For Quick Alerts
ALLOW NOTIFICATIONS  
For Daily Alerts

ಚಿನ್ನದ ದರ ಗರಿಷ್ಠ ಮಟ್ಟದಿಂದ 4500 ರು. ಇಳಿಕೆ; ಬೇಡಿಕೆ ಕುದುರದೆ ಡಿಸ್ಕೌಂಟ್ ಮಾರಾಟ

|

ಚಿನ್ನದ ವ್ಯಾಪಾರಿಗಳು ದೇಶದಲ್ಲಿ ಸತತ ಐದನೇ ವಾರ ರಿಯಾಯಿತಿ ನೀಡುವುದನ್ನು ಮುಂದುವರಿಸಿದ್ದಾರೆ. ಹಬ್ಬದ ಸೀಸನ್ ಆರಂಭವಾಗಿ, ಬೇಡಿಕೆ ಕುದುರಿಕೊಳ್ಳಬಹುದು ಎಂಬ ಭರವಸೆ ಮಧ್ಯೆಯೂ ಈ ಬೆಳವಣಿಗೆ ನಡೆಯುತ್ತಿದೆ. ಭಾರತದಲ್ಲಿ ಪ್ರತಿ ಔನ್ಸ್ (28.3495 ಗ್ರಾಮ್ ಗಳು) ಚಿನ್ನಕ್ಕೆ 23 ಡಾಲರ್ ರಿಯಾಯಿತಿಯನ್ನು ಅಧಿಕೃತವಾಗಿ ದೇಶೀ ಬೆಲೆಯಲ್ಲಿ ನೀಡಲಾಗುತ್ತಿದೆ.

ಚಿನ್ನದ ಬೆಲೆ ಸದ್ಯಕ್ಕೆ ಇಳಿಕೆ ಆಗಬಹುದಾ? ಏನಂತಾರೆ ವಿಶ್ಲೇಷಕರು?ಚಿನ್ನದ ಬೆಲೆ ಸದ್ಯಕ್ಕೆ ಇಳಿಕೆ ಆಗಬಹುದಾ? ಏನಂತಾರೆ ವಿಶ್ಲೇಷಕರು?

ಕಳೆದ ವಾರ 30 ಡಾಲರ್ ರಿಯಾಯಿತಿ ನೀಡಲಾಗುತ್ತಿತ್ತು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಭಾರತದ ಚಿನ್ನದ ಬೆಲೆಯಲ್ಲಿ 12.5% ಆಮದು ಸುಂಕ ಹಾಗೂ 3% ಜಿಎಸ್ ಟಿ ಒಳಗೊಂಡಿದೆ. ಫ್ಯೂಚರ್ ಮಾರ್ಕೆಟ್ ನಲ್ಲಿ ವಾರಾಂತ್ಯದ ಹೊತ್ತಿಗೆ ಪ್ರತಿ ಹತ್ತು ಗ್ರಾಮ್ ಚಿನ್ನ 51,720 ರುಪಾಯಿ ಇತ್ತು. ಕಳೆದ ವಾರಕ್ಕೆ ಹೋಲಿಸಿದಲ್ಲಿ 400 ರುಪಾಯಿ ಕಡಿಮೆ ಇತ್ತು. ಇನ್ನು ಬೆಳ್ಳಿಯು ವಾರಾಂತ್ಯಕ್ಕೆ ಕೇಜಿಗೆ 68 ಸಾವಿರ ರುಪಾಯಿಯಂತೆ ವಹಿವಾಟು ಮುಗಿಸಿದೆ.

ಆಗಸ್ಟ್ ಮೊದಲ ವಾರದಲ್ಲಿ ಪ್ರತಿ ಹತ್ತು ಗ್ರಾಮ್ ಗೆ 56,200 ರು.

ಆಗಸ್ಟ್ ಮೊದಲ ವಾರದಲ್ಲಿ ಪ್ರತಿ ಹತ್ತು ಗ್ರಾಮ್ ಗೆ 56,200 ರು.

ಆಗಸ್ಟ್ ಮೊದಲ ವಾರದಲ್ಲಿ ಪ್ರತಿ ಹತ್ತು ಗ್ರಾಮ್ ಗೆ ದಾಖಲೆಯ 56,200 ರುಪಾಯಿ ಮುಟ್ಟಿದ ನಂತರ ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಚಿನ್ನದ ದರ ಒಂದೇ ಮಿತಿಯಲ್ಲಿ ವಹಿವಾಟು ನಡೆಸುತ್ತಿದೆ. ಅಲ್ಲಿಂದ ಕುಸಿತ ಕಂಡ ನಂತರ ನಿರ್ದಿಷ್ಟ ದಿಕ್ಕು ಎಂಬುದೇ ಸಿಗುತ್ತಿಲ್ಲ. ಒಂದು ವೇಳೆ ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡಲ್ಲಿ ಮುಂಬರುವ ವಾರಗಳಲ್ಲಿ ಬೇಡಿಕೆ ಕುದುರಬಹುದು ಎಂಬ ನಿರೀಕ್ಷೆ ಇದ್ದು, ಹಬ್ಬದ ಸೀಸನ್ ಗಾಗಿ ಒಡವೆಗಳನ್ನು ಸಂಗ್ರಹಿಸಲು ಶುರು ಮಾಡಬಹುದು ಎಂಬ ಅಂದಾಜಿನಲ್ಲಿದ್ದಾರೆ.

