ಎರಡು ವಿಶೇಷ ಎಫ್‌ಡಿ ಯೋಜನೆ ಆರಂಭಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್, ಬಡ್ಡಿದರ ಎಷ್ಟಿದೆ?

ನೀವು ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಮೇಲೆ ಹೂಡಿಕೆ ಮಾಡುವ ಆಲೋಚನೆಯನ್ನು ಹೊಂದಿದ್ದೀರಾ?. ಇಲ್ಲಿ ನಿಮಗೆ ಸಿಹಿ ಸುದ್ದಿಯೊಂದಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಎರಡು ವಿಶೇಷ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಯೋಜನೆಗಳನ್ನು ಜಾರಿ ಮಾಡಿದೆ. ಈ ವಿಶೇಷ ಎಫ್‌ಡಿಗೆ ಅಧಿಕ ಬಡ್ಡಿದರವನ್ನು ಬ್ಯಾಂಕ್ ನೀಡುತ್ತಿದೆ. ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ನೀಡಲಾಗಿದೆ.

"ಎಚ್‌ಡಿಎಫ್‌ಸಿ ಬ್ಯಾಂಕ್ ವಿಶೇಷವಾದ ಫಿಕ್ಸಿಡ್ ಡೆಪಾಸಿಟ್ ಅನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೆ. 35 ತಿಂಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 7.20ರಷ್ಟು ಬಡ್ಡಿದರ ಮತ್ತು 55 ತಿಂಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 7.25ರಷ್ಟು ಬಡ್ಡಿದರವನ್ನು ಆನಂದಿಸಿದ್ದೀರಿ," ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

 ಎರಡು ವಿಶೇಷ ಎಫ್‌ಡಿ ಯೋಜನೆ ಆರಂಭಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್

ಎಚ್‌ಡಿಎಫ್‌ಸಿ ಬ್ಯಾಂಕ್ ನೂತನ ಎಫ್‌ಡಿ ಬಡ್ಡಿದರ

ಎಚ್‌ಡಿಎಫ್‌ಸಿ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಇತ್ತೀಚೆಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ ಬಡ್ಡಿದರ ಪರಿಷ್ಕರಣೆ ಮಾಡಿದ ಬಳಿಕ ಪ್ರಸ್ತುತ ಬ್ಯಾಂಕ್‌ನಲ್ಲಿ ಸಾಮಾನ್ಯ ನಾಗರಿಕರಿಗೆ 7 ದಿನದಿಂದ 10 ವರ್ಷಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 3ರಿಂದ ಶೇಕಡ 7.25ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.

ಇನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರಿಗೆ 7 ದಿನದಿಂದ 10 ವರ್ಷಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 3.5ರಿಂದ ಶೇಕಡ 7.75ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಈ ನೂತನ ಬಡ್ಡಿದರವು ಮೇ 29, 2023ರಿಂದ ಜಾರಿಗೆ ಬರಲಿದೆ.

ಸಾಮಾನ್ಯ ನಾಗರಿಕರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ವಿಶೇಷ ಎಫ್‌ಡಿ ಬಡ್ಡಿದರ

ಸಾಮಾನ್ಯ ನಾಗರಿಕರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಎರಡು ವಿಶೇಷ ಫಿಕ್ಸಿಡ್ ಡೆಪಾಸಿಟ್ ಎಫ್‌ಡಿಯನ್ನು ಜಾರಿ ಮಾಡಿದೆ. ಒಂದು 35 ತಿಂಗಳ ಅವಧಿಯ ಎಫ್‌ಡಿ, 55 ತಿಂಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲೆ ಕ್ರಮವಾಗಿ ಶೇಕಡ 7.20 ಮತ್ತು ಶೇಕಡ 7.25ರಷ್ಟು ಬಡ್ಡಿದರವನ್ನು ವಿಧಿಸಲಾಗುತ್ತದೆ.

2 ವರ್ಷ 11 ತಿಂಗಳು: (ವಿಶೇಷ ಎಫ್‌ಡಿ - 35 ತಿಂಗಳು) ಶೇಕಡ 7.20 ಬಡ್ಡಿದರ
4 ವರ್ಷ 7 ತಿಂಗಳು: (ವಿಶೇಷ ಎಫ್‌ಡಿ - 55 ತಿಂಗಳು) ಶೇಕಡ 7.25 ಬಡ್ಡಿದರ

ಹಿರಿಯ ನಾಗರಿಕರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ವಿಶೇಷ ಎಫ್‌ಡಿ ಬಡ್ಡಿದರ

