ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಸದ್ಯ ರಾಜ್ಯದಲ್ಲಿ ಹಲವಾರು ಮನೆಗಳು ಶೂನ್ಯ ವಿದ್ಯುತ್ ಬಿಲ್ ಅನ್ನು ಪಡೆಯುತ್ತಿದೆ. ಆದರೆ ಈ ನಡುವೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮುಂದಿನ ತಿಂಗಳಲ್ಲಿ ನೀಡುವ ಅಂದರೆ ಈ ತಿಂಗಳ ವಿದ್ಯುತ್ ಬಳಕೆ ದರವನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಡಿಸೆಂಬರ್‌ನ ಬಿಲ್ಲಿಂಗ್ ಅವಧಿಯಲ್ಲಿ ನವೆಂಬರ್ ತಿಂಗಳ ಗ್ರಾಹಕರ ಬಿಲ್‌ಗಳಿಗೆ ಪ್ರತಿ ಯೂನಿಟ್‌ಗೆ 85 ಪೈಸೆ ಹೆಚ್ಚುವರಿ ಇಂಧನ ಹೊಂದಾಣಿಕೆ ವೆಚ್ಚವನ್ನು (ಎಫ್‌ಎಸಿ) ಸೇರಿಸುವ ಮೂಲಕ ವಿದ್ಯುತ್ ಶುಲ್ಕವನ್ನು ಹೆಚ್ಚಿಸುವುದಾಗಿ ಘೋಷಿಸಿದೆ ಎಂದು ಏಷ್ಯನೆಟ್ ವರದಿ ಮಾಡಿದೆ.

ಈ ಹೆಚ್ಚುವರಿ ಶುಲ್ಕವು ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಜಾರಿಗೆ ತಂದ ಪ್ರತಿ ಯೂನಿಟ್‌ಗೆ 50 ಪೈಸೆಯ ಹೆಚ್ಚಳಕ್ಕಿಂತ ಭಿನ್ನವಾಗಿದೆ. ಈಗ ಮಾಡಲಾಗುವ 34 ಪೈಸೆ ಹೆಚ್ಚಳವು ನಿರ್ದಿಷ್ಟವಾಗಿ ನವೆಂಬರ್ ತಿಂಗಳಿಗೆ ಸಂಬಂಧಿಸಿದ್ದು ಆಗಿದೆ. ಇದರಿಂದಾಗಿ ನವೆಂಬರ್‌ನಲ್ಲಿ ವಿದ್ಯುತ್ ಬಳಕೆಗಾಗಿ ಯೂನಿಟ್‌ಗೆ 85 ಪೈಸೆಯ ಎಫ್‌ಎಸಿ ವಿಧಿಸಲು ನಿರ್ಧರಿಸಲಾಗಿದೆ.
Gruha Jyothi scheme: ಶೀಘ್ರವೇ ಗೃಹಜ್ಯೋತಿ ಯೋಜನೆಯಡಿ ಕರ್ನಾಟಕದ ದೇವಾಲಯಗಳಿಗೆ ಉಚಿತ ವಿದ್ಯುತ್
ಇನ್ನು ವಿದ್ಯುತ್ ಕೊರತೆಯಿಂದ ಉಂಟಾದ ಹೆಚ್ಚಿದ ಖರೀದಿಯ ಪ್ರಮಾಣದಿಂದಾಗಿ ಇಂಧನ ಹೊಂದಾಣಿಕೆ ವೆಚ್ಚವು ಅಧಿಕವಾಗುವ ಆತಂಕವಿತ್ತು. ಆದರೆ ಕಳೆದ ತಿಂಗಳ ಎಫ್‌ಎಸಿಗಿಂತ 0.16 ಪೈಸೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇನ್ನು ಶುಲ್ಕಗಳ ಹೆಚ್ಚಳವು ಬೆಸ್ಕಾಂನ ವ್ಯಾಪ್ತಿಯಲ್ಲಿರುವ ಗ್ರಾಹಕರ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.
ಕರ್ನಾಟಕದ ದೇವಾಲಯಗಳಿಗೆ ಉಚಿತ ವಿದ್ಯುತ್
ರಾಜ್ಯದ ಪ್ರತಿ ಮನೆಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯಡಿ ಕರ್ನಾಟಕದ ದೇವಾಲಯಗಳು ಉಚಿತ ವಿದ್ಯುತ್ ಪಡೆಯುವ ನಿರೀಕ್ಷೆಯಿದೆ. ಶೀಘ್ರವೇ ಕರ್ನಾಟಕದ ದೇವಾಲಯಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ವರದಿಯಾಗಿದೆ.
ದೇವಾಲಯಗಳಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆಯು ಈ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. "ನಾವು ಅದನ್ನು ರಾಜ್ಯ ಸರ್ಕಾರದ ಮುಂದೆ ಅನುಮೋದನೆಗಾಗಿ ಶೀಘ್ರದಲ್ಲೇ ಸಲ್ಲಿಸುತ್ತೇವೆ," ಎಂದು ಮಾಹಿತಿ ನೀಡಿದ್ದಾರೆ.
ಈಗ ಗೃಹ ಜ್ಯೋತಿ ಯೋಜನೆಯು ರಾಜ್ಯದ ವಿವಿಧ ಭಾಗಗಳಲ್ಲಿರುವ ಸಣ್ಣ ದೇವಾಲಯಗಳಿಗೆ ಸಹಾಯ ಮಾಡುವ ನಿರೀಕ್ಷೆಯಿದೆ. ಗೃಹ ಜ್ಯೋತಿ ಯೋಜನೆಯು ಕಾಂಗ್ರೆಸ್‌ನ ಐದು ಭರವಸೆಗಳಲ್ಲಿ ಒಂದಾಗಿದೆ. ಇದನ್ನು ಕರ್ನಾಟಕದಲ್ಲಿ ಆಗಸ್ಟ್ 5 ರಂದು ಪ್ರಾರಂಭಿಸಲಾಗಿದೆ. ರಾಜ್ಯದ ಸುಮಾರು ಎರಡು ಕೋಟಿ ಕುಟುಂಬಗಳಿಗೆ ಈ ಯೋಜನೆ ಪ್ರಯೋಜನವನ್ನು ನೀಡುತ್ತದೆ.
ಕರ್ನಾಟಕ ಸರ್ಕಾರ ಜಾರಿ ಮಾಡುತ್ತಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆ ಕೂಡಾ ಒಂದಾಗಿದೆ. ಗೃಹಜ್ಯೋತಿ ಯೋಜನೆಯು ರಾಜ್ಯದಲ್ಲಿ ಹಲವಾರು ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಯಾಗಿದ್ದು ಜೂನ್ 18ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.


Click it and Unblock the Notifications