ಗೃಹ ಸಾಲ ಪಡೆದವರು ಇಎಂಐ ಮೂಲಕ ತಮ್ಮ ಸಾಲವನ್ನು ಮರುಪಾವತಿಸಬೇಕಾಗುತ್ತದೆ. ಇಎಂಐ ಅಂದರೆ ಇಎಂಐ ( ಈಕ್ವೇಟೆಡ್ ಮಂತ್ಲಿ ಇನ್ಸ್ಟಾಲ್ಮೆಂಟ್). ಇದು ಸಾಲದಾತರಿಗೆ ಸಾಲಗಾರರು ಪ್ರತಿ ತಿಂಗಳು ಸಾಲವನ್ನು ಮರುಪಾವತಿಸುವ ಮೊತ್ತವಾಗಿದ್ದು ಅಸಲು ಮತ್ತು ಬಡ್ಡಿ ಎರಡನ್ನೂ ಇದು ಒಳಗೊಂಡಿರುತ್ತದೆ. ಸಾಲದಾತರು ಸಾಲಗಾರರಿಗೆ ಸಾಲ ನೀಡುವಾಗ "ಸಾಲದ ಮೊತ್ತ, ಬಡ್ಡಿದರ (fixed, floating or mixed) ಮತ್ತು ಮರುಪಾವತಿ ಅವಧಿ"ಯ ಮೇಲೆ ಇಎಂಐ ನ್ನು ಲೆಕ್ಕಾಚಾರ ಹಾಕಲಾಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಹೆಚ್ಚಿಸಿದ ನಂತರ ಗೃಹ ಸಾಲದ ಮೇಲಿನ ಬಡ್ದಿ ದರಗಳು ಹೆಚ್ಚಾಗಿದೆ. ರೆಪೋ ದರವೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕ್ ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. 2019ರ ಅಕ್ಟೋಬರ್ ನಂತರ ಎಲ್ಲಾ ಪ್ಲೋಟಿಂಗ್ ರೇಟ್ ಗಳನ್ನು ರಿಟೇಲ್ ಲೋನ್ ಗಳ ಬಾಹ್ಯ ಮಾನದಂಡಕ್ಕೆ ಲಿಂಕ್ ಮಾಡಲಾಗಿರುತ್ತದೆ. ಹೆಚ್ಚಿನ ಬ್ಯಾಂಕ್‌ಗಳಿಗೆ ಈ ಬಾಹ್ಯ ಮಾನದಂಡವೆಂದರೆ ರೆಪೋ ದರ ಆಗಿರುತ್ತದೆ.
ರೆಪೋ ದರ ಏರಿಕೆ
ರೆಪೋ ದರ ಹೆಚ್ಚಳವಾದಾಗ ರೆಪೋ ರೇಟ್ ಲಿಂಕ್ ಆಗಿರುವ ಗೃಹ ಸಾಲ ಮತ್ತು ವೈಯಕ್ತಿಕ ಸಾಲಗಳ ಬಡ್ಡಿದರವನ್ನು ಕೂಡಾ ಹೆಚ್ಚಿಸಲಾಗುತ್ತದೆ. ಇಂತಹ ಪರಿಸ್ಥಿತಿ ನಡುವೆ ಸಾಲಗಾರ ತನ್ನ ಮನೆಯ ಖರ್ಚು ವೆಚ್ಚದ ಬಜೆಟ್ ನ್ನು ಕಡಿಮೆ ಮಾಡಿ ಏರಿಕೆಯಾಗುತ್ತಿರುವ ಗೃಹ ಸಾಲದ ವೆಚ್ಚವನ್ನು ಸರಿದೂಗಿಸಲು ಯತ್ನಿಸುತ್ತಾರೆ. ಈ ಕುರಿತು ಮಾತನಾಡಿರುವ ಹೋಮ್ ಫಸ್ಟ್ ನ ಚೀಫ್ ಮಾರ್ಕೆಟಿಂಗ್ ಆಫೀಸರ್, ಗೌರವ್ ಮೆಹ್ತಾ, " ಆರ್ ಬಿಐ ರೆಪೊ ದರವನ್ನು 25 ಬಿಪಿಎಸ್ ಗಳಷ್ಟು ಏರಿಕೆ ಮಾಡಿರುವುದರಿಂದ, ಗೃಹ ಸಾಲದ ಬಡ್ಡಿದರಗಳಲ್ಲಿ ಹೆಚ್ಚಳವಾಗಿ ಇದು ಹೋಮ್ ಲೋನ್ ನ ಸಾಲಗಾರರು ಮತ್ತು ಸಂಭಾವ್ಯ ಗೃಹ ಖರೀದಿದಾರರಿಗೆ ಹಿನ್ನಡೆ ತಂದಿದೆ" ಎಂದಿದ್ದಾರೆ.
