ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ರೆಪೋ ದರವನ್ನು ಹೆಚ್ಚಳ ಮಾಡಿದ ದಿನಗಳ ನಂತರ ಎಚ್‌ಡಿಎಫ್‌ಸಿ (ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್) ಹಾಗೂ ಐಸಿಐಸಿಐ ಬ್ಯಾಂಕ್ ತನ್ನ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಎರಡು ಸಂಸ್ಥೆಗಳು ಸಾಲದ ಬಡ್ಡಿದರವನ್ನು 50 ಮೂಲಾಂಕ ಅಧಿಕ ಮಾಡಿದೆ.
ಇತ್ತೀಚೆಗೆ ರೆಪೋ ದರವನ್ನು ಎರಡನೇ ಬಾರಿಗೆ ಏರಿಕೆ ಮಾಡುವ ಮುನ್ನವೇ ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಮತ್ತು ಪಿಎನ್‌ಬಿ (ಪಂಜಾಬ್ ನ್ಯಾಷನಲ್ ಬ್ಯಾಂಕ್) ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಈ ಬ್ಯಾಂಕ್‌ಗಳಲ್ಲಿ ಸಾಲದ ಬಡ್ಡಿದವನ್ನು 35-50 ಮೂಲಾಂಕ ಹೆಚ್ಚಳ ಮಾಡಿಲಾಗಿದೆ.
ಈ ವಾರದಲ್ಲಿ ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಿದೆ. ಇದರಿಂದಾಗಿ ರೆಪೋ ದರವು ಶೇಕಡ 4.90ಕ್ಕೆ ಏರಿಕೆಯಾಗಿದೆ. ಇದಾದ ಬಳಿಕ ಈಗ ಎಲ್ಲಾ ಬ್ಯಾಂಕುಗಳು ತಮ್ಮ ಸಾಲದ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಲು ಆರಂಭ ಮಾಡಿದೆ.
ಎಚ್‌ಡಿಎಫ್‌ಸಿ ಬಡ್ಡಿದರ ಹೆಚ್ಚಳ ಮಾಡಿದೆ.
ಜೂನ್ 10 ರಿಂದ ಜಾರಿಗೆ ಬರುವಂತೆ ಗೃಹ ಸಾಲಗಳ ಮೇಲಿನ ಚಿಲ್ಲರೆ ಸಾಲದ ದರವನ್ನು 50 ಬೇಸಿಸ್ ಪಾಯಿಂಟ್ ಅಧಿಕ ಮಾಡಲಾಗಿದೆ ಎಂದು ಗುರುವಾರ ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್‌ನಲ್ಲಿ ಎಚ್‌ಡಿಎಫ್‌ಸಿ ತಿಳಿಸಿದೆ.
ಐಸಿಐಸಿಐ ಬ್ಯಾಂಕ್ ಬಡ್ಡಿದರ ಹೆಚ್ಚಳ
ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದ ಹಿನ್ನೆಲೆಯಿಂದಾಗಿ ಐಸಿಐಸಿಐ ಬ್ಯಾಂಕ್ ಕೂಡಾ ಸಾಲದ ಬಡ್ಡಿದರವನ್ನು 50 ಮೂಲಾಂಕ ಏರಿಕೆ ಮಾಡಿದೆ ಎಂದು ಹೇಳಿದೆ. ಐಸಿಐಸಿಐ ಬ್ಯಾಂಕ್ ಜೂನ್ 8 ರಿಂದಲೇ ಜಾರಿಗೆ ಬರುವಂತೆ ಇಬಿಎಲ್‌ಆರ್ ಅನ್ನು ಶೇಕಡ 8.60ಕ್ಕೆ ಹೆಚ್ಚಳ ಮಾಡಲಿದೆ ಎಂದು ಐಸಿಐಸಿಐ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಿದೆ.
ಹಣದುಬ್ಬರ ನಿಯಂತ್ರಣಕ್ಕೆ ಕ್ರಮ
ಹಣದುಬ್ಬರ ನಿರಂತರವಾಗಿ ಏರಿಕೆ ಕಾಣುತ್ತಿದೆ. ಈ ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಆರ್‌ಬಿಐ ಎರಡನೇ ಬಾರಿಗೆ ರೆಪೋ ದರವನ್ನು ಹೆಚ್ಚಳ ಮಾಡಿದೆ. ಎರಡು ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು 90 ಮೂಲಾಂಕ ಅಧಿಕ ಮಾಡಿದೆ. ಎಂಪಿಸಿ ಈ ವಾರ ರೆಪೋ ದರವನ್ನು ಹೆಚ್ಚಳ ಮಾಡಲು ಸರ್ವಾನುಮತ ಸೂಚಿಸಿದ ಬಳಿಕ ಈ ಕ್ರಮಕೈಗೊಳ್ಳಲಾಗಿದೆ. ಇನ್ನು ಆಗಸ್ಟ್‌ನಲ್ಲಿ ಆರ್‌ಬಿಐ ರೆಪೋ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಆ ಬಳಿಕ ಬೆಳವಣಿಗೆ ದರವನ್ನು ನೋಡಿಕೊಂಡು ಆರ್‌ಬಿಐ ಮುಂದಿನ ಕ್ರಮವನ್ನು ಕೈಗೊಳ್ಳಲಿದೆ ಎಂದು ತಜ್ಞರು ಹೇಳಿದ್ದಾರೆ.
ಈ ಹಿಂದೆಯೇ ಬಡ್ಡಿದರ ಹೆಚ್ಚಿಸಿದ ಕೆಲವು ಬ್ಯಾಂಕ್‌ಗಳು
ಎಚ್‌ಡಿಎಫ್‌ಸಿ ಬ್ಯಾಂಕ್ ಕೆಲವು ದಿನಗಳ ಹಿಂದೆಯೇ ತನ್ನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಗೃಹ, ವಾಹನ, ವೈಯಕ್ತಿಕ ಸಾಲದ ಬಡ್ಡಿದರವನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಜೂನ್ 7 ರಿಂದ 35 ಮೂಲಾಂಕ ಅಧಿಕ ಮಾಡಿದೆ. ಇದಾದ ಒಂದೆರಡು ದಿನಗಳ ನಂತರ ಆರ್‌ಬಿಐ ಮತ್ತೆ ರೆಪೋ ದರವನ್ನು ಹೆಚ್ಚಳ ಮಾಡಿದೆ. ಇನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡಾ ರೆಪೋ ಆಧಾರಿತ ಸಾಲದ ಬಡ್ಡಿದರವನ್ನು ಏರಿಸಿದೆ. ಶೇಕಡ 6.90 ರಿಂದ ಶೇಕಡ 7.40 ಕ್ಕೆ ಏರಿಸಿದೆ. ಎಸ್‌ಬಿಐ ಗೃಹ ಸಾಲದ ಬಡ್ಡಿದರವನ್ನು 40 ಮೂಲಾಂಕ ಅಧಿಕ ಮಾಡಿದೆ. ಪ್ರಸ್ತುತ ಬಡ್ಡಿದರವು ಶೇಕಡ 7.05+ಸಿಆರ್‌ಪಿ ಆಗಿದೆ. ಇದು ಜೂನ್ 1ರಿಂದ ಜಾರಿಗೆ ಬಂದಿದೆ.


Click it and Unblock the Notifications