For Quick Alerts
ALLOW NOTIFICATIONS  
For Daily Alerts

ಎಲಾನ್ ಮಸ್ಕ್ ಅನ್ನು ಹಿಂದಿಕ್ಕಿ ವಿಶ್ವದ ಮೊದಲ ಶ್ರೀಮಂತ ವ್ಯಕ್ತಿಯಾದ ಬರ್ನಾರ್ಡ್ ಅರ್ನಾಲ್ಟ್

|

ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಪೋರ್ಬ್ಸ್‌ನ ಶ್ರೀಮಂತರ ಪಟ್ಟಿಯಲ್ಲಿ ಕೆಳಕ್ಕೆ ಇಳಿದಿದ್ದಾರೆ. ವಿಶ್ವದ ಮೊಲದ ಶ್ರೀಮಂತ ವ್ಯಕ್ತಿ ಸ್ಥಾನಕ್ಕೆ ಎಲ್‌ವಿಎಂಎಚ್‌ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಮೊದಲ ಸ್ಥಾನಕ್ಕೆ ಏರಿದ್ದಾರೆ.

Gautam Adani : ಬೆಜೊಸ್‌, ಅರ್ನಾಲ್ಟ್‌ರನ್ನು ಹಿಂದಿಕ್ಕಿ ವಿಶ್ವದ 2ನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ!Gautam Adani : ಬೆಜೊಸ್‌, ಅರ್ನಾಲ್ಟ್‌ರನ್ನು ಹಿಂದಿಕ್ಕಿ ವಿಶ್ವದ 2ನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ!

ಈ ಹಿಂದೆ ಸೆಪ್ಟೆಂಬರ್‌ ತಿಂಗಳಿನಲ್ಲಿ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಎಲಾನ್ ಮಸ್ಕ್ ಮೊದಲ ಸ್ಥಾನದಲ್ಲಿದ್ದರೂ ಎಲ್‌ವಿಎಂಎಚ್‌ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಹಾಗೂ ಅಮೆಜಾನ್ ಸ್ಥಾಪಕ ಜೆಫ್ ಬೆಜೊಸ್‌ರನ್ನು ಹಿಂದಿಕ್ಕಿ ಭಾರತದ ಪ್ರಸಿದ್ಧ ಉದ್ಯಮಿ ಗೌತಮ್ ಅದಾನಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು. ಆದರೆ ಈಗ ಎರಡನೇ ಸ್ಥಾನದಲ್ಲಿ ಎಲಾನ್ ಮಸ್ಕ್ ಇದ್ದಾರೆ. ಮೂರನೇ ಸ್ಥಾನದಲ್ಲಿ ಗೌತಮ್ ಅದಾನಿ ಇದ್ದಾರೆ.

ಪ್ರಸ್ತುತ ಮೊದಲ ಸ್ಥಾನದಲ್ಲಿರುವ ಬರ್ನಾರ್ಡ್ ಅರ್ನಾಲ್ಟ್‌ ಆದಾಯವು 188.6 ಬಿಲಿಯನ್ ಡಾಲರ್ ಆಗಿದೆ. ಆದರೆ ಒಟ್ಟು 178.6 ಬಿಲಿಯನ್ ಡಾಲರ್ ಆದಾಯವನ್ನು ಹೊಂದಿರುವ ಎಲಾನ್ ಮಸ್ಕ್ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಕಳೆದ ಒಂದು ವಾರದಿಂದ ಎರಡು ಬಿಲಿಯನರ್‌ಗಳು ಶ್ರೀಮಂತರ ಪಟ್ಟಿಯಲ್ಲಿ ಪ್ರಥಮ ಸ್ಥಾನಕ್ಕೆ ಸ್ಫರ್ಧೆಯಲ್ಲಿದ್ದಾರೆ.

 ಬರ್ನಾರ್ಡ್ ಅರ್ನಾಲ್ಟ್‌ ಬಗ್ಗೆ ಮಾಹಿತಿ

ಬರ್ನಾರ್ಡ್ ಅರ್ನಾಲ್ಟ್‌ ಬಗ್ಗೆ ಮಾಹಿತಿ

ಡಿಸೆಂಬರ್ 7ರಂದೇ ಎಲಾನ್ ಮಸ್ಕ್ ವಿಶ್ವದ ಮೊದಲ ಸ್ಥಾನದಿಂದ ಕೆಳಕ್ಕೆ ಇಳಿದಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಮಸ್ಕ್ ಭಾರೀ ನಷ್ಟವನ್ನು ಕಂಡಿದ್ದಾರೆ. ಹಾಗೆಯೇ 44 ಬಿಲಿಯನ್ ಡಾಲರ್ ಒಪ್ಪಂದದಲ್ಲಿ ಟ್ವಿಟ್ಟರ್ ಅನ್ನು ಖರೀದಿ ಮಾಡಿದ್ದಾರೆ. ಅದಾದ ಬಳಿಕ ಈ ಸಾಮಾಜಿಕ ಜಾಲತಾಣ ಸಂಸ್ಥೆಯು ನಷ್ಟದಲ್ಲಿದೆ ಬರ್ನಾರ್ಡ್ ಅರ್ನಾಲ್ಟ್‌ ಲೂಯಿ ವಿಟಾನ್, ಗಿವೆಂಚಿ ಮತ್ತು ಕೆಂಜೊ ಸೇರಿದಂತೆ ಹಲವಾರು ಬ್ರಾಂಡ್‌ಗಳ ಮೂಲ ಕಂಪನಿ ಎಲ್‌ವಿಎಂಎಚ್‌ನ ಸಿಇಒ ಆಗಿದ್ದಾರೆ. ಇತ್ತೀಚೆಗೆ ಜಾಗತಿಕವಾಗಿ ಹಿಂಜರಿತ ಕಂಡು ಬಂದಿದ್ದರೂ ಬರ್ನಾರ್ಡ್ ಅರ್ನಾಲ್ಟ್‌ ಆದಾಯ ಮಾತ್ರ ಬೆಳವಣಿಗೆ ಹೊಂದುತ್ತಿದೆ.