ಈ ಬಗ್ಗೆ ಇಲ್ಲಿದೆ ಸಲಹೆ
1. ಕಡಿಮೆ ಅವಧಿಯನ್ನು ಆಯ್ಕೆ ಮಾಡಿ: ಗೃಹ ಸಾಲ ಪಡೆಯುವಾಗ ಮರುಪಾವತಿಗಾಗಿ ನೀವು ಪಡೆಯುವ ಅವಧಿಯೂ ನೀವು ಮಾಸಿಕ ಕಂತು ಪಾವತಿಸುವ ಬಡ್ಡಿಯ ಮೊತ್ತವನ್ನು ನಿರ್ಧರಿಸುವಲ್ಲಿ ಪ್ರಮುಖ ಅಂಶವಾಗಿದೆ. ಕಡಿಮೆ ಅವಧಿ ಆರಿಸಿಕೊಳ್ಳುವುದು ಇದು ನಿಮ್ಮ ಹೋಮ್ ಲೋನ್ ಅನ್ನು ಮೊದಲೇ ಮರುಪಾವತಿ ಮಾಡಲು ಸಹಾಯ ಮಾಡುವುದಲ್ಲದೆ ಹೆಚ್ಚಿನ ಬಡ್ಡಿ ಕಟ್ಟುವುದನ್ನು ಉಳಿಸುತ್ತದೆ.
2. ಡೌನ್ ಪೇಮೆಂಟ್ ನ್ನು ಹೆಚ್ಚು ಪಾವತಿಸಿ: ಹೆಚ್ಚಿನ ಬ್ಯಾಂಕ್ ಗಳು ಗೃಹ ಸಾಲ ನೀಡುವಾಗ 75 - 80%ರಷ್ಟು ಹಣವನ್ನು ಪಾವತಿಸಿ ಮತ್ತು ಉಳಿದ ಮೊತ್ತವನ್ನು ಡೌನ್ ಪೇಮೆಂಟ್ ಆಗಿ ಪಾವತಿಸಲು ಹೇಳುತ್ತಾರೆ. ಹೀಗಾಗಿ ಗರಿಷ್ಟ ಮೊತ್ತದ ಸಾಲ ಪಡೆಯುವ ಬದಲು, ಗರಿಷ್ಟ ಮೊತ್ತವನ್ನು ಡೌನ್ ಪೇಮೆಂಟ್ ಆಗಿ ಪಾವತಿಸುವುದು ಪ್ರಯೋಜನಕಾರಿಯಾಗಿದೆ. ಯಾಕೆಂದರೆ ಇಲ್ಲಿ ಲೆಕ್ಕಾಚಾರ ಸರಳ: ಸಣ್ಣ ಸಾಲದ ಮೊತ್ತ= ಸಣ್ಣ ಬಡ್ಡಿದರ.
ಇಎಂಐ ಹೆಚ್ಚಳ ಮಾಡಿ
3. ಉತ್ತಮ ಡೀಲ್‌ಗಳಿಗಾಗಿ ಕಾಯಿರಿ: ಜೀವನದಲ್ಲಿ ತಾಳ್ಮೆ ಮುಖ್ಯವಾಗಿರುವಂತೆಯೇ ಇಲ್ಲೂ ಕೂಡಾ ಉತ್ತಮ ಡೀಲ್ ಗಳಿಗಾಗಿ ತಾಳ್ಮೆಯಿಂದ ಕಾಯುವಿಕೆ ಮುಖ್ಯವಾಗುತ್ತದೆ. ಏಕೆಂದರೆ ವಿಶೇಷವಾಗಿ ಹಬ್ಬದ ಸೀಸನ್ ನಲ್ಲಿ ಅನೇಕ ಬ್ಯಾಂಕ್ ಗಳು / ಸಾಲದಾತರು ಪ್ರಚಾರದ ಯೋಜನೆಗಳನ್ನು ಹೊರತರುತ್ತಾರೆ. ಇದು ಹೋಮ್ ಲೋನ್ ಪಡೆಯುವಾಗ ಗಮನಾರ್ಹ ಉಳಿತಾಯಕ್ಕೆ ಕಾರಣವಾಗುತ್ತದೆ.
