ಎಫ್‌ಡಿ ಬಡ್ಡಿದರ ಏರಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್, ನೂತನ ದರಪಟ್ಟಿ ನೋಡಿ

ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಅಥವಾ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲಿನ ಬಡ್ಡಿದರವನ್ನು ಬ್ಯಾಂಕ್ ಏರಿಸಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ ಈ ನೂತನ ಬಡ್ಡಿದರವು ನವೆಂಬರ್ 8ರಿಂದಲೇ ಜಾರಿಗೆ ಬರುತ್ತದೆ.

15 ತಿಂಗಳಿನಿಂದ 10 ವರ್ಷದ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರವನ್ನು ಎಚ್‌ಡಿಎಫ್‌ಸಿ ಬ್ಯಾಂಕ್ 35 ಮೂಲಾಂಕ ಹೆಚ್ಚಿಸಿದೆ. ಹಾಗೆಯೇ 7 ದಿನದಿಂದ 10 ವರ್ಷದವರೆಗಿನ ಫಿಕ್ಸಿಡ್ ಡೆಪಾಸಿಟ್ ಮೇಲೆ ಎಚ್‌ಡಿಎಫ್‌ಸಿ ಬ್ಯಾಂಕ್ ಸುಮಾರು ಶೇಕಡ 3 ರಿಂದ ಶೇಕಡ 6.25 ರವರೆಗೆ ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 3.50 ಯಿಂದ ಶೇಕಡ 7.00 ರಷ್ಟು ಬಡ್ಡಿದರವನ್ನು ನೀಡುತ್ತದೆ.

ಹಣದುಬ್ಬರದ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸತತ ನಾಲ್ಕು ಬಾರಿ ರೆಪೋ ದರವನ್ನು ಹೆಚ್ಚಳ ಮಾಡಿದೆ. ಪ್ರಸ್ತುತ ರೆಪೋ ದರ ಶೇಕಡ 5.9 ಕ್ಕೆ ಏರಿಕೆಯಾಗಿದೆ. ಸಾಮಾನ್ಯವಾಗಿ ಆರ್‌ಬಿಐ ರೆಪೋ ದರ ಹೆಚ್ಚಳ ಮಾಡಿದರೆ ಬ್ಯಾಂಕ್‌ಗಳು ಸಾಲದ ಬಡ್ಡಿದರ ಹಾಗೂ ಎಫ್‌ಡಿ ಬಡ್ಡಿದರವನ್ನು ಹೆಚ್ಚಳ ಮಾಡುತ್ತದೆ. ಈಗಾಗಲೇ ಹಲವಾರು ಬ್ಯಾಂಕ್‌ಗಳು ಎಫ್‌ಡಿ ಬಡ್ಡಿದರ ಪರಿಷ್ಕರಣೆ ಮಾಡಿದೆ. ಈಗ ಎಚ್‌ಡಿಎಫ್‌ಸಿ ಬ್ಯಾಂಕ್ ಕೂಡಾ ಎಫ್‌ಡಿ ದರ ಏರಿಸಿದೆ. ನೂತನ ಬಡ್ಡಿದರದ ಪಟ್ಟಿ ಈ ಕೆಳಗಿದೆ ಮುಂದೆ ಓದಿ.....

 2 ಕೋಟಿ ರೂಪಾಯಿವರೆಗಿನ ಎಫ್‌ಡಿ ಬಡ್ಡಿದರ (ಸಾಮಾನ್ಯ ಜನರಿಗೆ)

2 ಕೋಟಿ ರೂಪಾಯಿವರೆಗಿನ ಎಫ್‌ಡಿ ಬಡ್ಡಿದರ (ಸಾಮಾನ್ಯ ಜನರಿಗೆ)

