For Quick Alerts
ALLOW NOTIFICATIONS  
For Daily Alerts

ಚಿನ್ನದ ಮೇಲೆ ಸಾಲಕ್ಕೆ ಯಾವ ಬ್ಯಾಂಕ್ ನಲ್ಲಿ ಅತಿ ಕಡಿಮೆ ಬಡ್ಡಿ ಗೊತ್ತಾ?

|

ಏನೋ ತುರ್ತು ಅಗತ್ಯ ಇದೆ ಎಂದಾಕ್ಷಣ ಸಾಲ ಅಂತ ಮಾಡಬೇಕಾದಲ್ಲಿ ನೆನಪಾಗುವುದು ಪರ್ಸನಲ್ ಲೋನ್. ಅದರಲ್ಲೂ ಈಚೆಗೆ ಫೋನ್ ಗಳಿಗೆ ಆಗಾಗ ಕರೆ ಬರುತ್ತಲೇ ಇರುತ್ತವೆ. ನಿಮಗೆ ಸಾಲ ಬೇಕಾ? ಬಹಳ ಕಡಿಮೆ ಡಾಕ್ಯುಮೆಂಟ್ ಅಥವಾ ನಿಮಗೆ ಪ್ರೀ ಅಪ್ರೂವ್ಡ್ ಸಾಲದ ಆಫರ್ ಇದೆ.. ಹೀಗೆ. ಆದ್ದರಿಂದ ಸಟಕ್ಕನೆ ಪರ್ಸನಲ್ ಲೋನ್ ತೆಗೆದುಕೊಂಡು ಬಿಡುತ್ತೀರಿ. ಆದರೆ ನಿಮ್ಮ ಬಳಿ ಚಿನ್ನ ಇದ್ದಲ್ಲಿ ಅದರ ಮೇಲೆ ಸಾಲ ಪಡೆಯುವುದು ಅದೆಷ್ಟು ಉತ್ತಮ ಗೊತ್ತಾ?

 

ನಿಮ್ಮ ಬಳಿ ಚಿನ್ನ ಇದ್ದು, ಅದನ್ನು ಅಡಮಾನ ಮಾಡಿ ಸಾಲ ಪಡೆಯುವಂತಿದ್ದರೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ಅತ್ಯುತ್ತಮ. ಬಡ್ಡಿ ದರ ಕಡಿಮೆ. ಜತೆಗೆ ಬೇಗ ವಿತರಣೆಯೂ ಆಗುತ್ತದೆ. ಅಷ್ಟೇ ಅಲ್ಲ, ನಿಮ್ಮ ಹತ್ತಿರ ಹಣ ಬಂದ ತಕ್ಷಣ ಕಟ್ಟಿ, ತೀರಿಸಬಹುದು. ಬೇರೆ ಯಾವುದೇ ಷರತ್ತುಗಳು ಇರುವುದಿಲ್ಲ.

 

ಸರ್ಕಾರಿ ಸ್ವಾಮ್ಯದ MMTCಯಿಂದ ಚಿನ್ನದ ಬೈಬ್ಯಾಕ್ ಹಾಗೂ ವಿನಿಮಯ ಸ್ಕೀಮ್ಸರ್ಕಾರಿ ಸ್ವಾಮ್ಯದ MMTCಯಿಂದ ಚಿನ್ನದ ಬೈಬ್ಯಾಕ್ ಹಾಗೂ ವಿನಿಮಯ ಸ್ಕೀಮ್

ಪರ್ಸನಲ್ ಲೋನ್ ಗಿಂತ ಚಿನ್ನದ ಮೇಲೆ ಸಾಲ ಪಡೆಯುವುದಕ್ಕೆ ಬಡ್ಡಿ ದರ ಬಹಳ ಕಡಿಮೆ. ಇನ್ನು ನಿಮ್ಮ ಬಳಿ ಇರುವ ಚಿನ್ನದ ಮೌಲ್ಯದ ಶೇಕಡಾ 90ರ ತನಕ ಸಾಲ ಸಿಗುತ್ತದೆ. ಈ ಆಫರ್ ಮಾರ್ಚ್ 31, 2021ರ ತನಕ ಇದೆ. ನಿಮ್ಮ ಬಳಿ ಎಷ್ಟು ಚಿನ್ನ ಇದೆ ಎಂಬುದರ ಆಧಾರದಲ್ಲಿ ಎಷ್ಟು ಮೊತ್ತ ಸಾಲವಾಗಿ ಸಿಗಲು ಸಾಧ್ಯ ಎಂದು ಬ್ಯಾಂಕ್ ನವರು ತಿಳಿಸುತ್ತಾರೆ.

ಚಿನ್ನದ ಮೇಲೆ ಸಾಲಕ್ಕೆ ಯಾವ ಬ್ಯಾಂಕ್ ನಲ್ಲಿ ಅತಿ ಕಡಿಮೆ ಬಡ್ಡಿ ಗೊತ್ತಾ

ಹಾಗಿದ್ದರೆ ಈಗ ಜಾಹೀರಾತು ನೀಡುತ್ತಿರುವಂತೆ ಯಾವ ಬ್ಯಾಂಕ್ ನಲ್ಲಿ ಚಿನ್ನದ ಮೇಲೆ ಎಷ್ಟು ಬಡ್ಡಿ ದರ ಇದೆ ಎಂಬ ವಿವರ ಹೀಗಿದೆ (ಅಕ್ಟೋಬರ್ 15, 2020ರ ಮಾಹಿತಿ):
* ಬ್ಯಾಂಕ್ ಆಫ್ ಇಂಡಿಯಾ 7.35%

* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 7.50%

* ಕೆನರಾ ಬ್ಯಾಂಕ್ 7.65%

* ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ 8.10%

* ಕರ್ನಾಟಕ ಬ್ಯಾಂಕ್ 8.40%

* ಇಂಡಿಯನ್ ಬ್ಯಾಂಕ್ 8.50%

* ಫೆಡರಲ್ ಬ್ಯಾಂಕ್ 8.50%

* ಯುಕೋ ಬ್ಯಾಂಕ್ 8.50%

* ಪಂಜಾಬ್ ನ್ಯಾಷನಲ್ ಬ್ಯಾಂಕ್ 8.75%

* ಯೂನಿಯನ್ ಬ್ಯಾಂಕ್ 8.85%

English summary

India's Major Banks Gold Loan Interest Rates

Gold loan rate of interest in India's major banks as follows.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X