ಈಕ್ವಿಟಿ ಮಾರ್ಕೆಟ್ ನಲ್ಲಿ ಮಿಶ್ರ ಬಗೆಯ ವಹಿವಾಟು

ಈಕ್ವಿಟಿ ಮಾರ್ಕೆಟ್ ನಲ್ಲಿ ಮಿಶ್ರ ಬಗೆಯ ವಹಿವಾಟು

ಚಿನ್ನದ ದರ ತಳ ಮಟ್ಟದಲ್ಲಿ ಇರುವಾಗ ಏರುತ್ತಿದ್ದ ಕೊರೊನಾ ಪ್ರಕರಣಗಳು ಹಾಗೂ ಆರ್ಥಿಕತೆ ದುರ್ಬಲತೆಯು ಬೆಂಬಲ ನೀಡಿತು. ಕಳೆದ ಶುಕ್ರವಾರಕ್ಕೆ ಕೊನೆಯಾದ ವಾರಕ್ಕೆ ಯುಎಸ್ ಚಿನ್ನದ ಫ್ಯೂಚರ್ಸ್ ದರವು ಔನ್ಸ್ ಗೆ 1957 ಡಾಲರ್ ನಂತೆ ವಹಿವಾಟು ಚುಕ್ತಾ ಮಾಡಿತು. ಈಕ್ವಿಟಿ ಮಾರ್ಕೆಟ್ ನಲ್ಲಿ ಮಿಶ್ರ ಬಗೆಯ ವಹಿವಾಟು ನಡೆಯುತ್ತಿರುವ ಮಧ್ಯೆ ಚಿನ್ನದ ಬೆಲೆಯಲ್ಲಿ ಮುಂದಿನ ಕೆಲ ದಿನಗಳು ಏರಿಳಿತಗಳು ಕಾಣಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಚಿನ್ನದ ಬೆಲೆಯಲ್ಲಿ ಇಲ್ಲಿಯ ತನಕ 30%ಗೂ ಹೆಚ್ಚು ಹೆಚ್ಚಳ
 

ಚಿನ್ನದ ಬೆಲೆಯಲ್ಲಿ ಇಲ್ಲಿಯ ತನಕ 30%ಗೂ ಹೆಚ್ಚು ಹೆಚ್ಚಳ

ದೀರ್ಘಾವಧಿಗೆ ಬಡ್ಡಿ ದರವನ್ನು ಶೂನ್ಯದ ಸಮೀಪವೇ ಇರಿಸುವ ಸೂಚನೆಯನ್ನು ಈ ವಾರದ ಆರಂಭದಲ್ಲಿ ಯುಎಸ್ ಫೆಡರಲ್ ರಿಸರ್ವ್ ನೀಡಿತ್ತು. ಈ ರೀತಿಯ ಕಡಿಮೆ ಬಡ್ಡಿ ದರವು ಅಷ್ಟೇನೂ ರಿಟರ್ನ್ ನೀಡದಿದ್ದರೂ ಚಿನ್ನದ ಆಪರ್ಚುನಿಟಿ ವೆಚ್ಚವನ್ನು ಕಡಿಮೆ ಮಾಡಿದೆ. ಇನ್ನು ವಿವಿಧ ದೇಶಗಳ ಆರ್ಥಿಕ ಉತ್ತೇಜನ ಕ್ರಮಗಳು ಈ ವರ್ಷ ಚಿನ್ನದ ಬೆಲೆಯಲ್ಲಿ 28% ಹೆಚ್ಚಳ ಕಾಣಲು ನೆರವಾಗಿವೆ. ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತದ ನಡುವೆ ಭಾರತದಲ್ಲಿ ಈ ವರ್ಷ ಚಿನ್ನದ ಬೆಲೆಯಲ್ಲಿ ಇಲ್ಲಿಯ ತನಕ 30%ಗೂ ಹೆಚ್ಚು ಹೆಚ್ಚಳವಾಗಿದೆ. ಭಾರತಕ್ಕೆ ಅಗತ್ಯ ಇರುವ ಚಿನ್ನದಲ್ಲಿ ಬಹುಪಾಲನ್ನು ಆಮದು ಮಾಡಿಕೊಳ್ಳುತ್ತದೆ.

English summary

Gold Price Fall 4500 Rupees From High; Still Sold At Discount

Gold price in India fell 4500 rupees from it's high in August first week. Still sold at discount in India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X