For Quick Alerts
ALLOW NOTIFICATIONS  
For Daily Alerts

ಐಡಿಬಿಐ ಫೆಡರಲ್ ಲೈಫ್ ಇನ್ಷೂರೆನ್ಸ್ ಗ್ಯಾರಂಟೀಡ್ ವೆಲ್ತ್ ಪ್ಲ್ಯಾನ್ ನಿಮಗೆಷ್ಟು ಗೊತ್ತು?

|

ಷೇರು ಮಾರ್ಕೆಟ್ ನಲ್ಲಿ ಇತ್ತೀಚೆಗೆ ಏರಿಳಿತ ಕಂಡಿರುವ ಹೂಡಿಕೆದಾರರು ಅದರ ಬಗ್ಗೆ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದಾರೆ. ಯಾರಿಗೆ ತಮ್ಮ ಹೂಡಿಕೆಯಿಂದ ಗ್ಯಾರಂಟಿ ರಿಟರ್ನ್ ಬೇಕೋ ಅಂಥವರು ಲೈಫ್ ಇನ್ಷೂರೆನ್ಸ್ ಕಂಪೆನಿಗಳ ಕಡೆಗೆ ನೋಡಬಹುದು. ಈ ರೀತಿ ರಿಟರ್ನ್ಸ್ ಖಾತ್ರಿ ನೀಡುವ ಪ್ಲ್ಯಾನ್ ಗಳಲ್ಲಿ ಪ್ರಮಾಣ ಕಡಿಮೆ ಇರಬಹುದು. ಆದರೆ ಹೂಡಿಕೆದಾರರ ಬಂಡವಾಳದ ಮೇಲೆ ಷೇರು ಮಾರ್ಕೆಟ್ ನ ಚಲನೆ ಪ್ರಭಾವ ಇರುವುದಿಲ್ಲ.

ಐಡಿಬಿಐ ಫೆಡರಲ್ ಲೈಫ್ ಇನ್ಷೂರೆನ್ಸ್ ನಿಂದ ಈಚೆಗೆ ಐಡಿಬಿಐ ಫೆಡರಲ್ ಲೈಫ್ ಇನ್ಷೂರೆನ್ಸ್ ಗ್ಯಾರಂಟೀಡ್ ವೆಲ್ತ್ ಪ್ಲ್ಯಾನ್ ಆರಂಭಿಸಲಾಗಿದೆ. ಈ ಸ್ಕೀಂ ಅಡಿಯಲ್ಲಿ ಹೂಡಿಕೆದಾರರಿಗೆ ಮೆಚ್ಯೂರಿಟಿ ಸಮಯದಲ್ಲಿ ಒಂದೇ ಸಲ ಅಥವಾ ಪ್ರೀಮಿಯಂ ಮೊತ್ತ ಕಟ್ಟಿ ಒಂದು ವರ್ಷದ ನಂತರ ಸತತ ಏಳು ವರ್ಷಗಳ ಕಾಲ ಹಣವನ್ನು ನೀಡಲಾಗುತ್ತದೆ.

ಎಷ್ಟು ವರ್ಷದ ಪ್ಲ್ಯಾನ್ ಇದು?

ಎಷ್ಟು ವರ್ಷದ ಪ್ಲ್ಯಾನ್ ಇದು?