ಹಿರಿಯ ನಾಗರಿಕರಿಗೂ ಕೂಡಾ ಎಚ್‌ಡಿಎಫ್‌ಸಿ ಬ್ಯಾಂಕ್ ಎರಡು ವಿಶೇಷ ಫಿಕ್ಸಿಡ್ ಡೆಪಾಸಿಟ್ ಎಫ್‌ಡಿಯನ್ನು ಜಾರಿ ಮಾಡಿದೆ. ಒಂದು 35 ತಿಂಗಳ ಅವಧಿಯ ಎಫ್‌ಡಿ, 55 ತಿಂಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲೆ ಕ್ರಮವಾಗಿ ಶೇಕಡ 7.70 ಮತ್ತು ಶೇಕಡ 7.75ರಷ್ಟು ಬಡ್ಡಿದರವನ್ನು ವಿಧಿಸಲಾಗುತ್ತದೆ.

2 ವರ್ಷ 11 ತಿಂಗಳು: (ವಿಶೇಷ ಎಫ್‌ಡಿ - 35 ತಿಂಗಳು) ಶೇಕಡ 7.70 ಬಡ್ಡಿದರ
4 ವರ್ಷ 7 ತಿಂಗಳು: (ವಿಶೇಷ ಎಫ್‌ಡಿ - 55 ತಿಂಗಳು) ಶೇಕಡ 7.75 ಬಡ್ಡಿದರ

ಮೇ 29ರಿಂದ ನೂತನ ಬಡ್ಡಿದರ ಜಾರಿಗೆ

7 - 14 ದಿನಗಳು: ಶೇಕಡ 3.00 ಬಡ್ಡಿದರ
15 - 29 ದಿನಗಳು: ಶೇಕಡ 3.00 ಬಡ್ಡಿದರ
30 - 45 ದಿನಗಳು: ಶೇಕಡ 3.50 ಬಡ್ಡಿದರ
46 - 60 ದಿನಗಳು: ಶೇಕಡ 4.50 ಬಡ್ಡಿದರ
61 - 89 ದಿನಗಳು: ಶೇಕಡ 4.50 ಬಡ್ಡಿದರ
90 ದಿನಗಳು- 6 ತಿಂಗಳು: ಶೇಕಡ 4.50 ಬಡ್ಡಿದರ
6 ತಿಂಗಳು 1 ದಿನ - 9 ತಿಂಗಳು: ಶೇಕಡ 5.75 ಬಡ್ಡಿದರ
9 ತಿಂಗಳು 1 ದಿನ - 1 ವರ್ಷ: ಶೇಕಡ 6.00 ಬಡ್ಡಿದರ
1 ವರ್ಷ - 15 ತಿಂಗಳು: ಶೇಕಡ 6.60 ಬಡ್ಡಿದರ
15 ತಿಂಗಳು - 18 ತಿಂಗಳು: ಶೇಕಡ 7.10 ಬಡ್ಡಿದರ
18 ತಿಂಗಳು - 21 ತಿಂಗಳು: ಶೇಕಡ 7.00 ಬಡ್ಡಿದರ
21 ತಿಂಗಳು - 2 ವರ್ಷ: ಶೇಕಡ 7.00 ಬಡ್ಡಿದರ
2 ವರ್ಷ 1 ದಿನ- 2 ವರ್ಷ 11 ತಿಂಗಳು: ಶೇಕಡ 7.00 ಬಡ್ಡಿದರ
2 ವರ್ಷ 11 ತಿಂಗಳು (ವಿಶೇಷ ಎಫ್‌ಡಿ -35 ತಿಂಗಳು) ಶೇಕಡ 7.20 ಬಡ್ಡಿದರ
2 ವರ್ಷ 11 ತಿಂಗಳು 1 ದಿನ- 3 ವರ್ಷ: ಶೇಕಡ 7.00 ಬಡ್ಡಿದರ
3 ವರ್ಷ 1 ದಿನ- 4 ವರ್ಷ 7 ತಿಂಗಳು: ಶೇಕಡ 7.00 ಬಡ್ಡಿದರ
4 ವರ್ಷ 7 ತಿಂಗಳು (ವಿಶೇಷ ಎಫ್‌ಡಿ - 55 ತಿಂಗಳು) ಶೇಕಡ 7.25 ಬಡ್ಡಿದರ
4 ವರ್ಷ 7 ತಿಂಗಳು 1 ದಿನ -5 ವರ್ಷ: ಶೇಕಡ 7.00 ಬಡ್ಡಿದರ
5 ವರ್ಷ 7 ತಿಂಗಳು 1 ದಿನ- 10 ವರ್ಷ: ಶೇಕಡ 7.00 ಬಡ್ಡಿದರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+