7 - 14 ದಿನ: ಶೇಕಡ 3.00 ಬಡ್ಡಿದರ
15 - 29 ದಿನ: ಶೇಕಡ 3.00 ಬಡ್ಡಿದರ
30 - 45 ದಿನ: ಶೇಕಡ 3.50 ಬಡ್ಡಿದರ
46 - 60 ದಿನ: ಶೇಕಡ 4.00 ಬಡ್ಡಿದರ
61 - 89 ದಿನ: ಶೇಕಡ 4.50 ಬಡ್ಡಿದರ
90 ದಿನದಿಂದ 6 ತಿಂಗಳವರೆಗೆ: ಶೇಕಡ 4.50 ಬಡ್ಡಿದರ
6 ತಿಂಗಳು 1 ದಿನ-9 ತಿಂಗಳವರೆಗೆ: ಶೇಕಡ 5.25 ಬಡ್ಡಿದರ
9 ತಿಂಗಳು 1 ದಿನ-1 ವರ್ಷ: ಶೇಕಡ 5.50 ಬಡ್ಡಿದರ
1 ವರ್ಷ 1 ದಿನ-15 ತಿಂಗಳವರೆಗೆ: ಶೇಕಡ 6.10 ಬಡ್ಡಿದರ
15 ತಿಂಗಳು 1 ದಿನ-18 ತಿಂಗಳು: ಶೇಕಡ 6.40 ಬಡ್ಡಿದರ
18 ತಿಂಗಳು-21 ತಿಂಗಳು: ಶೇಕಡ 6.50 ಬಡ್ಡಿದರ
21 ತಿಂಗಳು1 ದಿನ-2 ವರ್ಷ: ಶೇಕಡ 6.50 ಬಡ್ಡಿದರ
2 ವರ್ಷ 1 ದಿನ- 3 ವರ್ಷ: ಶೇಕಡ 6.50 ಬಡ್ಡಿದರ
3 ವರ್ಷ 1 ದಿನ- 5 ವರ್ಷ: ಶೇಕಡ 6.50 ಬಡ್ಡಿದರ
5 ವರ್ಷ 1 ದಿನ- 10 ವರ್ಷ: ಶೇಕಡ 6.25 ಬಡ್ಡಿದರ

 2 ಕೋಟಿ ರೂಪಾಯಿವರೆಗಿನ ಎಫ್‌ಡಿ ಬಡ್ಡಿದರ (ಹಿರಿಯ ನಾಗರಿಕರಿಗೆ)

2 ಕೋಟಿ ರೂಪಾಯಿವರೆಗಿನ ಎಫ್‌ಡಿ ಬಡ್ಡಿದರ (ಹಿರಿಯ ನಾಗರಿಕರಿಗೆ)

7 - 14 ದಿನ: ಶೇಕಡ 3.50 ಬಡ್ಡಿದರ
15 - 29 ದಿನ: ಶೇಕಡ 3.50 ಬಡ್ಡಿದರ
30 - 45 ದಿನ: ಶೇಕಡ 3.50 ಬಡ್ಡಿದರ
46 - 60 ದಿನ: ಶೇಕಡ 4.50 ಬಡ್ಡಿದರ
61 - 89 ದಿನ: ಶೇಕಡ 5.00 ಬಡ್ಡಿದರ
90 ದಿನದಿಂದ 6 ತಿಂಗಳು: ಶೇಕಡ 5.0 ಬಡ್ಡಿದರ
6 ತಿಂಗಳು 1 ದಿನ-9 ತಿಂಗಳು: ಶೇಕಡ 5.75 ಬಡ್ಡಿದರ
9 ತಿಂಗಳು 1 ದಿನ-1 ವರ್ಷ: ಶೇಕಡ 6.00 ಬಡ್ಡಿದರ
1 ವರ್ಷ 1 ದಿನ-15 ತಿಂಗಳು: ಶೇಕಡ 6.60 ಬಡ್ಡಿದರ
15 ತಿಂಗಳು 1 ದಿನ-18 ತಿಂಗಳು: ಶೇಕಡ 6.90 ಬಡ್ಡಿದರ
18 ತಿಂಗಳು-21 ತಿಂಗಳು: ಶೇಕಡ 7.00 ಬಡ್ಡಿದರ
21 ತಿಂಗಳು1 ದಿನ-2 ವರ್ಷ: ಶೇಕಡ 7.00 ಬಡ್ಡಿದರ
2 ವರ್ಷ 1 ದಿನ- 3 ವರ್ಷ: ಶೇಕಡ 7.00 ಬಡ್ಡಿದರ
3 ವರ್ಷ 1 ದಿನ- 5 ವರ್ಷ: ಶೇಕಡ 7.00 ಬಡ್ಡಿದರ
5 ವರ್ಷ 1 ದಿನ- 10 ವರ್ಷ: ಶೇಕಡ 7.00 ಬಡ್ಡಿದರ

