ಕಳೆದ 5 ದಿನಗಳ ನಂತರ ಭಾರತದಲ್ಲಿ ಚಿನ್ನದ ಬೆಲೆ 900 ರೂಪಾಯಿಗಳಷ್ಟು ಕುಸಿದಿದೆ, ಅದಾದ ಬಳಿಕ ಇಂದು ಚಿನ್ನದ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 300 ರೂಪಾಯಿ ಏರಿಕೆಯಾಗಿ, 56,000 ರೂಪಾಯಿ ಆಗಿದೆ. 24 ಕ್ಯಾರೆಟ್ ಹಳದಿ ಲೋಹದ ಬೆಲೆ 330 ರೂಪಾಯಿ ಏರಿಕೆಯಾಗಿದ್ದು, 61,090 ರೂಪಾಯಿಗೆ ತಲುಪಿದೆ.
ನವೆಂಬರ್ 1ರಿಂದ ಈವರೆಗೆ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 1200 ರೂಪಾಯಿ ಏರಿಕೆಯನ್ನು ಕಂಡಿದ್ದರೆ, 500 ರೂಪಾಯಿಯಷ್ಟು ಇಳಿಕೆಯಾಗಿದೆ.

ಎಂಸಿಎಕ್ಸ್ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 60,000 ರೂಪಾಯಿಗಿಂತ ಅಧಿಕವಾಗಿದೆ. ಆದರೆ ಸ್ಪಾಟ್ ಗೋಲ್ಡ್ ದರವು ಪ್ರಸ್ತುತ ಪ್ರತಿ ಔನ್ಸ್‌ಗೆ 11,958 ಡಾಲರ್ ಸಮೀಪದಲ್ಲಿದೆ. ಮತ್ತೊಂದೆಡೆ, ನವೆಂಬರ್ 10 ರಂದು ಎಂಸಿಎಕ್ಸ್ ಬೆಳ್ಳಿಯ ದರವು ಪ್ರತಿ ಕೆಜಿಗೆ 70,998 ಕ್ಕೆ ವಹಿವಾಟು ಪ್ರಾರಂಭಿಸಿದೆ. 71,155 ರೂಪಾಯಿ ದಿನದ ಕನಿಷ್ಠ ಮಟ್ಟವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ, ಬೆಳ್ಳಿ ಬೆಲೆ ಇಂದು ಪ್ರತಿ ಔನ್ಸ್‌ಗೆ 22.70 ಡಾಲರ್‌ನ ರ ಸಮೀಪದಲ್ಲಿದೆ.
ಇಂದು ಚಿನ್ನ ಖರೀದಿಸಬಹುದೇ?
ಧನತ್ರಯೋದಶಿ ದಿನ ಚಿನ್ನವನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ ಚಿನ್ನ ಖರೀದಿ ಮಾಡಿದರೆ ಅದೃಷ್ಟ ಉಂಟಾಗುತ್ತದೆ ಎಂದು ನಂಬಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೋತಿಲಾಲ್ ಓಸ್ವಾಲ್‌ನ ಅಮಿತ್ ಸಜೇಜಾ, "ಧನತ್ರಯೋದಶಿ 2023 ರ ಮೊದಲು, ಒಂದು ದೊಡ್ಡ ಬದಲಾವಣೆ ನಿರೀಕ್ಷಿಸಲಾಗಿತ್ತು ಮತ್ತು ಅದು ಸಂಭವಿಸಿದೆ. ಚಿನ್ನದ ಬೆಲೆಗಳು 10 ಗ್ರಾಂಗೆ 59,500 ರೂಪಾಯಿಗೆ ತಲುಪಬಹುದು. 59,500 ರಿಂದ 59,000 ಆಸುಪಾಸಿನಲ್ಲಿ ಹೂಡಿಕೆದಾರರು ಚಿನ್ನ ಖರೀದಿಬಹುದು," ಎಂದು ತಿಳಿಸಿದರು.
ಭಾರತದ ವಿವಿಧ ನಗರಗಳಲ್ಲಿ ಇಂದು ಚಿನ್ನದ ದರ
ಇಂದು, ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ (10 ಗ್ರಾಂ) ಚಿನ್ನದ ದರ 55,850 ರೂಪಾಯಿ ಆಗಿದ್ದರೆ. ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 56,150 ರೂಪಾಯು ಆಗಿದೆ. ದೆಹಲಿಯಲ್ಲಿ ಚಿನ್ನದ ದರವು ಚಂಡೀಗಢ, ಜೈಪುರ ಮತ್ತು ಲಕ್ನೋದಲ್ಲಿನ ಚಿನ್ನದ ಬೆಲೆಗೆ ಸಮನಾಗಿದೆ.
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ (10 ಗ್ರಾಂ) ಚಿನ್ನದ ಬೆಲೆ 55,700 ರೂಪಾಯಿ ಆಗಿದ್ದರೆ, ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 56,000 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ದರವು ಹೈದರಾಬಾದ್, ಕೇರಳ ಮತ್ತು ಕೋಲ್ಕತ್ತಾದ ಚಿನ್ನದ ಬೆಲೆಗೆ ಸಮನಾಗಿದೆ.


Click it and Unblock the Notifications