4. ನಿಮ್ಮಇಎಂಐಯನ್ನು ಹೆಚ್ಚಿಸಿ: ಇಎಂಐನ್ನು ವಾರ್ಷಿಕವಾಗಿ ಪರಿಷ್ಕರಿಸಲು ಕೆಲವು ಸಾಲದಾತರ ಬಳಿ ಅವಕಾಶವಿರುತ್ತದೆ. ಹೀಗಾಗಿ ನಿಮಗೆ ಬೋನಸ್ ಅಥವಾ ವೇತನ ಹೆಚ್ಚಳವಾದರೆ ನಿಮ್ಮ ಇಎಂಐ ನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಿ ಮತ್ತು ಸಾಲದ ಪಾವತಿಯ ಒಟ್ಟಾರೆ ಅವಧಿಯನ್ನು ಕಡಿಮೆ ಮಾಡಿಕೊಳ್ಳಿ. ಇದರಿಂದಾಗಿ ಸಾಲದ ಮೇಲಿನ ಒಟ್ಟಾರೆ ಬಡ್ಡಿದರ ಕಡಿಮೆ ಆಗುತ್ತದೆ.
5. ಪೂರ್ವ ಪಾವತಿ ಮಾಡಿ
ತಮ್ಮ ಗೃಹ ಸಾಲದ ಹೊರೆಯನ್ನು ತಗ್ಗಿಸಲು ಪ್ರತಿಯೋರ್ವ ಸಾಲಗಾರರೂ ಪ್ರಯತ್ನಿಸುತ್ತಿರುತ್ತಾರೆ. ಹೀಗಾಗಿ "ಗೃಹಸಾಲದ ಬಡ್ಡಿ"ಯ ಪರಿಣಾಮವನ್ನು ಕಡಿಮೆ ಮಾಡಲು ಇರುವ ಸೂಪರ್ ಪವರ್ ಅಂದ್ರೆ "ಪೂರ್ವ ಪಾವತಿ". ಈ ಬಗ್ಗೆ ಮತ್ತಷ್ಟು ವಿವರಣೆ ಇಲ್ಲಿದೆ - ನಿಮ್ಮ ಮಾಸಿಕ ಇಎಂಐನಲ್ಲಿ ಬಡ್ಡಿ ಮತ್ತು ಅಸಲು ಎರಡನ್ನೂ ಒಳಗೊಂಡಿರುತ್ತದೆ. ಪೂರ್ವ ಪಾವತಿಯಲ್ಲಿ ನೀವು ಪಾವತಿಸುವ ಇಎಂಐ ಗಿಂತ ಹೆಚ್ಚು ಮೊತ್ತವನ್ನು ಪಾವತಿಸಿದಾಗ ಅದನ್ನು ಅಸಲಿನಿಂದ ನೇರವಾಗಿ ಕಡಿತಗೊಳಿಸಲಾಗುತ್ತದೆ. ಹೀಗಾಗಿ ಸಾಲದಾತರಿಗೆ ನೀಡಬೇಕಾದ ಮೊತ್ತ ಕಡಿಮೆಯಾಗಿರುವುದರಿಂದ ಸಾಲ ಮೇಲೆ ಪಾವತಿಸುವ ಬಡ್ಡಿಯೂ ಕಡಿಮೆಯಾಗುತ್ತದೆ ಮತ್ತು ಇದರಿಂದ ಅದಷ್ಟು ಬೇಗ ಋಣಮುಕ್ತರಾಗುತ್ತೀರಿ.
ಪೂರ್ವ ಪಾವತಿ ಉತ್ತಮ ಆಯ್ಕೆ
ಮಾಸಿಕವಾಗಿ ಪಾವತಿಸುವ ಇಎಂಐ ಅಲ್ಲದೇ ನಿಯಮಿತವಾಗಿ ಅಗ್ಗಾಗ್ಗೆ"ಪೂರ್ವ ಪಾವತಿ" ಗಳನ್ನು ಮಾಡುವ ಅಭ್ಯಾಸ ರೂಢಿಸಿಕೊಳ್ಳಿ. ಇದು ಬಡ್ಡಿದರಗಳನ್ನು ಬಿಟ್ಟು ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡಲು ಖಂಡಿತಾ ಸಹಾಯ ಮಾಡುತ್ತದೆ. ಇದಲ್ಲದೆ ಕೆಲವು ಬ್ಯಾಂಕ್ ಗಳು ಗೃಹಸಾಲದ ಪಾವತಿಗೆ ನಿರ್ದಿಷ್ಟ ಮೊತ್ತದ ಹಣವನ್ನು ನಿಮ್ಮ ಖಾತೆಯಿಂದಲೇ ಆಟೋ - ಡೆಬಿಟ್ ಮಾಡುವ ಸೌಕರ್ಯವನ್ನು ಸಹ ನೀಡುತ್ತದೆ. ಭವಿಷ್ಯದಲ್ಲಿ ನಿಮಗೆ ಈ ಸೌಲಭ್ಯ ಬೇಡವಾದರೆ ನೀವು ಈ ಆಯ್ಕೆಯನ್ನು ರದ್ದು ಮಾಡುವ ಅವಕಾಶವೂ ಇದೆ.


Click it and Unblock the Notifications