For Quick Alerts
ALLOW NOTIFICATIONS  
For Daily Alerts

ಸರ್ಕಾರದಿಂದ ಬದಲಾಗುವ ಬಡ್ಡಿ ದರದ ಬಾಂಡ್; ಇಲ್ಲಿದೆ ಪೂರ್ಣ ಮಾಹಿತಿ

|

ಭಾರತ ಸರ್ಕಾರವು ಬದಲಾಗುವ ದರದ (ಫ್ಲೋಟಿಂಗ್ ರೇಟ್) ಉಳಿತಾಯ ಬಾಂಡ್ ಗಳು, 2020 (ತೆರಿಗೆ ಅನ್ವಯಿಸುತ್ತದೆ) ಯೋಜನೆಯನ್ನು ಜುಲೈ 1, 2020ರಿಂದ ಆರಂಭಿಸುತ್ತದೆ. FRSB 2020 (T) ತೆರಿಗೆ ಅನ್ವಯಿಸುವ ಬಾಂಡ್ ಆಗಿದ್ದು, ಭಾರತೀಯ ನಿವಾಸಿಗಳು ಹಾಗೂ ಹಿಂದೂ ಅವಿಭಕ್ತ ಕುಟುಂಬಕ್ಕೆ ಹೂಡಿಕೆ ಗರಿಷ್ಠ ಮಿತಿ ಇಲ್ಲ.

 

ಇನ್ನು ಹೆಸರೇ ತಿಳಿಸುವಂತೆ ಈ ಬಾಂಡ್ ಅವಧಿಯ ಉದ್ದಕ್ಕೂ ಬಡ್ಡಿ ದರವು ಬದಲಾಗುತ್ತಲೇ ಇರುತ್ತದೆ. ಇದರಲ್ಲಿ ಹೂಡಿಕೆ ಮಾಡಬೇಕು ಅಂದುಕೊಳ್ಳುವವರಿಗೆ ಗೊತ್ತಿರಬೇಕಾದ ಮುಖ್ಯ ಸಂಗತಿಗಳನ್ನು ಪ್ರಶ್ನೋತ್ತರ ಮಾದರಿಯಲ್ಲಿ ನೀಡಲಾಗಿದೆ. ಇನ್ನೇಕ ತಡ, ಮುಂದೆ ಓದಿ.

ಹೂಡಿಕೆಗೆ ಅರ್ಹತಾ ಮಾನದಂಡ ಏನು?

ಹೂಡಿಕೆಗೆ ಅರ್ಹತಾ ಮಾನದಂಡ ಏನು?

ವೈಯಕ್ತಿಕವಾಗಿ (ಇದರಲ್ಲಿ ಜಂಟಿ ಖಾತೆಯೂ ಒಳಗೊಳ್ಳುತ್ತದೆ) ಹಾಗೂ ಹಿಂದೂ ಅವಿಭಕ್ತ ಕುಟುಂಬಗಳು ಈ ಬಾಂಡ್ ಗಳಲ್ಲಿ ಹೂಡಿಕೆ ಮಾಡಬಹುದು. FRSB 2020 ತೆರಿಗೆಸಹಿತ ಬಾಂಡ್ ಗಳಲ್ಲಿ ಅನಿವಾಸಿ ಭಾರತೀಯರು ಹೂಡಿಕೆ ಮಾಡಲು ಸಾಧ್ಯವಿಲ್ಲ. ಕನಿಷ್ಠ 1000 ರುಪಾಯಿಯೊಂದಿಗೆ ಹೂಡಿಕೆ ಶುರು ಮಾಡಬಹುದು. ಗರಿಷ್ಠ ಮಿತಿ ವಿಧಿಸಿಲ್ಲ. ನಗದು ವ್ಯವಹಾರ ಏನಿದ್ದರೂ 20,000 ರುಪಾಯಿ ಒಳಗಿನ ಮೊತ್ತಕ್ಕೆ ಮಾತ್ರ. ಹೂಡಿಕೆಗೆ ಚೆಕ್, ಡ್ರಾಫ್ಟ್ ಅಥವಾ ಡಿಜಿಟಲ್ ಪಾವತಿ ಮಾಡಬಹುದು. ಮುಂದಿನ ನೋಟಿಸ್ ನೀಡುವ ತನಕ ಈ ಬಾಂಡ್ ಲಭ್ಯವಿರುತ್ತದೆ ಹಾಗೂ ಇದು ನಾನ್ ಕ್ಯುಮಲೇಟಿವ್ ಆಗಿರುತ್ತದೆ.