ಇದು ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲ್ಯಾನ್ ಅಲ್ಲ. ಇದರಲ್ಲಿ ಯಾವ ಬೋನಸ್ ಕೂಡ ಸಿಗಲ್ಲ. ಆದರೆ ಬೋನಸ್ ಬದಲಿಗೆ ಪಾಲಿಸಿಯಲ್ಲಿ ಗ್ಯಾರಂಟಿ ರಿಟರ್ನ್ಸ್ ನೀಡಲಾಗುತ್ತದೆ. ಈ ಪ್ಲ್ಯಾನ್ ಬಗ್ಗೆ ಹೇಳಬೇಕು ಅಂದರೆ, 14 ವರ್ಷದ ಪ್ಲ್ಯಾನ್ ಇದು. ಬಡ್ಡಿ ದರದಲ್ಲಿ ವ್ಯತ್ಯಾಸ ಆಗಬಹುದು ಅಥವಾ ಮಾರ್ಕೆಟ್ ಏನು ಬೇಕಾದರೂ ಆಗಬಹುದು. ಆದರೆ ಈ ಪಾಲಿಸಿ ಮೇಲೆ ಯಾವುದೇ ಪರಿಣಾಮ ಆಗಲ್ಲ. ಪಾಲಿಸಿದಾರರು ಅತ್ಯಲ್ಪ ಅವಧಿಗೆ, ಮುಂಚೆಯೇ ನಿರ್ಧರಿಸಿದಂತೆ ಮೊದಲ 7 ವರ್ಷಕ್ಕೆ ಪ್ರೀಮಿಯಂ ಪಾವತಿಸುತ್ತಾರೆ. ಆ ನಂತರ ಲೈಫ್ ಇನ್ಷೂರೆನ್ಸ್ ಕವರ್ 14 ವರ್ಷಗಳ ತನಕ ಇರುತ್ತದೆ. ಇದನ್ನು ಮುಖ್ಯವಾಗಿ ಮಕ್ಕಳ ಶಿಕ್ಷಣ, ಮದುವೆ, ಮನೆಯ ನವೀಕರಣ, ಕಾರು ಖರೀದಿ ಇಂಥ ಉದ್ದೇಶಗಳಿಟ್ಟುಕೊಂಡೇ ಮಾಡಿಸಬಹುದು.

ಪಾಲಿಸಿಯಲ್ಲಿ ಎಷ್ಟು ಬಗೆಯ ಆಯ್ಕೆಗಳಿವೆ?

ಪಾಲಿಸಿಯಲ್ಲಿ ಎಷ್ಟು ಬಗೆಯ ಆಯ್ಕೆಗಳಿವೆ?

ಪಾಲಿಸಿದಾರರು ಮೊದಲಿಗೆ ಏಳು ವರ್ಷ ಪ್ರೀಮಿಯಂ ಪಾವತಿ ಮಾಡುತ್ತಾರೆ. ಆ ನಂತರದ ಏಳು ವರ್ಷ ಪಾಲಿಸಿದಾರರ ಲೈಫ್ ಕವರ್ ಆಗುತ್ತದೆ. ಮೆಚ್ಯೂರಿಟಿ ಸಂದರ್ಭದಲ್ಲಿ ಒಂದೇ ಸಲಕ್ಕೆ ಹಣ ಪಡೆದುಕೊಳ್ಳಬಹುದು. ಅಥವಾ ಪ್ರೀಮಿಯಂ ಕಟ್ಟಿ ಮುಗಿಸಿದ ನಂತರದ ಏಳು ವರ್ಷಗಳ ಕಾಲ ಗ್ಯಾರಂಟೀಡ್ ಆದಾಯ ಪಡೆಯಬಹುದು. ವರ್ಷಕ್ಕೆ ಎಷ್ಟು ಮೊತ್ತ ದೊರೆಯುತ್ತದೆ ಎಂಬುದು ಪಾಲಿಸಿದಾರರು ಎಷ್ಟು ಪ್ರೀಮಿಯಂ ಕಟ್ಟಿದ್ದಾರೆ, ಪಾಲಿಸಿ ಖರೀದಿಸುವಾಗ ಎಷ್ಟು ವಯಸ್ಸು ಇತ್ಯಾದಿ ಅಂಶದ ಮೇಲೆ ನಿರ್ಧಾರ ಆಗುತ್ತದೆ. ಈ ಪ್ಲ್ಯಾನ್ ನಲ್ಲಿ ಎರಡು ಆಯ್ಕೆಗಳಿವೆ. ಒಂದೇ ಸಲದ ಅನುಕೂಲ ಹಾಗೂ ನಿರಂತರ ಆದಾಯದ ಅನುಕೂಲ.

