ಎಫ್‌ಡಿ ಬಡ್ಡಿದರ ಏರಿಸಿದ ಎಚ್‌ಡಿಎಫ್‌ಸಿ: ನೂತನ ದರ ಪರಿಶೀಲಿಸಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದ ಒಂದು ದಿನದ ಬಳಿಕ ಎಚ್‌ಡಿಎಫ್‌ಸಿ ಬ್ಯಾಂಕ್ ಕೂಡಾ ಎಫ್‌ಡಿ ಮೇಲಿನ ಬಡ್ಡಿದರವನ್ನು ಏರಿಕೆ ಮಾಡುವ ಮೂಲಕ ಮಾಡಿದೆ. ಈ ಮೂಲಕ ಹೂಡಿಕೆದಾರರಿಗೆ ಸಿಹಿಸುದ್ದಿ ನೀಡಿದೆ.

ಎರಡು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲಿನ ಬಡ್ಡಿದರವನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಹೆಚ್ಚಳ ಮಾಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, ಎಫ್‌ಡಿ ಬಡ್ಡಿದರವನ್ನು 25 ಮೂಲಾಂಕ ಏರಿಕೆ ಮಾಡಲಾಗಿದೆ. ಈ ಬಡ್ಡಿದರ ಹೆಚ್ಚಳವು ಜೂನ್ 15, 2022ರಿಂದಲೇ ಅನ್ವಯವಾಗಲಿದೆ.

ಆರರಿಂದ ಒಂಬತ್ತು ತಿಂಗಳುಗಳ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರವು ಪ್ರಸ್ತುತ ಶೇಕಡ 4.65 ಆಗಿದ್ದು, ಈ ಹಿಂದೆ ಶೇಕಡ 4.40 ಆಗಿತ್ತು. ಈ ಸಂದರ್ಭದಲ್ಲೇ ಒಂಬತ್ತು ತಿಂಗಳಿನಿಂದ ಒಂದು ವರ್ಷದಿಂದ ಕಡಿಮೆ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರವು ಪ್ರಸ್ತುತ ಶೇಕಡ 4.65 ಆಗಿದ್ದು, ಈ ಹಿಂದೆ ಶೇಕಡ 4.50 ಆಗಿದೆ. ಒಂದು ವರ್ಷದಿಂದ ಎರಡು ವರ್ಷದ ಎಫ್‌ಡಿ ಮೇಲೆ ಶೇಕಡ 5.35 ಬಡ್ಡಿದರ ವಿಧಿಸಲಾಗುತ್ತದೆ. ಈ ಹಿಂದೆ ಶೇಕಡ 5.10 ಆಗಿತ್ತು.

ಎಫ್‌ಡಿ ಬಡ್ಡಿದರ ಏರಿಸಿದ ಎಚ್‌ಡಿಎಫ್‌ಸಿ: ನೂತನ ದರ ಪರಿಶೀಲಿಸಿ

ನೂತನ ಬಡ್ಡಿದರ ಎಷ್ಟಿದೆ?

7-14 ದಿನ: ಶೇಕಡ 2.50 ಬಡ್ಡಿದರ
15-29 ದಿನ: ಶೇಕಡ 2.50 ಬಡ್ಡಿದರ
30-45 ದಿನ: ಶೇಕಡ 3.00 ಬಡ್ಡಿದರ
46-60 ದಿನ: ಶೇಕಡ 3.00 ಬಡ್ಡಿದರ
61-90 ದಿನ: ಶೇಕಡ 3.00 ಬಡ್ಡಿದರ
91 ದಿನದಿಂದ ಆರು ತಿಂಗಳು: ಶೇಕಡ 3.50 ಬಡ್ಡಿದರ
6 ತಿಂಗಳು 1 ದಿನದಿಂದ 9 ತಿಂಗಳು: ಶೇಕಡ 4.65 ಬಡ್ಡಿದರ
9 ತಿಂಗಳು 1 ದಿನದಿಂದ 1 ವರ್ಷ: ಶೇಕಡ 4.65 ಬಡ್ಡಿದರ
ಒಂದು ವರ್ಷ: ಶೇಕಡ 5.35 ಬಡ್ಡಿದರ
1 ವರ್ಷ 1 ದಿನದಿಂದ-2 ವರ್ಷ: ಶೇಕಡ 5.35 ಬಡ್ಡಿದರ
2 ವರ್ಷ 1 ದಿನದಿಂದ-3 ವರ್ಷ: ಶೇಕಡ 5.40 ಬಡ್ಡಿದರ
3 ವರ್ಷ 1 ದಿನದಿಂದ-5 ವರ್ಷ: ಶೇಕಡ 5.60 ಬಡ್ಡಿದರ
5 ವರ್ಷ 1 ದಿನದಿಂದ-10 ವರ್ಷ: ಶೇಕಡ 5.75 ಬಡ್ಡಿದರ

ಹಿರಿಯ ನಾಗರಿಕರಿಗೆ ಎಷ್ಟು ಬಡ್ಡಿದರ?

7-14 ದಿನ: ಶೇಕಡ 3.00 ಬಡ್ಡಿದರ
15-29 ದಿನ: ಶೇಕಡ 3.00 ಬಡ್ಡಿದರ
30-45 ದಿನ: ಶೇಕಡ 3.50 ಬಡ್ಡಿದರ
46-60 ದಿನ: ಶೇಕಡ 3.50 ಬಡ್ಡಿದರ
61-90 ದಿನ: ಶೇಕಡ 3.50 ಬಡ್ಡಿದರ
91 ದಿನದಿಂದ ಆರು ತಿಂಗಳು: ಶೇಕಡ 4.00 ಬಡ್ಡಿದರ
6 ತಿಂಗಳು 1 ದಿನದಿಂದ 9 ತಿಂಗಳು: ಶೇಕಡ 5.15 ಬಡ್ಡಿದರ
9 ತಿಂಗಳು 1 ದಿನದಿಂದ 1 ವರ್ಷ: ಶೇಕಡ 5.15 ಬಡ್ಡಿದರ
ಒಂದು ವರ್ಷ: ಶೇಕಡ 5.85 ಬಡ್ಡಿದರ
1 ವರ್ಷ 1 ದಿನದಿಂದ-2 ವರ್ಷ: ಶೇಕಡ 5.85 ಬಡ್ಡಿದರ
2 ವರ್ಷ 1 ದಿನದಿಂದ-3 ವರ್ಷ: ಶೇಕಡ 5.90 ಬಡ್ಡಿದರ
3 ವರ್ಷ 1 ದಿನದಿಂದ-5 ವರ್ಷ: ಶೇಕಡ 6.10 ಬಡ್ಡಿದರ
5 ವರ್ಷ 1 ದಿನದಿಂದ-10 ವರ್ಷ: ಶೇಕಡ 6.50 ಬಡ್ಡಿದರ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+