ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ವಿಶೇಷ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಯೋಜನೆಯನ್ನು ವಿಸ್ತರಣೆ ಮಾಡಿದೆ. ಹಿರಿಯ ನಾಗರಿಕರಿಗಾಗಿ ಇರುವ ವಿಶೇಷ ಎಫ್‌ಡಿ ಯೋಜನೆಯನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ವಿಸ್ತರಣೆ ಮಾಡಿದೆ. ಅದು ಮಾತ್ರವಲ್ಲದೇ ಈ ಯೋಜನೆಯಲ್ಲಿ ನಿಮಗೆ ಅಧಿಕ ಬಡ್ಡಿದರವನ್ನು ನೀಡುತ್ತದೆ.
ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಯೋಜನೆಯು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಧಿಕ ಬಡ್ಡಿದರವನ್ನು ಹೊಂದಿರುವ ಎಫ್‌ಡಿ ಆಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ಯೋಜನೆಯಾಗಿದೆ. ಈ ಯೋಜನೆಯನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಆರಂಭಿಕವಾಗಿ ಮೇ 2020ರಲ್ಲಿ ಆರಂಭ ಮಾಡಿದೆ. ಹಿರಿಯ ನಾಗರಿಕರಿಗೆ ಹೆಚ್ಚುವರಿ ಸಹಾಯವನ್ನು ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಆರಂಭ ಮಾಡಲಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಯೋಜನೆ
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರು ಹೆಚ್ಚುವರಿಯಾಗಿ ಶೇಕಡ 0.25ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲೆ ಹೆಚ್ಚುವರಿಯಾಗಿ ಶೇಕಡ 0.50ರಷ್ಟು ಬಡ್ಡಿದರ ನೀಡಲಾಗುತ್ತದೆ.
ಅದಕ್ಕೂ ಅಧಿಕವಾಗಿ ಶೇಕಡ 0.25ರಷ್ಟು ಬಡ್ಡಿದರವನ್ನು ವಿಶೇಷ ಎಫ್‌ಡಿಯಲ್ಲಿ ನೀಡಲಾಗುತ್ತದೆ. ಅಂದರೆ ನೀವು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಯೋಜನೆಯಲ್ಲಿ ಸಾಮಾನ್ಯ ನಾಗರಿಕರಿಗಿಂತ ಶೇಕಡ 0.75ರಷ್ಟು ಹೆಚ್ಚುವರಿ ಬಡ್ಡಿದರವನ್ನು ಹಿರಿಯ ನಾಗರಿಕರಿಗೆ ನೀಡಲಾಗುತ್ತದೆ.
ಬ್ಯಾಂಕ್‌ನ ವೆಬ್‌ಸೈಟ್ ಪ್ರಕಾರ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಯೋಜನೆಯು ಜುಲೈ 7, 2023ರವರೆಗೆ ಚಾಲ್ತಿಯಲ್ಲಿದೆ. ಈ ಯೋಜನೆಯು 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತದಲ್ಲಿ ನೆಲೆಸಿರುವ ಹಿರಿಯ ವಯಸ್ಕರಿಗೆ ಮಾತ್ರ ಲಭ್ಯವಿರುತ್ತದೆ. ಇದು ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಅನ್ವಯಿಸುವುದಿಲ್ಲ.
ಬ್ಯಾಂಕ್‌ನ ಸ್ಟೇಟ್‌ಮೆಂಟ್ ಏನು ಹೇಳುತ್ತದೆ?
"5 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ 5 ವರ್ಷ 1 ದಿನದಿಂದ 10 ವರ್ಷದ ಅವಧಿಯ ವಿಶೇಷ ಎಫ್‌ಡಿ ಯೋಜನೆಯ ಮೇಲೆ ಹೆಚ್ಚುವರಿಯಾಗಿ ಶೇಕಡ 0.25ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಮೇ 18 2020ರಿಂದ ಜುಲೈ 7, 2023ರವರೆಗೆ ಯಾರೆಲ್ಲ ಈ ಯೋಜನೆಯನ್ನು ಖರೀದಿ ಮಾಡಿದ್ದರೋ ಅವರಿಗೆ ಈ ಹೆಚ್ಚುವರಿ ಬಡ್ಡಿದರ ಅನ್ವಯವಾಗುತ್ತದೆ," ಎಂದು ಬ್ಯಾಂಕ್ ಹೇಳಿದೆ.
"ಈ ವಿಶೇಷ ಕೊಡುಗೆಯು ಹೊಸ ಫಿಕ್ಸಿಡ್ ಡೆಪಾಸಿಟ್ ಬುಕಿಂಗ್‌ಗಳಿಗೆ ಮತ್ತು ಮೇಲಿನ ಅವಧಿಯಲ್ಲಿ ಹಿರಿಯ ನಾಗರಿಕರು ಮಾಡಿದ ಅಪ್‌ಡೇಟ್‌ಗಳಿಗೆ ಅನ್ವಯವಾಗುತ್ತದೆ," ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲಿ ತಿಳಿಸಿದೆ. ಇನ್ನು ಈ ಎಫ್‌ಡಿಯನ್ನು ಅಕಾಲಿಕವಾಗಿ ಮುಚ್ಚಿದ್ದರೆ ಅಂದರೆ 5-ವರ್ಷದ ಅವಧಿಯ ಅಂತ್ಯದ ಮೊದಲು ಮುಚ್ಚಿದರೆ, ಮೂಲ ದರಕ್ಕಿಂತ ಶೇಕಡ 1ರಷ್ಟು ಕಡಿಮೆ ಬಡ್ಡಿದರ ನೀಡಲಾಗುತ್ತದೆ.
ಎರಡು ವಿಶೇಷ ಎಫ್‌ಡಿ ಯೋಜನೆ ಆರಂಭ
ಎಚ್‌ಡಿಎಫ್‌ಸಿ ಬ್ಯಾಂಕ್ ಎರಡು ವಿಶೇಷ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಯೋಜನೆಗಳನ್ನು ಜಾರಿ ಮಾಡಿದೆ. ಈ ವಿಶೇಷ ಎಫ್‌ಡಿಗೆ ಅಧಿಕ ಬಡ್ಡಿದರವನ್ನು ಬ್ಯಾಂಕ್ ನೀಡುತ್ತಿದೆ. ಒಂದು 35 ತಿಂಗಳ ಅವಧಿಯ ಎಫ್‌ಡಿ, 55 ತಿಂಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲೆ ಕ್ರಮವಾಗಿ ಶೇಕಡ 7.70 ಮತ್ತು ಶೇಕಡ 7.75ರಷ್ಟು ಬಡ್ಡಿದರವನ್ನು ವಿಧಿಸಲಾಗುತ್ತದೆ.
"ಎಚ್‌ಡಿಎಫ್‌ಸಿ ಬ್ಯಾಂಕ್ ವಿಶೇಷವಾದ ಫಿಕ್ಸಿಡ್ ಡೆಪಾಸಿಟ್ ಅನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೆ. 35 ತಿಂಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 7.20ರಷ್ಟು ಬಡ್ಡಿದರ ಮತ್ತು 55 ತಿಂಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 7.25ರಷ್ಟು ಬಡ್ಡಿದರವನ್ನು ಆನಂದಿಸಿದ್ದೀರಿ," ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.


Click it and Unblock the Notifications