ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರಂತರವಾಗಿ ರೆಪೋ ದರವನ್ನು ಏರಿಕೆ ಮಾಡುತ್ತಾ ಬಂದಿದೆ. 2022ರ ಮೇ ತಿಂಗಳಿನಿಂದ ಈವರೆಗೆ ಹಲವಾರು ಬಾರಿ ಆರ್‌ಬಿಐ ದರ ಹೆಚ್ಚಳ ಮಾಡಿದೆ. ಆರ್‌ಬಿಐ ರೆಪೋ ದರ ಏರಿಕೆ ಮಾಡಿದ ಪರಿಣಾಮವಾಗಿ ಸಾಮಾನ್ಯವಾಗಿಯೇ ಬ್ಯಾಂಕುಗಳು ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಈ ಹಿಂದೆ ಹಲವಾರು ಬಾರಿ ಏರಿಕೆ ಮಾಡಿದೆ.
ಇದರ ಪರಿಣಾಮವಾಗಿ ಫಿಕ್ಸಿಡ್ ಡೆಪಾಸಿಟ್ ಹೂಡಿಕೆಯು ಅತೀ ಲಾಭದಾಯಕವಾಗಿದೆ. ಅಧಿಕ ಬಡ್ಡಿದರವನ್ನು ನಾವು ಪಡೆಯಬಹುದಾಗಿದೆ. ಆದರೆ ಇತ್ತೀಚೆಗೆ ಹಲವಾರು ಬ್ಯಾಂಕುಗಳು ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಮತ್ತೆ ಪರಿಷ್ಕರಣೆ ಮಾಡಿದ್ದು, ದರ ಕಡಿತ ಮಾಡಿದೆ. ಆದರೆ ಸಾಲದ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯು ಕಂಡು ಬರುತ್ತಿಲ್ಲ. ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಇಳಿಸಿದ ಬ್ಯಾಂಕ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ...

ಆಕ್ಸಿಸ್ ಬ್ಯಾಂಕ್ ಎಫ್‌ಡಿ ಬಡ್ಡಿದರ
ಆಕ್ಸಿಸ್ ಬ್ಯಾಂಕ್ ಇತ್ತೀಚೆಗೆ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಇಳಿಕೆ ಮಾಡಿದೆ. ಏಕ ಅವಧಿಯ ಫಿಕ್ಸಿಡ್ ಮೇಲಿನ ಬಡ್ಡಿದರವನ್ನು ಬ್ಯಾಂಕ್ 20 ಬಿಪಿಎಸ್ ಕಡಿತಗೊಳಿಸಿದೆ. ಈ ಪರಿಷ್ಕರಣೆಯ ಬಳಿಕ ಬ್ಯಾಂಕ್‌ನಲ್ಲಿ 7 ವರ್ಷದಿಂದ 10 ವರ್ಷಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 3.5ರಿಂದ ಶೇಕಡ 7.10ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ.
5 ದಿನಗಳಿಂತ ಕಡಿಮೆ ಅವಧಿಯ 13 ತಿಂಗಳವರೆಗಿನ ಎಫ್‌ಡಿ ಮೇಲೆ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಶೇಕಡ 7.10ರಿಂದ ಶೇಕಡ 6.80ಕ್ಕೆ ಇಳಿಕೆ ಮಾಡಲಾಗಿದೆ. ಇನ್ನು 13 ತಿಂಗಳಿನಿಂದ 3 ವರ್ಷಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಶೇಕಡ 7.15ರಿಂದ ಶೇಕಡ 7.10ಕ್ಕೆ ಇಳಿಕೆ ಮಾಡಲಾಗಿದೆ. ಈ ನೂತನ ಪರಿಷ್ಕೃತ ದರವು ಮೇ 18, 2023ರಿಂದ ಜಾರಿಗೆ ಬರಲಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಫ್‌ಡಿ ಬಡ್ಡಿದರ
ಜೂನ್ 1ರಿಂಮ ಜಾರಿಗೆ ಬರುವಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ತನ್ನ ಎಫ್‌ಡಿ ಬಡ್ಡಿದರವನ್ನು ಕಡಿತಗೊಳಿಸಿದೆ. ಏಕ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲೆ ಅದರಲ್ಲೂ ನಿಗದಿತವಾಗಿ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಲಾಗಿದೆ.
