ಸಾಲ ಪಡೆಯುವುದು ಕೂಡ ಲೆಕ್ಕಾಚಾರ, ಬುದ್ಧಿವಂತಿಕೆಯನ್ನು ತೋರಿಸುತ್ತದೆ. ಆ ಕ್ಷಣಕ್ಕೆ ಹಣದ ಅಗತ್ಯ ಪೂರೈಸಿದರಷ್ಟೇ ಸಾಕು ಎಂದು ಆಲೋಚನೆ ಮಾಡುವುದಕ್ಕೆ ಆಗಲ್ಲ. ಸಾಲ ತೆಗೆದುಕೊಳ್ಳುವ ಅನಿವಾರ್ಯ ಸಂದರ್ಭಗಳಲ್ಲಿ ಸೆಕ್ಯೂರ್ಡ್ ಲೋನ್ ಪಡೆಯುವುದು ಸೂಕ್ತ. ಏನಿದು ಸೆಕ್ಯೂರ್ಡ್ ಲೋನ್ ಅಂದರೆ ಅಂತೀರಾ?
ನೀವು ಪಡೆಯುವ ಸಲಕ್ಕೆ ಖಾತ್ರಿಯಾಗಿ ಅಡಮಾನ ಇಟ್ಟಲ್ಲಿ ಅದನ್ನು ಸೆಕ್ಯೂರ್ಡ್ ಲೋನ್ ಎನ್ನಲಾಗುತ್ತದೆ. ಉದಾಹರಣೆಗೆ ಚಿನ್ನದ ಮೇಲೆ ಪಡೆಯುವ ಸಾಲ. ಮನೆಯಲ್ಲಿರುವ ಚಿನ್ನವನ್ನು ಅಡಮಾನ ಮಾಡಿ, ಅದಕ್ಕೆ ಸಾಲ ಪಡೆಯಬಹುದು. ಒಂದು ವೇಳೆ ಪರ್ಸನಲ್ ಲೋನ್ ಪಡೆಯುವುದಾದರೆ ಅದಕ್ಕೆ ಯಾವುದೇ ಖಾತ್ರಿ ನೀಡುವ ಅಗತ್ಯ ಇಲ್ಲ. ಆದ್ದರಿಂದಲೇ ಅದಕ್ಕೆ ಬಡ್ಡಿ ಕೂಡ ಜಾಸ್ತಿ.
ಸಾಲ ಪಡೆಯುವ ಗ್ರಾಹಕರ ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ಬಡ್ಡಿ ದರ ನಿರ್ಧಾರ ಆಗುತ್ತದೆ. ಒಂದು ವೇಳೆ ಅದೇ ಕಡಿಮೆ ಇದ್ದಲ್ಲಿ ಹೆಚ್ಚಿನ ಬಡ್ಡಿ ಕಟ್ಟಬೇಕಾಗುತ್ತದೆ. ಒಂದು ವೇಳೆ ನಿಮಗೆ ಸಾಲದ ಅಗತ್ಯ ಇದ್ದು, ಚಿನ್ನದ ಮೇಲೆ ಸಾಲ ಪಡೆಯುವುದಕ್ಕೆ ಆಲೋಚಿಸುತ್ತಿದ್ದಲ್ಲಿ 7%ನಿಂದ ಬಡ್ಡಿ ದರ ಶುರುವಾಗಿ, ಕಡಿಮೆ ಬಡ್ಡಿಗೆ ಸಾಲ ನೀಡುವ ಬ್ಯಾಂಕ್ ಗಳ ವಿವರ ಇಲ್ಲಿದೆ.

ಸಾಲ ಪಡೆಯುವ ಮುಂಚಿತವಾಗಿ ಮರುಪಾವತಿ ಅವಧಿ, ಬಡ್ಡಿ ದರ, ಪ್ರೊಸೆಸಿಂಗ್ ಶುಲ್ಕ, ಪೂರ್ವಪಾವತಿ ಮಾಡಿದಲ್ಲಿ ಅದಕ್ಕೆ ಶುಲ್ಕ, ತಡವಾದ ಪಾವತಿಗೆ ಹಾಕುವ ದಂಡ, ಅರ್ಜಿ ಪ್ರಕ್ರಿಯೆಯ ಸುಲಭ ವಿಧಾನ ಇತ್ಯಾದಿಗಳನ್ನು ಗಮನಿಸಬೇಕು.
ಕಡಿಮೆ ಬಡ್ಡಿ ದರಕ್ಕೆ ಚಿನ್ನದ ಮೇಲೆ ಸಾಲ ನೀಡುವ ಟಾಪ್ 15 ಬ್ಯಾಂಕ್ ಗಳು:
* ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ 7.00%
* ಬ್ಯಾಂಕ್ ಆಫ್ ಇಂಡಿಯಾ 7.35%
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 7.50%
* ಕೆನರಾ ಬ್ಯಾಂಕ್ 7.65%
* ಕರ್ಣಾಟಕ ಬ್ಯಾಂಕ್ 8.38%
* ಇಂಡಿಯನ್ ಬ್ಯಾಂಕ್ 8.50%
* ಯುಕೋ ಬ್ಯಾಂಕ್ 8.50%
* ಫೆಡರಲ್ ಬ್ಯಾಂಕ್ 8.50%
* ಪಂಜಾಬ್ ನ್ಯಾಷನಲ್ ಬ್ಯಾಂಕ್ 8.75%
* ಯೂನಿಯನ್ ಬ್ಯಾಂಕ್ 8.85%
* ಜಮ್ಮು ಮತ್ತು ಕಾಶ್ಮೀರ್ ಬ್ಯಾಂಕ್ 8.90%
* ಸೆಂಟ್ರಲ್ ಬ್ಯಾಂಕ್ 9.05%
* ಇಂಡಿಯನ್ ಓವರ್ ಸೀಸ್ ಬ್ಯಾಂಕ್ 9.25%
* ಎಚ್ ಡಿಎಫ್ ಸಿ ಬ್ಯಾಂಕ್ * 9.50%
* ಬ್ಯಾಂಕ್ ಆಫ್ ಬರೋಡಾ 9.60%
ಇಲ್ಲಿನ ಮಾಹಿತಿಯು ಆಯಾ ಬ್ಯಾಂಕ್ ವೆಬ್ ಸೈಟ್ ನಲ್ಲಿ ಜನವರಿ 28, 2021ರಂತೆ ಇರುವಂಥದ್ದು. * IRR ಅಕ್ಟೋಬರ್ ನಿಂದ ನಿಂದ ಡಿಸೆಂಬರ್ ತ್ರೈಮಾಸಿಕಕ್ಕೆ


Click it and Unblock the Notifications