ನಾವು ಹೂಡಿಕೆ ಮಾಡುವ ನಿರ್ಧಾರ ಮಾಡಿದಾಗ ನಮ್ಮ ಮುಂದೆ ಸ್ಟಾಕ್ ಮಾರುಕಟ್ಟೆ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು ಎಂಬ ಆಲೋಚನೆ ಬರುತ್ತದೆ. ಆದರೆ ಸುರಕ್ಷಿತ ಮತ್ತು ಅಧಿಕ ರಿಟರ್ನ್ ಎರಡೂ ಬೇಕು ಎಂದಾದಾಗ ನಮ್ಮ ಮುಂದೆ ಬರುವ ಉತ್ತಮ ಆಯ್ಕೆ ಅಂಚೆ ಕಚೇರಿ ಹೂಡಿಕೆ ಯೋಜನೆಯಾಗಿದೆ.
ಹೂಡಿಕೆದಾರರಿಗೆ ಇತ್ತೀಚೆಗೆ ಕೇಂದ್ರ ಸರ್ಕಾರವು ಸಿಹಿಸುದ್ದಿಯನ್ನು ನೀಡಿದೆ. ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕಕ್ಕೆ ಐದು ವರ್ಷಗಳ ರೆಕ್ಯೂರಿಂಗ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು 20 ಮೂಲಾಂಕಗಳಷ್ಟು ಹೆಚ್ಚಿಸಿದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಷ್ಕರಿಸಲಾಗುತ್ತದೆ.

ಈಗ 5 ವರ್ಷಗಳ ಆರ್‌ಡಿ ಮೇಲಿನ ಬಡ್ಡಿದರವನ್ನು ಅಕ್ಟೋಬರ್- ಡಿಸೆಂಬರ್ ಅವಧಿಗೆ ಶೇಕಡ 6.5 ರಿಂದ ಶೇಕಡ 6.7 ಕ್ಕೆ ಏರಿಸಲಾಗಿದೆ. ಅಂದರೆ 20 ಮೂಲಾಂಕ ಏರಿಕೆ ಮಾಡಲಾಗಿದೆ. ಅದೇ ಸಮಯದಲ್ಲಿ, ಆರ್‌ಡಿ ಹೊರತುಪಡಿಸಿ, ಎಲ್ಲಾ ಇತರ ಯೋಜನೆಗಳ ಬಡ್ಡಿದರಗಳನ್ನು ಬದಲಾಯಿಸಲಾಗಿಲ್ಲ.
ಪ್ರತಿ ತಿಂಗಳು ಅಂಚೆ ಕಚೇರಿ ಆರ್‌ಡಿಯಲ್ಲಿ ಡೆಪಾಸಿಟ್ ಮಾಡಬೇಕಾದ ಕನಿಷ್ಠ ಮೊತ್ತವು 100 ರೂಪಾಯಿ ಆಗಿದೆ. ಆದರೆ, ಪೋಸ್ಟ್ ಆಫೀಸ್ ಆರ್‌ಡಿ 5 ವರ್ಷಗಳಲ್ಲಿ ಮೆಚ್ಯೂರ್ ಆಗುತ್ತದೆ. ಇದಲ್ಲದೇ, ಸಂಬಂಧಪಟ್ಟ ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಖಾತೆಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಬಹುದು. ವಿಸ್ತರಣೆಯ ಸಮಯದಲ್ಲಿ ಅನ್ವಯವಾಗುವ ಬಡ್ಡಿ ದರವು ಖಾತೆಯನ್ನು ಮೂಲತಃ ತೆರೆಯಲಾದ ಅದೇ ಬಡ್ಡಿ ದರವಾಗಿರುತ್ತದೆ.
56,830 ರೂಪಾಯು ಬಡ್ಡಿ ಪಡೆಯುವುದು ಹೇಗೆ?
ನೀವು ಪ್ರತಿ ತಿಂಗಳು 5000 ರೂಪಾಯಿಗಳನ್ನು ಡೆಪಾಸಿಟ್ ಮಾಡುತ್ತಿದ್ದರೆ, ನಂತರ ಪೋಸ್ಟ್ ಆಫೀಸ್ ಆರ್‌ಡಿಯನ್ನು ಪ್ರಾರಂಭಿಸಿದ ನಂತರ, ನೀವು ಒಂದು ವರ್ಷದಲ್ಲಿ 60,000 ರೂಪಾಯಿ ಹೂಡಿಕೆಯನ್ನು ಹೊಂದಿರುತ್ತೀರಿ. ಇದು ನಂತರ 5 ವರ್ಷಗಳಲ್ಲಿ ಒಟ್ಟು 3,00,000 ರೂಪಾಯಿ ಆಗುತ್ತದೆ.
ಈ ಅವಧಿಯ ಕೊನೆಯಲ್ಲಿ, ನೀವು 56,830 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯಬಹುದಾಗಿದೆ. ಒಟ್ಟಾರೆಯಾಗಿ, ನೀವು ಗಳಿಸಿದ ಅಸಲು ಮತ್ತು ಬಡ್ಡಿಯನ್ನು ಸೇರಿಸಿದಾಗ, ನೀವು 5 ವರ್ಷಗಳ ನಂತರ 3,56,830 ರೂಪಾಯಿ ಪಡೆಯಬಹುದಾಗಿದೆ. ಬಡ್ಡಿದರ ಶೇಕಡ 6.7 ಆಗಿರುತ್ತದೆ.


Click it and Unblock the Notifications