ಈಗಾಗಲೇ ಹಬ್ಬದ ಸೀಸನ್ ಶುರುವಾಗಿದೆ. ಕೃಷ್ಣಜನ್ಮಾಷ್ಟಮಿಯನ್ನು ನಾವು ಆಚರಣೆ ಮಾಡಿಯಾಗಿದೆ. ಈಗ ಮತ್ತೊಂದು ಸಂಭ್ರಮದ ಹಬ್ಬ ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಸೆಪ್ಟೆಂಬರ್ 19 ರಂದು ಮಂಗಳವಾರ ಗಣೇಶ ಚತುರ್ಥಿ ಆಚರಣೆ ಮಾಡಲಾಗುತ್ತದೆ. ಭಗವಂತ ಗಣೇಶ ಜನ್ಮದ ದಿನವೇ ಇದಾಗಿದೆ.
ಈಗಾಗಲೇ ಈ ಹಬ್ಬದ ಆಚರಣೆಗಾಗಿ ಸಾಕಷ್ಟು ತಯಾರಿ ದೇಶದಾದ್ಯಂತ ನಡೆದಿದೆ. ಅದರಲ್ಲೂ ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ವಿಶಿಷ್ಟವಾದ ರೀತಿಯಲ್ಲಿ ಗಣೇಶ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತದೆ. ದೇಶದಾದ್ಯಂತ ಹಲವಾರು ರಾಜ್ಯಗಳ ಗಲ್ಲಿ ಗಲ್ಲಿಗಳಲ್ಲಿ ಗಣೇಶ ಮೂರ್ತಿ ಇಡಲಾಗುತ್ತದೆ.

ಸಾಮಾನ್ಯವಾಗಿ ಯಾವುದೇ ಹಬ್ಬವಿದ್ದಾಗ ದೇಶದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಅದರಂತೆಯೇ ಗಣೇಶ ಚತುರ್ಥಿ ದಿನವು ಕೂಡಾ ದೇಶದಲ್ಲಿ ಬ್ಯಾಂಕ್‌ಗಳು ಬಂದ್ ಆಗಿರುತ್ತದೆ. ಈ ಹತ್ತು ದಿನದ ಹಬ್ಬವನ್ನು ಸೆಪ್ಟೆಂಬರ್ 19 ರಿಂದ ಸೆಪ್ಟೆಂಬರ್ 28 ರವರೆಗೆ ಆಚರಿಸಲಾಗುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ರಜಾ ದಿನವು ವಿಭಿನ್ನವಾಗಿರುತ್ತದೆ. ನಿಮ್ಮ ನಗರದಲ್ಲಿ ಯಾವಾಗ ಬ್ಯಾಂಕ್ ಬಂದ್ ಆಗಿರುತ್ತದೆ, ಎಲ್ಲಿ ಯಾವಾಗ ಬ್ಯಾಂಕ್ ರಜೆ ಎಂದು ತಿಳಿಯಲು ಮುಂದೆ ಓದಿ...
ಗಣೇಶ ಚತುರ್ಥಿಯ ಬ್ಯಾಂಕ್ ರಜೆ ವೇಳಾಪಟ್ಟಿ:
ಸೆಪ್ಟೆಂಬರ್ 18, 19 ಮತ್ತು 20: ಕೆಲವು ನಗರಗಳಲ್ಲಿ, ಈ ದಿನಾಂಕಗಳಲ್ಲಿ ಬ್ಯಾಂಕುಗಳು ಮುಚ್ಚಲಾಗುತ್ತದೆ. ವಿವಿಧ ರಾಜ್ಯಗಳಲ್ಲಿ ಮೂರು ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರುತ್ತದೆ. ಸೆಪ್ಟೆಂಬರ್ 18 ರಂದು, ವರಸಿದ್ಧಿ ವಿನಾಯಕ ವ್ರತ / ವಿನಾಯಕ ಚತುರ್ಥಿಯ ಕಾರಣ ಚೆನ್ನೈ, ಹೈದರಾಬಾದ್ ಮತ್ತು ತೆಲಂಗಾಣದಲ್ಲಿ ರಜೆ ಇರುತ್ತದೆ.
ಸೆಪ್ಟೆಂಬರ್ 19: ಗಣೇಶ ಚತುರ್ಥಿ/ಸಂವತ್ಸರಿ (ಚತುರ್ಥಿ ಪಕ್ಷ) ಕಾರಣ ಬೆಂಗಳೂರು, ಅಹಮದಾಬಾದ್, ಬೇಲಾಪುರ, ಭುವನೇಶ್ವರ, ಮುಂಬೈ, ನಾಗ್ಪುರ ಮತ್ತು ಪಣಜಿಯಂತಹ ನಗರಗಳಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.
ಸೆಪ್ಟೆಂಬರ್ 20: ಗಣೇಶ ಚತುರ್ಥಿಯ ಎರಡನೇ ದಿನದಂದು ಭುವನೇಶ್ವರ ಮತ್ತು ಪಣಜಿಯಲ್ಲಿ ಬ್ಯಾಂಕ್ ರಜೆ ಇರುತ್ತದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರಜಾದಿನದ ಕ್ಯಾಲೆಂಡರ್ ಪ್ರಕಾರ ಸೆಪ್ಟೆಂಬರ್‌ನಲ್ಲಿ 12 ಅಧಿಕೃತ ರಜಾದಿನಗಳು ಇರುತ್ತದೆ (ಇದು ರಾಜ್ಯದಿಂದ ಬದಲಾಗಬಹುದು). ಭಾನುವಾರಗಳು ಮತ್ತು ಎರಡನೇ, ನಾಲ್ಕನೇ ಶನಿವಾರ ಸೇರಿದಂತೆ, ಒಟ್ಟು 16 ಬ್ಯಾಂಕ್ ರಜಾದಿನಗಳು ಸೆಪ್ಟೆಂಬರ್‌ನಲ್ಲಿ ಇರುತ್ತದೆ.