ಈ ಇನ್ಷೂರೆನ್ಸ್ ಪ್ಲ್ಯಾನ್ ಯಾರಿಗೆ ಸೂಕ್ತ?

ಈ ಇನ್ಷೂರೆನ್ಸ್ ಪ್ಲ್ಯಾನ್ ಯಾರಿಗೆ ಸೂಕ್ತ?

ಒಂದೇ ಸಲಕ್ಕೆ ಹಣ ಪಡೆಯುತ್ತೇನೆ ಅಂದರೆ, ಪಾಲಿಸಿದಾರರು ಏಳು ವರ್ಷಗಳ ಕಾಲ ಪ್ರೀಮಿಯಂ ಪಾವತಿಸಿದರೆ ಸಾಕು. ಹದಿನಾಲ್ಕು ವರ್ಷದ ನಂತರ ಮೆಚ್ಯೂರಿಟಿ ಸಮಯದಲ್ಲಿ ಖಾತ್ರಿ ನೀಡಿದ ಮೊತ್ತವನ್ನು ನೀಡಲಾಗುತ್ತದೆ. ಇಷ್ಟು ಸಮಯಕ್ಕೆ ಅಂದರೆ ಹದಿನಾಲ್ಕು ವರ್ಷದ ತನಕ ಪಾಲಿಸಿದಾರರ ಲೈಫ್ ಕವರ್ ಕೂಡ ಆಗುತ್ತದೆ. ಇನ್ನು ನಿರಂತರ ಆದಾಯ ಯೋಜನೆ ಆಯ್ಕೆಯಲ್ಲಿ ಪಾವತಿದಾರರು ಏಳು ವರ್ಷಗಳ ಕಾಲ ಪ್ರೀಮಿಯಂ ಪಾವತಿಸುತ್ತಾರೆ. ಎಂಟನೇ ವರ್ಷದ ಕೊನೆಯಿಂದ ಹದಿನಾಲ್ಕು ವರ್ಷ ಪೂರ್ಣವಾಗುವ ತನಕ ಖಾತ್ರಿ ನೀಡಿದಂತೆ ಮೊತ್ತವನ್ನು ನೀಡಲಾಗುತ್ತದೆ. ಈ ಹದಿನಾಲ್ಕೂ ವರ್ಷ ಪಾಲಿಸಿದಾರರ ಲೈಫ್ ಕವರ್ ಆಗಿರುತ್ತದೆ. ಮೆಚ್ಯೂರಿಟಿ ಸಂದರ್ಭದಲ್ಲಿ ಮತ್ತೆ ಯಾವುದೇ ಹಣ ನೀಡುವುದಿಲ್ಲ. ಯಾರು ರಿಸ್ಕ್ ತೆಗೆದುಕೊಳ್ಳುವುದು ಬೇಡ ಅಂದುಕೊಳ್ಳುತ್ತಾರೋ ಅಂಥವರಿಗೆ ಈ ಗ್ಯಾರಂಟೀಡ್ ಇನ್ಷೂರೆನ್ಸ್ ಸೂಕ್ತವಾಗುತ್ತದೆ. ಹಣದುಬ್ಬರ ಮತ್ತೊಂದು ಅಂತ ನೋಡಿದರೆ ಇದರಿಂದ ಬರುವ ರಿಟರ್ನ್ಸ್ ಬಹಳ ಕಡಿಮೆ. ಆದರೆ ಉಳಿತಾಯದ ದೃಷ್ಟಿಯಿಂದ ಒಳಿತು.

English summary

Guaranteed Returns Insurance Plan From IDBI Federal Life Insurance

IDBI Federal Life Insurance launched guaranteed returns insurance plan. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X