ಸಾಮಾನ್ಯವಾಗಿ ಜನರು ಹೂಡಿಕೆಯ ವಿಚಾರದಕ್ಕೆ ಬಂದಾಗ ಸುರಕ್ಷತೆ ಜೊತೆಗೆ ಅಧಿಕ ರಿಟರ್ನ್ ಅನ್ನು ಬಯಸುತ್ತಾರೆ. ಅದಕ್ಕಾಗಿ ಜನರು ಹೆಚ್ಚಾಗಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಅಂಚೆ ಕಚೇರಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಜನರು ಫಿಕ್ಸಿಡ್ ಡೆಪಾಸಿಟ್‌ನಿಂದಲೂ ಉತ್ತಮ, ಸುರಕ್ಷಿತ ರಿಟರ್ನ್ ಪಡೆಯಲು ಸಾಧ್ಯವಾಗುತ್ತದೆ. ಅಂತಹ ಉತ್ತಮ ಎಫ್‌ಡಿಗಳ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಸತತ ಆರು ಬಾರಿ ಏರಿಸಿದೆ. ಸಾಮಾನ್ಯವಾಗಿ ಆರ್‌ಬಿಐ ರೆಪೋ ದರವನ್ನು ಏರಿಸಿದಾಗ ಬ್ಯಾಂಕುಗಳು ಕೂಡಾ ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಏರಿಕೆ ಮಾಡುತ್ತಾ ಬಂದಿದೆ. ಈ ಏರಿಕೆಯ ಬಳಿಕ ಕೆಲವು ಬ್ಯಾಂಕ್‌ಗಳು ಎಫ್‌ಡಿಗೆ ಅಧಿಕ ಬಡ್ಡಿದರವನ್ನು ನೀಡುತ್ತಿದೆ.
ಮುಖ್ಯವಾಗಿ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು ಫಿಕ್ಸಿಡ್ ಡೆಪಾಸಿಟ್ ಮೇಲೆ ಅಧಿಕ ಬಡ್ಡಿದರವನ್ನು ನೀಡುತ್ತಿದೆ. ಸಾಮಾನ್ಯ ಜನರಿಗಾಗಲಿ, ಹಿರಿಯ ನಾಗರಿಕರಿಗಾಗಲಿ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು ಹೆಚ್ಚಿನ ಎಫ್‌ಡಿ ಬಡ್ಡಿದರ ನೀಡುತ್ತದೆ. ಯಾವೆಲ್ಲ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ಶೇಕಡ 9.5ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....
ಸೂರ್ಯೋಧಯ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಸೂರ್ಯೋಧಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ 7 ದಿನದಿಂದ 10 ವರ್ಷದವರೆಗಿನ ಸಾಮಾನ್ಯ ಜನರ ಎಫ್‌ಡಿ ಮೇಲೆ ಶೇಕಡ 4ರಿಂದ ಶೇಕಡ 6ರಷ್ಟು ಬಡ್ಡಿದರವನ್ನು ನೀಡುತ್ತದೆ. ಆದರೆ ಹಿರಿಯ ನಾಗರಿಕರಿಗೆ ಇದೇ ಅವಧಿಗೆ ಈ ಬ್ಯಾಂಕ್ ಶೇಕಡ 4.50ರಿಂದ ಶೇಕಡ 6.50ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು ವಿಶೇಷ ಎಫ್‌ಡಿ ಯೋಜನೆಯಲ್ಲಿ ಶೇಕಡ 7.51ರಿಂದ ಶೇಕಡ ಬಡ್ಡಿದರವನ್ನು ನೀಡುತ್ತದೆ. ಸಾಮಾನ್ಯ ಜನರಿಗೆ 2 ದಿನದಿಂದ 998 ದಿನಗಳ ಎಫ್‌ಡಿ ಮೇಲೆ ಶೇಕಡ 8.51ರಷ್ಟು ಬಡ್ಡಿದರ ನೀಡುತ್ತಿದೆ. ಇನ್ನು ಇದೇ ಅವಧಿಯ ಎಫ್‌ಡಿ ಮೇಲೆ ಹಿರಿಯ ನಾಗರಿಕರಿಗೆ ಶೇಕಡ 8.01ರಿಂದ ಶೇಕಡ 8.76ರಷ್ಟು ಬಡ್ಡಿದರ ನೀಡುತ್ತದೆ.
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೂರು ವಿಶೇಷ ಎಫ್‌ಡಿ ಯೋಜನೆಗಳನ್ನು ಹೊಂದಿದೆ. 181-201 ದಿನಗಳ ಎಫ್‌ಡಿ ಮೇಲೆ ಸಾಮಾನ್ಯ ಜನರಿಗೆ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶೇಕಡ 8.75ರಷ್ಟು ಬಡ್ಡಿದರ ನೀಡುತ್ತದೆ. ಹಿರಿಯ ನಾಗರಿಕರಿಗೆ ಇದೇ ಅವಧಿಯ ಎಫ್‌ಡಿ ಮೇಲೆ ಶೇಕಡ 9.25ರಷ್ಟು ಬಡ್ಡಿದರ ನೀಡುತ್ತದೆ. 501 ದಿನಗಳ ಮತ್ತು 1001 ದಿನಗಳಲ್ಲಿ ಸಾಮಾನ್ಯ ಜನರಿಗೆ ಎಫ್‌ಡಿ ಮೇಲೆ ಈ ಬ್ಯಾಂಕ್ ಕ್ರಮವಾಗಿ ಶೇಕಡ 8.75 ಮತ್ತು ಶೇಕಡ 9ರಷ್ಟು ಬಡ್ಡಿದರ ನೀಡುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಕ್ರಮವಾಗಿ ಶೇಕಡ 9.25 ಮತ್ತು ಶೇಕಡ 9.5ರಷ್ಟು ಬಡ್ಡಿದರ ನೀಡುತ್ತದೆ.
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2ರಿಂದ 3 ವರ್ಷದ ಎಫ್‌ಡಿ ಮೇಲೆ ಸಾಮಾನ್ಯ ಜನರಿಗೆ ಶೇಕಡ 8.10ರಷ್ಟು ಬಡ್ಡಿದರ ನೀಡುತ್ತದೆ. ಹಾಗೆಯೇ ಹಿರಿಯ ನಾಗರಿಕರಿಗೆ ಇದೇ ಅವಧಿಯ ಎಫ್‌ಡಿ ಮೇಲೆ ಶೇಕಡ 8.80ರಷ್ಟು ಬಡ್ಡಿದರ ನೀಡುತ್ತದೆ. ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 1111 ದಿನಗಳ ಎಫ್‌ಡಿ ಮೇಲೆ ಶೇಕಡ 8.75ರಷ್ಟು ಬಡ್ಡಿದರವನ್ನು ನೀಡುತ್ತದೆ. ಸಾಮಾನ್ಯ ಜನರಿಗೆ ಶೇಕಡ 8ರಷ್ಟು ಬಡ್ಡಿದರವನ್ನು ನೀಡುತ್ತದೆ.


Click it and Unblock the Notifications