ಎಲಾನ್ ಮಸ್ಕ್ ಆದಾಯ ಕುಸಿತ

ಎಲಾನ್ ಮಸ್ಕ್ ಆದಾಯ ಕುಸಿತ

ಎಲಾನ್ ಮಸ್ಕ್ ಆದಾಯವು ನಿರಂತರವಾಗಿ ಕುಸಿತವಾಗುತ್ತಿದೆ. ನವೆಂಬರ್ 8ರಂದು ಎಲಾನ್ ಮಸ್ಕ್ ನಿವ್ವಳ ಆದಾಯವು 200 ಬಿಲಿಯನ್ ಡಾಲರ್‌ಗೂ ಕೆಳಕ್ಕೆ ಇಳಿದಿದೆ. ಹೂಡಿಕೆದಾರರು ಟೆಸ್ಲಾ ಷೇರಿನಿಂದ ದೂರ ಸರಿದ ಸಂದರ್ಭದಲ್ಲಿ ಈ ಬೆಳವಣಿಗೆ ಕಂಡು ಬಂದಿದೆ. ಟೆಸ್ಲಾ ತನ್ನ ಮಾರುಕಟ್ಟೆ ಮೌಲ್ಯದ ಸರಿಸುಮಾರು ಅರ್ಧದಷ್ಟು ನಿವ್ವಳ ಆದಾಯವನ್ನು ಕಳೆದುಕೊಂಡಿದೆ. ಏಪ್ರಿಲ್‌ನಲ್ಲಿ ಎಲಾನ್‌ ಮಸ್ಕ್ ಟ್ವಿಟ್ಟರ್‌ನ ಬಿಡ್ ಮಾಡಿದ ಬಳಿಕ ಮಸ್ಕ್ ನಿವ್ವಳ ಆದಾಯವು 70 ಬಿಲಿಯನ್ ಡಾಲರ್‌ನಷ್ಟು ಇಳಿದಿದೆ. ಇನ್ನು ಅಕ್ಟೋಬರ್‌ನಲ್ಲಿ ಈ ಒಪ್ಪಂದ ಕೊನೆಯಾಗಿದ್ದು ಟ್ವಿಟ್ಟರ್ ಖರೀದಿಗಾಗಿ ಮಸ್ಕ್ ಅಧಿಕವಾಗಿ 13 ಬಿಲಿಯನ್ ಡಾಲರ್ ಸಾಲ ಮಾಡಿದ್ದಾರೆ. ಮಸ್ಕ್ ಆದಾಯವು ಟೆಸ್ಲಾ ಷೇರು ಮೌಲ್ಯದ ಮೇಲೆ ಆಧಾರಿತವಾಗಿತ್ತು.

  ವಿಶ್ವದ ಶ್ರೀಮಂತರ ಪಟ್ಟಿ ನೋಡಿ
 

ವಿಶ್ವದ ಶ್ರೀಮಂತರ ಪಟ್ಟಿ ನೋಡಿ

1. ಬರ್ನಾರ್ಡ್ ಅರ್ನಾಲ್ಟ್‌, 188.6 ಬಿಲಿಯನ್ ಡಾಲರ್, ಫ್ರಾನ್ಸ್
2. ಎಲಾನ್ ಮಸ್ಕ್, 178.6 ಬಿಲಿಯನ್ ಡಾಲರ್, ಯುಎಸ್
3. ಗೌತಮ್ ಅದಾನಿ, 134 ಬಿಲಿಯನ್ ಡಾಲರ್, ಭಾರತ
4. ಜೆಫ್ ಬೆಜೋಸ್, 116.4 ಬಿಲಿಯನ್ ಡಾಲರ್, ಯುಎಸ್
5. ವಾರೆನ್ ಬಫೆಟ್, 108.5 ಬಿಲಿಯನ್ ಡಾಲರ್, ಯುಎಸ್
6. ಬಿಲ್ ಗೇಟ್ಸ್, 107.3 ಬಿಲಿಯನ್ ಡಾಲರ್, ಯುಎಸ್
7. ಲ್ಯಾರಿ ಎಲ್ಲಿಸನ್, 105.6 ಬಿಲಿಯನ್ ಡಾಲರ್, ಯುಎಸ್
8. ಮುಕೇಶ್ ಅಂಬಾನಿ, 92.5 ಬಿಲಿಯನ್ ಡಾಲರ್, ಭಾರತ
9. ಲ್ಯಾರಿ ಪೇಜ್, 84.5 ಬಿಲಿಯನ್ ಡಾಲರ್, ಯುಎಸ್
10. ಸ್ವೀವ್ ಬಾಲ್ಮರ್, 83.4 ಬಿಲಿಯನ್ ಡಾಲರ್, ಯುಎಸ್

English summary

Forbes Rich List: Bernard Arnault Replaces Elon Musk as World's Richest Person

Forbes Rich List: Tesla owner Elon Musk has lost the top spot on Forbes billionaire list to Bernard Arnault, whose family owns the world's leading luxury group, LVMH.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X