ಮರುಪಾವತಿ ಅಥವಾ ಅವಧಿ ಹಾಗೂ ಅರ್ಜಿ

ಮರುಪಾವತಿ ಅಥವಾ ಅವಧಿ ಹಾಗೂ ಅರ್ಜಿ

ತೆರಿಗೆ ಒಳಗೊಂಡ ಈ ಉಳಿತಾಯದ ಅವಧಿ ವಿತರಣೆ ಆದ ದಿನದಿಂದ ಏಳು ವರ್ಷ. ನಿರ್ದಿಷ್ಟ ಹಿರಿಯ ನಾಗರಿಕರ ವಿಭಾಗಕ್ಕೆ ಸೇರುವವರಿಗೆ ಅವಧಿಗೆ ಮುನ್ನ ತೆಗೆದುಕೊಳ್ಳುವ ಅವಕಾಶ ಇದೆ. ಆಯ್ದ ಎಸ್ ಬಿಐ, ಐಡಿಬಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಈ ಬಾಂಡ್ ಗಳಿಗೆ ಅರ್ಜಿ ಸ್ವೀಕರಿಸಲಾಗುತ್ತದೆ. ಅದು ಬಾಂಡ್ ಲೆಡ್ಜರ್ ಖಾತೆ ರೂಪದಲ್ಲಿ ಇರುತ್ತದೆ. FRSB 2020 (T) ಬಾಂಡ್ ಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಮಾತ್ರ ವಿತರಿಸಲಾಗುತ್ತದೆ. ಬಾಂಡ್ ಲೆಡ್ಜರ್ ಅಕೌಂಟ್ ನಲ್ಲಿ(ಬಿಎಲ್ ಎ) ಈ ಖಾತೆಗಳನ್ನು ನಿರ್ವಹಿಸಲಾಗುತ್ತದೆ.

ಬಡ್ಡಿದರ ಲೆಕ್ಕಾಚಾರ ಹೇಗೆ?
 

ಬಡ್ಡಿದರ ಲೆಕ್ಕಾಚಾರ ಹೇಗೆ?

ಪ್ರತಿ ವರ್ಷ ಜನವರಿ ಹಾಗೂ ಜುಲೈ 1ನೇ ತಾರೀಕು ಅರ್ಧ ವಾರ್ಷಿಕವಾಗಿ ಬಡ್ಡಿ ವಿತರಣೆ ಮಾಡಲಾಗುತ್ತದೆ. ಈಗ ಬಾಂಡ್ ನಲ್ಲಿ ಹಣ ತೊಡಗಿಸಿದರೆ ಚಂದಾದಾರರಿಗೆ ಜನವರಿ 1, 2021ಕ್ಕೆ 7.15 ಪರ್ಸೆಂಟ್ ಸಿಗುತ್ತದೆ. ಪ್ರತಿ ಆರು ತಿಂಗಳಿಗೆ ಒಮ್ಮೆ ಬಡ್ಡಿ ದರವನ್ನು ಮರು ನಿಗದಿ ಮಾಡಲಾಗುತ್ತದೆ. ಮೊದಲ ಮರು ನಿಗದಿ ಜನವರಿ 1, 2021ರಿಂದ ಶುರುವಾಗುತ್ತದೆ. ಈ ಬಾಂಡ್ ಗಳು ಕ್ಯುಮಲೇಟಿವ್ ಬಡ್ಡಿ ಪಾವತಿ ಆಯ್ಕೆಯೊಂದಿಗೆ ಇಲ್ಲ. ರಾಷ್ಟ್ರೀಯ ಉಳಿತಾಯ ಪತ್ರ (ಎನ್ ಎಸ್ ಸಿ) ಬಡ್ಡಿ ದರಕ್ಕೆ ಹೊಂದುವಂತೆ 35 ಬೇಸಿಸ್ ಪಾಯಿಂಟ್ ಹೆಚ್ಚಿಸಿ ನೀಡಲಾಗುತ್ತದೆ.