 ಆರ್‌ಡಿ ಬಡ್ಡಿದರ (ಸಾಮಾನ್ಯ ಜನರಿಗೆ)

ಆರ್‌ಡಿ ಬಡ್ಡಿದರ (ಸಾಮಾನ್ಯ ಜನರಿಗೆ)

6 ತಿಂಗಳು: ಶೇಕಡ 4.50 ಬಡ್ಡಿದರ
9 ತಿಂಗಳು: ಶೇಕಡ 5.25 ಬಡ್ಡಿದರ
12 ತಿಂಗಳು: ಶೇಕಡ 6.10 ಬಡ್ಡಿದರ
15 ತಿಂಗಳು: ಶೇಕಡ 6.40 ಬಡ್ಡಿದರ
24 ತಿಂಗಳು: ಶೇಕಡ 6.50 ಬಡ್ಡಿದರ
27 ತಿಂಗಳು: ಶೇಕಡ 6.50 ಬಡ್ಡಿದರ
36 ತಿಂಗಳು: ಶೇಕಡ 6.50 ಬಡ್ಡಿದರ
39 ತಿಂಗಳು: ಶೇಕಡ 6.50 ಬಡ್ಡಿದರ
48 ತಿಂಗಳು: ಶೇಕಡ 6.50 ಬಡ್ಡಿದರ
60 ತಿಂಗಳು: ಶೇಕಡ 6.50 ಬಡ್ಡಿದರ
90 ತಿಂಗಳು: ಶೇಕಡ 6.25 ಬಡ್ಡಿದರ
120 ತಿಂಗಳು: ಶೇಕಡ 6.25 ಬಡ್ಡಿದರ

 

 

 ಆರ್‌ಡಿ ಬಡ್ಡಿದರ (ಹಿರಿಯ ನಾಗರಿಕರಿಗೆ)

ಆರ್‌ಡಿ ಬಡ್ಡಿದರ (ಹಿರಿಯ ನಾಗರಿಕರಿಗೆ)

6 ತಿಂಗಳು: ಶೇಕಡ 5.00 ಬಡ್ಡಿದರ
9 ತಿಂಗಳು: ಶೇಕಡ 5.75 ಬಡ್ಡಿದರ
12 ತಿಂಗಳು: ಶೇಕಡ 6.60 ಬಡ್ಡಿದರ
15 ತಿಂಗಳು: ಶೇಕಡ 6.90 ಬಡ್ಡಿದರ
24 ತಿಂಗಳು: ಶೇಕಡ 7.00 ಬಡ್ಡಿದರ
27 ತಿಂಗಳು: ಶೇಕಡ 7.00 ಬಡ್ಡಿದರ
36 ತಿಂಗಳು: ಶೇಕಡ 7.00 ಬಡ್ಡಿದರ
39 ತಿಂಗಳು: ಶೇಕಡ 7.00 ಬಡ್ಡಿದರ
48 ತಿಂಗಳು: ಶೇಕಡ 7.00 ಬಡ್ಡಿದರ
60 ತಿಂಗಳು: ಶೇಕಡ 7.00 ಬಡ್ಡಿದರ
90 ತಿಂಗಳು: ಶೇಕಡ 7.00 ಬಡ್ಡಿದರ
120 ತಿಂಗಳು: ಶೇಕಡ 7.00 ಬಡ್ಡಿದರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+