ಜೀವಿತಾವಧಿಗೆ ಉಚಿತ ಡಿಮ್ಯಾಟ್, ಟ್ರೇಡಿಂಗ್ ಖಾತೆ ಒದಗಿಸುವ ಸಂಸ್ಥೆಗಳಿವು

ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ವಹಿವಾಟು ನಡೆಸಬೇಕು ಅಂದರೆ ಅದಕ್ಕೆ ಕಡ್ಡಾಯವಾಗಿ ಡಿಮ್ಯಾಟ್ ಅಕೌಂಟ್ ಇರಬೇಕು. ಮ್ಯೂಚುವಲ್ ಫಂಡ್ ಗಳು, ಸೆಕ್ಯೂರಿಟೀಸ್ ಮತ್ತಿತರದರಲ್ಲಿ ಭಾರತದಲ್ಲಿ ಹೂಡಿಕೆ ಮಾಡುವುದಕ್ಕೆ ಡಿಮ್ಯಾಟ್ ಅಕೌಂಟ್ ತೆರೆಯುವುದೇ ಮೊದಲನೇ ಹಂತ. ಡಿಮ್ಯಾಟ್ ಖಾತೆ ಇರುವವರಿಗೆ ಇಂಟರ್ ನೆಟ್ ಪಾಸ್ ವರ್ಡ್ ಮತ್ತು ವಹಿವಾಟಿನ ಪಾಸ್ ವರ್ಡ್ ಬೇಕಾಗುತ್ತದೆ.

ಎಲೆಕ್ಟ್ರಾನಿಕ್ ತೀರುವಳಿಯ ಎಲ್ಲ ವ್ಯವಹಾರಗಳಿಗೆ ಡಿಮ್ಯಾಟ್ ಖಾತೆಯ ಸಂಖ್ಯೆಯನ್ನು ಹಾಕುವುದು ಕಡ್ಡಾಯ. ಸರಳವಾಗಿ ಹೇಳಬೇಕೆಂದರೆ, ಡಿಮ್ಯಾಟ್ ಖಾತೆ ಎಂಬುದು ಬ್ಯಾಂಕ್ ಖಾತೆ ಇದ್ದಂತೆ. ಆದರೆ ನಗದು ಬದಲಿಗೆ ಷೇರುಗಳು ಅಥವಾ ಮ್ಯೂಚುವಲ್ ಫಂಡ್ ಗಳು ಅಥವಾ ಬಾಂಡ್ ಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಡೆಪಾಸಿಟ್ ಮಾಡಲಾಗುತ್ತದೆ.

ಆದರೆ, ಬಳಕೆ ಮಾಡುತ್ತಾರೋ ಇಲ್ಲವೋ ಡಿಮ್ಯಾಟ್ ಖಾತೆ ನಿರ್ವಹಣೆಗೆ ನಿರ್ವಹಣಾ ವೆಚ್ಚ ಇರುತ್ತದೆ. ಡಿಮ್ಯಾಟ್ ಖಾತೆಯ ವಾರ್ಷಿಕ ನಿರ್ವಹಣಾ ವೆಚ್ಚ (ಎಎಂಸಿ) ಗ್ರಾಹಕರು ಪಾವತಿಸಿ, ಖಾತೆಯನ್ನು ಸಕ್ರಿಯವಾಗಿ ಇಟ್ಟುಕೊಳ್ಳಬೇಕು. ಭಾರತದಲ್ಲಿ ಕೆಲವು ಬ್ರೋಕರೇಜ್ ಹೌಸ್ ಗಳು ಉಚಿತವಾಗಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ಜೀವಿತಾವಧಿಗೆ (ಲೈಫ್ ಟೈಮ್) ಉಚಿತವಾಗಿ ಒದಗಿಸುತ್ತದೆ.