ಸೆಪ್ಟೆಂಬರ್ ತಿಂಗಳ ಬ್ಯಾಂಕ್ ರಜೆ
ಸೆಪ್ಟೆಂಬರ್ 3: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಸೆಪ್ಟೆಂಬರ್ 6: ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಭುವನೇಶ್ವರ, ಚೆನ್ನೈ, ಹೈದರಾಬಾದ್ ಮತ್ತು ಪಾಟ್ನಾದಲ್ಲಿ ಬ್ಯಾಂಕ್‌ಗಳು ಮುಚ್ಚಲಾಗುತ್ತದೆ.
ಸೆಪ್ಟೆಂಬರ್ 7: ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರಣದಿಂದಾಗಿ ಅಹಮದಾಬಾದ್, ಚಂಡೀಗಢ, ಡೆಹ್ರಾಡೂನ್, ಗ್ಯಾಂಗ್ಟಾಕ್, ತೆಲಂಗಾಣ, ಜೈಪುರ, ಜಮ್ಮು, ಕಾನ್ಪುರ, ಲಕ್ನೋ, ರಾಯ್‌ಪುರ, ರಾಂಚಿ, ಶಿಲ್ಲಾಂಗ್, ಶಿಮ್ಲಾ ಮತ್ತು ಶ್ರೀನಗರದಂತಹ ನಗರಗಳಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ.
ಸೆಪ್ಟೆಂಬರ್ 9: ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಸೆಪ್ಟೆಂಬರ್ 10: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಸೆಪ್ಟೆಂಬರ್ 17: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಸೆಪ್ಟೆಂಬರ್ 18: ಗಣೇಶ ಚತುರ್ಥಿ ದಿನ ತೆಲಂಗಾಣದಲ್ಲಿ ಬ್ಯಾಂಕ್‌ಗಳು ಬಂದ್ ಆಗಿರುತ್ತದೆ.
ಸೆಪ್ಟೆಂಬರ್ 19: ಗಣೇಶ ಚತುರ್ಥಿ ಕಾರಣ ಅಹಮದಾಬಾದ್, ಬೇಲಾಪುರ, ಭುವನೇಶ್ವರ, ಮುಂಬೈ, ನಾಗ್ಪುರ ಬೆಂಗಳೂರು ಮತ್ತು ಪಣಜಿಯಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ.
ಸೆಪ್ಟೆಂಬರ್ 20: ಗಣೇಶ ಚತುರ್ಥಿ ಮತ್ತು ನುವಾಖಾಯ್ ಕಾರಣ ಕೊಚ್ಚಿ ಮತ್ತು ಭುವನೇಶ್ವರದಲ್ಲಿ ಬ್ಯಾಂಕ್ ಬಂದ್ ಆಗುತ್ತದೆ.
ಸೆಪ್ಟೆಂಬರ್ 22: ಶ್ರೀ ನಾರಾಯಣ ಗುರು ಸಮಾಧಿ ದಿನವು ಕೊಚ್ಚಿ, ಪಣಜಿ ಮತ್ತು ತಿರುವನಂತಪುರದಲ್ಲಿ ಬ್ಯಾಂಕ್ ರಜೆ ಇರಲಿದೆ.
ಸೆಪ್ಟೆಂಬರ್ 23: ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಸೆಪ್ಟೆಂಬರ್ 24: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಸೆಪ್ಟೆಂಬರ್ 25: ಶ್ರೀಮಂತ ಶಂಕರದೇವ ಜನ್ಮ ವಾರ್ಷಿಕೋತ್ಸವಕ್ಕಾಗಿ ಗುವಾಹಟಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಸೆಪ್ಟೆಂಬರ್ 27: ಮಿಲಾದ್-ಎ-ಷರೀಫ್ ದಿನ ಜಮ್ಮು, ಕೊಚ್ಚಿ, ಶ್ರೀನಗರ ಮತ್ತು ತಿರುವನಂತಪುರದಲ್ಲಿ ಬ್ಯಾಂಕ್ ರಜೆ ಇರಲಿದೆ.
ಸೆಪ್ಟೆಂಬರ್ 28: ಈದ್-ಎ-ಮಿಲಾದ್ ಕಾರಣ ಅಹಮದಾಬಾದ್, ಬೆಂಗಳೂರು, ಚೆನ್ನೈ, ಕಾನ್ಪುರ, ಲಕ್ನೋ, ಮುಂಬೈ ಮತ್ತು ನವದೆಹಲಿ ಸೇರಿದಂತೆ ವಿವಿಧ ನಗರಗಳಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ.
ಸೆಪ್ಟೆಂಬರ್ 29: ಗ್ಯಾಂಗ್ಟಾಕ್, ಜಮ್ಮು ಮತ್ತು ಶ್ರೀನಗರದಲ್ಲಿ ಈದ್-ಎ-ಮಿಲಾದ್-ಉನ್-ನಬಿ ದಿನ ಬ್ಯಾಂಕ್ ರಜೆ ಇರುತ್ತದೆ.


Click it and Unblock the Notifications