ಈ ಪರಿಷ್ಕರಣೆಯ ಬಳಿಕ 1 ವರ್ಷ ಅವಧಿಯ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವು ಸಾಮಾನ್ಯ ನಾಗರಿಕರಿಗೆ ಶೇಕಡ 0.05ರಷ್ಟು ಇಳಿಕೆಯಾಗಿದ್ದು ಶೇಕಡ 6.75ಕ್ಕೆ ತಲುಪಿದೆ. ಇನ್ನು 666 ದಿನಗಳ ಅವಧಿಯ ಎಫ್‌ಡಿ ಬಡ್ಡಿದರವನ್ನು ಕೂಡಾ ಕಡಿತ ಮಾಡಲಾಗಿದೆ. ಪರಿಷ್ಕರಣೆಯ ಬಳಿಕ 666 ದಿನಗಳ ಎಫ್‌ಡಿ ಬಡ್ಡಿದರವು ಶೇಕಡ 7.05ರಿಂದ ಶೇಕಡ 7.25ಕ್ಕೆ ತಲುಪಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪರಿಷ್ಕೃತ ದರಗಳು
ನವೆಂಬರ್ 2022ರ ಲೆಕ್ಕಾಚಾರವನ್ನು ನಾವು ನೋಡಿದಾಗ ಆ ಸಂದರ್ಭದಲ್ಲಿ ಫಿಕ್ಸಿಡ್ ಡೆಪಾಸಿಟ್ ಮೇಲೆ ಅಧಿಕ ಬಡ್ಡಿದರವನ್ನು ನೀಡುವ ಬ್ಯಾಂಕುಗಳಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಒಂದಾಗಿತ್ತು. ಸಾಮಾನ್ಯ ಜನರಿಗೆ ಶೇಕಡ 7.30ರಷ್ಟು ಹಿರಿಯ ನಾಗರಿಕರಿಗೆ ಶೇಕಡ 7.80ರಷ್ಟು ಮತ್ತು ಸೂಪರ್ ಸೀನಿಯರ್‌ಗಳಿಗೆ ಶೇಕಡ 8.05ರಷ್ಟು ಬಡ್ಡಿದರವನ್ನು ಬ್ಯಾಂಕ್ ನೀಡುತ್ತಿತ್ತು. ಆದರೆ ಈಗ ಬ್ಯಾಂಕ್‌ನ ಗರಿಷ್ಠ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರ ಸಾಮಾನ್ಯ ನಾಗರಿಕರಿಗೆ ಶೇಕಡ 7, ಹಿರಿಯ ನಾಗರಿಕರಿಗೆ ಶೇಕಡ 7.50 ಮತ್ತು ಸೂಪರ್ ಸೀನಿಯರ್‌ಗಳಿಗೆ ಶೇಕಡ 7.75 ಆಗಿದೆ.
ಹೂಡಿಕೆ ಮಾಡಬಹುದೆ?
ಉಳಿತಾಯ ಮಾಡುವ ವಿಚಾರಕ್ಕೆ ಬಂದಾಗ ನಾವು ಸಾಮಾನ್ಯವಾಗಿಯೇ ಫಿಕ್ಸಿಡ್ ಡೆಪಾಸಿಟ್ ಆಯ್ಕೆ ಮಾಡುತ್ತೇವೆ, ಇದಕ್ಕೆ ಮುಖ್ಯ ಕಾರಣ ಎಫ್‌ಡಿಯು ಸುರಕ್ಷತಾ ಉಳಿತಾಯ ಸಾಧನ ಎಂಬುವುದಾಗಿದೆ. ಇನ್ನು ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಈಗಲೂ ಕೂಡಾ ಎಫ್‌ಡಿ ಹೂಡಿಕೆ ಮಾಡಬಹುದಾಗಿದೆ. 5-10 ಮೂಲಾಂಕದಷ್ಟು ಬಡ್ಡಿದರ ಇಳಿಸಲಾಗಿದ್ದರೂ ಕೂಡಾ ಈಗಲೂ ಎಫ್‌ಡಿ ಬಡ್ಡಿದರ ಅಧಿಕವಾಗಿದೆ.


Click it and Unblock the Notifications