ಡಿಮ್ಯಾಟ್ ಖಾತೆ ಸಂಗ್ರಹಣೆಯಾದಲ್ಲಿ, ಟ್ರೇಡಿಂಗ್ ಖಾತೆ ಇಂಟರ್ ಫೇಸ್. ಖರೀದಿ ಮಾಡಿದ ಷೇರುಗಳು, ಬಾಂಡ್ ಗಳು, ಮ್ಯೂಚ್ಯುವಲ್ ಫಂಡ್ ಗಳನ್ನು ಡಿಮ್ಯಾಟ್ ಖಾತೆಯಲ್ಲಿ ಇಡಲಾಗುತ್ತದೆ. ಇನ್ನು ಎಸ್ ಎಸ್ ಇ ಹಾಗೂ ಬಿಎಸ್ ಇಯಂಥ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಷೇರುಗಳ ಖರೀದಿ ಮತ್ತು ಮಾರಾಟ ಮಾಡಬೇಕಿದ್ದಲ್ಲಿ ಟ್ರೇಡಿಂಗ್ ಅಕೌಂಟ್ ಮೂಲಕ ಆಗುತ್ತದೆ.

ಜೀವಿತಾವಧಿಗೆ (ಲೈಫ್ ಟೈಮ್) ಉಚಿತ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆ ಎಲ್ಲಿದೆ ಎಂಬ ವಿವರ ಹೀಗಿದೆ:

ಪ್ರೋಸ್ಟಾಕ್ಸ್ (Prostocks)

ಪ್ರೋಸ್ಟಾಕ್ಸ್ (Prostocks)

ಇದರ ಸ್ಥಾಪಕರು ಎಸ್.ಪಿ. ತೋಷ್ನಿವಾಲಾ ಮತ್ತು ಸೌರಭ್ ರಂಕಾ. ಸನಲೈಟ್ ಬ್ರೋಕಿಂಗ್ ಎಲ್ ಎಲ್ ಪಿ ವೆಂಚರ್ಸ್ ಪ್ರೋಸ್ಟಾಕ್ಸ್. 2016ರಲ್ಲಿ ಆರಂಭವಾಯಿತು. ಈಕ್ವಿಟಿ ಟ್ರೇಡಿಂಗ್, ಕರೆನ್ಸಿ ಟ್ರೇಡಿಂಗ್, ಡೆರಿವೇಟಿವ್ಸ್ ಟ್ರೇಡಿಂಗ್, ಡೆಪಾಸಿಟರಿ ಸರ್ವೀಸಸ್ ಗಳನ್ನು ಒದಗಿಸುತ್ತದೆ.

ಮುಖ್ಯ ಅನುಕೂಲಗಳು
* ಇಂಟ್ರಾಡೇ ಮತ್ತು ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಟ್ರೇಡ್ಸ್ ಗೆ ಒಂದು ವಹಿವಾಟಿಗೆ ಫ್ಲ್ಯಾಟ್ ರು. 15 ಆಗುತ್ತದೆ.

* ಜೀವಿತಾವಧಿಯಲ್ಲಿ ಎಎಂಸಿ ಉಚಿತ ಡಿಮ್ಯಾಟ್ ಅಕೌಂಟ್.

* ಆನ್ ಲೈನ್ ಪೇಪರ್ ಲೆಸ್ ಅಕೌಂಟ್ ಮೂಲಕ ಉಚಿತವಾಗಿ ಖಾತೆ ತೆರೆಯಬಹುದು.

* ಈಕ್ವಿಟಿ ಡೆಲಿವರಿ ಟ್ರೇಡಿಂಗ್ ಗೆ ಶೂನ್ಯ ಬ್ರೋಕರೇಜ್.

iTradeOnline

iTradeOnline

iTradeOnlineನಿಂದ ಆಧುನಿಕ ಟ್ರೇಡಿಂಗ್ ಟೂಲ್ ಗಳನ್ನು ಒದಗಿಸಲಾಗುತ್ತದೆ. ಎಕ್ಸ್ ಕ್ಯೂಟ್ ಆದ ಆರ್ಡರ್ ಗೆ ತಲಾ ರು. 20 ಅಥವಾ 0.03% ಯಾವುದು ಕಡಿಮೆಯೋ ಅಷ್ಟು ಮೊತ್ತವನ್ನು ಗ್ರಾಹಕರು ಪಾವತಿಸಬೇಕು. ಈ ಡಿಸ್ಕೌಂಟ್ ಬ್ರೋಕರ್ ಎಲ್ಲ ಸೆಗ್ಮೆಂಟ್ ಗಳಲ್ಲೂ ವ್ಯವಹರಿಸುತ್ತದೆ. ಮುಂಚಿತವಾಗಿಯೇ ಬ್ರೋಕರೇಜ್ ನೀಡಬೇಕು ಹಾಗೂ ಕನಿಷ್ಠ ಇಷ್ಟೇ ಪ್ರಮಾಣದ ವ್ಯವಹಾರ ಮಾಡಬೇಕು ಎಂಬ ಕಡ್ಡಾಯವಿಲ್ಲ.

