ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಳೆದ ಮೇ 2022ರ ಬಳಿಕ ಆರು ಬಾರಿ ರೆಪೋ ದರವನ್ನು ಏರಿಸಿದೆ. ಅದರಿಂದಾಗಿ ಹಲವಾರು ಬ್ಯಾಂಕುಗಳು ಸಾಲದ ಬಡ್ಡಿದರ ಮತ್ತು ಫಿಕ್ಸಿಡ್ ಡೆಪಾಸಿಟ್‌ಗಳ ಬಡ್ಡಿದರವನ್ನು ಏರಿಸಿದೆ. ಆದರೆ ಇದೊಂದು ಬ್ಯಾಂಕ್ ಸಾಲದ ಬಡ್ಡಿದರ ಇಳಿಸಿದೆ. ಹೌದು, ಸರ್ಕಾರಿ ಸೌಮ್ಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಗೃಹ ಸಾಲವನ್ನು ಪಡೆದಿರುವವರಿಗೆ ಸಿಹಿಸುದ್ದಿಯನ್ನು ನೀಡಿದ್ದು, ಗೃಹ ಸಾಲದ ಬಡ್ಡಿದರವನ್ನು ಇಳಿಸಿದೆ.
ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದ ಬಡ್ಡಿದರವು ಶೇಕಡ 40 ಮೂಲಾಂಕ ಬಡ್ಡಿದರವನ್ನು ಇಳಿಸಿದ್ದು, ಪ್ರಸ್ತುತ ಗೃಹ ಸಾಲದ ಬಡ್ಡಿದರ ಶೇಕಡ 8.5ಕ್ಕೆ ತಲುಪಿದೆ. ಅದಾದ ಬಳಿಕ ಬ್ಯಾಂಕ್ ಎಂಎಸ್‌ಎಂಇ ಸಾಲದ ಬಡ್ಡಿದರವನ್ನು ಕೂಡಾ ಇಳಿಸಿದೆ. ಶೇಕಡ 8.40ಕ್ಕೆ ಇಳಿಸಲಾಗಿದ್ದು, ಎರಡು ಕೂಡಾ ಮಾರ್ಚ್ 5, 2023ರಿಂದ ಜಾರಿಗೆ ಬರಲಿದೆ. ಇದು ನಿಯಮಿತ ಅವಧಿಯ ಆಫರ್ ಆಗಿದ್ದು, ಮಾರ್ಚ್ 31, 2023ಕ್ಕೆ ಕೊನೆಯಾಗಲಿದೆ.

ಇದು ಅತೀ ಕಡಿಮೆಯಾದ ಅಥವಾ ಸ್ಪರ್ಧಾತ್ಪಕದವಾಗಿ ಬಡ್ಡಿದರವಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿಕೊಂಡಿದೆ. ಇದಕ್ಕೂ ಹೆಚ್ಚಾಗಿ ಬಡ್ಡಿದರ ಇಳಿಸಿರುವ ಜೊತೆಗೆ ಬ್ಯಾಂಕ್ ಶೇಕಡ 100ರಷ್ಟು ಪ್ರಕ್ರಿಯಾ ಶುಲ್ಕವನ್ನು ಮನ್ನಾ ನಡೆಸಿದೆ. ಎಂಎಸ್‌ಎಂಇ ಸಾಲದಲ್ಲಿ ಶೇಕಡ 50ರಷ್ಟು ಪ್ರಕ್ರಿಯಾ ಶುಲ್ಕ ಮನ್ನಾ ಮಾಡಲಾಗುತ್ತದೆ. ಹೊಸದಾಗಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದಾದರೆ ಶೇಕಡ 8.5ರಷ್ಟು ಬಡ್ಡಿದರವಿದೆ. ಸಾಲದಾರರ ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ಬಡ್ಡಿದರವಿರಲಿದೆ.