ತೆರಿಗೆ ಲೆಕ್ಕಾಚಾರ ಮತ್ತಿತರ ವಿವರ

ತೆರಿಗೆ ಲೆಕ್ಕಾಚಾರ ಮತ್ತಿತರ ವಿವರ

ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಬಾಂಡ್ ಮೇಲಿನ ಬಡ್ಡಿಗೆ ತೆರಿಗೆ ಇದೆ. ಒಂದು ವೇಳೆ ತೆರಿಗೆಯಿಂದ ವಿನಾಯಿತಿ ಸಿಗಲು ಸೂಕ್ತ ಪತ್ರವನ್ನು ಸಲ್ಲಿಸದಿದ್ದಲ್ಲಿ ಟಿಡಿಎಸ್ ಕಡಿತ ಆಗುತ್ತದೆ. ಆ ಬಾಂಡ್ ಮಾಲೀಕರು ಮೃತಪಟ್ಟಲ್ಲಿ ಮಾತ್ರ ನಾಮಿನಿ ಅಥವಾ ಉತ್ತರಾಧಿಕಾರಿಗಳಿಗೆ ವರ್ಗಾವಣೆ ಆಗುತ್ತದೆ. ಈ ಬಾಂಡ್ ಗಳು ಸೆಕೆಂಡರಿ ಮಾರ್ಕೆಟ್ ನಲ್ಲಿ ವ್ಯವಹಾರ ಮಾಡಲ್ಲ.

ಈ ಬಾಂಡ್ ಗಳ ಮೇಲೆ ಸಾಲ ಪಡೆಯಬಹುದಾ?

ಈ ಬಾಂಡ್ ಗಳ ಮೇಲೆ ಸಾಲ ಪಡೆಯಬಹುದಾ?

ಈ ಬಾಂಡ್ ಗಳನ್ನು ಬ್ಯಾಂಕ್ ಗಳಲ್ಲೋ ಅಥವಾ ಎನ್ ಬಿಎಫ್ ಸಿ ಇತರೆಡೆಗಳಲ್ಲಿ ಅಡಮಾನ ಮಾಡಲು ಸಾಧ್ಯವಿಲ್ಲ. ಆರ್ ಬಿಐನಿಂದ ಬಾಂಡ್ ಗಳನ್ನು ವಾಪಸ್ ಪಡೆದ ಮೇಲೆ ಇದು ಮತ್ತೊಂದು ಅತ್ಯಾಕರ್ಷಕ ಹೂಡಿಕೆ ಆಗಿದೆ. ಉಳಿದ ಬ್ಯಾಂಕ್ ಡೆಪಾಸಿಟ್ ಗಳಿಗೆ ಹೋಲಿಸಿದರೆ ಬಡ್ಡಿ ದರವು ಉತ್ತಮವಾಗಿದೆ. ಸದ್ಯಕ್ಕೆ ಒಂದು ವರ್ಷದ ಅವಧಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಫ್.ಡಿ. ಮೇಲಿನ ವಾರ್ಷಿಕ ಬಡ್ಡಿ ದರ 5.1 ಪರ್ಸೆಂಟ್ ಇದೆ. ಈ ಅವಧಿಯಲ್ಲಿ ಹೂಡಿಕೆದಾರರು ತಮ್ಮ ತೆರಿಗೆ ಸ್ಲ್ಯಾಬ್ ಬಗ್ಗೆ ಎಚ್ಚರಿಕೆ ನೀಡಬೇಕು. ಜತೆಗೆ ಈ ಬಾಂಡ್ ಗಳು ವ್ಯವಹಾರ ಚಟುವಟಿಕೆ ನಡೆಸಲ್ಲ ಮತ್ತು ಇನ್ನೊಬ್ಬರ ಹೆಸರಿಗೆ ವರ್ಗಾವಣೆ ಆಗಲ್ಲವಾದ್ದರಿಂದ ಮಧ್ಯದಲ್ಲಿ ಹಣ ಪಡೆಯುವುದಕ್ಕೆ ಅವಕಾಶ ಇಲ್ಲ.

English summary

Govt Of India Notifies Floating Rate Savings Bonds, 2020 (Taxable)

Here is the must know details about Floating Rate Savings Bonds, 2020 (Taxable) notified by government of India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X