ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್.ಡಿ. ಯೋಜನೆಯನ್ನು ಆರಂಭಿಸಲಾಗಿದೆ. ಇದರಿಂದ ಅವರಿಗೆ ಠೇವಣಿ ಮೇಲೆ ಹೆಚ್ಚಿನ ಬಡ್ಡಿದರ ದೊರೆಯುತ್ತದೆ. ಈ ಯೋಜನೆಗೆ SBI Wecare Deposit ಎಂದು ಹೆಸರಿಟ್ಟಿದ್ದು, ಇದರಲ್ಲಿ 30 ಬೇಸಿಸ್ ಪಾಯಿಂಟ್ (bps) ಹೆಚ್ಚಿನ ಬಡ್ಡಿ ಸಿಗುತ್ತದೆ.
ಸದ್ಯಕ್ಕೆ ಹಿರಿಯ ನಾಗರಿಕರಿಗೆ ಬಡ್ಡಿ ಮೇಲೆ ಹೆಚ್ಚುವರಿಯಾಗಿ 50 ಬಿಪಿಎಸ್ ನೀಡುತ್ತಿದೆ. ಇದು ಎಲ್ಲ ಅವಧಿಗೂ ಅನ್ವಯಿಸುತ್ತದೆ. ಮೇ 12, 2020ರಿಂದ ಅನ್ವಯ ಆಗುತ್ತದೆ. 7 ದಿನದಿಂದ 10 ವರ್ಷದ ಅವಧಿವರೆಗೆ ವಾರ್ಷಿಕ 3.80 ಪರ್ಸೆಂಟ್ ನಿಂದ 6.50 ಪರ್ಸೆಂಟ್ ತನಕ ಬಡ್ಡಿ ದೊರೆಯಲಿದೆ.

ಹಿರಿಯ ನಾಗರಿಕರ ಎಫ್.ಡಿ. ಸ್ಕೀಮ್ ಬಗ್ಗೆ ಗೊತ್ತಿರಲೇಬೇಕಾದ 5 ಸಂಗತಿಗಳು:
* SBI Wecare Deposit ಎಂಬುದು ಹಿರಿಯ ನಾಗರಿಕರಿಗಾಗಿಯೇ ಇರುವ ಎಫ್.ಡಿ. ಯೋಜನೆ. ರೀಟೇಲ್ ಟರ್ಮ್ ಡೆಪಾಸಿಟ್ ಸೆಗ್ಮೆಂಟ್ ನಲ್ಲಿ ಇದನ್ನು ಪರಿಚಯಿಸಲಾಗಿದೆ. ಆರ್ಥಿಕತೆಯಲ್ಲಿ ಬಡ್ಡಿದರ ಕುಸಿಯುತ್ತಿರುವ ಸನ್ನಿವೇಶದಲ್ಲಿ ಹಿರಿಯ ನಾಗರಿಕರಿಗೆ ನೆರವಾಗಲು ಈ ಯೋಜನೆ ರೂಪಿಸಲಾಗಿದೆ.
* ಈ ಯೋಜನೆಯಲ್ಲಿ 5 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಅವಧಿಗೆ ಹಿರಿಯ ನಾಗರಿಕರ ರೀಟೇಲ್ ಟರ್ಮ್ ಡೆಪಾಸಿಟ್ ಗೆ ಹೆಚ್ಚುವರಿ 30 ಬೇಸಿಸ್ ಪಾಯಿಂಟ್ಸ್ ಪ್ರೀಮಿಯಂ ಪಾವತಿಸಲಾಗುತ್ತದೆ.
* ಎಸ್ ಬಿಐನಿಂದ ಹಿರಿಯ ನಾಗರಿಕರಿಗೆ ರೂಪಿಸಿರುವ ಈ ಎಫ್.ಡಿ. ಯೋಜನೆ ಸೆಪ್ಟೆಂಬರ್ 30ನೇ ತಾರೀಕಿನ ತನಕ ಜಾರಿಯಲ್ಲಿರುತ್ತದೆ.
* ಸಾಮಾನ್ಯ ವರ್ಗದವರಿಗೆ ಸಿಗುವ ಬಡ್ಡಿ ದರಕ್ಕಿಂತ ರೀಟೇಲ್ ಟರ್ಮ್ ಡೆಪಾಸಿಟ್ ಅನ್ನು ಐದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಠೇವಣಿ ಇಡುವ ಹಿರಿಯ ನಾಗರಿಕರಿಗೆ 80 ಬಿಪಿಎಸ್ ಹೆಚ್ಚುವರಿಯಾಗಿ ದೊರೆಯುತ್ತದೆ.
* SBI Wecare Deposit ಅಡಿಯಲ್ಲಿ ಠೇವಣಿ ಇಡುವವರಿಗೆ ವಾರ್ಷಿಕವಾಗಿ 6.50 ಪರ್ಸೆಂಟ್ ದೊರೆಯಲಿದೆ.
ಅಂದಹಾಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಮೇ 12ರಿಂದ ಅನ್ವಯ ಆಗುವಂತೆ 20 ಬೇಸಿಸ್ ಪಾಯಿಂಟ್ ಎಫ್.ಡಿ. ಬಡ್ಡಿ ದರವನ್ನು ಇಳಿಸಲಾಗಿದೆ. ಇನ್ನು ಮೇ 10ನೇ ತಾರೀಕಿನಿಂದಲೇ MCLR ಅನ್ನು 15 ಬೇಸಿಸ್ ಪಾಯಿಂಟ್ ಎಲ್ಲ ಅವಧಿಗೂ ಇಳಿಸಲಾಗಿದೆ.


Click it and Unblock the Notifications