ಇತರೆ ಬ್ಯಾಂಕ್‌ಗಳ ಗೃಹ ಸಾಲದ ಬಡ್ಡಿದರ
ಸಾರ್ವಜನಿಕ ಬ್ಯಾಂಕ್ ಆದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರಿಗೆ ಸಾಲಕ್ಕೆ ಶೇಕಡ 8.55ರಷ್ಟು ಬಡ್ಡಿದರವನ್ನು ನೀಡುತ್ತದೆ. ಸುಮಾರು 75 ಲಕ್ಷ ರೂಪಾಯಿ ಗೃಹ ಸಾಲ ಪಡೆದಿದ್ದರೆ, ಅದರ ಸಾಲ ಮರುಪಾವತಿ ಅವಧಿ 20 ವರ್ಷ ಅಂದುಕೊಳ್ಳಿ, ಈ ಲೆಕ್ಕಾಚಾರದಲ್ಲಿ ನೀವು 65,324 ರೂಪಾಯಿ ಇಎಂಐ ಪಾವತಿ ಮಾಡಬೇಕಾಗುತ್ತದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲಕ್ಕೆ ಶೇಕಡ 8.60ರಷ್ಟು ಬಡ್ಡಿದರವನ್ನು ನೀಡುತ್ತದೆ. 20 ವರ್ಷದ ಅವಧಿಗೆ ನೀವು ಮಾಸಿಕವಾಗಿ 65,662 ರೂಪಾಯಿ ಇಎಂಐ ಪಾವತಿಸಬೇಕಾಗುತ್ತದೆ.
ಕೋಟಕ್ ಮಹೀಂದ್ರಾ ಬ್ಯಾಂಕ್ ಗೃಹ ಸಾಲಕ್ಕೆ ಅತೀ ಕಡಿಮೆ ಬಡ್ಡಿದರವನ್ನು ನೀಡುತ್ತದೆ. ಅಂದರೆ ಗೃಹ ಸಾಲಕ್ಕೆ ಶೇಕಡ 8.65ರಷ್ಟು ಬಡ್ಡಿದರವನ್ನು ನೀಡುತ್ತದೆ. ಸುಮಾರು 75 ಲಕ್ಷ ರೂಪಾಯಿ ಗೃಹ ಸಾಲ ಪಡೆದಿದ್ದರೆ, ಅದರ ಸಾಲ ಮರುಪಾವತಿ ಅವಧಿ 20 ವರ್ಷ ಆಗಿದ್ದಾಗ, ಪ್ರತಿ ತಿಂಗಳ ಇಎಂಐ 65,801 ರೂಪಾಯಿ ಆಗಿದೆ. ಇನ್ನು ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಗೃಹ ಸಾಲಕ್ಕೆ ಶೇಕಡ 8.45ರಷ್ಟು ಬಡ್ಡಿದರವನ್ನು ನೀಡುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 75 ಲಕ್ಷ ರೂಪಾಯಿ ಗೃಹ ಸಾಲಕ್ಕೆ, 20 ವರ್ಷದ ಅವಧಿಗೆ ಮಾಸಿಕವಾಗಿ 64,850 ಇಎಂಐ ಪಾವತಿಸಬೇಕಾಗುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಹೊರತಾಗಿ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಆಕ್ಸಿಸ್ ಬ್ಯಾಂಕ್‌ನ ಅತೀ ಅಧಿಕ ಬಡ್ಡಿದರ ಶೇಕಡ 8.75ರಷ್ಟು ಆಗಿದೆ. 75 ಲಕ್ಷ ರೂಪಾಯಿ ಗೃಹ ಸಾಲಕ್ಕೆ, 20 ವರ್ಷದ ಅವಧಿ ಎಂದುಕೊಂಡಾಗ ಗೃಹ ಸಾಲವನ್ನು ಪಡೆದವರು ಮಾಸಿಕವಾಗಿ 66,278 ರೂಪಾಯಿ ಇಎಂಐ ಅನ್ನು ಪಾವತಿಸಬೇಕಾಗುತ್ತದೆ.


Click it and Unblock the Notifications