲ್ಲಿನ ಫಿಕ್ಸಿಡ್ ಡೆಪಾಸಿಟ್‌ಗಳು ಟಿಡಿಎಸ್‌ಗೆ ಒಳಪಡುತ್ತದೆ. ಇಂತಹ ಹೂಡಿಕೆಯಿಂದ ಬರುವ ಆದಾಯದ ಆಧಾರದಲ್ಲಿ ತೆರಿಗೆಯನ್ನು ಲೆಕ್ಕಾಚಾರ ಮಾಡಲಾಗುತ್ತದೆ. ತಮ್ಮ ತೆರಿಗೆ ಬಾಸ್ಕೆಟ್ ಅನ್ನು ನೋಡಿಕೊಂಡು ವ್ಯಕ್ತಿಯು ಟಿಡಿಎಸ್ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ತೆರಿಗೆ ಪಾವತಿದಾರರು ಟಿಡಿಎಸ್ ದರವನ್ನು ಲೆಕ್ಕಾಚಾರ ಮಾಡಬೇಕಾಗುತ್ತದೆ. ಈ ಬಗ್ಗೆ ಅಧಿಕ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಫಿಕ್ಸಿಡ್ ಡೆಪಾಸಿಟ್ ಹೂಡಿಕೆಯ ಮೇಲೆ ಜಮೆ ಮಾಡಲಾಗುವ ಬಡ್ಡಿದರವು 40,000 ರೂಪಾಯಿಗಿಂತ ಅಧಿಕವಾಗಿದ್ದರೆ, ಬ್ಯಾಂಕ್ ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ. 40,000 ರೂಪಾಯಿ ಬಡ್ಡಿದರಕ್ಕೆ ಹಿರಿಯ ನಾಗರಿಕರು ಟಿಡಿಎಸ್ ಪಾವತಿಸಬೇಕಾಗಿಲ್ಲ. ಆದರೆ 50,000 ಬಡ್ಡಿದರವಿದ್ದರೆ ಟಿಡಿಎಸ್ ಕಡಿತವಾಗಲಿದೆ. ಎಫ್‌ಡಿ ಮೆಚ್ಯೂರ್ ಆದಾಗ ಟಿಡಿಎಸ್ ವಿಧಿಸಲಾಗುವುದಿಲ್ಲ. ನೀವು ಮೂರು ವರ್ಷದ ಅವಧಿಗೆ ಎಫ್‌ಡಿ ತೆರೆದಿದ್ದರೆ, ಬಡ್ಡಿದರದ ಮೇಲೆ ಬ್ಯಾಂಕ್ ನಿಮ್ಮ ಖಾತೆಯಿಂದ ಟಿಡಿಎಸ್ ಕಡಿತ ಮಾಡಲಿದೆ.
ವರ್ಷಕ್ಕೆ 3 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯವಿದ್ದರೆ ನಿಮ್ಮ ಆದಾಯದಿಂದ ಟಿಡಿಎಸ್ ಅನ್ನು ಕಡಿತಗೊಳಿಸಲಾಗುವುದಿಲ್ಲ. ಆದರೆ ಅದಕ್ಕಾಗಿ 15G or 15H ಫಾರ್ಮ್ ಫೈಲ್ ಮಾಡಬೇಕಾಗುತ್ತದೆ. ಹಾಗೆಯೇ ಮೊತ್ತ 40 ಸಾವಿರ ರೂ.ಗಿಂತ ಕಡಿಮೆಯಾಗಿದ್ದರೆ, ಟಿಡಿಎಸ್ ಇರಲಾರದು. 40,000 ರೂ. ಗಿಂತ ಅಧಿಕ ಆದಾಯಕ್ಕೆ ಶೇ.10ರಷ್ಟು ಟಿಡಿಎಸ್ ಇರಲಿದೆ. ಕೆವೈಸಿಯಲ್ಲಿ ಪ್ಯಾನ್ ಕಾರ್ಡ್ ಲಿಂಕ್ ಮಾಡಿದ್ದರೆ, ಶೇ.40ರಷ್ಟು ಟಿಡಿಎಸ್ ಇರಲಿದೆ.


Click it and Unblock the Notifications