RMoney

RMoney

RMoney ಕೂಡ ಡಿಸ್ಕೌಂಟ್ ಬ್ರೋಕರ್. ಕಮಾಡಿಟಿ, ಈಕ್ವಿಟಿ, ಇನ್ಷೂರೆನ್ಸ್, ಮ್ಯೂಚ್ಯುವಲ್ ಫಂಡ್, PMS ಹೀಗೆ ಎಲ್ಲ ಹಣಕಾಸು ಅಗತ್ಯಕ್ಕೂ ಒಂದೇ ಪ್ಲಾಟ್ ಫಾರ್ಮ್ ಒದಗಿಸುತ್ತದೆ.

ಪ್ರಮುಖ ಅನುಕೂಲಗಳು
* ಕಮಾಡಿಟಿ ವಹಿವಾಟಿಗೆ ಪರ್ಸನಲೈಸ್ಡ್ ಈವನಿಂಗ್ ಡೀಲರ್ ಸಪೋರ್ಟ್

* ಹಣ ವರ್ಗಾವಣೆ ಶುಲ್ಕ ಇಲ್ಲ

* ಬೇಡಿಕೆ ಆಧಾರದಲ್ಲಿ ಇಂಟ್ರಾಡೇ ವಹಿವಾಟಿನ ಮಿತಿ.

* ಉಚಿತವಾಗಿ ಖಾತೆ ತೆರೆಯುವುದು ಮತ್ತು ಜೀವಿತಾವಧಿ ಡಿಮ್ಯಾಟ್ ಎಎಂಸಿ

* ಕಸ್ಟಮೈಸ್ಡ್ ಬ್ರೋಕರೇಜ್ ಪ್ಲಾನ್

Finvasia

Finvasia

ಇದು ಫಿನ್ ಟೆಕ್ ಕಂಪೆನಿಗಳಲ್ಲಿ ಒಂದು. ಶೂನ್ಯ ಬ್ರೋಕರೇಜ್, ಶೂನ್ಯ ಅಕೌಂಟ್ ಓಪನಿಂಗ್, ಶೂನ್ಯ ಕ್ಲಿಯರಿಂಗ್ಸ್, ಶೂನ್ಯ ಎಎಂಸಿ ಮತ್ತು ಹೀಗೆ ವಿವಿಧ ಹಣಕಾಸು ಸೇವೆಗಳನ್ನು ಒದಗಿಸುತ್ತದೆ. Finvasia ಡಿಸ್ಕೌಂಟ್ ಬ್ರೋಕರ್. ಕಂಪೆನಿಯಿಂದ ಉಚಿತ ಜೀವಿತಾವಧಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಒದಗಿಸಲಾಗುತ್ತದೆ.

ಟ್ರಸ್ಟ್ ಲೈನ್ (Trustline)

ಟ್ರಸ್ಟ್ ಲೈನ್ (Trustline)

ಚೆನ್ನೈ ಮೂಲದ ಪೂರ್ಣ ಪ್ರಮಾಣದ ಸೇವೆ ಒದಗಿಸುವ ಸರ್ವೀಸ್ ಬ್ರೋಕರ್ ಟ್ರಸ್ಟ್ ಲೈನ್. ಇದು ಈಕ್ವಿಟಿ ರೀಸರ್ಚ್ ಮತ್ತು ಅಸೆಟ್ ಮ್ಯಾನೇಜ್ ಮೆಂಟ್ ಕಂಪೆನಿ. ಇದರ ಸಾಮರ್ಥ್ಯ ಫೈನಾನ್ಷಿಯಲ್ ರೀಸರ್ಚ್. ಮಿಡ್ ಮತ್ತು ಸ್ಮಾಲ್ ಕ್ಯಾಪ್ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದೆ. ಟ್ರಸ್ಟ್ ಲೈನ್ ನಿಂದ ಉಚಿತವಾಗಿ ಲೈಫ್ ಟೈಮ್ ಮತ್ತು ಟ್ರೇಡಿಂಗ್ ಖಾತೆ ಒದಗಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+