ಹಬ್ಬದ ಸೀಸನ್ ಈಗಾಗಲೇ ಆರಂಭವಾಗುತ್ತಿದೆ. ಜನರು ಹಬ್ಬಕ್ಕಾಗಿ ಎಲ್ಲ ತಯಾರಿಗಾಗಿ ಈಗಾಗಲೇ ಹಣಕಾಸು ಉಳಿತಾಯ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಅದೆಷ್ಟೋ ಮಂದಿ ಹಬ್ಬಕ್ಕೂ ಒಂದು ವರ್ಷ ಮುಂಚೆಯೇ ಹಣವನ್ನು ಉಳಿತಾಯ ಮಾಡುತ್ತಾ ಬಂದಿರುತ್ತಾರೆ.
ಹಬ್ಬ ಹತ್ತಿರವಾಗುತ್ತಾ ಬಂದಂತೆ ಶಾಪಿಂಗ್ ಹೋಗುವುದು ಸಾಮಾನ್ಯವಾಗಿದೆ. ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ಹಿಡಿದು ಗೃಹಾಲಂಕಾರ ಮತ್ತು ಪೀಠೋಪಕರಣಗಳವರೆಗೆ, ಹೀಗೆ ಹಬ್ಬದ ವೇಳೆ ಖರೀದಿಯ ಲೀಸ್ಟ್ ದೊಡ್ಡದಾಗಿದೆ. ಆದರೆ ನೀವು ಈ ಹಬ್ಬದ ಸೀಸನ್‌ನಲ್ಲಿ ಖರ್ಚನ್ನು ಆದಷ್ಟು ಕಡಿಮೆ ಮಾಡುವುದು ಹೇಗೆಂದು ತಿಳಿದಿದೆಯೇ? ಇಲ್ಲಿದೆ ಟಿಪ್ಸ್ ಮುಂದೆ ಓದಿ...

1. ಬಜೆಟ್ ಅತೀ ಮುಖ್ಯ
ನೀವು ಎಷ್ಟು ಖರ್ಚು ಮಾಡಬಹುದು ಎಂಬುದನ್ನು ಅಂದಾಜು ಮಾಡಲು ಮೊದಲು ಬಜೆಟ್ ಅನ್ನು ರಚಿಸುವುದು ಅತೀ ಮುಖ್ಯವಾಗಿದೆ. "ನೀವು ದುಂದು ವೆಚ್ಚವನ್ನು ತಪ್ಪಿಸಲು ಪ್ರಾಯೋಗಿಕ ಬಜೆಟ್ ಅನ್ನು ಮಾಡಬೇಕಾಗುತ್ತದೆ. ನಿಮ್ಮ ಮಾಸಿಕ ಆದಾಯದ ಶೇಕಡ 50 ಕ್ಕಿಂತ ಕಡಿಮೆ ಮೊತ್ತವನ್ನು ಇದಕ್ಕಾಗಿ ಇರಿಸಿಕೊಳ್ಳಿ. ಹಾಗಿದ್ದರೆ, ನೀವು ಹಣಕಾಸಿನ ತೊಂದರೆಯಿಲ್ಲದೆ ಹಬ್ಬವನ್ನು ಆನಂದಿಸಬಹುದು," ಎಂದು ಆಡ್‌ಕೌಂಟಿ ಮೀಡಿಯಾದ ಮುಖ್ಯ ಕಾರ್ಯತಂತ್ರ ಅಧಿಕಾರಿ ಕುಮಾರ್ ಸೌರವ್ ಹೇಳಿದರು.
"ಈ ರಜಾದಿನಗಳಲ್ಲಿ ನೀವು ಖರ್ಚು ಮಾಡಬೇಕಾದ ನಿಜವಾದ ಮೊತ್ತದ ಬಗ್ಗೆ ನಿಮಗೆ ತಿಳಿದಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಸಾಮಾನ್ಯ ಮಾಸಿಕ ವೆಚ್ಚಗಳ ನಂತರ ನಿಮ್ಮ ಬಳಿ ಎಷ್ಟು ಹಣ ಉಳಿಯುತ್ತದೆ ಎಂದು ಅಂದಾಜಿಸುವಾಗ ಲೆಕ್ಕಾಚಾರ ಸರಿಯಾಗಿದೆಯೇ ಎಂದು ನೋಡಿಕೊಳ್ಳಿ. ಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಗಮನದಲ್ಲಿಟ್ಟುಕೊಳ್ಳಿ," ಎಂದು ಕಲ್ಯಾಣಂ ಪೀಠೋಪಕರಣಗಳ ಸಂಸ್ಥಾಪಕ ಮತ್ತು ಸಿಇಒ ತೇಜ್‌ಪಾಲ್ ಸಿಂಗ್ ಶೇಖಾವತ್ ತಿಳಿಸಿದರು.
ಹಬ್ಬದ ಸೀಸನ್‌ನಲ್ಲಿ ಸಾಮಾನ್ಯವಾಗಿ ಸಂಭ್ರಮ ಇರುತ್ತದೆ. ಹಬ್ಬಗಳನ್ನು ಆನಂದಿಸಲು ನೀವು ನಿಮ್ಮ ಜೇಬಿನ ಮೇಲೆಯೂ ಗಮನಹರಿಸಬೇಕು. "ಬಜೆಟ್ ಮುಖ್ಯ. ನಿಮ್ಮ ಹಣಕಾಸಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಖರ್ಚು ಮಾಡುವುದು ಅತೀ ಮುಖ್ಯ," ಎಂದು ಅಕ್ಯೂಬ್ ವೆಂಚರ್ಸ್‌ನ ಎಂಡಿ ಆಶಿಶ್ ಅಗರ್ವಾಲ್ ಹೇಳಿದರು.
