ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತೆ ತನ್ನ ಎಫ್‌ಡಿ ಬಡ್ಡಿದರ ಹೆಚ್ಚಳ ಮಾಡಿದೆ. ಫಿಕ್ಸಿಡ್ ಡೆಪಾಸಿಟ್‌ಗಳ ಬಡ್ಡಿದರವನ್ನು ಏರಿಕೆ ಮಾಡಿದ ಒಂದು ವಾರದಲ್ಲೇ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತೆ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಈ ಹೊಸ ಬಡ್ಡಿದರವು ಆಗಸ್ಟ್ 25ರಿಂದಲೇ ಜಾರಿಗೆ ಬರುತ್ತದೆ.
ಈ ತಿಂಗಳ ಆರಂಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು ರೆಪೋ ದರವನ್ನು ಹೆಚ್ಚಳ ಮಾಡಿದೆ. ಹಣದುಬ್ಬರವನ್ನು ನಿಯಂತ್ರಣ ಮಾಡುವ ಪ್ರಯತ್ನದಲ್ಲಿ ಆರ್‌ಬಿಐ ಆಗಸ್ಟ್ 5, 2022 ರಂದು ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಿದ್ದು, ಪ್ರಸ್ತುತ ದರ ಶೇಕಡ 5.40ಕ್ಕೆ ತಲುಪಿದೆ. ಆರ್‌ಬಿಐನ ಈ ಕ್ರಮದಿಂದಾಗಿ ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕ್‌ಗಳು ಸಾಲದ ಬಡ್ಡಿದರ ಹಾಗೂ ಎಫ್‌ಡಿ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ.
ಈಗ ಎಚ್‌ಡಿಎಫ್‌ಸಿ ಬ್ಯಾಂಕ್ ಎರಡನೇ ಬಾರಿಗೆ ಎಫ್‌ಡಿ ಬಡ್ಡಿದರ ಹೆಚ್ಚುಸಿದೆ. 2 ಕೋಟಿ ರೂಪಾಯಿಗಿಂತ ಹೆಚ್ಚು ಆದರೆ 5 ಕೋಟಿ ರೂಪಾಯಿಗಿಂತ ಕಡಿಮೆ ಇರುವ ಎಫ್‌ಡಿಗಳಿಗೆ ಬಡ್ಡಿ ದರದಲ್ಲಿ ಹೆಚ್ಚಳವನ್ನು ಮಾಡಲಾಗಿದೆ. '
ಹೆಚ್ಚಳದ ಬಳಿಕ ಬಡ್ಡಿದರ ಇಷ್ಟಿದೆ
ಹೆಚ್ಚಳದ ಬಳಿಕ 3 ವರ್ಷಗಳ 1 ದಿನದಿಂದ 5 ವರ್ಷಗಳ ಅವಧಿಗೆ ಸಾಮಾನ್ಯ ನಾಗರಿಕರು ಶೇಕಡ 6.10ರಷ್ಟು ಬಡ್ಡಿದರವನ್ನು ಪಡೆಯುತ್ತಾರೆ. ಇನ್ನು ಹಿರಿಯ ನಾಗರಿಕರು ಕೊಂಚ ಅಧಿಕ ಬಡ್ಡಿದರವನ್ನೇ ಪಡೆಯುತ್ತಾರೆ. ಹೆಚ್ಚುವರಿ 50 ಮೂಲಾಂಕ ಬಡ್ಡಿದರವನ್ನು ಹಿರಿಯ ನಾಗರಿಕರು ಗಳಿಸುತ್ತಾರೆ. ಹಿರಿಯ ನಾಗರಿಕರು ಪಡೆಯಬಹುದಾದ ಅತ್ಯಧಿಕ ಬಡ್ಡಿ ದರವು 5 ವರ್ಷ 1 ದಿನದಿಂದ 10 ವರ್ಷಗಳ ಅವಧಿಯ ಮೇಲೆ ಶೇಕಡ 6.65ರಷ್ಟು ಬಡ್ಡಿದರ ಲಭ್ಯವಾಗಲಿದೆ.
ಕನಿಷ್ಠ ಅವಧಿ ಯಾವುದು?
ಎಚ್‌ಡಿಫ್‌ಸಿಯ ವೆಬ್‌ಸೈಟ್ ಪ್ರಕಾರ ಅಕಾಲಿಕ ಮುಚ್ಚುವಿಕೆಗಾಗಿ ಅನ್ವಯವಾಗುವ ಅಂತಿಮ ದರವು ಕಡಿಮೆ ದರಕ್ಕಿಂತ ಶೇಕಡ 1ಕ್ಕಿಂತ ಕಡಿಮೆ ಇರುತ್ತದೆ. ಕನಿಷ್ಠ ಅವಧಿ 7 ದಿನಗಳು ಆಗಿದೆ.