2. ಉತ್ತಮ ಡೀಲ್‌ಗಾಗಿ ಬೆಲೆ ಹೋಲಿಕೆ ಮಾಡಿ
ತಾಳ್ಮೆಯಿಂದಿರಿ ಮತ್ತು ಉತ್ತಮ ಡೀಲ್‌ಗಳನ್ನು ಪಡೆಯಲು ಶಾಪಿಂಗ್ ಮಾಡುವಾಗ ಎಂದಿಗೂ ಕೂಡಾ ಬೆಲೆಗಳನ್ನು ಹೋಲಿಕೆ ಮಾಡಿ. ಅಧಿಕ ಖರ್ಚು ಮಾಡುವುದನ್ನು ತಪ್ಪಿಸಬೇಕಾದರೆ, ಎಲ್ಲಿ ಆಫರ್ ಅಧಿಕವಾಗಿದೆ ಎಂದು ಹೋಲಿಕೆ ಮಾಡಿಕೊಂಡು ಶಾಪಿಂಗ್ ಮಾಡಬೇಕು. ಹಾಗೆಯೇ ನಿಯಮ, ಷರತ್ತುಗಳನ್ನು ಕಡೆಗಣಿಸದೆ ಸರಿಯಾಗಿ ಪರಿಶೀಲಿಸಿ ಶಾಪಿಂಗ್ ಮಾಡಿ," ಎಂದು ಕುಮಾರ್ ಸೌರವ್ ಹೇಳುತ್ತಾರೆ.
3. ಮೋಸದ ರಿಯಾಯಿತಿ ಬಗ್ಗೆ ತಿಳಿಯಿರಿ
"ಆಫರ್‌ಗಳನ್ನು ಸರಿಯಾಗಿ ಪರಿಶೀಲನೆ ಮಾಡಿಕೊಳ್ಳಿ. ಕೆಲವು ಆಫರ್‌ಗಳು ರಾತ್ರಿ ವೇಳೆಯಲ್ಲಿದ್ದರೆ, ಕೆಲವು ಆಫರ್‌ಗಳು ಹಗಲಲ್ಲಿ ಮಾತ್ರ ಇರುತ್ತದೆ. ಇವುಗಳನ್ನು ನಾವು ಸರಿಯಾಗಿ ಪರಿಶೀಲನೆ ಮಾಡಬೇಕು," ಎಂದು ತಜ್ಞರು ಹೇಳುತ್ತಾರೆ. "ಸಾಮಾನ್ಯ ದಿನಗಳಲ್ಲಿ ಶೇಕಡ 47 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹಬ್ಬದ ವೇಳೆ ಶೇಕಡ 50 ಕ್ಕೆ ಈ ರಿಯಾಯಿತಿ ಹೆಚ್ಚಳವಾಗಬಹುದು. ಹಾಗಾಗಿ ಹಬ್ಬದ ಸಂದರ್ಭದಲ್ಲಿ ಇದಕ್ಕೂ ಅಧಿಕ ಆಫರ್‌ನ ಅಂದಾಜನ್ನು ನೀವು ಇಟ್ಟುಕೊಂಡು ಮೋಸಕ್ಕೆ ಒಳಗಾಗಬೇಡಿ. ಕಡಿಮೆ ಆಫರ್ ಇದೆ ಎಂದು ಅತೀ ಅಧಿಕ ಖರೀದಿ ಮಾಡಬೇಡಿ," ಎಂದು ತಜ್ಞರು ತಿಳಿಸಿದ್ದಾರೆ.
4) ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವಾಗ ಜಾಗರೂಕರಾಗಿರಿ
ಕ್ರೆಡಿಟ್ ಕಾರ್ಡ್‌ಗಳು, ಸುಲಭವಾಗಿ ಲಭ್ಯವಾಗುತ್ತದೆ. ಹಾಗೆಯೇ ನೀವು ತ್ವರಿತವಾಗಿ ಪಾವತಿ ಮಾಡುವ ಅಗತ್ಯ ಇರುವುದಿಲ್ಲ. ಹಾಗಾಗಿ ನೀವು ಈ ಕಾರ್ಡ್ ಇದೆ ಎಂದುಕೊಂಡು ಅಧಿಕ ಖರ್ಚು ಮಾಡಬಹುದು. "ನಿಮ್ಮ ಆದಾಯಕ್ಕೆ ಅನುಗುಣವಾಗಿ ಕೆಲಸ ಮಾಡಲು ಸಾಧ್ಯವಾಗುವುದಾದರೆ ಮಾತ್ರ ನೀವು ಮಾಡಿ, ಗೆಳೆಯರ ಒತ್ತಡಕ್ಕೆ ಒಳಗಾಗಿ ಸುಮ್ಮನೆ ದುಂದುವೆಚ್ಚ ಮಾಡಬೇಡಿ," ಎಂದು ಆಶಿಶ್ ಅಗರ್ವಾಲ್ ಹೇಳಿದರು.
ಈ ಮೇಲಿನ ಟಿಪ್ಸ್‌ಗಳನ್ನು ಪಾಲನೆ ಮಾಡಿಕೊಂಡು ನೀವು ಹಣಕಾಸು ಒತ್ತಡದಿಂದ ಹೊರಕ್ಕೆ ಬರಬಹುದು. ಹಬ್ಬದ ಸಂದರ್ಭದಲ್ಲಿ ನೀವು ಸದುಪಯೋಗ ಮಾಡಿಕೊಳ್ಳಬಹುದು.


Click it and Unblock the Notifications