* ಠೇವಣಿ ಕಾಯ್ದಿರಿಸಿದ ಮೂಲ/ಗುತ್ತಿಗೆಯ ಅವಧಿಯ ದರ
* 7-14 ದಿನಗಳ ಕಾಲಾವಧಿಯಲ್ಲಿ ಇರಿಸಲಾದ ಠೇವಣಿಗಳನ್ನು ಹೊರತುಪಡಿಸಿ ಬ್ಯಾಂಕ್‌ನಲ್ಲಿ ಠೇವಣಿ ಜಾರಿಯಲ್ಲಿರುವ ಅವಧಿಗೆ ಅನ್ವಯವಾಗುವ ಮೂಲ ದರ
ನೂತನ ಬಡ್ಡಿದರ ಎಷ್ಟು ನೋಡಿ
2 ಕೋಟಿಗಿಂತ ಮೇಲಿನ 5 ಕೋಟಿ ರೂಪಾಯಿಗಿಂತ ಕೆಳಗಿನ ಎಫ್‌ಡಿ ಮೇಲಿನ ಬಡ್ಡಿದರ ಈ ಕೆಳಗಿನಂತಿದೆ.
7 - 14 ದಿನ- ಶೇಕಡ 3.50, ಹಿರಿಯ ನಾಗರಿಕರಿಗೆ ಶೇಕಡ 4.00
15 - 29 ದಿನ- ಶೇಕಡ 3.50, ಹಿರಿಯ ನಾಗರಿಕರಿಗೆ ಶೇಕಡ 4.00
30 - 45 ದಿನ- ಶೇಕಡ 3.60, ಹಿರಿಯ ನಾಗರಿಕರಿಗೆ ಶೇಕಡ 4.10
46 - 60 ದಿನ- ಶೇಕಡ 4.00, ಹಿರಿಯ ನಾಗರಿಕರಿಗೆ ಶೇಕಡ 4.50
61 - 89 ದಿನ- ಶೇಕಡ 4.75, ಹಿರಿಯ ನಾಗರಿಕರಿಗೆ ಶೇಕಡ 5.25
90 ದಿನ- ಶೇಕಡ 5.25, ಹಿರಿಯ ನಾಗರಿಕರಿಗೆ ಶೇಕಡ 5.75
6 ತಿಂಗಳು 1 ದಿನ- ಶೇಕಡ 5.50, ಹಿರಿಯ ನಾಗರಿಕರಿಗೆ ಶೇಕಡ 6.00
9 ತಿಂಗಳು 1 ದಿನ- ಶೇಕಡ 5.70, ಹಿರಿಯ ನಾಗರಿಕರಿಗೆ ಶೇಕಡ 6.20
1 ವರ್ಷ- ಶೇಕಡ 6.05, ಹಿರಿಯ ನಾಗರಿಕರಿಗೆ ಶೇಕಡ 6.55
15 ತಿಂಗಳು- ಶೇಕಡ 6.05, ಹಿರಿಯ ನಾಗರಿಕರಿಗೆ ಶೇಕಡ 6.55
18 ತಿಂಗಳು- ಶೇಕಡ 6.05, ಹಿರಿಯ ನಾಗರಿಕರಿಗೆ ಶೇಕಡ 6.55
21 ತಿಂಗಳು-2 ವರ್ಷ: ಶೇಕಡ 6.05, ಹಿರಿಯ ನಾಗರಿಕರಿಗೆ ಶೇಕಡ 6.55
2 ವರ್ಷ 1 ದಿನ- 3 ವರ್ಷ: ಶೇಕಡ 6.05, ಹಿರಿಯ ನಾಗರಿಕರಿಗೆ ಶೇಕಡ 6.55
3 ವರ್ಷ 1 ದಿನ- 5 ವರ್ಷ: ಶೇಕಡ 6.10, ಹಿರಿಯ ನಾಗರಿಕರಿಗೆ ಶೇಕಡ 6.60
5 ವರ್ಷ 1 ದಿನ- 10 ವರ್ಷ: ಶೇಕಡ 5.90, ಹಿರಿಯ ನಾಗರಿಕರಿಗೆ ಶೇಕಡ 6.65


Click it and Unblock the Notifications